text stringlengths 0 61.5k |
|---|
1. ಶ್ರೀಮತದಂತೆ ತನ್ನ ಮತ್ತು ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಯಾರಾದರೂ ಅಸತ್ಯ ಮಾತುಗಳನ್ನು ತಿಳಿಸಿದರೆ ಕೇಳಿಯೂ ಕೇಳದಂತಿರಬೇಕು. ಅದರಮೇಲೆ ಮುನಿಸಿಕೊಳ್ಳಬಾರದು. |
2. ಎಂದೂ ಕೂಡ ದೇವತೆಯಾಗುವಂತಹ ಬ್ರಾಹ್ಮಣ ಕುಲಭೂಷಣರ ಹೆಸರು ಕೆಡಬಾರದು – ಇದರ ಮೇಲೆ ಗಮನ ಕೊಡಬೇಕಾಗಿದೆ. ಎಂದೂ ಯಾವುದೇ ಉಲ್ಟಾ ಕರ್ಮ ಮಾಡಬಾರದು. ಹಿಂದಿನ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ ಆದ್ದರಿಂದ ಮಕ್ಕಳೇ, ಆತ್ಮಾಭಿಮಾನಿಗಳಾಗಿ ಕುಳಿತುಕೊಳ್ಳಬೇಕಾಗಿದೆ. ಈ ರೀತಿ ಮತ್ತೆಲ್ಲಿಯೂ ತಿಳಿಸುವುದಿಲ್ಲ. ಯಾವುದೇ ಸಾಧು-ಸಂತ ಮೊದಲಾದವರೂ ಸಹ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿರಿ ಎಂದು ತಿಳಿಸುವುದಿಲ್ಲ. ಇದನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಮತ್ತ್ಯಾರಿಗೂ ಹೇಳಲು ಬರುವುದೇ ಇಲ್ಲ, ಈ ಯುಕ್ತಿಯನ್ನು ಮತ್ತ್ಯಾರೂ ತಿಳಿಸಲು ಸ... |
ಮಕ್ಕಳಿಗೆ ತಿಳಿದಿದೆ - ಈಗ 84 ಜನ್ಮಗಳ ನಾಟಕವು ಮುಕ್ತಾಯವಾಗುತ್ತದೆ, ನಾವೀಗ ಹಿಂತಿರುಗಿ ಹೋಗುತ್ತೇವೆ ಆದರೆ ಪತಿತರು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಷ್ಟೊಂದು ಜಪ-ತಪ, ತೀರ್ಥ ಯಾತ್ರೆಗಳನ್ನು ಏಕೆ ಮಾಡುತ್ತಾರೆ! ಪವಿತ್ರರಾಗುವುದಕ್ಕಾಗಿಯೇ ಗಂಗಾ ಸ್ನಾನ ಮಾಡಲು ಹೋಗುತ್ತಾರೆ ಆದರೆ ಅದರಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ಅದರಿಂದ ಯಾರೂ ಹಿಂತಿರುಗಿ ಹೋಗುವುದಕ್ಕೂ ಸಾಧ್... |
ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಈಗ ನಿಮಾಣ ಮಾಡುತ್ತಿದ್ದೀರಿ, ಉನ್ನತಿ ಮತ್ತು ಅವನತಿ ಪ್ರತೀ ಕಲ್ಪವೂ ಆಗುತ್ತಲೇ ಇರುತ್ತದೆ. ಪ್ರಪಂಚದ ಉನ್ನತಿ ಮತ್ತು ಅವನತಿಯಾಗುತ್ತದೆ, ಅದರಲ್ಲಿ ಮುಖ್ಯ ಪಾತ್ರವು ಭಾರತದ್ದಾಗಿದೆ. ಪರಮಾತ್ಮ ಮತ್ತು ಆತ್ಮರು ಬಹಳ ಕಾಲ ಅಗಲಿ ಹೋಗಿದ್ದರು ಎಂದು ಹಾಡುತ್ತಿರುತ್ತಾರೆ. ಅದಕ್ಕೂ ಲೆಕ್ಕವು ಬೇಕಲ್ಲವೆ. ಯಾವ ಆತ್ಮರು ಬಹಳ ಕಾಲದಿಂದ ಅಗಲಿ ಹೋಗಿದ್ದರೋ..... ಮೊ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. 84 ಜನ್ಮಗಳ ನಾಟಕವು ಈಗ ಮುಕ್ತಾಯವಾಗುತ್ತದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಆತ್ಮಾಭಿಮಾನಿಯಾಗಿದ್ದು ಪಾವನರಾಗಬೇಕಾಗಿದೆ. ದೇಹಾಭಿಮಾನವನ್ನು ಕಳೆಯಬೇಕಾಗಿದೆ. |
2. ಅರ್ಥ ಸಹಿತವಾಗಿ ತನ್ನನ್ನು ಆತ್ಮ ಬಿಂದುವೆಂದು ತಿಳಿದು ಬಿಂದು ತಂದೆಯ ಅವ್ಯಭಿಚಾರಿ ನೆನಪಿನಲ್ಲಿರಬೇಕಾಗಿದೆ. ಮಹಾವೀರರಾಗಿ ತಮ್ಮ ಸ್ಥಿತಿಯನ್ನು ಅಚಲ, ಅಡೋಲವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ತಂದೆಯು ಆತ್ಮಿಕ ಮಕ್ಕಳಿಗೆ ಶ್ರೀಮತವನ್ನು ಕೊಡಲು ಬಂದಿದ್ದಾರೆ. ಇದು ಮಕ್ಕಳಿಗೆ ತಿಳಿದಿದೆ – ಸ್ವಲ್ಪ ಸಮಯದಲ್ಲಿಯೇ ಡ್ರಾಮಾನುಸಾರ ಎಲ್ಲಾ ಕಾರ್ಯವು ಆಗಬೇಕಾಗಿದೆ, ನಾವು ರಾವಣ ಪುರಿಯನ್ನು ವಿಷ್ಣು ಪುರಿಯನ್ನಾಗಿ ಮಾಡುತ್ತೇವೆ. ತಂದೆಯೂ ಗುಪ್ತವಾಗಿದ್ದಾರೆ, ವಿದ್ಯೆಯೂ ಗುಪ್ತವಾಗಿದೆ. ಅನೇಕ ಸೇವಾಕೇಂದ್ರಗಳಿವೆ, ಚಿಕ್ಕ-ಪುಟ್ಟ ಹಳ್ಳಿಗಳಲ್ಲಿ ಸೇವಾಕೇಂದ್ರಗಳಿವೆ ಮತ್ತು ಅನೇಕ ಮಕ್ಕಳೂ ... |
(ಹಾಲ್ನಲ್ಲಿ ಪಕ್ಷಿಗಳು ಹೊಡೆದಾಡುತ್ತಿವೆ) ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜಗಳ-ಕಲಹವೇ ಇದೆ. ಎಲ್ಲರೂ ಪರಸ್ಪರ ಹೊಡೆದಾಡುತ್ತಾ ಇರುತ್ತಾರೆ. ಮನುಷ್ಯರಲ್ಲಿಯೇ ಪಂಚ ವಿಕಾರಗಳ ಗಾಯನವಿದೆ, ಪ್ರಾಣಿಗಳ ಮಾತಿಲ್ಲ. ಮನುಷ್ಯರಿಗಾಗಿಯೇ ವಿಕಾರಿ ಪ್ರಪಂಚ, ನಿರ್ವಿಕಾರಿ ಪ್ರಪಂಚದ ಗಾಯನವಿದೆ. ಕಲಿಯುಗದಲ್ಲಿ ಆಸುರೀ ಸಂಪ್ರದಾಯ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿದೆ, ಮನುಷ್ಯರು ಇಷ್ಟು ತಮೋಪ್ರಧಾನ ಬುದ್ಧಿ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ನೀವು ಮಕ್ಕಳು ಯುದ್ಧದ ಮೈದಾನದಲ್ಲಿದ್ದೀರಿ, ಮಾಯಾ ರಾವಣನೊಂದಿಗೆ ನಿಮ್ಮ ಯುದ್ಧವಿದೆ, ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಮಕ್ಕಳು ಬಹಳ ಸಾವಧಾನವಾಗಿರಬೇಕು. |
2. ಪ್ರತಿಯೊಬ್ಬರೂ ತಮ್ಮ ಉನ್ನತಿಗಾಗಿ ವಿಚಾರ ಮಾಡಬೇಕು, ಚಿತ್ರಗಳಲ್ಲಿ ಹೇಗೆ ತಿಳಿಸಬೇಕು, ಸರ್ವೀಸನ್ನು ಹೇಗೆ ವೃದ್ಧಿ ಪಡಿಸಬೇಕು...... ಚಿತ್ರಗಳಲ್ಲಿ ಇಂತಹ ಯಾವ ಯುಕ್ತಿಯನ್ನು ರಚಿಸಬೇಕು, ಯಾವುದರಿಂದ ಮನುಷ್ಯರಿಗೆ ಸಹಜವಾಗಿ ಅರ್ಥವಾಗಬೇಕು. |
