text
stringlengths
0
61.5k
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶರೀರವನ್ನು ಸರಿಯಾಗಿ ಇಟ್ಟುಕೊಳ್ಳಲು ಜ್ಞಾನ-ಯೋಗದ ಧಾರಣೆ ಮಾಡಬೇಕಾಗಿದೆ, ಯಾವುದೇ ಪದಾರ್ಥದ ಲೋಭವನ್ನು ಇಟ್ಟುಕೊಳ್ಳಬಾರದು. ಈ ಜ್ಞಾನ -ಯೋಗದಿಂದ ಶೃಂಗರಿಸಿಕೊಳ್ಳಬೇಕು, ಸ್ಥೂಲ ಶೃಂಗಾರದಿಂದಲ್ಲ.
2. ಒಂದು ಗಂಟೆ, ಅರ್ಧ ಗಂಟೆ ಅವಶ್ಯವಾಗಿ ವಿದ್ಯೆಯನ್ನು ಓದಬೇಕಾಗಿದೆ, ಜ್ಞಾನ ಮತ್ತು ಯೋಗದಲ್ಲಿ ಸ್ಪರ್ಧೆ ಮಾಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಮಕ್ಕಳಿಗೇ ಅದೃಷ್ಟ ನಕ್ಷತ್ರಗಳೆಂದು ಗಾಯನವಿದೆ. ಜ್ಞಾನಸೂರ್ಯ, ಜ್ಞಾನಚಂದ್ರಮ, ಅದೃಷ್ಟ ಜ್ಞಾನ ನಕ್ಷತ್ರಗಳಾಗಿದ್ದೀರಿ. ಆ ಸೂರ್ಯ, ಚಂದ್ರಮನಂತೂ ಭೂಮಿಗೆ ಬೆಳಕನ್ನು ನೀಡುತ್ತದೆ. ನಿಮ್ಮ ಮಹಿಮೆಯ ಗಾಯನವಿದೆ - ನೀವು ಜ್ಞಾನ ನಕ್ಷತ್ರಗಳಾಗಿದ್ದೀರಿ, ಆ ನಕ್ಷತ್ರಗಳಿಗೆ ಜ್ಞಾನ ನಕ್ಷತ್ರಗಳೆಂದು ಹೇಳಲಾಗುವುದಿಲ್ಲ. ಜ್ಞಾನಸೂರ್ಯ...
ತಂದೆಯು ಭಕ್ತಿಯ ಫಲವನ್ನು ಕೊಡಲು ಬಂದಿದ್ದಾರೆ, ಜ್ಞಾನವನ್ನು ತಿಳಿಸುತ್ತಿದ್ದಾರೆ. ನಾವೀಗ ಅವಶ್ಯವಾಗಿ ಪತಿತರಿಂದ ಪಾವನರಾಗಬೇಕಾಗಿದೆ ಏಕೆಂದರೆ ಪತಿತರು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಮುಕ್ತಿಧಾಮದಲ್ಲಿಯೂ ಎಲ್ಲರೂ ಪಾವನ ಆತ್ಮರಿರುತ್ತಾರೆ, ಸುಖಧಾಮದಲ್ಲಿಯೂ ಎಲ್ಲರೂ ಪವಿತ್ರರಿರುತ್ತಾರೆ. ಈಗ ಕಲಿಯುಗದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಈಗ ಅವರನ್ನು ಪಾವನರನ್ನಾಗಿ ಯಾರು ಮಾಡುವರು? ಪತಿತ-ಪಾವ...
ತಂದೆಯು ತಿಳಿಸುತ್ತಾರೆ - ರಾವಣನು ನಿಮ್ಮ ಬುದ್ಧಿಯನ್ನು ಎಷ್ಟ್ಟು ಕೆಡಿಸಿ ಬಿಟ್ಟಿದ್ದಾನೆ! ದೊಡ್ಡ-ದೊಡ್ಡ ವಿದ್ವಾಂಸರಿಗೂ ಎಷ್ಟೊಂದು ಅಹಂಕಾರವಿದೆ, ತಂದೆಯನ್ನೇ ಅರಿತುಕೊಂಡಿಲ್ಲ. ರಚನೆಯ ಆದಿ-ಮಧ್ಯ-ಅಂತ್ಯವನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟೆನು ನೀವು ಹಣ-ಅಧಿಕಾರ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಟ್ಟಿರಿ, ಈಗ ಭಿಕ್ಷೆ ಬೇಡುತ್ತಿದ್ದೀರಿ ...
ಮಧುರಾತಿ ಮಧುರ ಮಕ್ಕಳೇ ಎಂದು ಬಾಪ್-ದಾದಾ ಇಬ್ಬರೂ ಹೇಳುತ್ತಾರೆ, ಇಬ್ಬರಿಗೂ ಮಕ್ಕಳಲ್ಲವೆ. ಇವರೂ ವಿದ್ಯಾರ್ಥಿ, ನೀವೂ ವಿದ್ಯಾರ್ಥಿಗಳಾಗಿದ್ದೀರಿ. ಇವರೂ ಓದುತ್ತಿದ್ದಾರೆ, ಯಾರು ಭಾರತವನ್ನು ಪಾವನವನ್ನಾಗಿ ಮಾಡುವ ಸೇವೆಯಲ್ಲಿದ್ದಾರೆಯೋ ಅವರೇ ಮಕ್ಕಳಾಗಿದ್ದಾರೆ. ಯಾರು ಪಾವನರಾಗುವುದಿಲ್ಲವೋ ಅವರನ್ನು ತಂದೆಯು ನೋಡಿಯೂ ನೋಡದಂತಿರುತ್ತಾರೆ. ಇವರು ಶಿಕ್ಷೆಗಳನ್ನು ಅನುಭವಿಸಿ ನಂತರ ಬಂದು ಬಹಳ ಕನಿಷ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಧುರರಾಗಲು ಮಧುರ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸತ್ಯ ತಂದೆಯೊಂದಿಗೆ ಸತ್ಯವಾಗಿರಬೇಕಾಗಿದೆ. ಒಬ್ಬ ತಂದೆಯ ಶ್ರೇಷ್ಠ ಮತದಂತೆ ನಡೆಯಬೇಕಾಗಿದೆ.
2. ಪುರುಷಾರ್ಥ ಮಾಡಿ ಸಂಪೂರ್ಣರಾಗಬೇಕಾಗಿದೆ. ಭಾರತವನ್ನು ಪಾವನವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ತರಬಾರದು.
ಓಂ ಶಾಂತಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದವರು ಇದನ್ನು ತಿಳಿದುಕೊಂಡಿಲ್ಲ - ಬೇಹದ್ದಿನ ತಂದೆಯು ನಿವೃತ್ತಿಯವರೇ ಅಥವಾ ಪ್ರವೃತ್ತಿಯವರೇ? ಎಂದು. ತಂದೆಯು ಬರುತ್ತಾರೆಂದರೆ ಮಕ್ಕಳೇ, ಮಕ್ಕಳೇ ಎಂದು ಕರೆಯುತ್ತಾರೆ ಏಕೆಂದರೆ ಅವರನ್ನು ತ್ವಮೇವ ಮಾತಾಶ್ಚ ಪಿತಾ ಎಂದು ಕರೆಯಲಾಗುತ್ತದೆ. ಆದ್ದರಿಂದ ಅವರೂ ಗೃಹಸ್ಥಿಯಾಗುತ್ತಾರೆ. ಅಲ್ಲಂತೂ ಎಲ್ಲರೂ ತಿಳಿದುಕೊಂಡಿರುತ್ತಾರೆ - ಶಿವನು ನಿರಾಕಾರನಾಗ...
ತಂದೆಯು ಹೇಳಿದ್ದಾರೆ - ಎಲ್ಲಿಯೇ ಪ್ರದರ್ಶನಿ ಇತ್ಯಾದಿಗಳನ್ನು ಮಾಡುತ್ತೀರೆಂದರೆ 8 ದಿನಗಳಿಗಾಗಿ ಇನ್ಶೂರ್ ಮಾಡಿಸಿರಿ. ಯಾರಾದರೂ ಒಳ್ಳೆಯ ವ್ಯಕ್ತಿಯಿದ್ದರೆ ಇದಕ್ಕೆ ಹಣವನ್ನೂ ತೆಗೆದುಕೊಳ್ಳುವುದಿಲ್ಲ. ಇನ್ಶೂರೆನ್ಸ್ ಮಾಡದಿದ್ದರೂ ಏನಾಗುವುದು, ಮತ್ತೆ ಹೊಸ ಚಿತ್ರಗಳು ತಯಾರಾಗುತ್ತವೆ. ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಿದೆ, ನಿಮ್ಮ ಹೆಜ್ಜೆ-ಹೆಜ್ಜೆ, ಕ್ಷಣ-ಕ್ಷಣವು ಬಹಳ ಅತ್ಯಮೂಲ್ಯವ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ಸ್ಮೃತಿಯಿರಲಿ - ಈ ಕಲ್ಯಾಣಕಾರಿ ಯುಗದಲ್ಲಿ ಪ್ರತೀ ಮಾತಿನಲ್ಲಿ ಕಲ್ಯಾಣವಿದೆ, ನಮ್ಮದು ಅಕಲ್ಯಾಣವಾಗಲು ಸಾಧ್ಯವಿಲ್ಲ. ಪ್ರತೀ ಮಾತಿನಲ್ಲಿ ಕಲ್ಯಾಣವಿದೆ ಎಂದು ತಿಳಿದು ಸದಾ ನಿಶ್ಚಿಂತರಾಗಿರಬೇಕಾಗಿದೆ.
