text stringlengths 0 61.5k |
|---|
ಧಾರಣೆಗಾಗಿ ಮುಖ್ಯಸಾರ: |
1. ಯಾರು ವಿದ್ಯಾಭ್ಯಾಸದಲ್ಲಿ ಬುದ್ಧಿವಂತರಾಗಿದ್ದಾರೆ, ಚೆನ್ನಾಗಿ ತಿಳಿಸುತ್ತಾರೆ ಅಂತಹವರ ಸಂಗ ಮಾಡಬೇಕಾಗಿದೆ, ಅವರಿಗೆ ಗೌರವ ಕೊಡಬೇಕಾಗಿದೆ. ಎಂದಿಗೂ ಅಹಂಕಾರದಲ್ಲಿ ಬರಬಾರದು. |
2. ಜ್ಞಾನದ ಹೊಸ-ಹೊಸ ಮಾತುಗಳನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕು ಹಾಗೂ ಅನ್ಯರಿಗೂ ತಿಳಿಸಬೇಕಾಗಿದೆ. ನಾವು ಸ್ವದರ್ಶನ ಚಕ್ರಧಾರಿ ಆಗಿದ್ದೇವೆ ಎಂಬ ಖುಷಿಯಲ್ಲಿಯೇ ಇರಬೇಕಾಗಿದೆ. |
ಓಂ ಶಾಂತಿ. ಇದು ಕಾಲೇಜು ಆಗಿದೆಯಲ್ಲವೆ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡಾಗ ನಾವು ಶಿಕ್ಷಕರ ಮುಂದೆ ಕುಳಿತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಯಾವ ಪರೀಕ್ಷೆಯನ್ನು ತೇರ್ಗಡೆ ಮಾಡಿ ಕುಳಿತಿದ್ದೇವೆ ಎಂಬುದೂ ಸಹ ಬುದ್ಧಿಯಲ್ಲಿರುತ್ತದೆ. ಸತ್ಸಂಗಗಳಲ್ಲಿ ಎಲ್ಲಿ ವೇದಶಾಸ್ತ್ರಗಳನ್ನು ತಿಳಿಸುತ್ತಾರೆಯೋ ಅಲ್ಲಿ ಯಾವುದೇ ಗುರಿ-ಧ್ಯೇಯವು ಇರುವುದಿಲ್ಲ. ಆ ಶಾಸ್ತ್ರ ಇತ್ಯಾದಿಗಳು ನಿಮ್ಮ ... |
ನೀವು ತಿಳಿದುಕೊಂಡಿದ್ದೀರಿ, ಇದು ನಮ್ಮ ಮುಖ್ಯ ಶಾಲೆಯಾಗಿದೆ. ಇಲ್ಲಿ ಯಾರಿಗೂ ಯಾವುದೇ ಜಂಜಾಟವಿಲ್ಲ. ಹೊರಗಡೆ ಹೋದಾಗ ಉದ್ಯೋಗ ವ್ಯವಹಾರಗಳಲ್ಲಿ ತೊಡಗುತ್ತಾರೆಂದರೆ ನಾವು ವಿದ್ಯಾರ್ಥಿಗಳಾಗಿದ್ದೇವೆ, ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆ ಎಂಬುದೇ ನೆನಪಿರುವುದಿಲ್ಲ. ಯಾವಾಗ ಸಮಯ ಸಿಗುವುದೋ ಆಗಲೇ ಬುದ್ಧಿಯಲ್ಲಿ ಈ ವಿಚಾರಗಳು ನಡೆಯುತ್ತವೆ. ಪ್ರಯತ್ನ ಪಟ್ಟು ಸಮಯವನ್ನು ತೆಗೆಯಬೇಕು.... |
ತಂದೆಯನ್ನು ನೆನಪು ಮಾಡಿ ಪಾಪದ ಗಡಿಗೆಯನ್ನು ಖಾಲಿ ಮಾಡಿಕೊಳ್ಳಬೇಕಾಗಿದೆ. ಯಾರೆಷ್ಟು ಪರಿಶ್ರಮ ಪಡುವರೋ ಅವರು ಅಷ್ಟೇ ಪಡೆಯುತ್ತಾರೆ. ಏಣಿಯ ಚಿತ್ರವನ್ನು ನೋಡುತ್ತೀರಿ, ಅದರಲ್ಲಿ ಎಷ್ಟು ಮೇಲೇರುತ್ತಾರೆ. ಏರಿದರೆ ರಾಜರಾಗುವರು, ಬಿದ್ದರೆ ಪುಡಿ ಪುಡಿ.... ವಿಕಾರದಲ್ಲಿ ಬಿದ್ದು ವಿಚ್ಛೇದನ ಕೊಟ್ಟರೆ ತಂದೆಯು ಹೇಳುತ್ತಾರೆ - ಅಂತಹವರು ಕೆಳಗೆ ಬೀಳುವರು. ಸುಪುತ್ರರು ಪುರುಷಾರ್ಥ ಮಾಡಿ ತಮ್ಮ ಜನ್ಮವನ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವುದೇ ಮಾತಿನ ಗೊಂದಲದಲ್ಲಿ ಬರಬಾರದು. ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡುತ್ತಾ ಉನ್ನತಿಯನ್ನು ಹೊಂದಬೇಕಾಗಿದೆ. ಪುರುಷಾರ್ಥ ಮಾಡಿ ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ. |
2. ತಮ್ಮ ಮನ ಮತದಂತೆ ನಡೆಯದೇ ಶ್ರೀಮತದಂತೆ ನಡೆಯಬೇಕಾಗಿದೆ. ಯಾರು ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸುವರೋ ಅವರಿಂದ ಸಾವಧಾನವಾಗಿರಬೇಕಾಗಿದೆ. ಆಸುರೀ ಕರ್ಮ ಮಾಡಲು ಹೆದರಬೇಕಾಗಿದೆ. |
ಓಂ ಶಾಂತಿ. ಪತಿತ-ಪಾವನ ತಂದೆ ಯಾವ ಮಕ್ಕಳು ಪಾವನ ಆಗುವರೋ ಅವರಿಗೇ ಕುಳಿತು ತಿಳಿಸುತ್ತಾರೆ. ಪತಿತ ಮಕ್ಕಳೇ ಪಾವನರನ್ನಾಗಿ ಮಾಡುವ ತಂದೆಯನ್ನು ಕರೆಯುತ್ತಾರೆ. ಡ್ರಾಮಾದ ಪ್ಲಾನ್ ಎಂತಲೂ ಹೇಳುತ್ತಾರೆ, ರಾವಣ ರಾಜ್ಯ ಆಗಿರುವ ಕಾರಣ ಎಲ್ಲಾ ಮನುಷ್ಯರು ಪತಿತರಾಗಿದ್ದಾರೆ. ಯಾರು ವಿಕಾರದಲ್ಲಿ ಹೋಗುವರೋ ಅವರಿಗೆ ಪತಿತರೆಂದು ಹೇಳಲಾಗುತ್ತದೆ. ವಿಕಾರದಲ್ಲಿ ಹೋಗದೇ ಇರುವವರು ಅನೇಕರಿದ್ದಾರೆ, ಬ್ರಹ್ಮಚಾರಿ... |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ನೀವು ಬಂದು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ ಮತ್ತೆ ಬ್ರಾಹ್ಮಣರಿಂದ ದೇವತೆಗಳಾಗಿ ಸ್ವರ್ಗದಲ್ಲಿ ಹೋಗಬೇಕಾಗಿದೆ, ಈಗ ಸಂಗಮವಾಗಿದೆ. ವಿರಾಟ ರೂಪದಲ್ಲಿ ಬ್ರಾಹ್ಮಣರ ಶಿಖೆಯು ಪ್ರಸಿದ್ಧವಾಗಿದೆ. ಹಿಂದೂಗಳಿಗೂ ಸಹ ಶಿಖೆಯೇ ಗುರುತಾಗಿದೆ. ಮನುಷ್ಯರು ಮನುಷ್ಯರೇ ಆಗಿದ್ದಾರೆ. ಖಾಲಸೆ, ಮುಸಲ್ಮಾನರು ಮೊದಲಾ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬುದ್ಧಿರೂಪಿ ಜೋಳಿಗೆಯಲ್ಲಿ ಅವಿನಾಶಿ ಜ್ಞಾನ ರತ್ನಗಳನ್ನು ತುಂಬಿಕೊಂಡು ಮತ್ತೆ ದಾನ ಮಾಡಬೇಕಾಗಿದೆ. ದಾನ ಮಾಡುವುದರಿಂದಲೇ ಖುಷಿಯಿರುವುದು, ಜ್ಞಾನ ಧನವು ಹೆಚ್ಚುತ್ತಾ ಹೋಗುವುದು. |