ಓಂ ಶಾಂತಿ. ಇದು ನೆನಪಿನ ಯಾತ್ರೆಯಾಗಿದೆ. ಮಕ್ಕಳೆಲ್ಲಾ ಈ ಯಾತ್ರೆಯಲ್ಲಿ ಇರುತ್ತಾರೆ, ಕೇವಲ ನೀವು ಇಲ್ಲಿ ಹತ್ತಿರ ಇದ್ದೀರಿ. ಯಾರು-ಯಾರು ಎಲ್ಲೆಲ್ಲಿದ್ದಾರೋ ತಂದೆಯನ್ನು ನೆನಪು ಮಾಡುತ್ತಾರೆ, ಅಂದಾಗ ಅವರು ಸ್ವತಃವಾಗಿಯೇ ಹತ್ತಿರ ಬಂದುಬಿಡುತ್ತಾರೆ. ಹೇಗೆ ಚಂದ್ರಮನ ಮುಂದೆ ಯಾವುದಾದರೂ ನಕ್ಷತ್ರ ಬಹಳ ಹತ್ತಿರ ಇರುತ್ತದೆ. ಕೆಲವು ಬಹಳ ಹೊಳೆಯುತ್ತಿರುತ್ತವೆ. ಕೆಲವು ಹತ್ತಿರ, ಕೆಲವು ದೂರವೂ ಸಹ ಇ... |
ತಂದೆಯೇ ಜ್ಞಾನಸಾಗರ ಆಗಿದ್ದಾರೆ, ತಂದೆ ಹೇಳುತ್ತಾರೆ - ತಮ್ಮನ್ನು ಆತ್ಮ ಎಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ. ಇದೂ ಸಹ ಜ್ಞಾನವಾಗಿದೆ. ಒಂದು ಯೋಗದ ಜ್ಞಾನವಾಗಿದೆ, ಇನ್ನೊಂದು 84 ಜನ್ಮಗಳ ಚಕ್ರದ ಜ್ಞಾನವಾಗಿದೆ. ಎರಡು ಪ್ರಕಾರದ ಜ್ಞಾನವಾಗಿದೆ ಮತ್ತೆ ಅದರಲ್ಲಿ ದೈವೀಗುಣಗಳು ಸ್ವತಃವಾಗಿಯೇ ಸಮಾವೇಶವಾಗಿರುತ್ತವೆ. ನಾವು ಮನುಷ್ಯರಿಂದ ದೇವತೆಗಳು ಆಗುತ್ತೇವೆ ಅಂದಾಗ ದೈವೀಗುಣಗಳನ್ನು ಅವಶ್ಯವ... |
ಶಿವತಂದೆಯು ನಿರಾಕಾರನಾಗಿದ್ದಾರೆ. ಭಲೆ ಅವರಿಗೆ ಹಾಲು,ನೀರು ಮುಂತಾದವುಗಳನ್ನು ಏಕೆ ಅರ್ಪಿಸುತ್ತಾರೆ? ಮೂರ್ತಿಗಳಿಗೆ ಭೋಗವನ್ನು ಇಡುತ್ತಾರೆ, ಅವರು ಏನಾದರೂ ತಿನ್ನುತ್ತಾರೆಯೇ? ಭಕ್ತಿಯ ವಿಸ್ತಾರವು ದೊಡ್ಡದಾಗಿದೆ. ಭಕ್ತಿಯು ವೃಕ್ಷವಾಗಿದೆ. ಜ್ಞಾನ ಅದರ ಬೀಜವಾಗಿದೆ. ರಚಯಿತ ಮತ್ತು ರಚನೆಯನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿಯುವುದಿಲ್ಲ. ಕೆಲವು ಮಕ್ಕಳಂತೂ ತಮ್ಮ ಮೂಳೆಗಳನ್ನು ಈ ಸೇವೆಯಲ್ಲ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ |
ಧಾರಣೆಗಾಗಿ ಮುಖ್ಯಸಾರ: |
1. ಯೋಗಬಲದಿಂದ ಕರ್ಮೇಂದ್ರಿಯಾಜೀತರಾಗಿ ಸಂಪೂರ್ಣ ಪವಿತ್ರರಾಗಬೇಕು. ಈ ಅವಸ್ಥೆಯನ್ನು ಪಡೆಯಲು ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು. |
2. ಸದಾ ಬುದ್ಧಿಯಲ್ಲಿ ನಾವೇ ಬ್ರಾಹ್ಮಣರಿಂದ ದೇವತೆಗಳಾಗಿದ್ದೆವು ಮತ್ತೆ ಈಗ ದೇವತೆ ಆಗಲು ಬಂದಿದ್ದೇವೆ ಎಂದು ನೆನಪು ಇರಬೇಕು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಪಾಪ ಹಾಗೂ ಪುಣ್ಯವನ್ನು ತಿಳಿದು ವ್ಯವಹಾರ ಮಾಡಬೇಕು. |
ಓಂ ಶಾಂತಿ. ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ತಿಳಿಸುತ್ತಾ-ತಿಳಿಸುತ್ತಾ ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡಿ ಬಿಡುವರು. ವಿದ್ಯಾಭ್ಯಾಸವೂ ಸಹಜವಿದೆಯಲ್ಲವೆ. ಅದಂತು ಸ್ಥೂಲ ವಿದ್ಯಾಭ್ಯಾಸವಾಗಿದೆ ಮತ್ತು ಇದು ಸೂಕ್ಷ್ಮ ವಿದ್ಯಾಭ್ಯಾಸವಾಗಿದೆ.ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ವಿದ್ಯೆಯನ್ನು ತಂದೆಯಲ್ಲದೆ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ಬಂದಿರುವುದ... |
ನೀವು ಸತ್ಯ-ಸತ್ಯ ಸಂದೇಶವಾಹಕರು ಆಗಿದ್ದೀರಿ. ನಿಮ್ಮೆಲ್ಲರ ಮೇಲೆ ಕೃಪೆ ಇರಬೇಕು. ಕೃಪೆ ತೋರಿಸುವ ಮಕ್ಕಳು ಬಹಳ ಶಾಂತಿಯಲ್ಲಿದ್ದು ತಂದೆಯ ನೆನಪಿನಲ್ಲಿ ಇರುವರು. ಕೇವಲ ಇಷ್ಟೇ ಸಂದೇಶವನ್ನು ಕೊಡಬೇಕಾಗಿದೆ - ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಬೇಹದ್ದಿನ ಸುಖ-ಶಾಂತಿ ಸಿಗುವುದು. ಲೌಕಿಕ ತಂದೆಯ ಬಹಳ ಬಹಳ ಹಣವಿದೆಯೆಂದರೆ ಬಹಳ ಆಸ್ತಿಯು ಸಿಗುತ್ತದೆಯಲ್ಲವೆ. ಬೇಹದ್ದಿನ ತಂದೆಯ ಬಳಿಯಂತ... |
ನೀವು ಮಕ್ಕಳಿಗೆ ಬಹಳ ಆಸಕ್ತಿಯಿಂದ ಸರ್ವರ ಸೇವೆಯನ್ನು ಮಾಡಬೇಕಾಗಿದೆ. ಪ್ರತಿಯೊಬ್ಬರೂ ಸೇವೆಗೆ ಯೋಗ್ಯರಾಗಬೇಕು. ಯಾರು ಅನ್ಯರ ಸೇವೆಯನ್ನು ಪ್ರೀತಿಯಿಂದ ಮಾಡುವರು, ಅವರನ್ನು ಸರ್ವರೂ ಪ್ರೀತಿಸುವರು. ಎಂದಿಗೂ ಸಹ ಸೇವೆಯ ಅಹಂಕಾರದಲ್ಲಿ ಬರಬಾರದು. ನಿಮಗೆ ತಂದೆಯ ಮೂಲಕ ಜ್ಞಾನದ ಕಸ್ತೂರಿ ಸಿಕ್ಕಿದೆ, ಅದನ್ನು ಅನ್ಯರಿಗೂ ಕೊಡಬೇಕಾಗಿದೆ. ಒಬ್ಬರಿನ್ನೊಬ್ಬರಿಗೆ ಶಿವ ತಂದೆಯ ನೆನಪಿದೆಯೇ?ಎಂದು ನೆನಪು ತರ... |
ಈಗ ನೀವು ಮಕ್ಕಳಿಗೆ ಅವಿನಾಶಿ ಜ್ಞಾನರತ್ನಗಳ ಲಾಟರಿ ಸಿಗುತ್ತಿದೆ ಅಂದಾಗ ಎಷ್ಟೊಂದು ಖುಷಿಯಿರಬೇಕು! ಒಳಗೆ ಖುಷಿಯಲ್ಲಿ ನರ್ತಿಸುತ್ತಿರಿ. ಈ ನಿಮ್ಮ ಜನ್ಮವು ವಜ್ರ ಸಮಾನ ಎಂದು ಮಹಿಮೆ ಮಾಡಲಾಗುತ್ತದೆ. ನೀವು ಬ್ರಾಹ್ಮಣರೇ ಜ್ಞಾನಪೂರ್ಣರು ಆಗುತ್ತೀರಿ ಅಂದಾಗ ನಿಮಗೆ ಜ್ಞಾನದಲ್ಲಿಯೇ ಖುಷಿಯಿರುತ್ತದೆ. ಈ ದೇವತೆಗಳಿಗಿಂತಲೂ ನೀವು ಶ್ರೇಷ್ಠರಾಗಿದ್ದೀರಿ ಅಂದಾಗ ನಿಮ್ಮ ಚಹರೆಯು ಸದಾ ಖುಷಿಯಿಂದ ಅರಳಿರಲಿ... |