2. ಸದಾ ಗುಲಾಬಿಗಳಾಗಲು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ವಿದ್ಯೆಯಲ್ಲಿ ಹುಡುಗಾಟಿಕೆ ಮಾಡಬಾರದು. ಎಕ್ಕದ ಹೂವಾಗಬಾರದು.
ತನು, ಮನ, ಧನ ಮತ್ತು ಜನರ ಭಾಗ್ಯ
ಇಂದು ಸತ್ಯ ಸಾಹೇಬನು ತನ್ನ ಮಕ್ಕಳನ್ನು ನೋಡುತ್ತಿದ್ದಾರೆ. ತಂದೆಗೆ ಸತ್ಯವೆಂದು ಹೇಳುತ್ತಾರೆ ಆದ್ದರಿಂದ ಬಾಪ್ದಾದಾರವರ ಮೂಲಕ ಸ್ಥಾಪನೆ ಮಾಡಲ್ಪಟ್ಟಿರುವ ಯುಗದ ಹೆಸರೇ ಆಗಿದೆ - ಸತ್ಯಯುಗ. ತಂದೆಯ ಮಹಿಮೆಯೂ ಸಹ ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವೆಂದು ಹೇಳುತ್ತಾರೆ. ಸತ್ಯದ ಮಹಿಮೆಯು ಸದಾ ಶ್ರೇಷ್ಠವೇ ಆಗಿದೆ. ಸತ್ಯ ತಂದೆಯ ಮೂಲಕ ತಾವೆಲ್ಲರೂ ಸತ್ಯ ನಾರಾಯಣರಾಗಲು ಸತ್ಯ ಕಥೆಯನ್ನು ಕೇಳುತ್ತಿದ...
ತನುವಿನ ಭಾಗ್ಯ - ತನುವಿನ ಲೆಕ್ಕಾಚಾರವು ಕೆಲವೊಮ್ಮೆ ಪ್ರಾಪ್ತಿ ಹಾಗೂ ಪುರುಷಾರ್ಥ ಮಾರ್ಗದಲ್ಲಿ ವಿಘ್ನದ ಅನುಭವವಾಗುವುದಿಲ್ಲ. ತನುವು ಎಂದೂ ಸೇವೆಯಿಂದ ವಂಚಿತರಾಗಲು ಬಿಡುವುದಿಲ್ಲ. ಕರ್ಮಭೋಗದ ಸಮಯದಲ್ಲಿಯೂ ಇಂತಹ ಭಾಗ್ಯವಂತ ಮಕ್ಕಳು ಯಾವುದಾದರೊಂದು ಪ್ರಕಾರದ ಸೇವೆಗೆ ನಿಮಿತ್ತರಾಗುತ್ತಾರೆ. ಕರ್ಮಭೋಗವನ್ನು ನಡೆಸುತ್ತಾರೆ ಆದರೆ ಕರ್ಮಭೋಗಕ್ಕೆ ವಶರಾಗಿ ಚೀರಾಡುವುದಿಲ್ಲ. ಚೀರಾಡುವುದು ಅರ್ಥಾತ್ ಪ...
ಮನಸ್ಸಿನ ಭಾಗ್ಯ - ಮನಸ್ಸು ಸದಾ ಹರ್ಷಿತವಾಗಿರುತ್ತದೆ ಏಕೆಂದರೆ ಭಾಗ್ಯದ ಪ್ರಾಪ್ತಿಯ ಗುರುತೇ ಆಗಿದೆ - ಹರ್ಷಿತವಾಗಿರುವುದು. ಯಾರು ಸಂಪನ್ನವಾಗಿರುವರೋ ಅವರು ಸದಾ ಮನಸ್ಸಿನಿಂದ ಮುಗುಳ್ನಗುತ್ತಾ ಇರುತ್ತಾರೆ. ಮನದ ಭಾಗ್ಯವಂತರು ಸದಾ ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯನ್ನು ಹೊಂದಿರುತ್ತಾರೆ. ಭಾಗ್ಯವಿದಾತನನ್ನು ರಾಜಿ ಮಾಡಿಕೊಂಡಿರುವ ಕಾರಣ ಸರ್ವಪ್ರಾಪ್ತಿ ಸಂಪನ್ನ ಅನುಭವ ಮಾಡುವ ಕಾರಣ ಮನಸ್ಸಿನ ...
ಧನದ ಭಾಗ್ಯ – ಜ್ಞಾನ ಧನವಂತೂ ಇದ್ದೇ ಇದೆ ಆದರೆ ಸ್ಥೂಲ ಧನಕ್ಕೂ ಮಹತ್ವಿಕೆಯಿದೆ. ಧನದ ಭಾಗ್ಯದ ಅರ್ಥವು ಬ್ರಾಹ್ಮಣ ಜೀವನದಲ್ಲಿ ಲಕ್ಷಾಧೀಶ್ವರರು, ಕೋಟ್ಯಾಧೀಶ್ವರ ಆಗುವುದಲ್ಲ ಆದರೆ ಧನದ ಭಾಗ್ಯದ ಗುರುತೇನೆಂದರೆ ಸಂಗಮಯುಗದಲ್ಲಿ ತಾವು ಬ್ರಾಹ್ಮಣ ಆತ್ಮರಿಗೆ ತಿನ್ನಲು, ಕುಡಿಯಲು ಮತ್ತು ಆರಾಮವಾಗಿರಲು ಎಷ್ಟು ಅವಶ್ಯಕತೆಯಿದೆಯೋ ಅಷ್ಟು ಆರಾಮದಿಂದ ಸಿಗುವುದು ಮತ್ತು ಜೊತೆ ಜೊತೆಗೆ ಸೇವೆಗಾಗಿಯೂ ಧನ ಬ...
ನಾಲ್ಕನೆಯ ಮಾತು - ಜನರ ಭಾಗ್ಯ. ಜನ ಅರ್ಥಾತ್ ಬ್ರಾಹ್ಮಣ ಪರಿವಾರ ಹಾಗೂ ಲೌಕಿಕ ಪರಿವಾರ, ಲೌಕಿಕ ಸಂಬಂಧದಲ್ಲಿ ಬರುವಂತಹ ಆತ್ಮಗಳು ಹಾಗೂ ಅಲೌಕಿಕ ಸಂಬಂಧದಲ್ಲಿ ಬರುವಂತಹ ಆತ್ಮಗಳು. ಅಂದಾಗ ಜನರ ಮೂಲಕ ಭಾಗ್ಯವಂತ ಆತ್ಮಗಳ ಮೊದಲ ಚಿಹ್ನೆಯಾಗಿದೆ - ಜನರ ಭಾಗ್ಯವಂತ ಆತ್ಮನಿಗೆ ಜನರ ಮೂಲಕ ಸದಾ ಸ್ನೇಹ ಹಾಗೂ ಸಹಯೋಗದ ಪ್ರಾಪ್ತಿಯಾಗುತ್ತಾ ಇರುವುದು. ಕೊನೆಪಕ್ಷ 95% ಆತ್ಮಗಳಿಂದ ಪ್ರಾಪ್ತಿಯ ಅನುಭವವು ಅವಶ...
ಟೀಚರ್ಸ್ ಕೇಳಿದಿರಾ! ಸತ್ಯ ಸಾಹೇಬನು ನನ್ನ ಮೇಲೆ ಎಷ್ಟು ರಾಜಿಯಾಗಿದ್ದಾರೆ, ಇದರ ರಹಸ್ಯವನ್ನು ಕೇಳಿದಿರಲ್ಲವೆ. ರಹಸ್ಯವನ್ನು ಕೇಳುವುದರಿಂದ ಎಲ್ಲಾ ಟೀಚರ್ಸ್ ರಹಸ್ಯಯುಕ್ತರಾದಿರಿ ಮತ್ತು ಮನಸ್ಸಿನಲ್ಲಿಯೂ ಬರುತ್ತದೆ - ಈ ಭಾಗ್ಯವು ನನ್ನಲ್ಲಿ ಕಡಿಮೆಯಿದೆಯೇ? ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಜನರ ಪರಿಸ್ಥಿತಿಯಲ್ಲಿ - ಇಂತಹ ಜೀವನದ ಅನುಭವವಂತೂ ಮಾಡುತ್ತಿಲ್ಲ ತಾನೇ. ವಿಶೇಷ ನಿ...