2. ಎಂದೂ ಪರಸ್ಪರ ಮುನಿಸಿಕೊಂಡು ಉಪ್ಪು ನೀರಾಗಿ ವರ್ತಿಸಬಾರದು. ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು ಮತ್ತು ಮುರುಳಿಯನ್ನು ಕೇಳಬೇಕು, ಕಾದ ಹಂಚಿನಂತೆ ಆಗಬಾರದು. |
ಹೊಸ ಪ್ರಪಂಚದ ಚಿತ್ರದ ಆಧಾರ ವರ್ತಮಾನ ಶ್ರೇಷ್ಠ ಬ್ರಾಹ್ಮಣ ಜೀವನ |
ಇಂದು ವಿಶ್ವ ರಚಯಿತ, ವಿಶ್ವದ ಶ್ರೇಷ್ಠ ಅದೃಷ್ಟವನ್ನು ರೂಪಿಸುವಂತಹ ಬಾಪ್ದಾದಾ ತನ್ನ ಶ್ರೇಷ್ಠ ಅದೃಷ್ಟದ ಚಿತ್ರ-ಸ್ವರೂಪ ಮಕ್ಕಳನ್ನು ನೋಡುತ್ತಿದ್ದಾರೆ. ತಾವೆಲ್ಲಾ ಬ್ರಾಹ್ಮಣ ಆತ್ಮರು ವಿಶ್ವದ ಶ್ರೇಷ್ಠ ಅದೃಷ್ಠದ ಚಿತ್ರ (ರೂಪ ರೇಖೆ) ವಾಗಿದ್ದೀರಿ. ಬ್ರಾಹ್ಮಣ ಜೀವನದ ಚಿತ್ರದಿಂದ ಭವಿಷ್ಯದ ಶ್ರೇಷ್ಠ ಅದೃಷ್ಠ ಸ್ಪಷ್ಟವಾಗಿ ಕಂಡು ಬರುತ್ತದೆ. ಬ್ರಾಹ್ಮಣ ಜೀವನದ ಪ್ರತೀ ಶ್ರೇಷ್ಠ ಕರ್ಮವು ಭವಿಷ್ಯ ಶ... |
ವರ್ತಮಾನ ಸಮಯದಲ್ಲಿ ತಂದೆಯ ಜೊತೆ ಎಷ್ಟೊಂದು ಶ್ರೇಷ್ಠ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ಇಡೀ ಕಲ್ಪದಲ್ಲಿ ಎಲ್ಲರಿಗಿಂತ ಅತಿ ದೊಡ್ಡ ವಿಶೇಷ ಪಾತ್ರವನ್ನು ಈ ಸಮಯದಲ್ಲಿ ಅಭಿನಯಿಸುತ್ತಿದ್ದೀರಿ. ತಂದೆಯ ಜೊತೆ ಜೊತೆಗೆ ಸಹಯೋಗಿಗಳಾಗಿ. ವಿಶ್ವದ ಪ್ರತಿಯೊಂದು ಆತ್ಮನ ಅನೇಕ ಜನ್ಮಗಳ ಆಸೆಗಳನ್ನು ಪೂರ್ಣ ಮಾಡುತ್ತಿದ್ದೀರಿ. ತಂದೆಯ ಮೂಲಕ ಪ್ರತಿಯೊಂದು ಆತ್ಮನಿಗೆ ಮುಕ್ತಿ-ಜೀವನ್ಮುಕ್ತಿಯ ಅಧಿಕಾರವನ್ನು... |
ಬ್ರಾಹ್ಮಣ ಆತ್ಮ ಅರ್ಥಾತ್ ಪ್ರಾಪ್ತಿ ಸ್ವರೂಪ ಆತ್ಮ, ಸಂಪನ್ನ ಆತ್ಮ. ಹೇಗೆ ತಂದೆಯು ಸದಾ ಲೈಟ್ಹೌಸ್ ಮೈಟ್ಹೌಸ್ ಆಗಿದ್ದಾರೆ, ಅದೇರೀತಿ ಬ್ರಾಹ್ಮಣ ಆತ್ಮರೂ ಸಹ ತಂದೆಯ ಸಮಾನರಾಗಿದ್ದೀರಿ. ಲೈಟ್ಹೌಸ್ ಆಗಿದ್ದೀರಿ ಆದ್ದರಿಂದ ಪ್ರತಿಯೊಂದು ಆತ್ಮನಿಗೆ ತನ್ನ ಗುರಿಯನ್ನು ತಲುಪಿಸಲು ನಿಮಿತ್ತರಾಗಿದ್ದೀರಿ. ಹೇಗೆ ತಂದೆಯು ಪ್ರತೀ ಸಂಕಲ್ಪ, ಪ್ರತೀ ಮಾತು, ಪ್ರತೀ ಕರ್ಮದಿಂದ, ಪ್ರತೀ ಸಮಯ ದಾತನಾಗಿದ್ದಾರೆ,... |
ಹೊಸ ಪ್ರಪಂಚದಲ್ಲಿ ಏನಿರುವುದೋ ಎಂದು ಕೆಲವರು ಕೇಳುತ್ತಾರಲ್ಲವೆ. ಹೊಸ ಪ್ರಪಂಚದ ಚಿತ್ರವೇ ತಾವಾಗಿದ್ದೀರಿ. ತಮ್ಮ ಜೀವನದಿಂದ ಭವಿಷ್ಯವು ಸ್ಪಷ್ಟವಾಗುತ್ತದೆ. ಈ ಸಮಯದಲ್ಲಿಯೂ ತಮ್ಮ ಚಿತ್ರದಲ್ಲಿ ನೋಡಿಕೊಳ್ಳಿ - ಸದಾ ಈ ರೀತಿಯ ಚಿತ್ರವು ತಯಾರಾಗಿದೆಯೇ ಯಾವುದನ್ನು ಯಾರೇ ನೋಡಿದರೂ ಸಹ ಸದಾಕಾಲಕ್ಕಾಗಿ ಪ್ರಸನ್ನಚಿತ್ತರಾಗಿ ಬಿಡಬೇಕು. ಯಾರಾದರೂ ಸ್ವಲ್ಪ ಅಶಾಂತಿಯ ಅಲೆಯಿಂದ ಕೂಡಿದ್ದರೂ ಸಹ ಅವರು ತಮ್ಮ... |
ಈ ಸಮಯದ ತಮ್ಮ ಸಂಪೂರ್ಣ ಸ್ಥಿತಿಯು ಸತ್ಯಯುಗದ 16 ಕಲಾ ಸಂಪೂರ್ಣ ಸ್ಥಿತಿಗೆ ಆಧಾರವಾಗಿದೆ. ಈಗಿನ ಏಕಮತವು ಅಲ್ಲಿನ ಒಂದು ರಾಜ್ಯಕ್ಕೆ ಆಧಾರಮೂರ್ತಿಯಾಗಿದೆ. ಇಲ್ಲಿನ ಸರ್ವ ಖಜಾನೆಗಳ ಸಂಪನ್ನತೆ - ಜ್ಞಾನ, ಗುಣ, ಶಕ್ತಿ ಸರ್ವ ಖಜಾನೆಗಳು ಅಲ್ಲಿನ ಸಂಪನ್ನತೆಗೆ ಆಧಾರವಾಗಿದೆ. ಇಲ್ಲಿನ ದೇಹದ ಆಕರ್ಷಣೆಯಿಂದ ಭಿನ್ನತೆಯು ಅಲ್ಲಿನ ತನುವಿನ ಆರೋಗ್ಯದ ಪ್ರಾಪ್ತಿಗೆ ಆಧಾರವಾಗಿದೆ. ಅಶರೀರಿತನದ ಸ್ಥಿತಿಯು ನಿರ... |
ಬಾಪ್ದಾದಾ ಇದನ್ನೇ ನೋಡುತ್ತಾ ಇರುತ್ತೇವೆ - ಪ್ರತಿಯೊಬ್ಬರೂ ಎಲ್ಲಿಯವರೆಗೆ ತಮ್ಮ ಚಿತ್ರವನ್ನು ತಯಾರು ಮಾಡಿಕೊಂಡಿದ್ದಾರೆ? ಇವರು ಇದನ್ನು ಸರಿಯಾಗಿ ಮಾಡಲಿಲ್ಲ ಆದ್ದರಿಂದಲೇ ಈ ರೀತಿಯಾಯಿತು ಎಂದು ಅನ್ಯರ ಮೇಲೆ ದೂರು ಹೊರಿಸಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ತಮ್ಮ ಚಿತ್ರವನ್ನು ತಾವೇ ಚಿತ್ರಿಸಿಕೊಳ್ಳಬೇಕಾಗಿದೆ. ಮತ್ತೆಲ್ಲಾ ವಸ್ತುಗಳು ಬಾಪ್ದಾದಾರವರಿಂದ ಸಿಗುತ್ತಿದೆ, ಅದರಲ್ಲಂತೂ ಯಾವುದೇ ಕೊರತೆ... |
ಯಾರ ಚಿತ್ರವು ಬಹಳ ಸುಂದರವಾಗಿರುವುದೋ ಅವರು ಅವಶ್ಯವಾಗಿ ಮೊದಲ ನಂಬರಿನಲ್ಲಿ ಬರುವರು ಅಂದಾಗ ಎಲ್ಲರೂ ಮೊದಲ ಡಿವಿಜನ್ನಲ್ಲಿ ಬರುವವರಾಗಿದ್ದೀರಲ್ಲವೆ. ಮೊಟ್ಟ ಮೊದಲನೆಯದಾಗಿ ಒಬ್ಬರೇ ಬರುವರು ಆದರೆ ಮೊದಲ ಡಿವಿಜನ್ನಲ್ಲಿ ಅನೇಕರು ಇರುತ್ತಾರಲ್ಲವೆ ಅಂದಮೇಲೆ ಯಾವುದರಲ್ಲಿ ಬರಬೇಕು? ಫಸ್ಟ್ ಡಿವಿಜನ್ ಎಲ್ಲರಿಗಾಗಿ ಇದೆ ಅಂದಮೇಲೆ ಅದನ್ನು ಪ್ರಾಪ್ತಿ ಮಾಡಿಕೊಳ್ಳುವುದು ಒಳ್ಳೆಯದಾಗಿದೆ. ಬಾಪ್ದಾದಾ ಎಲ್ಲ... |