ಈಗ ನೀವು ಅತಿ ಪ್ರಿಯ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನೀವೂ ಸಹ ತಂದೆಯಂತೆ ಬಹಳ-ಬಹಳ ಮಧುರ, ಬಹಳ ಪ್ರೀತಿಯುಳ್ಳವರು ಆಗಬೇಕಾಗಿದೆ. ತಂದೆಯವರು ಪತ್ರಗಳಲ್ಲಿ ಬರೆಯುತ್ತಾರೆ - ಮಧುರಾತಿ ಮಧುರ ಮುದ್ದಾದ ಅಗಲಿ ಸಿಕ್ಕಿರುವ ಮಕ್ಕಳೇ...... ಬಾಬಾ ಬಹಳ ಮಧುರವಲ್ಲವೆ. ಪ್ರತ್ಯಕ್ಷದಲ್ಲಿಯೂ ಅನುಭವ ಮಾಡುತ್ತೀರಿ - ಬಾಬಾರವರು ಎಷ್ಟೊಂದು ಮಧುರ, ಎಷ್ಟೊಂದು ಪ್ರಿಯವಾಗಿದ್ದಾರೆ. ನಮ್ಮನ್ನೂ ಇದೇ ರೀತಿ ಮಾಡ... |
ನೀವು ಮಕ್ಕಳು ತಿಳಿದಿದ್ದೀರಿ - ನಮ್ಮೆಲ್ಲರ ಅರ್ಧಕಲ್ಪದ ದುಃಖವನ್ನು ದೂರಗೊಳಿಸುವಂತಹ ತಂದೆಯೀಗ ಬಂದಿದ್ದಾರೆ. ಹರ ಹರ ಮಹದೇವ ಎಂದು ಹೇಳುತ್ತಾರೆ, ಈಗ ಮಹದೇವನಂತು ಅವರಲ್ಲ, ದುಃಖವನ್ನಂತು ತಂದೆಯೇ ಹರಣ ಮಾಡುವರು. ದುಃಖವನ್ನು ಹರಣ ಮಾಡಿ ಸುಖ ಕೊಡುವವರು ತಂದೆಯಾಗಿದ್ದಾರೆ. ಅರ್ಧ ಕಲ್ಪದಲ್ಲಿ ನೀವು ಬಹಳ ದುಃಖವನ್ನು ನೋಡಿದ್ದೀರಿ. 5 ವಿಕಾರಗಳ ರೋಗವಂತು ಬಹಳಷ್ಟು ಹೆಚ್ಚಾಗಿ ಬಿಟ್ಟಿದೆ, ಈ ರೋಗವು ... |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಇಡೀ ಸೃಷ್ಟಿಯಲ್ಲಿ ಎಷ್ಟೊಂದು ಕೊಳಕಿದೆ (ಅಶುದ್ಧತೆ) ನೋಡಿ, ಇದಂತು ಇರುವುದೇ ನರಕ ಅದಕ್ಕಾಗಿಯೇ ತಂದೆಯು ನರಕವನ್ನು ಸ್ವರ್ಗವನ್ನಾಗಿ ಮಾಡಲು ಬರಬೇಕಾಗುವುದು. ತಂದೆಯು ಬಹಳ ಪ್ರೀತಿಯಿಂದ ಬರುತ್ತಾರೆ. ನಾನು ನನ್ನ ಮಕ್ಕಳ ಸೇವೆಯಲ್ಲಿ ಬರಬೇಕಾಗಿದೆ ಎನ್ನುವುದು ಗೊತ್ತಿದೆ. ನಾನು ಕಲ್ಪ-ಕಲ್ಪವೂ ನೀವು ಮಕ್ಕಳ ಸೇವೆಯಲ್ಲಿ ಹಾಜರಾಗುವೆನು. ಯಾವಾಗ ನಾನೇ ಬರುವೆನ... |
ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಈಗ ತಮ್ಮ ಜೋಳಿಗೆಯನ್ನು ಬಹಳ ಚೆನ್ನಾಗಿ ಜ್ಞಾನರತ್ನಗಳಿಂದ ತುಂಬಿಕೊಳ್ಳಿರಿ, ಎಷ್ಟು ತುಂಬಿಕೊಳ್ಳಬೇಕೋ ಅಷ್ಟು ತುಂಬಿರಿ. ತಮ್ಮ ಸಮಯವನ್ನು ವ್ಯರ್ಥ ಮಾಡದಿರಿ. ತಂದೆಯ ನೆನಪಿನಲ್ಲಿಯೇ ಸಮಯವನ್ನು ಸಫಲಗೊಳಿಸಿರಿ. ಯಾರು ಬಹಳ ಚೆನ್ನಾಗಿ ಧಾರಣೆ ಮಾಡುವರೋ ಅವರು ಅನ್ಯರ ಸೇವೆಯನ್ನು ಅವಶ್ಯವಾಗಿ ಬಹಳ ಚೆನ್ನಾಗಿ ಮಾಡುವರು. ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಮಕ್... |
ಇವೆಲ್ಲಾ ಮಾತುಗಳ ಬಗ್ಗೆ ನೀವು ಮಕ್ಕಳ ಆಂತರ್ಯದಲ್ಲಿ ಮಥನವಾಗಬೇಕು. ವಿದ್ಯಾರ್ಥಿಯ ಬುದ್ಧಿಯಲ್ಲಿ ಇಡೀದಿನ ವಿದ್ಯಾಭ್ಯಾಸವೇ ಇರುತ್ತದೆಯಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ ಸಂಪೂರ್ಣ ಜ್ಞಾನವಿದೆ, ಇದು ಆತ್ಮಿಕ ವಿದ್ಯೆಯಾಗಿದೆ. ಯಾರು ಒಳ್ಳೆಯ ವಿದ್ಯಾರ್ಥಿ ಆಗಿರುತ್ತಾರೆಯೋ ಅವರು ಸದಾ ಏಕಾಂತದಲ್ಲಿ ಹೋಗಿ ಓದಿಕೊಳ್ಳುವರು. ವಿದ್ಯಾರ್ಥಿಯು ಪರಸ್ಪರದಲ್ಲಿ ಹೊಂದಾಣಿಕೆಯಿರುತ್ತದೆ ಎಂದರೆ ವಿದ್ಯಾಭ್ಯಾಸದ ... |
ನೀವು ಮಕ್ಕಳೀಗ ತಂದೆಯ ಸಹಯೋಗಿ ಆಗುವಿರಿ. ನೆನಪಿನಲ್ಲಿರುವುದೇ ಸಹಯೋಗ ಕೊಡುವುದಾಗಿದೆ ಏಕೆಂದರೆ ನೆನಪಿನ ಯಾತ್ರೆ ಅಂದರೆ ಶಾಂತಿಯ ಯಾತ್ರೆಯಲ್ಲಿರುವುದು. ಆದ್ದರಿಂದ ಹೇಳಲಾಗುತ್ತದೆ - ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸ್ವರ್ಗವನ್ನಾಗಿ ಮಾಡಿರಿ. ಪ್ರತಿಯೊಬ್ಬರ ಬುದ್ಧಿಯಲ್ಲಿ ತಂದೆ ಮತ್ತು ಆಸ್ತಿ ಇದೆ. ತಂದೆಯನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯವು ಸಿಗುವುದು, ಮತ್ತೇನೂ ಮಾಡಬೇಕಾಗಿಲ್ಲ. ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ಹೃದಯಪೂರ್ವಕವಾಗಿ ಬಹಳ ಪ್ರೀತಿಯಿಂದ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ನೆನಪಿನಲ್ಲಿ ತಮ್ಮ ಸಮಯವನ್ನು ಸಫಲಗೊಳಿಸಬೇಕು. ಅಮೂಲ್ಯವಾದ ಈ ಸಮಯವನ್ನು ಎಲ್ಲಿಯೂ ವ್ಯರ್ಥಗೊಳಿಸಬಾರದು. ಪುರುಷಾರ್ಥ ಮಾಡಿ ಅಂತರ್ಮುಖಿ ಅರ್ಥಾತ್ ಆತ್ಮಭಿಮಾನಿ ಆಗಿರಬೇಕು. |
2. ಈಗ ನಾವು ದೇವತೆಗಳಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಾಗಿದ್ದೇವೆ, ಈಗ ತಂದೆಯ ಮೂಲಕ ಅವಿನಾಶಿ ಜ್ಞಾನ ರತ್ನಗಳ ಲಾಟರಿ ಸಿಕ್ಕಿದೆ, ಜ್ಞಾನ ಪೂರ್ಣರು ಆಗಿದ್ದೀರಿ ಅಂದಮೇಲೆ ಚಹರೆಯು ಸದಾ ಖುಷಿಯಿಂದ ಅರಳಿರಲಿ. ಆಂತರ್ಯದಲ್ಲಿ ಖುಷಿಯಿಂದ ನರ್ತನ ಮಾಡುತ್ತಿರಿ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ, ಈ ಗೀತೆಯು ನಾವು ರಚಿಸಿರುವಂತಹ ಗೀತೆಯಲ್ಲ. ಹೇಗೆ ಅನ್ಯ ವೇದ ಶಾಸ್ತ್ರಗಳ ಸಾರವನ್ನು ತಿಳಿಸಲಾಗುತ್ತಿದೆಯೋ ಹಾಗೆಯೇ ಮನುಷ್ಯರು ಬರೆದಿರುವ ಈ ಹಾಡುಗಳ ಸಾರವನ್ನೂ ತಿಳಿಸುತ್ತೇವೆ. ಮಕ್ಕಳಿಗೆ ತಿಳಿದಿದೆ - ಅಂಬಿಗ ಅಥವಾ ಹೂದೋಟದ ಮಾಲೀಕ ಹಾಗೂ ಸದ್ಗತಿದಾತ ಒಬ್ಬರೇ ತಂದೆಯಾಗಿದ್ದಾರೆ, ಎಲ್ಲರೂ ಜೀವನ್ಮುಕ್ತಿಗಾಗಿಯೇ ಭಕ್ತಿ ಮಾಡುತ್ತಾರೆ ಆದರೆ ಜೀವನ್ಮುಕ್ತ... |