ಸದಾ ಸರ್ವ ಪ್ರಕಾರದ ಭಾಗ್ಯವನ್ನು ಅನುಭವ ಮಾಡುವಂತಹ ಅನುಭವೀ ಆತ್ಮಗಳಿಗೆ, ಸದಾ ಪ್ರತೀ ಹೆಜ್ಜೆಯಲ್ಲಿ “ಜೀ ಹಜೂರ್” ಮಾಡುವಂತಹ ತಂದೆಯ ಸಹಯೋಗದ ಅಧಿಕಾರಿ ಶ್ರೇಷ್ಠ ಆತ್ಮಗಳಿಗೆ, ಸದಾ ಪ್ರಶ್ನಚಿತ್ತಕ್ಕೆ ಬದಲಾಗಿ ಪ್ರಸನ್ನ ಚಿತ್ತರಾಗಿರುವಂತಹ - ಇಂತಹ ಪ್ರಶಂಸೆಗೆ ಯೋಗ್ಯ, ಯೋಗಿ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಂಜಾಬ್, ಹರಿಯಾಣ, ಹಿಮಾಚಲ್ ಗ್ರೂಪ್:
ಎಲ್ಲರೂ ತಮ್ಮನ್ನು ಮಹಾವೀರ ಮತ್ತು ಮಹಾವೀರಿಣಿಯರೆಂದು ತಿಳಿಯುವಿರಾ? ಮಹಾವೀರರಂತು ಆಗಿದ್ದೀರಿ ಆದರೆ ಸದಾಕಾಲವೂ ಮಹಾವೀರರಾಗಿ ಇರುತ್ತೀರಾ? ಅಥವಾ ಕೆಲವೊಮ್ಮೆ ಮಹಾವೀರರು, ಕೆಲವೊಮ್ಮೆ ಸ್ವಲ್ಪ ಬಲಹೀನರಾಗುತ್ತೀರಾ? ಸದಾಕಾಲವೂ ಮಹಾವೀರರೆಂದರೆ ಸದಾ ಲೈಟ್ಹೌಸ್ ಮತ್ತು ಮೈಟ್ಹೌಸ್ ಆಗಿರುವುದು. ಜ್ಞಾನವು ಲೈಟ್ ಆಗಿದೆ ಮತ್ತು ಯೋಗವು ಮೈಟ್ ಆಗಿದೆ ಅಂದಾಗ ಮಹಾವೀರರೆಂದರೆ ಜ್ಞಾನಿ ಆತ್ಮನೂ ಆಗಿರುವರು ಮತ...
ಅಂದಮೇಲೆ ಪಾಸ್-ವಿತ್-ಆನರ್ ಆಗುವುದಕ್ಕಾಗಿ ವಿಶೇಷವಾಗಿ ತಮ್ಮನ್ನು ಯಾವುದೇ ಮಾತಿನಲ್ಲಿ, ಯಾವುದೇ ಸಂಸ್ಕಾರದಲ್ಲಾದರೂ, ಸ್ವಭಾವ, ಗುಣಗಳಲ್ಲಿಯೂ, ಶಕ್ತಿಗಳಲ್ಲಿಯೂ ಕೊರತೆಯಾಗಿ ಇಟ್ಟುಕೊಳ್ಳಬಾರದು. ಎಲ್ಲಾ ಮಾತುಗಳಲ್ಲಿ ಸಂಪೂರ್ಣರಾಗಬೇಕು ಅರ್ಥಾತ್ ಪಾಸ್-ವಿತ್-ಆನರ್ ಆಗುವುದಾಗಿದೆ. ಹಾಗಾದರೆ ಎಲ್ಲರೂ ಈ ರೀತಿ ಆಗಿದ್ದೀರಾ ಅಥವಾ ಆಗುತ್ತಿದ್ದೀರಾ? (ಆಗುತ್ತಿದ್ದೇವೆ) ಆದ್ದರಿಂದಲೇ ವಿನಾಶವು ನಿಂತಿದ...
ಪಂಜಾಬ್, ಹರಿಯಾಣ, ಹಿಮಾಚಲ್ ಪ್ರದೇಶದವರಂತು ಮೊದಲೇ ತಯಾರಾಗಿರಬೇಕು. ತಾವು ಅಂತ್ಯವನ್ನು ತರುವವರು ತಯಾರಾಗಿಲ್ಲ, ಆದ್ದರಿಂದ ಭಯೋತ್ಪಾದಕರು ತಯಾರಾಗಿದ್ದಾರೆ. ಹಾಗಾದರೆ ಎಲ್ಲರೂ ಮೊದಲ ನಂಬರ್ ತೆಗೆದುಕೊಳ್ಳುವವರೇ ಅಥವಾ ಏನು ಸಿಗುತ್ತದೆಯೋ ಅದರಲ್ಲಿಯೇ ಖುಷಿಯಾಗಿ ಇರುವಿರಾ? ಅನೇಕರಿಗಿಂತಲೂ ಚೆನ್ನಾಗಿಯೇ ಇದೆ ಎಂದು ಯೋಚಿಸುತ್ತಿರಲ್ಲವೇ? ಬಹಳ ಚೆನ್ನಾಗಿಯೇ ಇದೆ ಆದರೆ ಒಳ್ಳೆಯದಕ್ಕಿಂತಲೂ ಒಳ್ಳೆಯದಾ...
ಬಾಪ್ದಾದಾರವರು ಪಂಜಾಬ್ ಜೋನಿನವರನ್ನು ಸದಾ ಮುಂದಿಡುತ್ತಾರೆ ಆದ್ದರಿಂದ ಎವರೆಡಿ ಆಗಿರಬೇಕು. ತಂದೆಯ ದೃಷ್ಟಿಯೂ ಸಹ ಮೊದಲು ಪಂಜಾಬ್ನವರ ಮೇಲೆ ಹೋಯಿತಲ್ಲವೆ. ಹಾಗಾದರೆ ತಂದೆಯ ಮೊದಲ ದೃಷ್ಟಿಯು ತಮ್ಮ ಮೇಲೆ ಇದೆಯೆಂದರೆ, ಬರಬೇಕಾಗಿರುವುದೂ ಸಹ ಮೊದಲ ನಂಬರಿನಲ್ಲಿ. ಆಧಾರ ಮೂರ್ತಿ ಆಗಿದ್ದೀರಿ ಅಂದಾಗ ಆಧಾರವು (ಫೌಂಡೇಷನ್) ಸದಾ ಪರಿಪಕ್ವವಾಗಿ ಇರುತ್ತದೆ, ಒಂದುವೇಳೆ ಕಚ್ಚಾ ಆಯಿತೆಂದರೆ ಇಡೀ ಕಟ್ಟಡವೇ ...
ಬಹಳ ದೊಡ್ಡ ಜೋನಂತು ಮಧುಬನವೇ ಆಗಿದೆ. ಎಲ್ಲಾ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರ ಸತ್ಯ ಮನೆಯು ಮಧುಬನವೇ ಆಗಿದೆಯಲ್ಲವೆ. ಆತ್ಮರ ಮನೆಯು ಪರಮಧಾಮ ಆಗಿದೆ ಆದರೆ ಬ್ರಾಹ್ಮಣರ ಮನೆಯು ಮಧುಬನ ಆಗಿದೆ ಅಂದಮೇಲೆ ಅಮೃತಸರ ಅಥವಾ ಲುಧಿಯಾನದವರಲ್ಲ, ಪಂಜಾಬ್ ಅಥವಾ ಹರಿಯಾಣದವರಲ್ಲ ಆದರೆ ತಮ್ಮ ಸ್ಥಿರವಾದ ವಿಳಾಸ ಮಧುಬನವಾಗಿದೆ. ಬಾಕಿ ಎಲ್ಲವೂ ಸೇವಾ ಸ್ಥಾನಗಳಾಗಿವೆ, ಭಲೆ ಪ್ರವೃತ್ತಿಯಲ್ಲಿಯೇ ಇರಬಹುದು, ಅದೂ ...
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು, ಆತ್ಮಿಕ ಮಕ್ಕಳು ಬಂದು ಬ್ರಾಹ್ಮಣರಾಗಿ ಆತ್ಮಿಕ ತಂದೆಯಿಂದ ಇದನ್ನು ಅವಶ್ಯವಾಗಿ ತಿಳಿದುಕೊಂಡಿದ್ದೀರಿ - ನಾವು ಸಂಗಮಯುಗೀ ಬ್ರಾಹ್ಮಣರಾಗಿದ್ದೇವೆ, ತಂದೆಯು ನಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ. ಈಗ ನಾವು ತಿಳಿದುಕೊಂಡಿದ್ದೇವೆ - ಇದು ಸಂಗಮಯುಗವಾಗಿದೆ, ಮನುಷ್ಯರು ಯಾರೆಲ್ಲಾ ಪತಿತ ಭ್ರಷ್ಟಾಚಾರಿ ಆಗಿದ್ದಾರೆಯೋ ಅವರು ಮತ್ತೆ ಪಾವನರಾಗಿ ಭವಿಷ್ಯದಲ್ಲಿ ಪ...
ನೀವು ತಿಳಿದುಕೊಂಡಿದ್ದೀರಿ - ಆತ್ಮವನ್ನೇ ಪಾಪಾತ್ಮ, ಪುಣ್ಯಾತ್ಮ ಎಂದು ಹೇಳಲಾಗುತ್ತದೆ. ಪವಿತ್ರ ಆತ್ಮವೇ ಸೋ ಪರಮಾತ್ಮನೆಂದಲ್ಲ. ಪರಮಾತ್ಮ ತಂದೆಯು ಸದಾ ಪಾವನನಾಗಿದ್ದಾರೆ. ತಮೋಪ್ರಧಾನರಿಗೆ ಪತಿತರೆಂದು ಹೇಳಲಾಗುತ್ತದೆ, ಸತ್ಯಯುಗದಲ್ಲಿ ಸುಖವಿದ್ದಾಗ ದುಃಖದ ಹೆಸರೂ ಇರಲಿಲ್ಲ, ಮನುಷ್ಯರು ಈಗಲೇ ಸ್ವರ್ಗವಿದೆ ಎಂದು ಹೇಳುತ್ತಾರೆ, ಏನನ್ನೂ ತಿಳಿದುಕೊಂಡಿಲ್ಲ ಆದರೆ ಅಂತಿಮದಲ್ಲಿ ಬಂದು ತಂದೆಯಿಂದ ಆಸ...