ನಾಲ್ಕಾರೂ ಕಡೆಯ ಎಲ್ಲಾ ಶ್ರೇಷ್ಠ ಅದೃಷ್ಠದ ಶ್ರೇಷ್ಠ ಚಿತ್ರ ಸ್ವರೂಪ ಮಹಾನ್ ಆತ್ಮರಿಗೆ, ಸದಾ ಸ್ವಯಂನ್ನು ವಿಶ್ವದ ಆಧಾರ ಮೂರ್ತಿಯೆಂದು ಅನುಭವ ಮಾಡುವಂತಹ ಆತ್ಮರಿಗೆ, ಸದಾ ತಮ್ಮನ್ನು ಪ್ರಾಪ್ತಿ ಸ್ವರೂಪ ಅನುಭೂತಿಗಳ ಮೂಲಕ ಅನ್ಯರಿಗೂ ಪ್ರಾಪ್ತಿ ಸ್ವರೂಪ ಅನುಭವ ಮಾಡಿಸುವಂತಹ ಶ್ರೇಷ್ಠ ಆತ್ಮರಿಗೆ ಸದಾ ತಂದೆಯ ಸ್ನೇಹ ಮತ್ತು ಸಹಯೋಗದ ಪದುಮದಷ್ಟು ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪೂಜ್ಯ ... |
ವ್ಯಕ್ತಿಗತ ವಾರ್ತಾಲಾಪ: |
ತಂದೆಯ ಕೈ ಸದಾ ಮಸ್ತಕದಲ್ಲಿ ಇದ್ದೇ ಇದೆ - ಇಂತಹ ಅನುಭವ ಮಾಡುತ್ತೀರಾ? ಶ್ರೇಷ್ಠ ಮತವೇ ಶ್ರೇಷ್ಠ ಕೈ ಆಗಿದೆ. ಎಲ್ಲಿ ಪ್ರತೀ ಹೆಜ್ಜೆಯಲ್ಲಿ ತಂದೆಯ ಕೈ ಅರ್ಥಾತ್ ಶ್ರೇಷ್ಠ ಮತವಿದೆಯೋ ಅಲ್ಲಿ ಶ್ರೇಷ್ಠ ಕಾರ್ಯವೂ ಸ್ವತಹವಾಗಿಯೇ ಆಗುತ್ತದೆ. ಸದಾ ಕೈ (ಶ್ರೀಮತ)ನ ಸ್ಮೃತಿಯಿಂದ ಸಮರ್ಥರಾಗಿ ಮುಂದುವರೆಯುತ್ತಾ ನಡೆಯಿರಿ. ತಂದೆಯ ಕೈ ಸದಾಕಾಲವೂ ಸಹಜವಾಗಿ ಮುಂದುವರೆಸುವ ಅನುಭವವನ್ನು ಮಾಡಿಸುತ್ತದೆ. ಆದ್ದ... |
ಪ್ರಶ್ನೆ: ಸದಾ ಸಹಜಯೋಗಿ ಆಗಿರಲು ಸಹಜ ವಿಧಿಯೇನಾಗಿದೆ? |
ಉತ್ತರ: ತಂದೆಯೇ ನನ್ನ ಪ್ರಪಂಚವಾಗಿದ್ದಾರೆ - ಈ ಸ್ಮೃತಿಯಲ್ಲಿದ್ದರೆ ಸಹಜಯೋಗಿ ಆಗಿ ಬಿಡುವಿರಿ. ಏಕೆಂದರೆ ಇಡೀ ದಿನದಲ್ಲಿ ಬುದ್ಧಿಯು ಪ್ರಪಂಚದ ಕಡೆಗೇ ಹೋಗುತ್ತದೆ. ಯಾವಾಗ ತಂದೆಯೇ ಪ್ರಪಂಚವಾಗಿದ್ದಾರೆಂದರೆ, ಬುದ್ಧಿಯು ಮತ್ತೆಲ್ಲಿಗೆ ಹೋಗುವುದು? ಪ್ರಪಂಚದಲ್ಲಿಯೇ ಹೋಗುವುದಲ್ಲವೆ, ಕಾಡಿಗಂತು ಹೋಗುವುದಿಲ್ಲ! ಅಂದಮೇಲೆ ಯಾವಾಗ ತಂದೆಯ ಸಂಸಾರ (ಪ್ರಪಂಚ) ಆಗಿ ಬಿಟ್ಟರು, ಅಂದಮೇಲೆ ಸಹಜಯೋಗಿಯೂ ಆಗಲಾ... |
ಡಬಲ್ ವಿದೇಶಿ ಸಹೋದರ ಸಹೋದರಿಯರೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ: |
ಡಬಲ್ ವಿದೇಶಿಯರಲ್ಲಿ ಸೇವೆಯ ಉಲ್ಲಾಸವು ಚೆನ್ನಾಗಿದೆ. ಆದ್ದರಿಂದ ವೃದ್ಧಿಯನ್ನೂ ಚೆನ್ನಾಗಿ ಮಾಡುತ್ತಿದ್ದೀರಿ. ವಿದೇಶ ಸೇವೆಯಲ್ಲಿ 14 ವರ್ಷಗಳಲ್ಲಿ ಚೆನ್ನಾಗಿ ವೃದ್ಧಿ ಮಾಡುತ್ತೀರಿ. ಲೌಕಿಕ ಮತ್ತು ಅಲೌಕಿಕ ಡಬಲ್ ಕಾರ್ಯವನ್ನು ಮಾಡುತ್ತಾ ಮುಂದುವರೆಯುತ್ತಿದ್ದೀರಿ. ಡಬಲ್ ಕಾರ್ಯದಲ್ಲಿ ಸಮಯವನ್ನೂ ತೊಡಗಿಸುತ್ತೀರಿ ಮತ್ತು ಬುದ್ಧಿಯ, ಶರೀರದ ಶಕ್ತಿಯನ್ನೂ ತೊಡಗಿಸುತ್ತೀರಿ, ಇದೂ ಸಹ ಬುದ್ಧಿಯ ಚಮತ್... |
ಎಂದಾದರೂ ಯಾವುದೇ ಮಾತಿನಲ್ಲಿ ತನುವಿನ ಬಲಹೀನತೆಯಿರಲಿ ಅಥವಾ ಕಾರ್ಯದ ಹೆಚ್ಚು ಹೊರೆಯಿರಲಿ ಆದರೆ ಮನಸ್ಸಿನಿಂದ ಎಂದೂ ಸುಸ್ತಾಗಬಾರದು. ಮನಸ್ಸಿನ ಖುಷಿಯಿಂದ ತನುವಿನ ಸುಸ್ತು ಸಮಾಪ್ತಿ ಆಗುತ್ತದೆ ಆದರೆ ಮನಸ್ಸಿನ ಸುಸ್ತು ಶರೀರದ ಸುಸ್ತನ್ನೂ ಸಹ ಹೆಚ್ಚಿಸಿ ಬಿಡುತ್ತದೆ ಆದ್ದರಿಂದ ಎಂದೂ ಸುಸ್ತಾಗಬಾರದು. ಸುಸ್ತಾದಾಗ ಸೆಕೆಂಡಿನಲ್ಲಿ ತಂದೆಯ ವತನಕ್ಕೆ ಬಂದು ಬಿಡಿ. ಒಂದುವೇಳೆ ಮನಸ್ಸನ್ನು ಸುಸ್ತು ಮಾಡ... |
ಸಮಯ, ಶಕ್ತಿ - ಎರಡರ ಪ್ರಮಾಣ ಸೇವೆ ಮಾಡುತ್ತಾ ಹೋಗಿ. ಸೇವೆಯೆಂದೂ ನಿಲ್ಲಲು ಸಾಧ್ಯವಿಲ್ಲ, ಇಂದಲ್ಲದಿದ್ದರೆ ನಾಳೆ ಆಗಲೇಬೇಕಾಗಿದೆ. ಒಂದುವೇಳೆ ಸತ್ಯ ಹೃದಯದಿಂದ, ಹೃದಯದ ಸ್ನೇಹದಿಂದ ಎಷ್ಟು ಸೇವೆ ಮಾಡಲು ಸಾಧ್ಯವಿದೆಯೋ ಅಷ್ಟೇ ಮಾಡುತ್ತೀರೆಂದರೆ ಬಾಪ್ದಾದಾ ಎಂದೂ ಇಷ್ಟು ಕೆಲಸ ಮಾಡಿದಿರಿ, ಇಷ್ಟು ಮಾಡಲಿಲ್ಲವೆಂದು ದೂರುವುದಿಲ್ಲ. ಶಭಾಷ್ ಎನ್ನುವರು. ಸಮಯ ಪ್ರಮಾಣ, ಶಕ್ತಿ ಪ್ರಮಾಣ, ಸತ್ಯ ಹೃದಯದಿಂ... |
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ಇವರಿಗೆ (ಬ್ರಹ್ಮಾತಂದೆಗೆ) ಆತ್ಮಿಕ ತಂದೆಯೆಂದು ಹೇಳುವುದಿಲ್ಲ. ಇಂದಿನ ದಿನವನ್ನು ಸದ್ಗುರುವಾರವೆಂದು ಕರೆಯುತ್ತಾರೆ. ಕೇವಲ ಗುರುವಾರವೆಂದು ಹೇಳುವುದು ತಪ್ಪಾಗಿದೆ. ಇದು ಸದ್ಗುರುವಾರವಾಗಿದೆ. ಗುರುಗಳಂತೂ ಅನೇಕರಿದ್ದಾರೆ, ಸದ್ಗುರು ಒಬ್ಬರೇ ಆಗಿದ್ದಾರೆ. ಅನೇಕರು ತಮ್ಮನ್ನು ಗುರುವೆಂದೂ ಹೇಳಿಕೊಳ್ಳುತ್ತಾರೆ, ಸದ್ಗುರುವೆಂದೂ... |
ಈಗ ನೀವು ಸಂಗಮಯುಗದಲ್ಲಿದ್ದೀರಿ. ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದು ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಅನೇಕರಿಗೆ ಪೂರ್ಣ ನಿಶ್ಚಯವಿದೆ. ಕೆಲವರಿಗೆ ಅರ್ಧನಿಶ್ಚಯ, ಕೆಲವರಿಗೆ 100%, ಕೆಲವರಿಗೆ 10% ಸಹ ಇರುತ್ತದೆ. ಈಗ ಭಗವಂತನು ಶ್ರೀಮತವನ್ನು ಕೊಡುತ್ತಾರೆ- ಮಕ್ಕಳೇ, ನನ್ನನ್ನು ನೆನಪು ಮಾಡಿ. ಇದು ತಂದೆಯ ಅತಿದೊಡ್ಡ ಆದೇಶವಾಗಿದೆ. ನಿಶ್ಚಯವಿದ್ದಾಗಲೇ ಆದೇ... |