ನೀವು ಗುಪ್ತ ಸೈನಿಕರಾಗಿದ್ದೀರಿ. ನಿಮಗೆ ತಿಳಿದಿದೆ, ನಾವಾತ್ಮರು ಯೋಗಬಲದಿಂದ ಪುನಃ ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈ ಹಳೆಯ ಶರೀರವನ್ನು ಬಿಟ್ಟು ಹೋಗಿ ಹೊಸ ಸುಂದರ ಶರೀರವನ್ನು ಧಾರಣೆ ಮಾಡಿಕೊಳ್ಳುತ್ತೇವೆ. ಈಗ ಆಸುರೀ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ ಸಂಪ್ರದಾಯದವರಾಗುತ್ತೇವೆ. ನಾನು ಹೊಸ ಪ್ರಪಂಚದಲ್ಲಿ ದೈವೀ ಶರೀರವನ್ನು ಧಾರಣೆ ಮಾಡಿ ರಾಜ್ಯಭಾರ ಮಾಡುತ್ತೇವೆಂದು ಆತ್ಮವು... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸಂಗಮಯುಗದಲ್ಲಿ ಶ್ರೇಷ್ಠ ಕರ್ಮ ಮಾಡಿ ಪುರುಷೋತ್ತಮರಾಗಬೇಕಾಗಿದೆ. ಕನಿಷ್ಟರಾಗುವಂತಹ ಯಾವುದೇ ಕರ್ಮ ಮಾಡಬಾರದು. |
2. ಗುಪ್ತ ರೂಪದಲ್ಲಿ ತಂದೆಯ ಸಹಯೋಗಿಗಳಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಮ್ಮದೇ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ. ನೆನಪು ಮತ್ತು ಪವಿತ್ರತೆಯ ಬಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದರ ಅರ್ಥವನ್ನು ಹೃದಯದಲ್ಲಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ ಮತ್ತು ಖುಷಿಯಲ್ಲಿ ಬರಬೇಕಾಗಿದೆ ಏಕೆಂದರೆ ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ. ಈ ಹೊಸ ಮಾತುಗಳನ್ನು ಈಗ ಕೇಳಬೇಕಾಗಿದೆ. ಮಕ್ಕಳು ಈಗ ತಿಳಿದುಕೊಂಡಿದ್ದೀರಿ, ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರು ಯಾವುದೇ ಮನುಷ್ಯರಾಗಿರಲು ಸಾಧ್ಯವಿಲ್ಲ, ನೀವು ಈ ಮಾತ... |
ಇಂದು ನಾಳೆ ಎನ್ನುತ್ತಾ-ಎನ್ನುತ್ತಾ ಕಾಲವು ಕಬಳಿಸಿ ಬಿಡುವುದು. ಸಮಯವು ಇನ್ನು ಸ್ವಲ್ಪವೇ ಇದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಅಭಿಪ್ರಾಯವನ್ನು ಬರೆಯುವಾಗ ಇದನ್ನೂ ಸಹ ತಿಳಿಸಬೇಕಾಗಿದೆ - ಯಾವಾಗ ಅವರು ಬೇಹದ್ದಿನ ತಂದೆಯಾಗಿದ್ದಾರೆ ಎಂಬುದನ್ನು ನಿಶ್ಚಯ ಮಾಡುತ್ತೀರಿ ಅಂದಮೇಲೆ ಆ ತಂದೆಯಿಂದ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡಿರಿ, ಇಲ್ಲದಿದ್ದರೆ ಹೊರಗೆ ಹೋಗುತ್ತಿದ್ದಂತೆಯೇ ಮರೆತು... |
ತಂದೆಯು ತಿಳಿಸುತ್ತಾರೆ - ನಾನು ರೂಪ ಭಸಂತನಾಗಿದ್ದೇನೆ ಅಲ್ಲವೆ. ತಂದೆಯಿಂದ ಎಷ್ಟು ಅಮೂಲ್ಯ ಜ್ಞಾನ ರತ್ನಗಳು ಸಿಗುತ್ತವೆ, ಇದರಿಂದ ನೀವು ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ. ಅವರು ಶಂಕರನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ಜೋಳಿಗೆಯನ್ನು ತುಂಬಿಸುವವರು ಶಂಕರನಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ, ಜ್ಞಾನ ಸಾಗರ ತಂದೆಯು ಜ್ಞಾನ ರತ್ನಗ... |
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ದೇವತೆಗಳಾಗುತ್ತಿದ್ದೇವೆ, ತಂದೆಯು ನಮಗೆ ಈ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುವುದನ್ನು ಕಲಿಸುತ್ತಾರೆ. ಇಂತಹ ಶ್ರೇಷ್ಠ ಜ್ಞಾನವು ಮತ್ತ್ಯಾವುದೂ ಇರುವುದಿಲ್ಲ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಶಿವ ಮತ್ತು ಲಕ್ಷ್ಮೀ-ನಾರಾಯಣರ ಚಿತ್ರಗಳಂತೂ ಇರುತ್ತವೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಕಿಕೊಳ್ಳಿ ಆಗ ನೆನಪಿರುವುದು – ಶಿವ ತಂದೆಯೇ ನಮ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅನ್ಯ ಎಲ್ಲಾ ಮಾತುಗಳನ್ನು ಬಿಟ್ಟು ಜ್ಞಾನ ದಾನ ಮಾಡಬೇಕಾಗಿದೆ. ರೂಪ ಭಸಂತರಾಗಬೇಕಾಗಿದೆ. ತಮ್ಮ ಅವಗುಣಗಳನ್ನು ತೆಗೆಯುವ ಪುರುಷಾರ್ಥ ಮಾಡಬೇಕಾಗಿದೆ. ಅನ್ಯರನ್ನು ನೋಡಬಾರದು. |
2. ತಮ್ಮ ಸ್ವಭಾವವನ್ನು ಬಹಳ ಮಧುರ ಮಾಡಿಕೊಳ್ಳಬೇಕಾಗಿದೆ, ಎಲ್ಲರ ಮೇಲೆ ಪ್ರೀತಿಯ ದೃಷ್ಟಿಯಿರಲಿ, ಯಾರಿಗೂ ದುಃಖ ಕೊಡಬಾರದು, ಕರ್ಮೇಂದ್ರಿಯಾಜೀತರಾಗಬೇಕಾಗಿದೆ. |
ಭಾಗ್ಯಶಾಲಿ ಮಕ್ಕಳ ಶ್ರೇಷ್ಠ ಭಾಗ್ಯದ ಪಟ್ಟಿ |
ಇಂದು ಭಾಗ್ಯವಿದಾತ ಬಾಪ್ದಾದಾ ತನ್ನ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಮಗುವಿನ ಭಾಗ್ಯವು ಪ್ರಪಂಚದ ಸಾಧಾರಣ ಆತ್ಮಗಳಿಗಿಂತ ಅತೀ ಶ್ರೇಷ್ಠವಾಗಿದೆ ಏಕೆಂದರೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರಾಗಿದ್ದಾರೆ. 550 ಕೋಟಿ ಆತ್ಮರೆಲ್ಲಿ! ತಾವು ಬ್ರಾಹ್ಮಣರ ಚಿಕ್ಕ ಸಂಸಾರವೆಲ್ಲಿ! ಅವರ ಲೆಕ್ಕದಲ್ಲಿ ನೀವು ಎಷ್ಟು ಕಡಿಮೆ ಸಂಖ್ಯೆ... |