ನೀವು ಮಕ್ಕಳಿಗೆ ಆಂತರಿಕ ಖುಷಿಯಿರಬೇಕು - ನಾವು ಪರಮಾತ್ಮನ ಸನ್ಮುಖದಲ್ಲಿ ಕುಳಿತಿದ್ದೇವೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಅವರ ಶ್ರೀಮತದಂತೆ ನಡೆಯಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ - ತಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ರಾಜಧಾನಿಯಲ್ಲಿ ಎಲ್ಲರೂ ಬೇಕಾಗಿದೆ ಆದರೆ ನೀವು ಮಕ್ಕಳ ಬಾಯಿಂದ ಸದಾ ರತ್ನಗಳೇ ಹೊರ ಬರಬೇಕು. ತಂದೆಯು ರೂಪನೂ ಆಗಿದ್ದಾರೆ, ಭಸಂತನೂ ಆಗಿದ್ದಾರೆ. ಕಥೆಗಳ...
ನೀವು ಮಕ್ಕಳು ಯಾವುದೇ ಸತ್ಸಂಗದಲ್ಲಿ ಹೋಗಬಲ್ಲಿರಿ. ಸೇವೆ ಮಾಡುವ ಉಮ್ಮಂಗ ಬರಬೇಕು. ಯಾವಾಗ ಸರ್ವ ಧರ್ಮದವರು ಒಟ್ಟಿಗೆ ಸೇರುತ್ತಾರೆಯೋ ಆಗ ತಿಳಿಸಿರಿ - ಪ್ರತಿಯೊಬ್ಬರ ಧರ್ಮವೂ ಬೇರೆ-ಬೇರೆಯಾಗಿದೆ. ನಾವು ಸಹೋದರ-ಸಹೋದರರೆಂದು ಹೇಳುತ್ತಾರೆ ಆದರೆ ಸೇರಿ ಒಂದಾಗುವುದಿಲ್ಲ. ಇದು ಕೇವಲ ಹೇಳಿಕೆಗೆ ಮಾತ್ರವಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಬ್ರಾಹ್ಮಣರನ್ನಾಗಿ ಮಾಡಿ ನಂತರ ದೇವಿ-ದೇವತಾ ಧರ್ಮ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಾಣಿಯಲ್ಲಿ ಏನು ಕೇಳುತ್ತೀರೋ ಅದನ್ನು ಮಂಥನ ಮಾಡಬೇಕಾಗಿದೆ. ಪುರುಷೋತ್ತಮರಾಗುತ್ತಿದ್ದೀರಿ ಆದ್ದರಿಂದ ಚಲನೆಯು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬಾಯಿಂದ ಎಂದೂ ಕಲ್ಲುಗಳು ಹೊರ ಬರಬಾರದು.
2. ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯೆಂದು ತಿಳಿದು ಸೇವೆಯಲ್ಲಿ ತತ್ಪರರಾಗಿರಬೇಕಾಗಿದೆ. ಯಾವುದೇ ಛೀ ಛೀ ಕೆಟ್ಟ ಕರ್ಮಗಳನ್ನು ಮಾಡಿ ಡಿಸ್ಸರ್ವೀಸ್ ಮಾಡಬಾರದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಮೊಟ್ಟ ಮೊದಲು ಈ ಮಾತನ್ನು ತಿಳಿದುಕೊಳ್ಳಬೇಕು ಮತ್ತು ತಿಳಿಸಬೇಕಾಗಿದೆ - ತಂದೆಯು ಯಾರು? ಮಕ್ಕಳಿಗೆ ಯಾವಾಗ ನಾವು ಬೇಹದ್ದಿನ ತಂದೆಯ ಸಂತಾನರಾಗಿದ್ದೇವೆಂದು ನಿಶ್ಚಯ ಮಾಡಿಕೊಳ್ಳುತ್ತೀರೋ ಆಗಲೇ ಅತೀಂದ್ರಿಯ ಸುಖದ ಅನುಭವವಾಗುತ್ತದೆ. ಕೇವಲ ಇದೊಂದೇ ಮಾತಿನಿಂದ ಖುಷಿಯ ನಶೆಯೇರುತ್ತದೆ. ಇದು ಸ್ಥಿರವಾದ ಖುಷಿಯ ಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ - ನ...
ತಂದೆಗೆ ಬರೆಯಬೇಕು - ಬಾಬಾ, ನಾವು ಅತೀಂದ್ರಿಯ ಸುಖದಲ್ಲಿದ್ದೇವೆ, ಇನ್ನು ಸ್ವಲ್ಪವೇ ಸಮಯವಿದೆ, ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. 63 ಜನ್ಮಗಳು ನಾವು ಬಹಳ ರೋಗಿಯಾಗಿದ್ದೆವು, ಯಾವುದೇ ಔಷಧೋಪಚಾರ ಸಿಗಲಿಲ್ಲ, ಯಾರಿಂದಲೂ ಸಹಕಾರ ಸಿಗಲಿಲ್ಲ ಆದ್ದರಿಂದ ರೋಗ ಇನ್ನೂ ಮನೆ ಮಾಡಿಕೊಂಡಿತು. ಇದು ಇಂತಹ ಕಾಯಿಲೆಯಾಗಿದೆ ಅವಿನಾಶಿ ಸರ್ಜನ್ನಿನ ಚಿಕಿತ್ಸೆಯಿಲ್ಲದೆ ಇದು ಬಿಟ್ಟು ಹೋಗುವುದಿಲ್ಲ. ಈಗ ಎಲ್...
ತಂದೆಯು ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ ಎಂಬ ಸಂದೇಶವನ್ನು ಮನೆಮನೆಗೂ ತಿಳಿಸಿರಿ. ಫಸ್ಟ್ ಫ್ಲೋರ್ ಮೂಲವತನ, ಸೆಕೆಂಡ್ ಫ್ಲೋರ್ ಸೂಕ್ಷ್ಮವತನ, ಥರ್ಡ್ ಫ್ಲೋರ್ ಈ ಸಾಕಾರಿ ಪ್ರಪಂಚವಾಗಿದೆ. ಒಂದುವೇಳೆ ಮಕ್ಕಳಿಗೆ ಇವುಗಳ ನೆನಪಿದ್ದರೂ ಸಹ ಮೊದಲು ತಂದೆಯು ಅವಶ್ಯವಾಗಿ ನೆನಪಿಗೆ ಬರುವರು. ಸೇವೆಗಾಗಿ ಓಡಬೇಕಾಗಿದೆ, ತಂದೆಯು ಎಲ್ಲಿಗೂ ಹೋಗುವುದನ್ನು ನಿರಾಕರಿಸುವುದಿಲ್ಲ. ಭ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಕಾಯಿದೆಗೆ ವಿರುದ್ಧವಾದ ಕೆಲಸವನ್ನು ಮಾಡಬಾರದು, ಬಹಳ-ಬಹಳ ನಿರಹಂಕಾರಿ, ನಿರ್ಮೋಹಿಗಳಾಗಬೇಕಾಗಿದೆ. ಎಷ್ಟು ಸಾಧ್ಯವೋ ಪ್ರತೀ ಕಾರ್ಯವನ್ನು ತಮ್ಮ ಕೈಗಳಿಂದ ಮಾಡಬೇಕಾಗಿದೆ. ಯಜ್ಞದ ಸೇವೆಯನ್ನು ಬಹಳ ಖುಷಿಯಿಂದ ಮಾಡಬೇಕಾಗಿದೆ
2. ವಿದ್ಯೆಯಲ್ಲಿ ಎಂದೂ ನೆಪ ಹೇಳಬಾರದು, ಕಾಯಿಲೆಯ ಸಮಯದಲ್ಲಿಯೂ ಅವಶ್ಯವಾಗಿ ಓದಬೇಕು, ಉಲ್ಲಾಸದಲ್ಲಿರಲು ಸರ್ವೀಸಿನ ಉಮ್ಮಂಗವನ್ನು ಇಟ್ಟುಕೊಳ್ಳಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಅರ್ಥವನ್ನು ತಿಳಿದುಕೊಂಡಿರಿ. ಬಾಲ್ಯವು ಮೂರು ಪ್ರಕಾರದ್ದಾಗಿದೆ. ಒಂದು ಲೌಕಿಕ ಬಾಲ್ಯ, ಇನ್ನೊಂದು ನಿವೃತ್ತಿ ಮಾರ್ಗದ ಬಾಲ್ಯ, ಗೃಹಸ್ಥವನ್ನು ಬಿಟ್ಟು ಜೀವಿಸುತ್ತಿದ್ದಂತೆಯೇ ಸತ್ತು ಗುರುವಿಗೆ ಅಥವಾ ಸನ್ಯಾಸಿಗಳಿಗೆ ಶಿಷ್ಯರಾಗುತ್ತಾರೆ. ಗುರುಗಳೇನು ಶಿಷ್ಯರಿಗೆ ತಂದೆಯಲ್ಲ, ಅವರ ಶಿಷ್ಯರಾಗಿ ಅವರ ಜೊತೆಯಿರುತ್ತಾರೆ. ತಂದೆಯ ಮಕ್ಕಳಾಗುವುದು ಎಂ...