ಇವರಲ್ಲಿ ಶಕ್ತಿಯಿದೆ ಎಂದು ಕೆಲವರು ಹೇಳುತ್ತಾರೆ ಆದರೆ ಶಕ್ತಿಯ ಯಾವುದೇ ಮಾತಿಲ್ಲ. ಇದಂತೂ ವಿದ್ಯೆಯಾಗಿದೆ. ಹೇಗೆ ಅನ್ಯರು ಓದುತ್ತಾರೆಯೋ ಹಾಗೆಯೇ ಇವರೂ ಓದುತ್ತಾರೆ. ಪವಿತ್ರತೆಗಾಗಿ ಎಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗುತ್ತದೆ, ಬಹಳ ಶ್ರಮವಿದೆ ಆದ್ದರಿಂದ ತಂದೆಯು ಹೇಳುತ್ತಾರೆ- ಪರಸ್ಪರ ಆತ್ಮವನ್ನೇ ನೋಡಿ, ಸತ್ಯಯುಗದಲ್ಲಿಯೂ ನೀವು ಆತ್ಮಾಭಿಮಾನಿಯಾಗಿರುತ್ತೀರಿ. ಅಲ್ಲಂತೂ ರಾವಣರಾಜ್ಯವೇ ಇರುವುದ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನದಿಂದ ತಮ್ಮ ದೃಷ್ಟಿಯನ್ನು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಆತ್ಮಾಭಿಮಾನಿಯಾಗಿ ವಿಕಾರಿ ಸಂಕಲ್ಪಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಯಾವುದೇ ವಿಕಾರದ ದುರ್ವಾಸನೆಯಿರಬಾರದು, ದೇಹದಕಡೆ ದೃಷ್ಟಿಯು ಹೋಗಲೇಬಾರದು. |
2. ಬೇಹದ್ದಿನ ತಂದೆಯೇ ನಮಗೆ ಓದಿಸುತ್ತಿದ್ದಾರೆ- ಇದು ಪಕ್ಕಾ ನಿಶ್ಚಯವಿರಲಿ ಆಗ ನೆನಪು ಶಕ್ತಿಶಾಲಿಯಾಗಿರುವುದು. ಗಮನವಿರಲಿ- ಮಾಯೆಯು ನಿಶ್ಚಯದಿಂದ ಸ್ವಲ್ಪವೂ ಅಲುಗಾಡಿಸುವಂತಾಗಬಾರದು. |
ಓಂ ಶಾಂತಿ. ಈಗ ಈ ಭಕ್ತಿಮಾರ್ಗದ ಗೀತೆಯನ್ನು ಕೇಳಿದಿರಿ, ಶಿವಾಯ ನಮಃ ಎಂದು ಹೇಳುತ್ತಾರೆ. ಪದೇ-ಪದೇ ಶಿವನ ಹೆಸರನ್ನು ತೆಗೆದುಕೊಳ್ಳುತ್ತಾರೆ, ನಿತ್ಯವೂ ಶಿವನ ಮಂದಿರಕ್ಕೆ ಹೋಗುತ್ತಾರೆ ಮತ್ತು ಹಬ್ಬಗಳನ್ನು ವರ್ಷ-ವರ್ಷವೂ ಆಚರಿಸುತ್ತಾರೆ. ಪುರುಷೋತ್ತಮ ಮಾಸವೂ ಇದೆ, ಪುರುಷೋತ್ತಮ ವರ್ಷವೂ ಇದೆ, ನಿತ್ಯವೂ ಶಿವಾಯ ನಮಃ ಎಂದು ಹೇಳುತ್ತಿರುತ್ತಾರೆ. ಶಿವನ ಪೂಜಾರಿಗಳು ಅನೇಕರಿದ್ದಾರೆ, ರಚಯಿತ ಶಿವನು ... |
ತಂದೆಯು ಹೇಳುತ್ತಾರೆ - ನಾನು ಬಂದು ಎಲ್ಲರಿಗೆ ಮಾರ್ಗ ತಿಳಿಸಬೇಕಾಗಿದೆ, ಇದರಲ್ಲಿ ಕೃಪೆಯ ಮಾತಿಲ್ಲ. ಬಾಬಾ, ನಿಮ್ಮ ಕೃಪೆಯಿದ್ದರೆ ನಾವು ನಿಮ್ಮನ್ನೆಂದೂ ಮರೆಯುವುದಿಲ್ಲವೆಂದು ಕೆಲಕೆಲವರು ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೆಂದೂ ಕೃಪೆ ತೋರುವುದಿಲ್ಲ, ಇದು ಭಕ್ತಿಮಾರ್ಗದ ಮಾತುಗಳಾಗಿವೆ. ನೀವು ತಮ್ಮ ಮೇಲೆ ಕೃಪೆ ತೋರಿಸಿಕೊಳ್ಳಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮ... |
ಒಳ್ಳೆಯದು. ದಿನ-ಪ್ರತಿದಿನ ಸೇವೆಯ ವೃದ್ಧಿಗಾಗಿ ಹೊಸ-ಹೊಸ ಯುಕ್ತಿಗಳು ಬರುತ್ತಾ ಇರುತ್ತವೆ. ಒಳ್ಳೊಳ್ಳೆಯ ಚಿತ್ರಗಳು ತಯಾರಾಗುತ್ತಿರುತ್ತವೆ. ನಿಧಾನವೇ ಪ್ರಧಾನ ಎಂದು ಹೇಳುತ್ತಾರಲ್ಲವೆ. ತಯಾರಾಗಿರುವ ಮಾಲು ಸಿಗುತ್ತದೆ. ಇದರಿಂದ ಬಹು ಬೇಗನೆ ಅರ್ಥವಾಗುತ್ತದೆ, ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಈ ಸಮಯದಲ್ಲಿ ಯಾರೂ ಸಹ ನಾವು ಪಾವನರಾಗಿದ್ದೇವೆಂದು ಹೇಳಲು ಸಾಧ್ಯವಿಲ್ಲ. ಸತ್ಯಯುಗಕ್ಕೇ ಪಾವನ ಪ್ರ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸ್ವಲ್ಪವೂ ಯಾವುದೇ ದೊಡ್ಡ ಅಥವಾ ಸೂಕ್ಷ್ಮ ಪಾಪ ಆಗಬಾರದು, ಇದರ ಮೇಲೆ ಬಹಳ-ಬಹಳ ಗಮನ ಇಡಬೇಕಾಗಿದೆ. ಎಂದೂ ಯಾವುದೇ ವಸ್ತುವನ್ನು ಮುಚ್ಚಿಟ್ಟುಕೊಂಡು ತೆಗೆದುಕೊಳ್ಳಬಾರದು. ಲೋಭ, ಮೋಹದಿಂದಲೂ ಸಾವಧಾನವಾಗಿರಬೇಕಾಗಿದೆ. |
2. ಅಶುದ್ಧ ಅಹಂಕಾರವು ಸತ್ಯ ನಾಶ ಮಾಡುತ್ತದೆ, ಇದನ್ನು ತ್ಯಾಗ ಮಾಡಬೇಕಾಗಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು, ಇದೇ ಪುರುಷಾರ್ಥ ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ತಾವೇ ಹಾಡಿರುವ ಗೀತೆಯನ್ನು ಕೇಳಿದಿರಿ. ಮಕ್ಕಳಿಗೆ ತಿಳಿದಿದೆ, ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ ಆದ್ದರಿಂದ ಮಕ್ಕಳು ಹೇಳುತ್ತೀರಿ - ಬಾಬಾ, ತಮ್ಮಿಂದ ವಿಶ್ವದ ಯಾವ ರಾಜ್ಯಭಾಗ್ಯವನ್ನು ಪಡೆದಿದ್ದೆವೋ ಅದನ್ನು ಪುನಃ ಪಡೆಯುತ್ತಿದ್ದೇವೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಈ ಸಂಗಮಯುಗದಲ್ಲಿಯೇ ನೀವು ಈ ರೀತಿ ಹಾಡುತ್ತೀರಿ. ಮನೆಯಲ್ಲಿ... |