ಇನ್ನು ಸ್ವಲ್ಪ ಸಮಯವು ಕಳೆದರೆ ನೋಡುವಿರಿ - ಸ್ವಲ್ಪ ಸಮಯದಲ್ಲಿಯೇ ಯಾವಾಗ ಅತೀ ಮತ್ತು ಅಂತ್ಯ ಎರಡೂ ಅನುಭವವಾಗುವುದು ಆಗ ನಾಲ್ಕಾರು ಕಡೆಯ ಅಪರಿಚಿತ ಆತ್ಮರು ಹದ್ದಿನ ವೈರಾಗ್ಯ ವೃತ್ತಿಯಲ್ಲಿ ಬರುತ್ತಾರೆ ಮತ್ತು ತಾವು ಭಾಗ್ಯಶಾಲಿ ಆತ್ಮರು ಬೇಹದ್ದಿನ ವೈರಾಗ್ಯ ವೃತ್ತಿಯ ಅನುಭವದಲ್ಲಿರುತ್ತೀರಿ. ಈಗಂತೂ ಪ್ರಪಂಚದವರಲ್ಲಿಯೂ ವೈರಾಗ್ಯವಿಲ್ಲ. ಒಂದುವೇಳೆ ಅಲ್ಪಸ್ವಲ್ಪ ವಿನಾಶದ ಮುನ್ಸೂಚನೆಗಳು ಆಗುತ್ತ... |
ಅಮೃತವೇಳೆಯಿಂದ ತಮ್ಮ ಭಾಗ್ಯದ ಪಟ್ಟಿಯನ್ನು ತೆಗೆಯಿರಿ. ಭಾಗ್ಯವಂತ ಮಕ್ಕಳನ್ನು ಅಮೃತವೇಳೆಯಲ್ಲಿ ಸ್ವಯಂ ತಂದೆಯೇ ಏಳಿಸುತ್ತಾರೆ ಮತ್ತು ಆಹ್ವಾನ ಮಾಡುತ್ತಾರೆ. ಯಾರು ಅತೀ ಸ್ನೇಹಿ ಮಕ್ಕಳಿದ್ದಾರೆಯೋ ಅವರ ಅನುಭವವಾಗಿದೆ - ಮಲಗಿದರೂ ಸಹ ಯಾರೋ ಮಲಗಲು ಬಿಡುತ್ತಿಲ್ಲ, ಯಾರೋ ಏಳಿಸುತ್ತಿದ್ದಾರೆ, ಕರೆಯುತ್ತಿದ್ದಾರೆ ಎಂದು. ಈ ರೀತಿ ಅನುಭವ ಆಗುತ್ತದೆಯಲ್ಲವೆ. ಅಮೃತವೇಳೆಯಿಂದ ತಮ್ಮ ಭಾಗ್ಯವನ್ನೂ ನೋಡಿಕ... |
ಮತ್ತೆ ತಮ್ಮ ಭಾಗ್ಯವನ್ನು ನೋಡಿಕೊಳ್ಳಿ - ಸ್ವಯಂ ತಂದೆಯೇ ಶಿಕ್ಷಕನಾಗಿ ಎಷ್ಟು ದೂರ ದೇಶದಿಂದ ತಮಗೆ ಓದಿಸಲು ಬರುತ್ತಾರೆ. ಮನುಷ್ಯರಾದರೆ ಭಗವಂತನ ಬಳಿ ಹೋಗುವುದಕ್ಕಾಗಿ ಪ್ರಯತ್ನ ಪಡುತ್ತಾರೆ ಆದರೆ ಸ್ವಯಂ ಭಗವಂತನೇ ತಮ್ಮ ಬಳಿ ಶಿಕ್ಷಕನಾಗಿ ಓದಿಸಲು ಬರುತ್ತಾರೆ, ಇದು ಎಷ್ಟು ದೊಡ್ಡಭಾಗ್ಯವಾಗಿದೆ! ಮತ್ತು ಎಷ್ಟು ಸಮಯದಿಂದ ತನ್ನ ಸೇವೆಯ ಪಾತ್ರವನ್ನು ಅಭಿನಯಿಸುತ್ತಿದ್ದಾರೆ! ಎಂದಾದರೂ ದಣಿಯುತ್ತಾರ... |
ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ - ಮಾಡಿಸುವಂತಹ ತಂದೆಯು ಪ್ರತೀ ಕರ್ಮದಲ್ಲಿ ಮಾಡಿಸುತ್ತಿದ್ದಾರೆ ಅಂದಾಗ ಅಲ್ಲಿ ಹೊರೆಯೆನಿಸುವುದಿಲ್ಲ. ಹೊರೆಯೆಲ್ಲವೂ ಮಾಲೀಕನಿಗೆ ಇರುತ್ತದೆ. ಯಾರು ಸಹಯೋಗಿಗಳು ಆಗಿರುವರೋ ಅವರಿಗೆ ಭಾರವೆನಿಸುವುದಿಲ್ಲ. ನೀವು ಮಾಲೀಕರು ಆಗಿ ಬಿಡುತ್ತೀರೆಂದರೆ ಎಲ್ಲಾ ಹೊರೆಯು ನಿಮ್ಮ ಮೇಲೆ ಬಂದು ಬಿಡುತ್ತದೆ. ಆದ್ದರಿಂದ ನಾನು ಬಾಲಕನಾಗಿದ್ದೇನೆ, ತಂದೆಯು ಮಾಲೀಕನಾಗ... |
ಮತ್ತೆ ಬ್ರಹ್ಮಾ ಭೋಜನವನ್ನು ಯಾರು ತಿನ್ನಿಸುತ್ತಾರೆ? ಹೆಸರೇ ಆಗಿದೆ – ಬ್ರಹ್ಮಾ ಭೋಜನ. ಬ್ರಹ್ಮ ಭೋಜನವಲ್ಲ, ಬ್ರಹ್ಮಾ ಭೋಜನ. ಅಂದಾಗ ಬ್ರಹ್ಮಾರವರು ಸದಾ ಯಜ್ಞದ ರಕ್ಷಕನಾಗಿದ್ದಾರೆ. ಪ್ರತಿಯೊಬ್ಬ ಯಜ್ಞ ವತ್ಸರಿಗೆ ಅಥವಾ ಬ್ರಹ್ಮಾ ವತ್ಸರಿಗೆ ಬ್ರಹ್ಮಾ ತಂದೆಯ ಮೂಲಕ ಬ್ರಹ್ಮಾ ಭೋಜನವು ಅವಶ್ಯವಾಗಿ ಸಿಗುವುದು. ಮನುಷ್ಯರಂತೂ ಕೇವಲ ಹಾಗೆಯೇ ನಮಗೆ ಭಗವಂತನು ತಿನ್ನಿಸುತ್ತಿದ್ದಾರೆಂದು ಹೇಳುತ್ತಾರೆ. ... |
ತಂದೆಯೇ ಜೋಗುಳವನ್ನು ಹಾಡಿ ಮಲಗಿಸುತ್ತಾರೆ, ತಂದೆಯ ಮಡಿಲಿನಲ್ಲಿ ಮಲಗಿ ಬಿಡಿ ಆಗ ಸುಸ್ತು, ಖಾಯಿಲೆ ಎಲ್ಲವೂ ಮರೆತು ಹೋಗುವುದು ಮತ್ತು ವಿಶ್ರಾಂತಿ ಪಡೆಯುತ್ತೀರಿ. ಕೇವಲ `ಹಾ-ರಾಮ್' (ರಾಮನೇ ಬನ್ನಿ) ಎಂದು ಕೇವಲ ಆಹ್ವಾನ ಮಾಡಿ ಆಗ ಆರಾಮವಾಗಿ ಬಿಡುವುದು ಅರ್ಥಾತ್ ವಿಶ್ರಾಂತಿ ಸಿಗುವುದು. ಹಾಗೆಯೇ ಒಂಟಿಯಾಗಿ ಮಲಗುತ್ತೀರೆಂದರೆ ಬೇರೆ-ಬೇರೆ ಸಂಕಲ್ಪಗಳು ನಡೆಯುತ್ತವೆ. ತಂದೆಯ ಜೊತೆ `ನೆನಪಿನ ಮಡಿಲಿ... |
ಸದಾ ಭಗವಂತ ಮತ್ತು ಭಾಗ್ಯ - ಇಂತಹ ಸ್ಮೃತಿ ಸ್ವರೂಪ, ಸಮರ್ಥ ಆತ್ಮರಿಗೆ, ಸದಾ ಪ್ರತೀ ಕರ್ಮದಲ್ಲಿ ಮಾಡುವವನಾಗಿ ಕರ್ಮ ಮಾಡುವ ಶ್ರೇಷ್ಠಾತ್ಮರಿಗೆ, ಸದಾ ಅಮೃತವೇಳೆ ತಂದೆಯ ಜೊತೆ ಶ್ರೇಷ್ಠ ಸ್ಥಾನ, ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುವ ಭಾಗ್ಯಶಾಲಿ ಮಕ್ಕಳಿಗೆ, ಸದಾ ತಮ್ಮ ಮಸ್ತಕದ ಮೂಲಕ ಶ್ರೇಷ್ಠ ಭಾಗ್ಯದ ರೇಖೆಗಳನ್ನು ಅನ್ಯರಿಗೂ ಅನುಭವ ಮಾಡಿಸುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತ... |
ವಿದಾಯಿ ಸಮಯದಲ್ಲಿ ದಾದಿ ಜಾನಕಿಯವರು ಬಾಂಬೆ ಹಾಗೂ ಕುರುಕ್ಷೇತ್ರದ ಸೇವೆಯಲ್ಲಿ ಹೋಗುವುದಕ್ಕಾಗಿ ಅನುಮತಿ ಪಡೆಯುತ್ತಿದ್ದಾರೆ; |
ಮಹಾರಥಿಗಳು ಪಾದಗಳಲ್ಲಿ ಸೇವೆಯ ಚಕ್ರವಂತು ಇದ್ದೇ ಇದೆ. ಎಲ್ಲಿಯೇ ಹೋಗುತ್ತಾರೆ, ಅಲ್ಲಿ ಸೇವೆಯಿಲ್ಲದೇ ಮತ್ತೇನೂ ಇಲ್ಲ. ಭಲೆ ಯಾವುದೇ ಕಾರಣದಿಂದ ಹೋಗಬಹುದು ಆದರೆ ಸೇವೆಯು ಸಮಾವೇಶವಾಗಿದೆ. ಪ್ರತೀ ಹೆಜ್ಜೆಯಲ್ಲಿ ಸೇವೆಯಿಲ್ಲದೆ ಮತ್ತೇನೂ ಇಲ್ಲ. ಒಂದುವೇಳೆ ನಡೆಯುತ್ತಲೇ ಇರಬಹುದು, ಅದರಲ್ಲಿಯೂ ಸೇವೆಯಿದೆ. ಒಂದುವೇಳೆ ಆಹಾರ ಸೇವನೆ ಮಾಡಬಹುದು, ಯಾರಿಗೆ ನಿಮಂತ್ರಣ ಕೊಟ್ಟು ಉಟೋಪಚಾರ ಮಾಡಬಹುದು, ಸ್ನ... |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಧೈರ್ಯ ತರಿಸುತ್ತಾರೆ. ಹೇಗೆ ಲೌಕಿಕ ತಂದೆಯೂ ಸಹ ಧೈರ್ಯ ಕೊಡುತ್ತಾರಲ್ಲವೆ. ಯಾರಾದರೂ ರೋಗಿಯಾದರೆ ಅವರಿಗೆ ಸಮಾಧಾನ ನೀಡುತ್ತಾರೆ - ನಿಮ್ಮ ರೋಗದ ದುಃಖದ ದಿನಗಳು ಬದಲಾಗಿ ಸುಖದ ದಿನಗಳು ಬರುತ್ತವೆ ಎಂದು. ಅಲ್ಲಿ ಹದ್ದಿನ ತಂದೆಯು ಹದ್ದಿನ ಧೈರ್ಯವನ್ನು ತರಿಸುತ್ತಾರೆ, ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ, ಮಕ್ಕಳಿಗೆ ಬೇಹದ್ದಿ... |