ನಾವು ಮೂಲತಃ ಮೂಲವತನದ ನಿವಾಸಿಗಳಾಗಿದ್ದೇವೆ, ಇದು ನಮ್ಮ ಮಧುರ ಮನೆಯಾಗಿದೆ, ಅದಕ್ಕಾಗಿಯೇ ಮನುಷ್ಯರು ಭಕ್ತಿ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ನಮಗೆ ಶಾಂತಿ ಬೇಕೆಂದು ಹೇಳುತ್ತಾರೆ, ಆತ್ಮಕ್ಕೆ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಕರ್ಮೇಂದ್ರಿಯಗಳು ಸಿಕ್ಕಿವೆ ಅಂದಮೇಲೆ ಶಾಂತಿಯಲ್ಲಿರಲು ಹೇಗೆ ಸಾಧ್ಯ! ಶಾಂತಿಗಾಗಿಯೇ ಹಠಯೋಗಗಳನ್ನು ಕಲಿಯುತ್ತಾರೆ, ಗುಹೆಗಳಲ್ಲಿ ಕುಳಿತುಕೊಳ್ಳುತ್ತಾರೆ. ಯಾ...
ಬಾಲ್ಯದ ದಿನಗಳನ್ನು ಮರೆಯಬಾರದು ಎಂದು ಗೀತೆಯನ್ನು ಕೇಳಿದಿರಿ, ಆತ್ಮವು ಕೇಳುತ್ತದೆ - ಬಾಬಾ, ನಮಗೆ ಈಗ ಸ್ಮೃತಿ ಬಂದಿದೆ ಎಂದು. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯೊಂದಿಗೆ ಮಾತನಾಡಬೇಕು. ಅಮೃತವೇಳೆ ತಂದೆಯನ್ನು ನೆನಪು ಮಾಡುವುದು ಒಳ್ಳೆಯದಲ್ಲವೆ. ಸಾಯಂಕಾಲದ ಸಮಯದಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಿ. ಭಲೆ ಪರಸ್ಪರ ಸ್ತ್ರೀ-ಪುರುಷರು ಇಬ್ಬರು ಒಟ್ಟಿಗೆ ಇದ್ದರೂ ಸಹ ಇದೇ ಮಾತನಾಡುತ್ತಾ ಇರಿ – ಶಿವ ತ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೇಗೆ ತಂದೆಯು ಜ್ಞಾನ, ಆನಂದ, ಪ್ರೀತಿಯ ಸಾಗರನಾಗಿದ್ದಾರೆ ಅದೇರೀತಿ ತಂದೆಯ ಸಮಾನರಾಗಬೇಕು ಮತ್ತು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಎಲ್ಲರಿಗೆ ಜ್ಞಾನದ ಮೂರನೇ ನೇತ್ರವನ್ನು ಕೊಡಬೇಕಾಗಿದೆ.
2. ಕೊನೆಯಲ್ಲಿ ಪಶ್ಚಾತ್ತಾಪ ಪಡುವಂತಹ ಯಾರದೇ ಸಂಗ ಮಾಡಬಾರದು. ಸಂಗದೋಷವು ಬಹಳ ಕೆಟ್ಟದ್ದಾಗಿದೆ ಆದ್ದರಿಂದ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ತಂದೆಗೆ ಮಾಡಿ ಮಾಡಿಸುವವರು ಎಂದು ಹೇಳಲಾಗುತ್ತದೆ. ನೀವು ಮಾಲೀಕನ ಮಕ್ಕಳಾಗಿದ್ದೀರಿ. ಈ ಸೃಷ್ಟಿಯಲ್ಲಿ ನಿಮ್ಮದು ಶ್ರೇಷ್ಠಾತಿ ಶ್ರೇಷ್ಠ ಸ್ಥಾನವಿದೆ. ನೀವು ಮಕ್ಕಳಿಗೆ ನಶೆಯಿರಬೇಕು ನಾವು ಮಾಲೀಕನ ಮಕ್ಕಳು, ಅವರ ಮತದಂತೆ ಈಗ ಪುನಃ ನಮ್ಮ ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಅದೂ ಸಹ ಯಾರ ಬುದ್ಧಿಯಲ್ಲಿ ನೆನಪಿರುವುದಿಲ್ಲ. ಪ್ರತಿಯೊಂದು ಸೇವಾಕೇಂದ್ರದ ಮಕ್ಕಳಿಗಾಗಿ ಹೇಳುತ್...
ತಾವು ಮಕ್ಕಳಲ್ಲಂತೂ ಬಹಳ ನಶೆಯಿರಬೇಕು. ತಮ್ಮನ್ನು ಮಾಲೀಕನ ಸಂತಾನರೆಂದು ತಿಳಿದರೆ ಏನನ್ನೂ ಬೇಡುವ ಇಚ್ಛೆ ಇರುವುದಿಲ್ಲ. ತಂದೆ ನಮಗೆ ಅಪಾರ ಖಜಾನೆ ಕೊಡುತ್ತಾರೆ, ಅದರಿಂದ 21 ಜನ್ಮಗಳವರೆಗೆ ಏನನ್ನೂ ಬೇಡಬೇಕಾಗಿಲ್ಲ. ಇಷ್ಟೊಂದು ನಶೆಯಿರಬೇಕು. ಆದರೆ ಸಂಪೂರ್ಣ ಮಂದ ಬುದ್ಧಿಯವರಾಗಿದ್ದಾರೆ. ನೀವು ಮಕ್ಕಳ ಬುದ್ಧಿಯಂತೂ 7 ಅಡಿ ಎತ್ತರವಿರಬೇಕು. ಮನುಷ್ಯರ ಎತ್ತರ ಹೆಚ್ಚೆಂದರೆ 6-7 ಅಡಿಯಿರುತ್ತದೆ. ತಂ...
ನೀವು ಮಕ್ಕಳು ಬಹಳ ಸರಳವಾಗಿ ತಂದೆಯ ಸಂದೇಶ ಎಲ್ಲರಿಗೂ ಕೊಡಬೇಕು. ತಿಳಿಸಿ- ತಂದೆ ಹೇಳುತ್ತಾರೆ - ಮನ್ಮನಾಭವ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಕೆಲವು ಶಬ್ದಗಳು ಸತ್ಯವಾಗಿವೆ. ಈ ಪ್ರಪಂಚವು ಎಷ್ಟು ದೊಡ್ಡದಾಗಿದೆ. ಅನೇಕ ಮನುಷ್ಯರಿದ್ದಾರೆ ಆದರೆ ಕೊನೆಗೆ ಇವರ್ಯಾರೂ ಇರುವುದಿಲ್ಲ. ಯಾವುದೇ ಖಂಡದ ಹೆಸರು ಗುರುತು ಇರುವುದಿಲ್ಲ. ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಹಗಲು-ರಾತ್ರಿ ಈ ಖುಷಿಯಿರ...
ತಂದೆ ಪತ್ರಗಳಲ್ಲಿ ಬರೆಯುತ್ತಾರೆ - ಮುದ್ದಾದ ಆತ್ಮೀಯ ಮಾಲೀಕನ ಮಕ್ಕಳೇ, ಈಗ ಶ್ರೀಮತದಂತೆ ನಡೆಯಿರಿ. ಶ್ರೀಮತದಂತೆ ನಡೆದು ಮಹಾರಥಿಗಳಾದರೆ ಅವಶ್ಯವಾಗಿ ರಾಜ ಕುಮಾರ ಕುಮಾರಿಯಾಗುತ್ತೀರಿ. ನಿಮ್ಮ ಗುರಿ ಉದ್ದೇಶವೂ ಇದೇ ಆಗಿದೆ. ಒಬ್ಬ ಸತ್ಯ ತಂದೆಯು ನಿಮಗೆ ಎಲ್ಲ ಮಾತುಗಳನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ಸೇವೆ ಮಾಡಿ ಅನ್ಯರ ಕಲ್ಯಾಣವನ್ನೂ ಮಾಡಿರಿ. ಯೋಗ ಬಲವಿಲ್ಲದಿದ್ದರೆ ಅದು ಬೇಕು ಇದು ಬೇಕು...
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಯಾರಿಗೂ ಬೇಸರ ಪಡಿಸಲೂಬಾರದು, ಬೇಸರವಾಗಲೂಬಾರದು. ತಮ್ಮ ಬುದ್ಧಿವಂತಿಕೆಯ ಅಥವಾ ಸೇವೆ ಮಾಡುವ ಅಹಂಕಾರ ತೋರಿಸಬಾರದು. ಹೇಗೆ ತಂದೆಯು ಮಕ್ಕಳಿಗೆ ಗೌರವ ಕೊಡುತ್ತಾರೆ ಹಾಗೆಯೇ ತಾವೇ ತಮ್ಮ ಗೌರವವನ್ನಿಟ್ಟುಕೊಳ್ಳಬೇಕು.
2. ಯೋಗ ಬಲದಿಂದ ತಮ್ಮ ಎಲ್ಲ ಇಚ್ಛೆಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಸದಾ ಇದೇ ಖುಷಿ ನಶೆಯಲ್ಲಿರಬೇಕು - ನಾವು ಮಾಲೀಕನ ಸಂತಾನರಿಂದ ರಾಜಕುಮಾರರಾಗುತ್ತೇವೆ. ಸದಾ ಶಾಂತಿಯಲ್ಲಿದ್ದು ಸೇವೆ ಮಾಡಬೇಕು. ನರ-ನಾಡಿಯಲ್ಲಿಯೂ ಯಾವ ಭೂತಗಳು ತುಂಬಿವೆಯೋ ಅವುಗಳನ್ನು ತೆಗೆಯಬೇಕು.
ಓಂ ಶಾಂತಿ. ಸದ್ಗುರುವಾರವನ್ನು ವೃಕ್ಷಪತಿ ದಿನವೆಂದೂ ಸಹ ಹೇಳಲಾಗುತ್ತದೆ. ವೃಕ್ಷಪತಿ ದಿನ ಅರ್ಥಾತ್ ತಂದೆಯ ದಿನ. ಅಮಾವಾಸ್ಯೆಯ ದಿನದಂದು ಅಂಧಕಾರ ರಾತ್ರಿಯು ಮುಕ್ತಾಯವಾಗುತ್ತದೆ. ನಂತರ ದಿನವು ಆರಂಭವಾಗುತ್ತದೆ, ಚಂದ್ರಮನ ಉದಯವಾಗಲು ಪ್ರಾರಂಭವಾಗುತ್ತದೆ ಮತ್ತು ಇತ್ತೀಚೆಗೆ ಯಾರದೇ ಶ್ರಾದ್ಧ ಇರುತ್ತದೆಯೋ ಅವರಿಗೆ ತಿನ್ನಿಸಿ-ಕುಡಿಸಿ ಪೂರ್ಣ ಮಾಡುತ್ತಾರೆ ನಂತರ ಅವರು ಏನನ್ನೂ ಬಯಸುವುದಿಲ್ಲ, ಎಲ್...
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಯಾವುದೇ ವಿಕರ್ಮ ಮಾಡುತ್ತೀರೆಂದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು ಅಲ್ಲಂತೂ ನನ್ನ ಜೊತೆ ಶಿಕ್ಷೆಯನ್ನು ಕೊಡುವ ಧರ್ಮರಾಜನಿರುತ್ತಾನೆ. ಇಲ್ಲಿ ಪ್ರತ್ಯಕ್ಷವಾಗಿ ಶಿಕ್ಷೆ ಸಿಗುತ್ತದೆ, ಆದರೆ ಧರ್ಮರಾಜನ ಶಿಕ್ಷೆಯು ಗುಪ್ತವಾಗಿ ಸಿಗುತ್ತದೆ. ಗರ್ಭ ಜೈಲಿನಲ್ಲಿಯೂ ಶಿಕ್ಷೆಗಳನ್ನು ಅನುಭವಿಸುತ್ತಾರೆ. ಯಾರಿಗಾದರೂ ಕಾಯಿಲೆ ಇತ್ಯಾದಿಗಳಿದ್ದರೆ ಅದೂ ಸಹ ಕ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈಗ ಅಂತಿಮ ಸಮಯವಾಗಿದೆ ಆದ್ದರಿಂದ ಯಾವುದೇ ಪಾಪಕರ್ಮ ಮಾಡಬಾರದು. ತಮ್ಮ ಕಲ್ಯಾಣದ ಪುರುಷಾರ್ಥವನ್ನು ಮಾಡಬೇಕು, ಬಹಳ ಮಧುರರಾಗಬೇಕು, ಕ್ರೋಧವನ್ನು ಬಿಟ್ಟು ಬಿಡಬೇಕಾಗಿದೆ.
2. ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಇಟ್ಟುಕೊಳ್ಳಬೇಕಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಸಲಹೆಯನ್ನು ತೆಗೆದುಕೊಳ್ಳಬೇಕು. ತಂದೆಯ ಸಮಾನ ದುಃಖಹರ್ತ-ಸುಖಕರ್ತರಾಗಬೇಕಾಗಿದೆ.
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಯಾವ ಮಕ್ಕಳು? ಬ್ರಾಹ್ಮಣರು. ನಾವು ಬ್ರಾಹ್ಮಣರಾಗಿದ್ದೇವೆ, ದೇವತೆಗಳಾಗುವವರಿದ್ದೇವೆ ಎಂಬುದನ್ನು ಎಂದೂ ಮರೆಯಬೇಡಿ. ವರ್ಣಗಳನ್ನೂ ಸಹ ನೆನಪು ಮಾಡಿಕೊಳ್ಳಬೇಕಾಗಿದೆ, ಇಲ್ಲಿ ನೀವು ಪರಸ್ಪರ ಬ್ರಾಹ್ಮಣರೇ ಇದ್ದೀರಿ. ಬ್ರಾಹ್ಮಣರಿಗೆ ಬೇಹದ್ದಿನ ತಂದೆಯು ಓದಿಸುತ್ತಾರೆ, ಈ ಬ್ರಹ್ಮಾ ತಂದೆಯು ಓದಿಸುವುದಿಲ್ಲ ಶಿವ ತಂದೆಯು ಓದಿಸುತ್ತಾರ...
ತಂದೆಯು ತಿಳಿಸುತ್ತಾರೆ - ಮಕ್ಕಳು ಮನಸ್ಸಾ-ವಾಚಾ-ಕರ್ಮಣಾ ಅಕ್ಯುರೇಟ್ ಆಗಬೇಕಾಗಿದೆ, ಪರಿಶ್ರಮವಿದೆ. ಪ್ರಪಂಚದಲ್ಲಿ ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಎಂಬುದು ಯಾರಿಗೂ ತಿಳಿದಿಲ್ಲ. ಮುಂದೆ ಹೋದಂತೆ ತಿಳಿದುಕೊಳ್ಳುವರು. ಒಂದು ದೇಶ, ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆ ಇರಲಿ ಎಂದು ಬಯಸುತ್ತಾರೆ. ನೀವು ತಿಳಿಸಬಹುದು - ಇಂದಿಗೆ 5000 ವರ್ಷಗಳ ಮೊದಲೂ ಒಂದು ರಾಜ್ಯ, ಒಂದು ಧರ್ಮವ...
ಈಗ ಯೋಗವು ಎರಡು ಪ್ರಕಾರವಾಗಿದೆ - ಒಬ್ಬರು ಹಠಯೋಗಿಗಳಾಗಿದ್ದಾರೆ, ಇನ್ನೊಬ್ಬರು ರಾಜಯೋಗಿಗಳಾಗಿದ್ದಾರೆ. ನೀವು ರಾಜಯೋಗಿಗಳಾಗಿದ್ದೀರಿ, ಹಠಯೋಗವು ಬಹಳ ದಿನಗಳಿಂದ ನಡೆಯುತ್ತಾ ಬಂದಿದೆ, ರಾಜಯೋಗದ ಬಗ್ಗೆ ಈಗ ನಿಮಗೆ ಅರ್ಥವಾಗಿದೆ. ರಾಜಯೋಗವು ಆ ಸನ್ಯಾಸಿಗಳಿಗೇನು ಗೊತ್ತು! ತಂದೆಯು ಬಂದು ತಿಳಿಸಿದ್ದಾರೆ, ರಾಜಯೋಗವನ್ನು ನಾನೇ ಬಂದು ಕಲಿಸುತ್ತೇನೆ. ಕೃಷ್ಣನಂತೂ ಕಲಿಸಲು ಸಾಧ್ಯವಿಲ್ಲ. ಇದು ಭಾರತದ್ದ...
ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಉದ್ಯೋಗ-ವ್ಯವಹಾರವನ್ನೂ ಮಾಡಬೇಕಾಗಿದೆ. ತಂದೆಯು ಪ್ರತಿಯೊಬ್ಬರ ನಾಡಿಯನ್ನು ನೋಡಿ ಸಲಹೆಯನ್ನು ಕೊಡುತ್ತಾರೆ ಏಕೆಂದರೆ ತಂದೆಯು ತಿಳಿಸುತ್ತಾರೆ - ನಾನು ಹೇಳಿ ಮತ್ತೆ ಮಾಡಲು ಸಾಧ್ಯವಾಗದಿದ್ದರೆ ಇಂತಹ ಸಲಹೆಯನ್ನು ನಾನೇಕೆ ಕೊಡಲಿ! ನಾಡಿಯನ್ನು ನೋಡಿಯೇ ಸಲಹೆ ಕೊಡುತ್ತಾರೆ, ಇವರ ಬಳಿಯಂತೂ ಬರಲೇಬೇಕಾಗುತ್ತದೆ, ಅವರು ಪೂರ್ಣ ಸಲಹೆಯನ್ನು ಕೊಡುತ...