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಸಾಕು. ಹೇಗೆ ವೃಕ್ಷದ ವಿಸ್ತಾರವಿರುತ್ತದೆಯೋ ಹಾಗೆಯೇ ಭಕ್ತಿಯದೂ ವಿಸ್ತಾರವಿರುತ್ತದೆ. ಜ್ಞಾನವು ಬೀಜವಾಗಿದೆ, ಯಾವಾಗ ನಿಮಗೆ ಜ್ಞಾನ ಸಿಗುತ್ತದೆಯೋ ಆಗ ಸದ್ಗತಿಯನ್ನು ಪಡೆಯುತ್ತೀರಿ. ನೀವು ತಲೆ ಕೆಡಿಸಿಕೊಳ್ಳಬೇಕಾಗುವುದಿಲ್ಲ. ಜ್ಞಾನ ಮತ್ತು ಭಕ್ತಿಯಿದೆಯಲ್ಲವೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯ ವೃಕ್ಷವಿರು... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಯಲ್ಲಿಯೇ ಶುದ್ಧ, ಸತ್ಯವಾದ ಮೋಹವನ್ನು ಇಟ್ಟುಕೊಳ್ಳಬೇಕು. ಅವರನ್ನೇ ನೆನಪು ಮಾಡಬೇಕಾಗಿದೆ. ದೇಹಧಾರಿಗಳೊಂದಿಗಿನ ಮಮತ್ವವನ್ನು ತೆಗೆಯಬೇಕು. ಟ್ರಸ್ಟಿಗಳಾಗಿ ಸಂಭಾಲನೆ ಮಾಡಬೇಕಾಗಿದೆ. |
2. ವಿಕರ್ಮಾಜೀತರಾಗಬೇಕಾಗಿದೆ ಆದ್ದರಿಂದ ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗದಿರಲಿ, ಇದರ ಬಹಳ-ಬಹಳ ಗಮನವನ್ನು ಇಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಿ. ಹೊಸಬರೂ ಕೇಳಿದಿರಿ, ಹಳಬರೂ ಕೇಳಿದಿರಿ, ಕುಮಾರಿಯರೂ ಕೇಳಿದಿರಿ, ಇದು ಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಒಂದಲ್ಲ ಒಂದು ಅದೃಷ್ಟವನ್ನು ರೂಪಿಸಿಕೊಳ್ಳಲು ಹೋಗುತ್ತಾರೆ, ಅಲ್ಲಿ ಅನೇಕ ಪ್ರಕಾರದ ಅದೃಷ್ಟವಿರುತ್ತದೆ. ಕೆಲವರು ಸರ್ಜನ್ ಆಗುವ, ಕೆಲವರು ವಕೀಲರಾಗುವ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ, ಅದೃಷ್ಟಕ್ಕೆ ಗುರಿ-ಧ್ಯೇಯವೆಂದೂ ಹೇಳ... |
ತಂದೆಯು ತಿಳಿಸಿದ್ದರು, ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಬರೆಯಿರಿ - ಹಿಂದಿನ ಜನ್ಮದಲ್ಲಿ ಇವರು ತಮೋಪ್ರಧಾನ ಪ್ರಪಂಚದಲ್ಲಿ ಇದ್ದರು, ನಂತರ ಈ ಪುರುಷಾರ್ಥದಿಂದ ತಮೋಪ್ರಧಾನ ಪ್ರಪಂಚದಿಂದ ಸತೋಪ್ರಧಾನ ವಿಶ್ವದ ಮಾಲೀಕರಾಗುತ್ತಾರೆ. ರಾಜಾ-ಪ್ರಜೆ ಎಲ್ಲರೂ ಮಾಲೀಕರಾಗುತ್ತಾರಲ್ಲವೆ. ನಮ್ಮ ಭಾರತವು ಎಲ್ಲದಕ್ಕಿಂತ ಶ್ರೇಷ್ಠವೆಂದು ಪ್ರಜೆಗಳೂ ಹೇಳುತ್ತಾರೆ. ಅವಶ್ಯವಾಗಿ ಭಾರತವೇ ಎಲ್ಲದಕ್ಕಿಂತ ಶ್ರೇಷ್ಠವಾ... |
ತಂದೆಯ ಆಜ್ಞೆಯಾಗಿದೆ - ಅವಶ್ಯವಾಗಿ ಪವಿತ್ರರಾಗಬೇಕಾಗಿದೆ ಆದರೆ ಕೆಲವರು ಪವಿತ್ರರಾಗಿರುವುದಿಲ್ಲ, ಕೆಲಕೆಲವೊಮ್ಮೆ ಪತಿತರೂ ಇಲ್ಲಿ ಬಂದು ಬಿಡುತ್ತಾರೆ. ಅವರು ತಮ್ಮದೇ ನಷ್ಟ ಮಾಡಿಕೊಳ್ಳುತ್ತಾರೆ, ತಮಗೆ ಮೋಸ ಮಾಡಿಕೊಳ್ಳುತ್ತಾರೆ. ತಂದೆಗೆ ಮೋಸ ಮಾಡುವ ಮಾತಿಲ್ಲ. ತಂದೆಗೆ ಮೋಸ ಮಾಡಿ ಯಾವುದೇ ಹಣವನ್ನು ತೆಗೆದುಕೊಳ್ಳಬೇಕಾಗಿದೆಯೇ! ಶಿವ ತಂದೆಯ ಶ್ರೀಮತದಂತೆ ಕಾಯಿದೆಯನುಸಾರ ನಡೆಯದಿದ್ದರೆ ಅವರ ಗತಿಯ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1) ಯಾವುದೇ ಕಾರ್ಯವನ್ನು ಶ್ರೀಮತಕ್ಕೆ ವಿರುದ್ಧವಾಗಿ ಮಾಡಬಾರದು. ವಿದ್ಯೆಯನ್ನು ಚೆನ್ನಾಗಿ ಓದಿ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ, ಯಾರಿಗೂ ದುಃಖ ಕೊಡಬಾರದು. |
2) ಈ ಹಳೆಯ ಪ್ರಪಂಚದಿಂದ ಮಮತ್ವವನ್ನು ಕಳೆಯಬೇಕಾಗಿದೆ, ಬುದ್ಧಿಯೋಗವನ್ನು ಹೊಸ ಪ್ರಪಂಚದೊಂದಿಗೆ ಇಡಬೇಕಾಗಿದೆ. ಖುಷಿಯಲ್ಲಿ ಇರುವುದಕ್ಕಾಗಿ ಜ್ಞಾನವನ್ನು ಧಾರಣೆ ಮಾಡಿಕೊಂಡು ಅನ್ಯರಿಗೆ ಮಾಡಿಸಬೇಕಾಗಿದೆ. |
ಓಂ ಶಾಂತಿ. ಬೆಳಗ್ಗೆ-ಬೆಳಗ್ಗೆ ಯಾರು ಬಂದು ಮುರುಳಿಯನ್ನು ನುಡಿಸುವರು? ಪ್ರಪಂಚದವರಂತು ಸಂಪೂರ್ಣವಾಗಿ ಕಗ್ಗತ್ತಲೆಯಲ್ಲಿ ಇದ್ದಾರೆ. ನೀವೀಗ ಜ್ಞಾನ ಸಾಗರ, ಪತಿತ-ಪಾವನ ಪ್ರಾಣೇಶ್ವರ ತಂದೆಯಿಂದ ಮುರುಳಿಯನ್ನು ಆಲಿಸುತ್ತಿದ್ದೀರಿ. ಆ ತಂದೆಯು ಪ್ರಾಣವನ್ನು ರಕ್ಷಿಸುವಂತಹ ಈಶ್ವರನಾಗಿದ್ದಾರೆ. ಹೇ ಈಶ್ವರ ಈ ದುಃಖದಿಂದ ರಕ್ಷಣೆ ಮಾಡು ಎಂದು ಹೇಳುತ್ತಾರಲ್ಲವೆ! ಅವರು ಅಲ್ಪಕಾಲದ ಸಹಯೋಗವನ್ನು ಬೇಡುವರು.... |
ತಂದೆಯು ತಿಳಿಸುತ್ತಾರೆ - ಈಗ ಅವಶ್ಯವಾಗಿ ಎಲ್ಲರೂ ತಮೋಪ್ರಧಾನರು ಆಗಲೇಬೇಕು, ಈ ಕಾರಣದಿಂದ ತಂದೆಯು ಬಂದು ಸತೋಪ್ರಧಾನರನ್ನಾಗಿ ಮಾಡುವರು. ತಂದೆಯು ಎಷ್ಟೊಂದು ಚೆನ್ನಾಗಿ ಕುಳಿತು ತಿಳಿಸುತ್ತಾರೆ. ಹೇಳುತ್ತಾರೆ - ಭಲೆ ನೀವು ಮಕ್ಕಳು ತಮ್ಮ ಸೇವೆಯನ್ನೂ ಮಾಡುತ್ತೀರಿ, ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿರಿ - ತಂದೆಯನ್ನು ನೆನಪು ಮಾಡುವುದು. ಸತೋಪ್ರಧಾನರು ಆಗುವುದಕ್ಕೆ ಮತ್ತ್ಯಾರೂ ಮಾರ್ಗವನ್... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಹಾಗೂ ಯೋಗದಿಂದ ಬುದ್ಧಿಯನ್ನು ಪಾರಸವನ್ನಾಗಿ ಮಾಡಬೇಕಾಗಿದೆ. ಎಷ್ಟೇ ರೋಗವಿರಬಹುದು, ನೋವಿರಬಹುದು, ಅದರಲ್ಲಿಯೂ ಒಬ್ಬ ತಂದೆಯ ನೆನಪಿರಲಿ. |