ನೀವೀಗ ಶೂದ್ರರಿಂದ ಬದಲಾಗಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿ ಬಿಟ್ಟಿರಿ. ಯಾರಲ್ಲಿ 5 ವಿಕಾರಗಳಿದೆಯೋ ಅವರು ಆಸುರೀ ಸಂಪ್ರದಾಯದವರಾಗಿದ್ದಾರೆ. ನೀವು ದೈವೀ ಸಂಪ್ರದಾಯದವರಾಗಿದ್ದೀರಿ, ದೇವತೆಗಳಾಗುವುದಕ್ಕಾಗಿ ನೀವು ವಿಕಾರಗಳ ಮೇಲೆ ವಿಜಯ ಗಳಿಸುತ್ತಿದ್ದೀರಿ. ದೇವತೆಗಳಂತೂ ಇಲ್ಲಿ ಇಲ್ಲ, ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ನೀವೀಗ ದೈವೀ ಸಂಪ್ರದಾಯದವರಾಗುತ್ತಿದ್ದೀರಿ. |
ನೀವು ಮಕ್ಕಳಿಗೆ ಈಗ ತಿಳಿಸುವುದಕ್ಕಾಗಿ ಅವಕಾಶ ಸಿಗುತ್ತದೆ ಅಂದಮೇಲೆ ಪ್ರದರ್ಶನಿಯಲ್ಲಿ ತಿಳಿಸುತ್ತಾ ಇರಿ. ಪ್ರದರ್ಶನಿ, ಮೇಳಗಳಲ್ಲಿ ಪ್ರತಿಯೊಬ್ಬರ ನಾಡಿಯ ಬಗ್ಗೆ ಅರ್ಥವಾಗುತ್ತದೆ. ಪೋಜೆಕ್ಟರ್ನಲ್ಲಿ ಯಾರಿಗೂ ತಿಳಿಸುವುದಕ್ಕೆ ಆಗುವುದಿಲ್ಲ, ಸನ್ಮುಖದಲ್ಲಿ ತಿಳಿಸುವುದರಿಂದಲೇ ಮನುಷ್ಯರಿಗೆ ಅರ್ಥವಾಗುವುದು ಆದ್ದರಿಂದ ಪ್ರದರ್ಶನಿ, ಮೇಳವು ಒಳ್ಳೆಯ ಸಾಧನವಾಗಿದೆ. ಅದರಲ್ಲಿ ಬರೆಯಲೂಬಹುದು. ಪ್ರದರ್... |
ತಂದೆಯು ತಿಳಿಸುತ್ತಾರೆ - ನಾನು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಪ್ರವೇಶ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತೇನೆ, ಆದ್ದರಿಂದ ಮಕ್ಕಳು ಸರ್ವೀಸಿನಲ್ಲಿ ಹಗಲು-ರಾತ್ರಿ ಪರಿಶ್ರಮ ಪಡಬೇಕಾಗಿದೆ. ಉದ್ಯೋಗ ವ್ಯವಹಾರಗಳಿಂದ ಸ್ವಲ್ಪ ಸಮಯವನ್ನು ತೆಗೆದು ಇದರಲ್ಲಿ ತೊಡಗಬೇಕಾಗಿದೆ. ಬಿಡುವು ಸಿಗುವುದಿಲ್ಲವೆಂದಲ್ಲ. ಒಂದುವೇಳೆ ಖಾಯಿಲೆ ಬಂದರೆ ಆಗ ಬಿಡುವಿಲ್ಲವೆಂದು ಹೇಳುವಿರಾ? ಆದ್ದರಿಂದ ಪುರು... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸರ್ವೀಸಿನ ಉಮಂಗವನ್ನು ಇಟ್ಟುಕೊಂಡು ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಯಾರದೇ ಡಿಸ್ಸರ್ವೀಸ್ನ ಗಾಯನ ಮಾಡಬಾರದು. ಪರಚಿಂತನೆಯಲ್ಲಿ ತಮ್ಮ ಸಮಯವನ್ನು ಕಳೆಯಬಾರದು. |
2. ಪ್ರಾಮಾಣಿಕ ಹಾಗೂ ನಿರಹಂಕಾರಿಯಾಗಿ ಸೇವೆಯನ್ನು ವೃದ್ಧಿ ಪಡಿಸಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಎದ್ದು ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ನುಡಿಯುವುದು ಮತ್ತು ನಡೆಯುವುದು ಸಮಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಅರ್ಥಾತ್ ಶಿವ ತಂದೆ ಯಾರು ಪರಮಾತ್ಮನಾಗಿದ್ದಾರೆಯೋ ಅವರ ಮಕ್ಕಳಾದ ಆತ್ಮರು ಶರೀರರೂಪಿ ಕರ್ಮೇಂದ್ರಿಯಗಳ ಮೂಲಕ ಗೀತೆಯನ್ನು ಕೇಳಿದಿರಿ. ಈಗ ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ, ಬಹಳ ಪರಿಶ್ರಮವೂ ಇದೆ. ಪುನಃ-ಪುನಃ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದು ಗುಪ್ತ ಪರಿಶ್ರಮವಾಗಿ... |
ಈಗ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಶಿವನು ತಂದೆಯಾಗಿದ್ದಾರೆ, ಬ್ರಹ್ಮಾರವರು ದಾದಾ ಆಗಿದ್ದಾರೆ, ಪ್ರಜಾಪಿತ ಆಗಿದ್ದಾರೆ. ಆ ಆತ್ಮರ ಪಿತನಂತೂ ಅನಾದಿಯಾಗಿದ್ದಾರೆ, ಈ ಸಮಯದಲ್ಲಿ ಬ್ರಾಹ್ಮಣರನ್ನು ರಚಿಸುತ್ತಾರೆ. ಶಿವ ತಂದೆಯು ಸಾಲಿಗ್ರಾಮಗಳನ್ನು ರಚಿಸುವುದಿಲ್ಲ, ಸಾಲಿಗ್ರಾಮಗಳಂತೂ ಅವಿನಾಶಿಯಾಗಿದೆ. ಕೇವಲ ತಂದೆಯು ಬಂದು ಸಾಲಿಗ್ರಾಮಗಳನ್ನೇ ಪವ... |
ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಇದರಿಂದ ಮತ್ತೆ ಅಂತ್ಯ ಮತಿ ಸೋ ಗತಿಯಾಗುವುದು. ಮತ ಮತ್ತು ಗತಿ ಅಥವಾ ಗತಿ ಕೊಡುವ ಮತವು ಒಂದೇ ಆಗಿದೆ. ಈಶ್ವರನ ಗತಿ ಮತವು ಈಶ್ವರನಿಗೇ ಗೊತ್ತು ಎಂದು ಗಾಯನವಿದೆ, ಅವರೇ ಪತಿತ-ಪಾವನನಾಗಿದ್ದಾರೆ. ಮನುಷ್ಯರನ್ನು ಪಾವನರನ್ನಾಗಿ ಮಾಡಿ ಹೇಗೆ ನಾನು ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗಬೇಕೆಂದು ಅವರಿಗೆ ತಿಳಿದಿದೆ. ಭಕ್ತ... |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನೀವು ಈಗ ಘೋರ ಅಂಧಕಾರದಿಂದ ಘೋರ ಪ್ರಕಾಶತೆಯಲ್ಲಿ ಹೋಗುತ್ತಿದ್ದೀರಿ. ನೀವೀಗ ದೇವತೆಗಳಾಗುತ್ತಿದ್ದೀರಿ. ಇದನ್ನೂ ತಿಳಿಸಬೇಕಾಗಿದೆ – ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಇದನ್ನು ಹಿಂದೂ ಧರ್ಮವೆಂದು ಹೇಳಿ ಬಿಟ್ಟಿದ್ದಾರೆ. ಕೊನೆಗೆ ಈ ಮಾತೂ ಸಹ ಮನುಷ್ಯರಿಗೆ ಅರ್ಥವಾಗುತ್ತದೆ ಆದ್ದರಿಂದ ಮಕ್ಕಳು ಎದ್ದು ನಿಲ್ಲಬೇಕು. ಇದರಲ್ಲಿ ಬಹಳ ಮಂದಿ ಮಕ್ಕಳು ಬೇಕಾಗಿದ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಹೇಗೆ ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆಯೋ ಹಾಗೆಯೇ ತಂದೆಯ ಸಮಾನರಾಗಬೇಕಾಗಿದೆ. ಬಹಳ ಮಧುರರಾಗಬೇಕಾಗಿದೆ. ಸದಾ ಶುಭ ಕಾರ್ಯ ಮಾಡಿ ಬಲ ಭುಜಗಳಾಗಬೇಕಾಗಿದೆ. |
2. ಎಂದೂ ಎರಡು ಅಥವಾ ದ್ವೈತ ಮತವನ್ನು ಮಾಡಿಕೊಳ್ಳಬಾರದು. ಭಾವ-ಸ್ವಭಾವದಲ್ಲಿ (ಘರ್ಷಣೆಯಲ್ಲಿ) ಬಂದು ಒಬ್ಬರು ಇನ್ನೊಬ್ಬರಿಗೆ ಎದುರಾಗಬಾರದು. ಕ್ರೋಧದ ಭೂತವನ್ನು ತೆಗೆಯಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಿದ್ದಾರೆ. ಇಂದು ಮಕ್ಕಳಿಗೆ ಹಠಯೋಗ ಮತ್ತು ರಾಜಯೋಗವನ್ನು ಕುರಿತು ತಿಳಿಸುತ್ತೇವೆ. ಮಕ್ಕಳಿಗೆ ಅರ್ಥವಾಗಿದೆ - ಅವರು ಏನೆಲ್ಲವನ್ನೂ ಕಲಿಸುತ್ತಾರೆಯೋ ಎಲ್ಲವೂ ಹಠಯೋಗವಾಗಿದೆ ಏಕೆಂದರೆ ಅವರು ಕರ್ಮ ಸನ್ಯಾಸಿಗಳಾಗಿದ್ದಾರೆ. ವಾಸ್ತವದಲ್ಲಿ ಗೃಹಸ್ಥಿಗಳು ಹಠಯೋಗ, ಕರ್ಮ ಸನ್ಯಾಸವನ್ನು ಕಲಿಯುವಂತಿಲ್ಲ ಏಕೆಂದರೆ ಸನ್ಯಾಸಗಳದು ನಿವೃತ್ತಿ ಮಾ... |
ತಂದೆಯು ತಿಳಿಸಿದ್ದಾರೆ, ಭಾರತವು ಯಾವಾಗ ಪತಿತವಾಗುತ್ತದೆಯೋ, ರಾವಣನ ರಾಜ್ಯವಾಗುತ್ತದೆಯೋ ಆಗ ಧರಣಿಯು ಅಲುಗಾಡತೊಡಗುತ್ತದೆ. ಚಿನ್ನದ ಮಹಲುಗಳೆಲ್ಲವೂ ಕೆಳಗಡೆ ಹೊರಟು ಹೋಗುತ್ತವೆ. ಮಹಲು ಮೊದಲಾದುವುಗಳನ್ನು ಯಾರೂ ಲೂಟಿ ಮಾಡಲಿಲ್ಲ. ಆ ಇಸ್ಲಾಮಿಗಳು ಕೇವಲ ಮಂದಿರಗಳನ್ನು ಲೂಟಿ ಮಾಡಿದ್ದಾರೆ, ಕೆಲವು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆಭರಣಗಳ ಆಸಕ್ತಿ ಎಲ್ಲರಿಗಿಂತ ಹೆಚ್ಚು ಆಸಕ್ತಿ ನ... |
ನೀವು ರಾಜಋಷಿಗಳಾಗಿದ್ದೀರಿ, ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದೀರಿ. ತಂದೆಯೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ, ಶೀಕೃಷ್ಣನು ಮಾಡುವುದಿಲ್ಲ. ಕೃಷ್ಣನೂ ಸಹ ತಂದೆಯ ಆಸ್ತಿಯನ್ನು ಪಡೆದುಕೊಳ್ಳುತ್ತಾನೆ, ನಿಮ್ಮ ತಂದೆಯು ನಿರಾಕಾರನಾಗಿದ್ದಾರೆ ಅವರಿಂದ ವಿಶ್ವದ ರಾಜ್ಯ ಪದವಿಯ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೀವು ಎಷ್ಟೊಂದು ಸಾಹುಕಾರರಾಗಿದ್ದೀರಿ. ಇಲ್ಲಿ ಒಬ್ಬ ತಂದೆಯೇ ಬ... |
ಗೀತೆಯ ಭಗವಂತ ಯಾರು ಎಂದು ನೀವು ಪ್ರಶ್ನೆಯನ್ನು ಕೇಳುತ್ತೀರಿ, ಈ ರೀತಿ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ಎಲ್ಲಿ ಈ ಪ್ರಶ್ನೆಗಳನ್ನು ಬರೆಯುವಿರೋ ಅದರ ಜೊತೆಗೆ ಚಿತ್ರಗಳನ್ನೂ ಕೊಡಿ. ಗೀತೆಯ ಭಗವಂತ ಪರಮಪಿತ ಪರಮಾತ್ಮನೋ ಅಥವಾ ಶ್ರೀಕೃಷ್ಣನೋ? ಶ್ರೀಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ, ಪತಿತರಿಂದ ಪಾವನರನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಕೃಷ್ಣನ ಆತ್ಮವಂತೂ 84 ಜನ್ಮಗಳ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕುಲಕಳಂಕಿತ ಮಾಡುವಂತಹ ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು. ತಮ್ಮೊಂದಿಗೆ ತಾವೇ ಪವಿತ್ರರಾಗುವ ಪ್ರತಿಜ್ಞೆ ಮಾಡಿಕೊಳ್ಳಬೇಕಾಗಿದೆ. |
2. ಈಗ ತಮ್ಮ ಹಣ, ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಹೂದೋಟದಲ್ಲಿ ಹೋಗುವುದಕ್ಕಾಗಿ ಮುಳ್ಳುಗಳನ್ನು ತೆಗೆದು ಹಾಕಬೇಕಾಗಿದೆ. |
ಓಂ ಶಾಂತಿ. ಇವರು ಕೇವಲ ಪ್ರೀತಿಯ ಸಾಗರನಲ್ಲ, ಜ್ಞಾನ ಸಾಗರನಾಗಿದ್ದಾರೆ. ಜ್ಞಾನ ಮತ್ತು ಅಜ್ಞಾನ. ಜ್ಞಾನಕ್ಕೆ ದಿನವೆಂತಲೂ ಅಜ್ಞಾನಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ, ಜ್ಞಾನ ಎಂಬ ಅಕ್ಷರವೇ ಚೆನ್ನಾಗಿದೆ. ಅಜ್ಞಾನವೆಂಬುದು ಕೆಟ್ಟ ಅಕ್ಷರವಾಗಿದೆ. ಅರ್ಧ ಕಲ್ಪ ಜ್ಞಾನದ ಪ್ರಾಲಬ್ಧವಿರುತ್ತದೆ, ಇನ್ನರ್ಧ ಕಲ್ಪ ಅಜ್ಞಾನದ ಪ್ರಾಲಬ್ಧವಿರುತ್ತದೆ. ಅಜ್ಞಾನದ ಪ್ರಾಲಬ್ಧವು ದುಃಖವಾಗಿದೆ, ಜ್ಞಾನದ ಪ್ರಾಲ... |