ಅಹಮದಾಬಾದ್ನಲ್ಲಿ ನೋಡಿರಿ, ಎಷ್ಟೊಂದು ಸಾಧು-ಸಂತ ಮೊದಲಾದ ಪ್ರತಿಯೊಂದು ಪ್ರಕಾರದವರೂ ಬಂದಿದ್ದರು. ನೀವಂತೂ ಸತ್ಯವನ್ನೂ ಹೇಳುತ್ತೀರಿ ಎಂದು ಹೇಳುತ್ತಾರೆ ಆದರೆ ನಾವೂ ಸಹ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂಬುದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಇಲ್ಲಿಂದ ಹೊರಗೆ ಹೋಗುತ್ತಿದ್ದಂತೆಯೇ ಸಮಾಪ್ತಿ. ಈಗ ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ಇದೇ ಸ್ಮೃತಿಯಲ್ಲಿರಿ - ನಾವು ಬ್ರಾಹ್ಮಣರಾಗಿದ್ದೇವೆ, ನಾವು ಬ್ರಾಹ್ಮಣರಿಗೇ ಭಗವಂತನು ಓದಿಸುತ್ತಾರೆ. ನಾವೀಗ ಬ್ರಾಹ್ಮಣರಿಂದ ದೇವತೆಗಳಾಗುತ್ತಿದ್ದೇವೆ.
2. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಈ ಕಲಿಯುಗೀ ಪತಿತ ಪ್ರಪಂಚದ ತೀರವನ್ನು ಬಿಡಬೇಕಾಗಿದೆ. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಗೀತೆಯನ್ನು ಕೇಳಿದಿರಿ, ಇದರ ಅರ್ಥವನ್ನು ಅವಶ್ಯವಾಗಿ ಮಕ್ಕಳು ತಿಳಿದುಕೊಂಡು ಬಿಟ್ಟಿರಿ. ತಂದೆಯು ಬಂದು ಹೊಸ ಹೊಸ ಮಾತುಗಳನ್ನು ತಿಳಿಸುತ್ತಾರೆ. ಹೊಸ ಪ್ರಪಂಚದ ಹೊಸ ಯುಗಕ್ಕಾಗಿ ಈ ಮಾತುಗಳನ್ನು ಮಕ್ಕಳು 5000 ವರ್ಷಗಳ ಮೊದಲೂ ಕೇಳಿದ್ದಿರಿ, ಈಗ ಪುನಃ ಕೇಳುತ್ತಿದ್ದೀರಿ. ಬಾಕಿ ಮಧ್ಯದಲ್ಲಿ ಕೇವಲ ಭಕ್ತಿಮಾರ್ಗದ ಮಾತುಗಳನ್ನೇ ಕೇಳಿದಿರಿ. ಸತ್ಯಯುಗದಲ್ಲಿ...
ತಂದೆಯು ತಿಳಿಸುತ್ತಾರೆ - ನಾನು ಸಂಗಮಯುಗದಲ್ಲಿಯೇ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬರುತ್ತೇನೆ, ರಾವಣನು ಹಳೆಯ ಶತ್ರುವಾಗಿದ್ದಾನೆ. ರಾವಣನನ್ನು ಪ್ರತೀ ವರ್ಷವೂ ಸುಡುತ್ತಾರೆ, ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಾರೆ. ಸಮಯವೂ ವ್ಯರ್ಥ, ಹಣವೂ ವ್ಯರ್ಥವಾಗುತ್ತದೆ. ಬಂಗಾಳದಲ್ಲಿ ಎಷ್ಟೊಂದು ದೇವಿಯರನ್ನು ಮಾಡಿಸುತ್ತಾರೆ ಅವರಿಗೆ ತಿನ್ನಿಸಿ, ಕುಡಿಸಿ ಪೂಜೆ ಮಾಡಿ ನಂತರ ತೆಗೆದುಕೊಂಡು ಹೋಗ...
ನೀವೀಗ ವಿಚಾರ ಮಾಡಿರಿ – ಮಾಯೆಯು ನಮ್ಮ ತಲೆಯನ್ನು ತಿರುಗಿಸಿ ನಮ್ಮನ್ನು ಹೇಗೆ ಮಾಡಿ ಬಿಟ್ಟಿದೆ. ಭಾರತವು ಎಷ್ಟು ಸಾಹುಕಾರನಾಗಿತ್ತು! ನಂತರ ಹೇಗೆ ಕಂಗಾಲಾಯಿತು? ಏನಾಯಿತು? ಏನನ್ನೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ನಾವೇ ದೇವತೆಗಳಾಗಿದ್ದೆವು ನಂತರ ಕ್ಷತ್ರಿಯರಾದೆವು. ಅವರು ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ, ಆದರೆ ಹಮ್ ಸೋ ಸೋ ಹಮ್ನ ಅರ್ಥವು ಎಷ್ಟು ಸಹಜವಾಗಿದೆ! ಮನ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ನಾವು ರಾಯಲ್ ತಂದೆಯ ಮಕ್ಕಳಾಗಿದ್ದೇವೆ, ಆದ್ದರಿಂದ ತಮ್ಮ ಚಲನೆಯನ್ನು ಬಹಳ ರಾಯಲ್ ಆಗಿಟ್ಟುಕೊಳ್ಳಬೇಕು. ಜೋರಾಗಿ ಮಾತನಾಡಬಾರದು, ಬಹಳ ಮಧುರರಾಗಬೇಕಾಗಿದೆ.
2. ಎಂದೂ ಸಹ ತಂದೆಯೊಂದಿಗೆ ಅಥವಾ ಪರಸ್ಪರ ಮುನಿಸಿಕೊಳ್ಳಬಾರದು. ಮುನಿಸಿಕೊಂಡು ವಿದ್ಯೆಯನ್ನೆಂದೂ ಬಿಡಬಾರದು. ಏನೆಲ್ಲಾ ಕೆಟ್ಟ ಹವ್ಯಾಸಗಳಿದೆಯೋ ಅದನ್ನು ಬಿಡಬೇಕಾಗಿದೆ.
ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನವಾಗುವರು
ಇಂದು ವಿಶ್ವದ ಸರ್ವ ಆತ್ಮರ ಉಪಕಾರಿ ಬಾಪ್ದಾದಾ ತನ್ನ ಶ್ರೇಷ್ಠ ಪರೋಪಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ವರ್ತಮಾನ ಸಮಯದಲ್ಲಿ ಅನೇಕ ಆತ್ಮರು ಉಪಕಾರಕ್ಕಾಗಿ ಇಚ್ಛುಕರಾಗಿದ್ದಾರೆ. ಸ್ವ-ಉಪಕಾರ ಮಾಡಿಕೊಳ್ಳುವ ಇಚ್ಛೆಯಿದೆ ಆದರೆ ಧೈರ್ಯ ಮತ್ತು ಶಕ್ತಿಯಿಲ್ಲ. ಇಂತಹ ನಿರ್ಬಲ ಆತ್ಮರಿಗೆ ಉಪಕಾರ ಮಾಡುವವರು ತಾವು ಪರೋಪಕಾರಿ ಮಕ್ಕಳು ನಿಮಿತ್ತರಾಗಿದ್ದೀರಿ. ತಾವು ಪರೋಪಕಾರಿ ಮಕ್ಕಳಿಗೆ ಆತ್ಮಗಳ ಕೂಗು ಕೇ...
ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ - ನಾನು ವಿಶಾಲ ಬುದ್ಧಿಯ ಕಾರಣ ನೆನಪು ಮತ್ತು ಸೇವೆಯಲ್ಲಿ ಮುಂದುವರೆಯುತ್ತಿದ್ದೇನೆಯೇ ಅಥವಾ ಸತ್ಯ ಹೃದಯ ಮತ್ತು ಯಥಾರ್ಥ ಬುದ್ಧಿಯಿಂದ ಮುಂದುವರೆಯುತ್ತಿದ್ದೇನೆಯೇ? ಮೊದಲೂ ಸಹ ತಿಳಿಸಿದ್ದೆವು - ಬುದ್ಧಿಯಿಂದ ಸೇವೆ ಮಾಡುವವರ ಬಾಣವು ಅನ್ಯರ ಬುದ್ಧಿಯವರೆಗೆ ನಾಟುತ್ತದೆ. ಹೃದಯದಿಂದ ಸೇವೆ ಮಾಡುವವರ ಬಾಣವು ಹೃದಯಕ್ಕೆ ನಾಟುತ್ತದೆ. ಹೇಗೆ ಸ್ಥಾಪನೆಯ, ಸೇವೆಯ ...
ಕೆಲವು ಮಕ್ಕಳು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ನೋಡಿಕೊಳ್ಳುವ ದೃಷ್ಟಿಯು ಎರಡು ಪ್ರಕಾರದ್ದಾಗಿದೆ. ಅದರಲ್ಲಿ ಕೆಲವರು ಕೇವಲ ವಿಶಾಲ ಬುದ್ಧಿಯ ದೃಷ್ಟಿಯಿಂದ ಪರಿಶೀಲನೆ ಮಾಡಿಕೊಳ್ಳುತ್ತಾರೆ, ಅವರದು ಹುಡುಗಾಟಿಕೆಯ ಕನ್ನಡಕವಾಗಿರುತ್ತದೆ. ಪ್ರತೀ ಮಾತಿನಲ್ಲಿ ಇದೇ ಕಂಡು ಬರುತ್ತದೆ- ತ್ಯಾಗ ಮಾಡಿದೆವು, ಸೇವೆ ಮಾಡಿದೆವು, ಪರಿವರ್ತನೆ ಮಾಡಿಕೊಂಡೆವು, ಎಷ್ಟು ಮಾಡಿದೆವೋ ಅಷ್ಟೇ ಬ...