2. ತಮ್ಮ ಶ್ರೇಷ್ಠ ಅದೃಷ್ಠವನ್ನು ರೂಪಿಸಿಕೊಳ್ಳುವುದಕ್ಕಾಗಿ ಸಂಪೂರ್ಣ ನಿಶ್ಚಯ ಬುದ್ಧಿಯವರು ಆಗಬೇಕಾಗಿದೆ. ಬುದ್ಧಿಯೋಗವನ್ನು ತಮ್ಮ ಮಧುರ ಶಾಂತಿಯ ಮನೆಯ ಜೊತೆ ಜೋಡಣೆ ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ, ಮಕ್ಕಳು ತಿಳಿದುಕೊಳ್ಳುತ್ತೀರಿ- ತಂದೆಯನ್ನು ಮಿಲನ ಮಾಡುವುದು ಮತ್ತು ತಂದೆಯಿಂದ ಆಸ್ತಿಯನ್ನು ಪಡೆಯುವುದು ಬಹಳ ಸಹಜವಾಗಿದೆ. ತಂದೆಯಿಂದ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆಯೆಂದು ಗಾಯನವಿದೆ, ಜೀವನ್ಮುಕ್ತಿಯೆಂದರೆ ಸುಖ-ಶಾಂತಿ, ಸಂಪತ್ತಿನ ಆಸ್ತಿ. ಈಗ ಜೀವನ್ಮುಕ್ತಿ ಮತ್ತು ಜೀವನ... |
ತಂದೆಯು ದೊಡ್ಡ-ದೊಡ್ಡವರಿಗೆ ತಿಳಿಸುವುದಕ್ಕಾಗಿ ಹೇಳುತ್ತಾರೆ. ದೊಡ್ಡ-ದೊಡ್ಡ ಮನುಷ್ಯರಿಂದ ದೊಡ್ಡ ಪ್ರಸಿದ್ಧವಾಗಿರುವ ಹಾಲ್ನ್ನು ಕೇಳಿ ಪಡೆಯಿರಿ. ತಿಳಿಸಿ, ನಾವು ಎಲ್ಲಾ ಮನುಷ್ಯರ ಕಲ್ಯಾಣಕ್ಕಾಗಿ ಸದಾಕಾಲಕ್ಕಾಗಿ ಈ ಪ್ರದರ್ಶನಿಯನ್ನು ಇಡಲು ಬಯಸುತ್ತೇವೆ, ಕೇವಲ ಜಾಹೀರಾತು ಮಾಡಬೇಕಾಗಿದೆ. ಇಂತಹ 50 ಅಥವಾ 100 ಹಾಲ್ಗಳನ್ನು ತೆಗೆದುಕೊಳ್ಳಬೇಕು. ಭಾರತವಂತೂ ಬಹಳ ದೊಡ್ಡದಾಗಿದೆಯಲ್ಲವೆ. ಒಂದೊಂದು ನ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಮೂಲಕ ಸಿಕ್ಕಿರುವ ಜ್ಞಾನದ ಸ್ಮರಣೆ ಮಾಡಿ ಅಪಾರ ಖುಷಿಯಲ್ಲಿರಬೇಕಾಗಿದೆ. ವಿಶಾಲ ಬುದ್ಧಿಯವರಾಗಿ ಬಹಳ ಜೋರಾಗಿ ಸರ್ವೀಸ್ ಮಾಡಬೇಕಾಗಿದೆ. |
2. ತಂದೆಯ ಮೂಲಕ ಯಾವ ಸ್ಮೃತಿ ಸಿಕ್ಕಿದೆಯೋ ಅದನ್ನು ವಿಸ್ಮೃತಿಯಲ್ಲಿ ತಂದುಕೊಳ್ಳಬಾರದು. ತಂದೆಯೊಂದಿಗೆ ಪವಿತ್ರರಾಗಿರುವ ಯಾವ ಪ್ರತಿಜ್ಞೆ ಮಾಡಿದ್ದೀರೋ ಅದನ್ನು ಪೂರ್ಣ ನಿಭಾಯಿಸಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ಇಲ್ಲಿ ಆತ್ಮಿಕ ವ್ಯವಹಾರವಿದೆ. ಉಳಿದಂತೆ ಇಡೀ ಜಗತ್ತಿನಲ್ಲಿ ಭೌತಿಕ ವ್ಯವಹಾರವಿದೆ. ವಾಸ್ತವದಲ್ಲಿ ವ್ಯವಹಾರವು ಆತ್ಮಗಳಲ್ಲಿ ನಡೆಯುತ್ತದೆ. ಆತ್ಮವೇ ಈ ಶರೀರದ ಮೂಲಕ ವಿದ್ಯಾಭ್ಯಾಸ ಮಾಡುತ್ತದೆ, ನಡೆಯುತ್ತದೆ, ವಿಕರ್ಮವನ್ನು ಮಾಡುತ್ತದೆ. ಆದ್ದರಿಂದ ಪತಿತ-ಆತ್ಮ, ಪಾಪ-ಆತ್ಮ ಎಂದು ಹೇಳಲಾಗುತ್ತದೆ. ಆತ್ಮವೇ ಎಲ್ಲವನ್ನೂ ಮಾಡುತ... |
ತಂದೆಯು ತಿಳಿಸುವರು - ಆತ್ಮನಿಗೆ ಯಾವ ಪಾತ್ರವು ಸಿಕ್ಕಿದೆಯೋ ಅದೆಂದಿಗೂ ನಶಿಸಿ ಹೋಗುವುದಿಲ್ಲ. ನಡೆಯುತ್ತಲೇ ಇರುವುದು. ಈಗ ನೀವು ಪುನಃ ಮನುಷ್ಯನಿಂದ ದೇವತಾ ಆಗುತ್ತಿದ್ದೀರಿ, ನಂತರದಲ್ಲಿ 84 ಜನ್ಮಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಪಾತ್ರವು ನಡೆಯುತ್ತಲೇ ಇರುವುದು, ಎಂದಿಗೂ ಸ್ಥಗಿತಗೊಳ್ಳುವುದಿಲ್ಲ. ಯಾರೂ ಸಹ ಮೋಕ್ಷ ಮುಂತಾದವನ್ನು ಪಡೆಯುವುದಿಲ್ಲ. ಎಷ್ಟು ಅನೇಕ ಗುರುಗಳು, ಅನೇಕ ಶಾಸ್ತ್ರ... |
ಹಲವು ಮಕ್ಕಳು ಹೇಳುತ್ತಾರೆ - ಬಾಬಾ, ಶ್ರೀಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನೆಂದು ಗೊತ್ತಿದೆ, ನಾವೇಕೆ ಮನವೊಲಿಸಬಾರದು. ಒಳ್ಳೆಯದು. ನಾವು ಕೃಷ್ಣನ ಆತ್ಮವನ್ನು ಕರೆಸಬಹುದು, ಬಂದು ಆಟ-ಪಾಠ ಮಾಡುವನು, ನೃತ್ಯ ಮಾಡುವನು ಮತ್ತೇನು ಮಾಡುವನು. ಗೋಪ-ಗೋಪಿಕೆಯರಂತು ಇಲ್ಲಿಯೇ ತಯಾರಾಗುತ್ತೇವೆ. ಅಲ್ಲಂತು ರಾಜಕುಮಾರ-ರಾಜಕುಮಾರಿಯ ಪರಸ್ಪರದಲ್ಲಿ ಭೇಟಿಯಾಗುತ್ತಾರೆಂದರೆ ನೃತ್ಯ ಮಾಡುತ್ತಾರೆ. ಮಲಗಲು ಮ... |
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಎರಡೂ ಕಡೆಯಿದ್ದು ನಿಭಾಯಿಸಬೇಕಾಗುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕು. ಶ್ರೀಮತ ಹೇಳುತ್ತದೆ - ಸಂಪೂರ್ಣ ಪವಿತ್ರರಾಗಿರಿ, ಸಂಪೂರ್ಣ ವೈಷ್ಣವರಾಗಿರಿ ಮತ್ತು ವಿಷ್ಣು ಪುರಿಯ ರಾಜ್ಯವನ್ನು ಪಡೆಯಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯೋಗದ ಮೂಲಕ ಕರ್ಮ ಬಂಧನದ ಲೆಕ್ಕಾಚಾರದಿಂದ ಮುಕ್ತರಾಗಿ ಪಾವನರಾಗಬೇಕಾಗಿದೆ. ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಬೇಕು. ಸಂಪೂರ್ಣ ವೈಷ್ಣವ ಅಂದರೆ ಪವಿತ್ರರು ಆಗಬೇಕಾಗಿದೆ. |
2. ತಮ್ಮ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಬೇಕು. ಎಲ್ಲರಿಗೂ ಶಾಂತಿಧಾಮದ ನೆನಪು ತರಿಸಬೇಕಾಗಿದೆ. ಎಂದಿಗೂ ಅಶಾಂತರು ಆಗಬಾರದು. |