ನೀವೂ ಸಹ ತಂದೆಯಿಂದ ಈಗ ಜೀವನ ಕಥೆಯನ್ನು ಕೇಳುತ್ತೀರಿ, ನೀವು ಮಕ್ಕಳಿಗೆ ಎಷ್ಟೊಂದು ತಿಳುವಳಿಕೆ ಸಿಕ್ಕಿದೆ. ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ಯಾರೂ ತಿಳಿದುಕೊಂಡಿಲ್ಲ. ಸರ್ವವ್ಯಾಪಿಯೆಂದು ಹೇಳುವುದಾದರೆ ಅಲ್ಲಿ ಜೀವನ ಚರಿತ್ರೆಯ ಮಾತೇ ಬರುವುದಿಲ್ಲ. ನೀವು ಮಕ್ಕಳು ಈಗ ಪರಮಪಿತ ಪರಮಾತ್ಮನ ಜೀವನ ಕಥೆಯನ್ನು ತಿಳಿದುಕೊಂಡಿದ್ದೀರಿ ಅಂದರೆ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಈ ಸಮ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ನಿಶ್ಚಯ ಬುದ್ಧಿಯವರಾಗಿ ಜೀವಿಸಿದ್ದಂತೆಯೇ ಈ ಹಳೆಯ ಪ್ರಪಂಚದ ತಮ್ಮ ದೋಣಿಯ ಹಗ್ಗವನ್ನು ಬಿಚ್ಚಬೇಕಾಗಿದೆ. ತಂದೆಯ ಪ್ರತೀ ಆಜ್ಞೆಯನ್ನು ಪಾಲನೆ ಮಾಡಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. |
2. ಅನ್ಯರ ಚಿಂತನೆಯನ್ನು ಬಿಟ್ಟು ತಮ್ಮ ಬುದ್ಧಿಯನ್ನು ಸ್ವಚ್ಛ ಚಿನ್ನದಂತೆ ಮಾಡಿಕೊಳ್ಳಬೇಕಾಗಿದೆ, ಅಲ್ಲಸಲ್ಲದ ಮಾತುಗಳಲ್ಲಿ ತಮ್ಮ ಸಮಯವನ್ನು ನಷ್ಟ ಮಾಡಿಕೊಳ್ಳಬಾರದು. ಯೋಗಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ಶಾಂತ, ಶೀತಲ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಜನ್ಮ-ಜನ್ಮಾಂತರದಿಂದ ಅರ್ಧಕಲ್ಪ ಮಕ್ಕಳು ಸತ್ಸಂಗ ಮಾಡಿದ್ದೀರಿ, ಸಾಧು-ಸಂತ, ಪಂಡಿತ ಮೊದಲಾದವರ ಎಲ್ಲಾ ಮನುಷ್ಯರ ಸತ್ಸಂಗಗಳಿರುತ್ತವೆ. ಈಗ ಇಲ್ಲಿಯದು ಮನುಷ್ಯರ ಸತ್ಸಂಗವಲ್ಲ, ಇದಕ್ಕೆ ಆತ್ಮಿಕ ಸತ್ಸಂಗವೆಂದು ಹೇಳಲಾಗುತ್ತದೆ. ಪರಮಾತ್ಮನು ಆತ್ಮಗಳ ಜೊತೆ ಆತ್ಮಿಕ ವಾರ್ತಾಲಾಪ ಅರ್ಥಾತ್ ಸತ್ಸಂಗ ಮಾಡುತ್ತಾರೆ, ನೀವಿಲ್ಲಿ ಯಾವುದೇ ಮನುಷ್ಯರಿಂದ ಕೇಳುವುದಿಲ್ಲ ಅಥವಾ ದೇವತೆಗಳಿಂದಲೂ ಕೇಳುವ... |
ಈಗ ನೀವು ಮಕ್ಕಳ ಪಾಲನೆಯು ತಂದೆಯ ಕೈಯಲ್ಲಿದೆ. ನಿಮ್ಮೊಂದಿಗೇ ತಿನ್ನುವೆನು ಅರ್ಥಾತ್ ನಿಮ್ಮ ಭಂಡಾರದಿಂದಲೇ ತಿನ್ನುವೆನು..... ನಿಮ್ಮ ಎಲ್ಲಾ ಪಾಲನೆಯು ಇಲ್ಲಿಯೇ ಆಗುತ್ತದೆ, ಯಾರು ಸಮರ್ಪಿತರಾಗುತ್ತಾರೆಯೋ ಅವರ ಪಾಲನೆಯಂತೂ ಆಗಿಯೇ ಆಗುತ್ತದೆ ಆದರೆ ಮನಸ್ಸಿನಿಂದಲೂ ಇದೆಲ್ಲವೂ ಈಶ್ವರ ತಂದೆಯದಾಗಿದೆ, ನಾನು ಟ್ರಸ್ಟಿಯಾಗಿದ್ದೇನೆ, ನಾನು ಶ್ರೀಮತದ ಅನುಸಾರವೇ ನಡೆದು ಖರ್ಚು ಮಾಡುತ್ತೇನೆಂದು ಯಾರು ತ... |
ಮಕ್ಕಳಿಗೆ ಅಪಾರ ಖುಷಿಯಿರಲಿ - ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ ಸ್ವರ್ಗದ ಮಾಲೀಕರನ್ನಾಗಿ ಮಾಡುವುದಕ್ಕಾಗಿ. ತಂದೆಯು ಬಂದು ಸ್ವರ್ಗದ ಸ್ಥಾಪನೆ, ನರಕದ ವಿನಾಶ ಮಾಡಿಸುತ್ತಾರೆ. ಆದ್ದರಿಂದ ಮಹಾಭಾರತ ಯುದ್ಧವೂ ಜೊತೆಯಲ್ಲಿದೆ. ಪ್ರತೀ 5000 ವರ್ಷಗಳ ನಂತರ ಈ ಚಕ್ರವು ಸುತ್ತುತ್ತದೆ, ತಂದೆಯೂ ಸಹ ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ. ಇದನ್ನು ಅವರು ಭಗವದ್ಗೀತೆಯಲ್ಲಿ ಯುಗ-ಯುಗಗಳ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ, ಇದರಲ್ಲಿ ಪ್ರತೀ ಮಾತಿನಲ್ಲಿ ಕಲ್ಯಾಣವಿದೆ, ಸಂಪಾದನೆಯೇ ಸಂಪಾದನೆಯಿದೆ. ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ, 21 ಜನ್ಮಗಳಿಗಾಗಿ ಜೀವನವನ್ನು ಅಮರ ಮಾಡಿಕೊಳ್ಳಬೇಕಾಗಿದೆ. |
2. ಪ್ರವೃತ್ತಿಯಲ್ಲಿರುತ್ತಾ ಮನಸ್ಸು-ಬುದ್ಧಿಯಿಂದ ಸಮರ್ಪಣೆಯಾಗಬೇಕಾಗಿದೆ. ಶ್ರೀಮತ ಪ್ರಮಾಣ ಖರ್ಚು ಮಾಡಬೇಕಾಗಿದೆ. ಸಂಪೂರ್ಣ ಟ್ರಸ್ಟಿಯಾಗಿರಬೇಕಾಗಿದೆ. ಶಿವ ತಂದೆಯ ಭಂಡಾರವು ಬರ್ಪೂರ್, ಕಾಲಕಂಟಕ ದೂರ.... |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ಈಗ ಸ್ಮೃತಿ ಬಂದಿದೆ, ಅವಶ್ಯವಾಗಿ ಅರ್ಧ ಕಲ್ಪ ನಾವು ನೆನಪು ಮಾಡಿದ್ದೇವೆ, ರಾವಣ ರಾಜ್ಯವು ಆರಂಭವಾದಾಗಿನಿಂದ ನೆನಪು ಮಾಡಿದ್ದೇವೆ. ಪೂರ್ಣ ಅರ್ಧಕಲ್ಪ ನೆನಪು ಮಾಡಿದ್ದೀರಿ ಎಂದಲ್ಲ. ಯಾವ-ಯಾವ ಸಮಯದಲ್ಲಿ ದುಃಖವು ಹೆಚ್ಚಾಗುತ್ತಾ ಬಂದಿದೆಯೋ ಆಗಿನಿಂದಲೇ ನೆನಪು ಮಾಡುತ್ತಾ ಬಂದಿದ್ದೀರಿ. ಈಗ ನಿಮಗೆ ಅರ್ಥವಾಗಿದೆ - ಭಕ್ತಿ ಮಾರ್ಗದಿಂದ ನಾವು ಕೆಳಗಿಳಿಯುತ್ತಾ ಬ... |
ತಂದೆಯು ಕೇವಲ ತಿಳಿಸುತ್ತಾರೆ - ಮಧುರ ಮುದ್ದಾದ ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ, ಯಾರ ಮಾತನ್ನೂ ಕೇಳಬೇಡಿ, ವ್ಯರ್ಥ ಪರಚಿಂತನೆ ಮಾಡಬೇಡಿರಿ. ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ - ನಾವಾತ್ಮರಾಗಿದ್ದೇವೆ, ಆತ್ಮವು ಅವಿನಾಶಿ, ಶರೀರ ವಿನಾಶಿಯಾಗಿದೆ. ಆತ್ಮವೇ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತದೆ, ಈಗ ನೀವು ಮಕ್ಕಳು ಆತ್ಮಾಭಿಮಾನಿ ಆಗಬೇಕಾಗಿದೆ.... |
Subsets and Splits
No community queries yet
The top public SQL queries from the community will appear here once available.