ಇಂದು ಟೀಚರ್ಸ್ ಕುಳಿತಿದ್ದಾರೆ, ಟೀಚರ್ಸ್ ಗುತ್ತಿಗೆದಾರರಾಗಿದ್ದಾರೆ. ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಲ್ಲವೆ. ಸ್ವ-ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಮಾಡಲೇಬೇಕಾಗಿದೆ. ಹೀಗೆ ಅತಿ ದೊಡ್ಡ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಲ್ಲವೆ. ಹೇಗೆ ಪ್ರಪಂಚದವರು ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ತಾನು ಸಾಯದಿದ್ದರೆ ಪ್ರಪಂಚವು ಸಾಯುವುದಿಲ್ಲವೆಂದು ಹೇಳುತ್ತಾರೆ. ಹಾಗೆಯೇ ಸ್ವ ಪರಿವರ್ತ...
ಸದಾ ಸರ್ವ ಆತ್ಮರ ಪ್ರತಿ ಪರೋಪಕಾರಿ, ಸದಾ ಸತ್ಯ ಹೃದಯದಿಂದ ಸತ್ಯ ಸಾಹೇಬನನ್ನು ಖುಷಿ ಪಡಿಸುವವರು, ವಿಶಾಲ ಬುದ್ಧಿ ಮತ್ತು ಸತ್ಯ ಹೃದಯದ ಬ್ಯಾಲೆನ್ಸ್ ಇಟ್ಟುಕೊಳ್ಳುವವರು, ಸದಾ ಸ್ವಯಂನ್ನು ವಿಶ್ವ ಪರಿವರ್ತನೆಗೆ ನಿಮಿತ್ತನನ್ನಾಗಿ ಮಾಡಿಕೊಳ್ಳುವವರು ಸ್ವ-ಪರಿವರ್ತನೆ ಮಾಡಿಕೊಳ್ಳುವಂತಹ ಶ್ರೇಷ್ಠಾತ್ಮ, ಶ್ರೇಷ್ಠ ಸೇವಾಧಾರಿ ಆತ್ಮನೆಂದು ತಿಳಿದು ಮುಂದುವರೆಯುವವರು, ಇಂತಹ ನಾಲ್ಕಾರು ಕಡೆಯ ವಿಶೇಷ ಮಕ...
ದೆಹಲಿ ಗ್ರೂಪ್:
ಎಲ್ಲರ ಹೃದಯದಲ್ಲಿ ತಂದೆಯ ಸ್ನೇಹವು ಅಡಗಿದೆ. ಸ್ನೇಹವೇ ಇಲ್ಲಿಯವರೆಗೂ ಕರೆತಂದಿದೆ. ಹೃದಯದ ಸ್ನೇಹವು ಹೃದಯರಾಮನ...ವರೆಗೂ ಕರೆ ತಂದಿದೆ. ಹೃದಯದಲ್ಲಿ ತಂದೆಯಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ, ಯಾವಾಗ ತಂದೆಯವರೇ ತಮ್ಮ ಪ್ರಪಂಚವೆಂದಾಗ, ತಂದೆಯ ಹೃದಯದಲ್ಲಿರುವುದು ಎಂದರೆ ತಂದೆಯಲ್ಲಿಯೇ ಪ್ರಪಂಚವು ಅಡಗಿದೆ. ಆದ್ದರಿಂದ ಒಂದು ಮತ, ಒಂದು ಬಲ, ಒಂದು ಭರವಸೆಯಿದೆ. ಎಲ್ಲಿ ಒಂದಿದೆಯೋ (ಏಕತೆ) ಅಲ್ಲಿ ...
ವರಂಗಲ್ ಗ್ರೂಪ್:
ತಮ್ಮನ್ನು ಸದಾ ಡಬಲ್ ಲೈಟ್ ಎಂದು ಅನುಭವ ಮಾಡುವಿರಾ? ಯಾರು ಡಬಲ್ ಲೈಟ್ ಆಗಿದ್ದಾರೆಯೋ, ಆ ಆತ್ಮರಲ್ಲಿ ಮೈಟ್ ಅಂದರೆ ತಂದೆಯ ಶಕ್ತಿಗಳೆಲ್ಲವೂ ಜೊತೆಯಿರುತ್ತವೆ. ಅಂದಾಗ ಡಬಲ್ ಲೈಟ್ ಸಹ ಆಗಿದ್ದೀರಿ ಹಾಗೂ ಶಕ್ತಿಯೂ ಇವೆ. ಸಮಯದಲ್ಲಿ ಆ ಶಕ್ತಿಗಳನ್ನು ಉಪಯೋಗಿಸಬಲ್ಲಿರಾ ಅಥವಾ ಸಮಯದಲ್ಲಿ ಕಳೆದು ಹೋದ ನಂತರದಲ್ಲಿ ನೆನಪಿಗೆ ಬರುತ್ತದೆಯೇ? ಏಕೆಂದರೆ ತಮ್ಮ ಬಳಿ ಎಷ್ಟಾದರೂ ಶಕ್ತಿಯಿರಬಹುದು, ಅದೇನಾದರೂ ಸ...
ಓಂ ಶಾಂತಿ. ತಂದೆಯು ಎಲ್ಲಾ ಆತ್ಮಿಕ ಮಕ್ಕಳನ್ನು ಜೊತೆ ಜೊತೆಗೆ ಸೃಷ್ಟಿಯಲ್ಲಿ ಯಾರೆಲ್ಲಾ ಜೀವಾತ್ಮರಿದ್ದಾರೆಯೋ ಅವರೆಲ್ಲರನ್ನೂ ಮರಳಿ ಕರೆದುಕೊಂಡು ಹೋಗಲೇಬೇಕಾಗಿದೆ ಏಕೆಂದರೆ ಈಗ ಅಂಧಕಾರ ರಾತ್ರಿಯು ಪೂರ್ಣವಾಗುತ್ತದೆ. ಹಳೆಯ ಪ್ರಪಂಚವು ಮುಕ್ತಾಯವಾಗಿದೆ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಪ್ರಪಂಚವು ಅದೇ ಆಗಿದೆ, ಆದರೆ ಹಳೆಯದರಿಂದ ಹೊಸದಾಗುತ್ತದೆ. ಸತ್ಯಯುಗದ ಆದಿಯಲ್ಲಿ ಅವಶ್ಯವಾಗಿ ಆದಿ ಸನಾ...
ತಂದೆಯು ತಿಳಿಸುತ್ತಾರೆ - ಇಷ್ಟೆಲ್ಲಾ ಮನುಷ್ಯರಿಗೆ ನಾನು ಹೇಗೆ ಓದಿಸಲಿ? ಹಾ! ಇಷ್ಟು ಮಾತ್ರ ತಿಳಿದುಕೊಳ್ಳುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರಿಗೆ ಸಂದೇಶ ಸಿಗುವುದು, ತಂದೆಯು ಎಲ್ಲರಿಗೆ ಈ ಮಂತ್ರವನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು, ಅವಗುಣಗ...
ತಂದೆಗೆ ಗೊತ್ತಿದೆ - ನನ್ನ ಮಕ್ಕಳು ಬಹಳ ದುಃಖಿಯಾಗಿದ್ದಾರೆ, ಎಲ್ಲರನ್ನೂ ದುಃಖಗಳಿಂದ ಬಿಡಿಸಿ ಮರಳಿ ಕರೆದುಕೊಂಡು ಹೋಗುವೆನು. ಇವರೆಲ್ಲರೂ ಪರಸ್ಪರ ಹೊಡೆದಾಡುತ್ತಾರೆ. ಬೆಣ್ಣೆಯು ನಿಮಗೇ ಸಿಗುವುದು. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಬಾಯಲ್ಲಿ ಚಂದ್ರಮನ ಸಾಕ್ಷಾತ್ಕಾರ ಮಾಡುತ್ತಿದ್ದರಲ್ಲವೆ ಅಂದರೆ ಬಾಯಲ್ಲಿ ಇಡೀ ವಿಶ್ವದ ಗೋಲವು ಬಂದು ಬಿಡುತ್ತದೆ. ನೀವು ರಾಜಕುಮಾರ-ಕುಮಾರಿಯರಾಗುತ್ತೀರಿ....
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿನಾಶದ ಪೂರ್ವ ನಿಶ್ಚಿತವನ್ನರಿತು ಸಂಪೂರ್ಣ ಶ್ರೀಮತದಂತೆ ನಡೆಯಬೇಕಾಗಿದೆ. ನೆನಪಿನ ಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಬೆಳಗಿರುವ ಜ್ಯೋತಿಯಿಂದ ಎಲ್ಲರ ಜ್ಯೋತಿಗಳನ್ನು ಬೆಳಗಿಸಿ ಸತ್ಯ ದೀಪಾವಳಿಯನ್ನು ಆಚರಿಸಬೇಕಾಗಿದೆ.