ಮೂರು ಪ್ರಕಾರದ ಸ್ನೇಹ ಹಾಗೂ ಹೃದಯದ ಸ್ನೇಹೀ ಮಕ್ಕಳ ವಿಶೇಷತೆಗಳು |
ಇಂದು ಬಾಪ್ದಾದಾ ತನ್ನ ಸ್ನೇಹೀ, ಸಹಯೋಗಿ ಮತ್ತು ಶಕ್ತಿಶಾಲಿ - ಈ ಮೂರು ವಿಶೇಷತೆಗಳಿಂದ ಸಂಪನ್ನ ಮಕ್ಕಳನ್ನು ನೋಡುತ್ತಿದ್ದಾರೆ. ಈ ಮೂರು ವಿಶೇಷತೆಗಳು ಯಾರಲ್ಲಿ ಸಮಾನವಾಗಿದೆಯೋ ಅವರೇ ವಿಶೇಷ ಆತ್ಮಗಳಲ್ಲಿ `ನಂಬರ್ವನ್ ಆತ್ಮ' ಆಗಿದ್ದಾರೆ. ಸ್ನೇಹಿಯೂ ಆಗಿರಬೇಕು ಮತ್ತು ಸದಾ ಪ್ರತೀ ಕಾರ್ಯದಲ್ಲಿ ಸಹಯೋಗಿಗಳೂ ಆಗಿರಬೇಕು, ಜೊತೆ ಜೊತೆಗೆ ಶಕ್ತಿಶಾಲಿಗಳೂ ಆಗಿರಬೇಕು. ಎಲ್ಲರೂ ಸ್ನೇಹಿಗಳಾಗಿದ್ದಾರೆ ಆದ... |
ಒಂದುವೇಳೆ ತಂದೆಯು ಯಾವಾಗ ಶಿಕ್ಷಕನ ರೂಪದಲ್ಲಿ ಶ್ರೇಷ್ಠ ವಿದ್ಯೆಯನ್ನು ಓದಿಸುತ್ತಿದ್ದಾರೆಯೋ ಅಂತಹ ಸಮಯದಲ್ಲಿ `ಶಿಕ್ಷಕ' ನ ಸಂಬಂಧದ ಅನುಭವ ಮಾಡದೇ `ಸಖ' ನ ರೂಪದ ಅನುಭೂತಿಯಲ್ಲಿ ಮಿಲನವನ್ನು ಆಚರಿಸುವ ಹಾಗೂ ವಾರ್ತಾಲಾಪ ಮಾಡುವುದರಲ್ಲಿ ತೊಡಗಿ ಬಿಟ್ಟರೆ ವಿದ್ಯೆಯ ಕಡೆ ಗಮನವಿರುವುದಿಲ್ಲ. ವಿದ್ಯಾಭ್ಯಾಸದ ಸಮಯದಲ್ಲಿ ಒಂದುವೇಳೆ ಯಾರಾದರೂ ನಾನು ಶಬ್ಧದಿಂದ ದೂರದ ಸ್ಥಿತಿಯಲ್ಲಿ ಬಹಳ ಶಕ್ತಿಶಾಲಿ ಸ್... |
ಹೇಗೆ ಯಾರಾದರೂ ಶರೀರದಿಂದ ಭಾರಿಯಾಗಿದ್ದರೆ, ಹೆಚ್ಚು ತೂಕವಿದ್ದರೆ ತಮ್ಮ ಶರೀರವನ್ನು ಸಹಜವಾಗಿ ಹೇಗೆ ಬೇಕೋ ಹಾಗೆ ಬಾಗಿಸಲು ಸಾಧ್ಯವಾಗುವುದಿಲ್ಲ ಹಾಗೆಯೇ ಒಂದುವೇಳೆ ಮಂಧ ಬುದ್ಧಿಯಾಗಿದ್ದರೆ ಅರ್ಥಾತ್ ಯಾವುದಾದರೊಂದು ಪ್ರಕಾರದ ವ್ಯರ್ಥದ ಹೊರೆ ಅಥವಾ ವ್ಯರ್ಥದ ಕೆಸರು ಬುದ್ಧಿಯಲ್ಲಿ ಕುಳಿತಿದ್ದರೆ, ಯಾವುದಾದರೂ ಅಶುದ್ಧಿಯಿದ್ದರೆ ಅಂತಹ ಬುದ್ಧಿಯವರು ಯಾವ ಸಮಯದಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಬುದ್ಧ... |
ಇಂದು ಸ್ನೇಹದ ಬಗ್ಗೆ ತಿಳಿಸಿದೆವು ನಂತರ ಸಹಯೋಗ ಮತ್ತು ಶಕ್ತಿಶಾಲಿ ಮೂರೂ ವಿಶೇಷತೆಗಳುಳ್ಳ ಆತ್ಮನ ಮಹತ್ವಿಕೆಯನ್ನು ತಿಳಿಸುತ್ತೇವೆ. ಮೂರೂ ಅವಶ್ಯಕವಾಗಿದೆ. ತಾವೆಲ್ಲರೂ ಇಂತಹ ಸ್ನೇಹಿಗಳಾಗಿದ್ದೀರಲ್ಲವೆ? ಅಭ್ಯಾಸವಿದೆಯಲ್ಲವೆ. ಬುದ್ಧಿಯನ್ನು ಯಾವಾಗ ಎಲ್ಲಿ ಸ್ಥಿತ ಮಾಡಬೇಕೋ ಅಲ್ಲಿ ಮಾಡುತ್ತೀರಲ್ಲವೆ? ನಿಯಂತ್ರಣ ಶಕ್ತಿಯಿದೆ ಅಲ್ಲವೆ. ಯಾವಾಗ ಮೊದಲು ನಿಯಂತ್ರಣಾ ಶಕ್ತಿಯಿರುವುದೋ ಆಗ ಆಡಳಿತ ಶಕ್ತ... |
ಇಂದಂತೂ ಮಿಲನ ಮಾಡುವವವರ ಕೋಟಾ ಪೂರ್ಣ ಮಾಡಬೇಕಾಗಿದೆ. ನೋಡಿ, ಸಂಗಮಯುಗದಲ್ಲಿ ಎಷ್ಟಾದರೂ ಸಂಖ್ಯೆಯ ಬಂಧನದಲ್ಲಿ ಬಂಧಿಸಲಿ ಆದರೆ ಬಂಧಿತರಾಗುತ್ತೀರಾ? ಲೆಕ್ಕಕ್ಕಿಂತಲೂ ಹೆಚ್ಚು ಬಂದು ಬಿಡುತ್ತಾರೆ ಆದ್ದರಿಂದ ಸಮಯ, ಸಂಖ್ಯೆ ಮತ್ತು ಯಾವ ಶರೀರದ ಆಧಾರವನ್ನು ತೆಗೆದುಕೊಳ್ಳುತ್ತೇವೆಯೋ ಅದನ್ನು ನೋಡಿ ಅದೇ ವಿಧಿಯಿಂದ ನಡೆಯಬೇಕಾಗುತ್ತದೆ. ವತನದಲ್ಲಿ ಇದೆಲ್ಲವನ್ನೂ ನೋಡುವುದಿಲ್ಲ ಏಕೆಂದರೆ ಸೂಕ್ಷ್ಮ ಶರೀ... |
ಸೂಕ್ಷ್ಮ ಶರೀರದ ಗತಿಯು ಈ ಪ್ರಪಂಚದ ಎಲ್ಲಾ ತೀವ್ರ ಗತಿಯ ಸಾಧನಗಳಿಗಿಂತಲೂ ತೀಕ್ಷ್ಣವಾಗಿದೆ. ಒಂದೇ ಸೆಕೆಂಡಿನಲ್ಲಿ ಅದೇ ಸಮಯದಲ್ಲಿ ಅನೇಕರಿಗೆ ಅನುಭವ ಮಾಡಿಸಬಹುದು. ಅದನ್ನು ಎಲ್ಲರೂ ಹೇಳುತ್ತಾರೆ - ನಾವು ಈ ಸಮಯದಲ್ಲಿ ತಂದೆಯನ್ನು ನೋಡಿದೆವು ಅಥವಾ ತಂದೆಯೊಂದಿಗೆ ಮಿಲನ ಮಾಡಿದೆವು, ಪ್ರತಿಯೊಬ್ಬರೂ ತಿಳಿದುಕೊಳ್ಳುವರು - ನಾನು ವಾರ್ತಾಲಾಪ ಮಾಡಿದೆನು, ನಾನು ಮಿಲನ ಮಾಡಿದೆನು, ನನಗೆ ಸಹಯೋಗ ಸಿಕ್ಕ... |
ನಾಲ್ಕಾರು ಕಡೆಯ ಸರ್ವ ಹೃದಯದ ಸ್ನೇಹಿ ಮಕ್ಕಳಿಗೆ, ಸದಾ ದಿವ್ಯ-ವಿಶಾಲ ಬೇಹದ್ದಿನ ಬುದ್ಧಿವಂತ ಮಕ್ಕಳಿಗೆ, ಸದಾ ಬ್ರಹ್ಮಾ ತಂದೆಯ ಸಮಾನ ಫರಿಶ್ತಾ ಸ್ಥಿತಿಯ ಅನುಭವ ಮಾಡಿ ತೀವ್ರ ಗತಿಯಿಂದ ಸೇವೆಯಲ್ಲಿ, ಸ್ವ-ಉನ್ನತಿಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವವರು, ಸದಾ ಸಹಯೋಗಿಗಳಾಗಿ ತಂದೆಯ ಸಹಯೋಗದ ಅಧಿಕಾರವನ್ನು ಅನುಭವ ಮಾಡುವವರು - ಇಂತಹ ವಿಶೇಷ ಆತ್ಮರಿಗೆ, ಸಮಾನರಾಗುವಂತಹ ಮಹಾನ್ ಆತ್ಮರಿಗೆ... |
ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ವರದಾನದ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು: |
1. ಸದಾ ನಿಶ್ಚಿಂತ ಚಕ್ರವರ್ತಿ ಆಗಿದ್ದೀರಲ್ಲವೆ. ಯಾವಾಗ ಜವಾಬ್ದಾರಿಯನ್ನು ತಂದೆಗೆ ಕೊಟ್ಟಿದ್ದೀರೆಂದಾಗ, ಯಾವ ಮಾತಿನಲ್ಲಿ ಚಿಂತೆಯಿದೆ? ಯಾವಾಗ ತಮ್ಮ ಮೇಲೆ ಜವಾಬ್ದಾರಿಯನ್ನು ಇಟ್ಟುಕೊಳ್ಳುತ್ತೀರಿ, ಆಗ ಚಿಂತೆಯಾಗುತ್ತದೆ - ಏನಾಗುತ್ತದೆಯೋ, ಹೇಗಾಗುತ್ತದೆಯೋ.... ಯಾವಾಗ ಅದನ್ನು ತಂದೆಗೆ ಅರ್ಪಣೆ ಮಾಡಿ ಬಿಟ್ಟಿರಿ ಅಂದಮೇಲೆ ಆ ಚಿಂತೆ ಯಾರಿಗಾಗಬೇಕು, ತಂದೆಯವರಿಗೇ ಅಥವಾ ತಮಗಾಗಬೇಕಾ? ತಂದೆಯವರಂತ... |
2. ಅವಿನಾಶಿ ಸುಖ ಹಾಗೂ ಅಲ್ಪಕಾಲದ ಸುಖ - ಎರಡರ ಅನುಭವಿ ಆಗಿದ್ದೀರಲ್ಲವೇ? ಅಲ್ಪಕಾಲದ ಸುಖವು ಸ್ಥೂಲ ಸಾಧನಗಳ ಸುಖವಾಗಿದೆ ಮತ್ತು ಅವಿನಾಶಿ ಸುಖವೆಂದರೆ ಈಶ್ವರೀಯ ಸುಖವಾಗಿದೆ. ಹಾಗಾದರೆ ಅತಿ ಶ್ರೇಷ್ಠ ಸುಖವು ಯಾವುದಾಗಿದೆ! ಯಾವಾಗ ಈಶ್ವರೀಯ ಸುಖವು ಸಿಗುತ್ತದೆಯೋ ಆಗ ವಿನಾಶಿ ಸುಖವು ಸ್ವತಹವಾಗಿಯೇ ಹಿಂದೆ-ಹಿಂದೆ ಬರುತ್ತದೆ. ಹೇಗೆ ಯಾರಾದರೂ ಬಿಸಿಲಿನಲ್ಲಿ ನಡೆಯುತ್ತಾ ಇದ್ದಾರೆಂದರೆ, ಅವರಹಿಂದೆ ... |
3. ಸದಾ ತಮ್ಮನ್ನು ಕಲ್ಪ-ಕಲ್ಪದ ವಿಜಯಿ ಆತ್ಮರೆಂದು ಅನುಭವ ಮಾಡುತ್ತೀರಾ? ಅನೇಕಬಾರಿ ವಿಜಯಿಯಾಗುವ ಪಾತ್ರವನ್ನು ಅಭಿನಯಿಸಲಾಗಿದೆ ಮತ್ತು ಈಗಲೂ ಅಭಿನಯಿಸುತ್ತಾ ಇದ್ದೀರಿ. ವಿಜಯಿ ಆತ್ಮರು ಸದಾ ಅನ್ಯರನ್ನೂ ವಿಜಯಿಯನ್ನಾಗಿ ಮಾಡುತ್ತಾರೆ. ಯಾರು ಅನೇಕ ಬಾರಿ ಮಾಡಿರುತ್ತಾರೆಯೋ ಅವರು ಸದಾಕಾಲ ಸಹಜವಾಗಿ ಇರುತ್ತಾರೆ, ಪರಿಶ್ರಮ ಪಡುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಅನೇಕ ಬಾರಿಯ ವಿಜಯಿ ಆತ್ಮನೆಂಬ ... |
4. ತಮ್ಮನ್ನು ಬೇಹದ್ದಿನ ನಿಮಿತ್ತ ಸೇವಾಧಾರಿ ಎಂದು ತಿಳಿಯುವಿರಾ? ಬೇಹದ್ದಿನ ಸೇವಾಧಾರಿ ಅರ್ಥಾತ್ ಯಾವುದರಲ್ಲಿಯೂ ನನ್ನತನದ ಅಥವಾ ನಾನು ಎಂಬ ಅಲ್ಪಕಾಲದ ಅಹಂಕಾರದಲ್ಲಿ ಬರುವವರಲ್ಲ. ಬೇಹದ್ದಿನಲ್ಲಿ ನಾನು ಎನ್ನುವುದೂ ಇರುವುದಿಲ್ಲ, ನನ್ನದೆನ್ನುವುದೂ ಇರುವುದಿಲ್ಲ. ಎಲ್ಲವೂ ತಂದೆಯದಾಗಿದೆ, ನಾನೂ ಸಹ ತಂದೆಯ ಮಗು, ಅಂದಮೇಲೆ ಈ ಸೇವೆಯೂ ತಂದೆಯದಾಗಿದೆ - ಇದಕ್ಕೆ ಬೇಹದ್ದಿನ ಸೇವೆ ಎಂದು ಹೇಳಲಾಗುವು... |
ಬೀಳ್ಕೊಡುಗೆಯ ಸಮಯದಲ್ಲಿ… |
ಈಗಂತು ಸೇವೆಯ ಬಹಳ ಒಳ್ಳೆಯ ಯೋಜನೆಗಳನ್ನು ಮಾಡಲಾಗಿದೆ. ವಾಸ್ತವದಲ್ಲಿ ಸೇವೆಯೂ ಸಹ ಉನ್ನತಿಯ ಸಾಧನವಾಗಿದೆ. ಒಂದುವೇಳೆ ಸೇವೆಯನ್ನು ಸೇವೆಯ ರೀತಿಯಿಂದ ಮಾಡುತ್ತೀರೆಂದರೆ, ಸೇವೆಯು ವೃದ್ಧಿಯಾಗುವ ಲಿಫ್ಟ್ ಕೊಡುತ್ತದೆ. ಅದಕ್ಕಾಗಿ ಕೇವಲ ಸ್ವಚ್ಛ ಬುದ್ಧಿಯವರಾಗಿದ್ದು ಯೋಜನೆಗಳನ್ನು ತಯಾರು ಮಾಡಿರಿ, ಅದರಲ್ಲಿ ಸ್ವಲ್ಪವೂ ಇಲ್ಲಿ-ಅಲ್ಲಿ ಮಿಕ್ಸ್ ಆಗಬಾರದು. ಹೇಗೆ ಯಾವುದಾದರೂ ಬಹಳ ಒಳ್ಳೆಯ ವಸ್ತುವನ್ನು... |
ಈಗ ನಿಧಾನ-ನಿಧಾನವಾಗಿ ಎಲ್ಲಾ ಧರ್ಮದವರು ತಮ್ಮ ವಾಕ್ಯಗಳಲ್ಲಿ ಮೋಲ್ಡ್ ಆಗುತ್ತಿದ್ದಾರೆ. ಮುಂಚೆ ಕಠಿಣವಾಗಿ ಇರುತ್ತಿದ್ದರು, ಈಗ ಸ್ಪಂದಿಸುತ್ತಿದ್ದಾರೆ. ಅವರು ಭಲೆ ಕ್ರಿಶ್ಚಿಯನ್ ಆಗಿರಬಹುದು, ಮುಸ್ಲಿಂ ಆಗಿರಬಹುದು ಆದರೆ ಆಂತರ್ಯದಿಂದ ಭಾರತದ ಚರಿತ್ರೆಗೆ ಗೌರವ ಕೊಡುತ್ತಾರೆ ಏಕೆಂದರೆ ಭಾರತದ ಚರಿತ್ರೆಯಲ್ಲಿ ಸರ್ವ ಪ್ರಕಾರದ ರಮಣೀಕತೆ ಇದೆ. ಈ ರೀತಿ ಮತ್ತ್ಯಾವುದೇ ಧರ್ಮಗಳಲ್ಲಿಲ್ಲ. ಕಥೆಗಳ ರೀತಿ... |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಅವಶ್ಯವಾಗಿ ಮಕ್ಕಳಿಗೆ ರೋಮಾಂಚನವಾಗಬೇಕು ಏಕೆಂದರೆ ಖುಷಿಯಂತಹ ಔಷಧಿಯಿಲ್ಲವೆಂದು ಗಾಯನವಿದೆ. ಈಗ ನೀವೆಲ್ಲಾ ಆತ್ಮಿಕ ಮಕ್ಕಳಿಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ ಮತ್ತು ಮಕ್ಕಳಿಗೆ ತಿಳಿದಿದೆ - ಯಾವಾಗ ಅನ್ಯರೆಲ್ಲರೂ ಬಂದು ಮಕ್ಕಳಾಗುವರೋ ಅವರಿಗೂ ರೋಮಾಂಚನವಾಗುವುದು. ನೀವು ತಿಳಿದು... |
ತಂದೆಯು ತಿಳಿಸುತ್ತಾರೆ - ಎಲ್ಲರೂ ಕಾಮ ಚಿತೆಯನ್ನೇರಿ ಸುಟ್ಟು ಹೋಗಿದ್ದಾರೆ. ಕ್ರೋಧವು ಚಿತೆಯೆಂದು ಹೇಳಲಾಗುವುದಿಲ್ಲ, ಕಾಮ ಚಿತೆಯೆಂದು ಹೇಳಲಾಗುತ್ತದೆ. ಅದರಲ್ಲಿಯೂ ಹಗುರ ನಶೆ, ಅರ್ಧ ನಶೆಯೂ ಇರುತ್ತದೆ. ಮಕ್ಕಳಿಗೇ ತಂದೆಯು ಕುಳಿತು ತಿಳಿಸುತ್ತಾರೆ - ಮನೆಯಲ್ಲಿ ಒಂದುವೇಳೆ ಯಾರಾದರೂ ಕುಪುತ್ರರಾಗಿದ್ದರೆ ತಂದೆಯ ಗೌರವವನ್ನು ಕಳೆಯುತ್ತೀರಿ ಎಂದು ಹೇಳುತ್ತಾರಲ್ಲವೆ. ತಂದೆಯ ಗೌರವವು ಕಳೆಯುತ್ತದೆ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
Subsets and Splits
No community queries yet
The top public SQL queries from the community will appear here once available.