text stringlengths 0 61.5k |
|---|
ತಂದೆಯು ಹೇಳುತ್ತಾರೆ - ನಾನು ಗ್ಯಾರಂಟಿ ಕೊಡುತ್ತೇನೆ, ಕಲ್ಪ-ಕಲ್ಪವೂ ನಾನೇ ಬಂದು ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ಅಲ್ಲಿ ಯಾರೊಬ್ಬರೂ ಪತಿತರಿರುವುದಿಲ್ಲ. ಜ್ಞಾನವು ಎಷ್ಟು ಸಹಜವಾಗಿದೆ! ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಎಂಬ ಜ್ಞಾನವೂ ಸಹ ಬುದ್ಧಿಯಲ್ಲಿದೆ. ನಾವೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ ಎಂಬ ನಿಶ್ಚಯ ಮಾಡಿಕೊಳ್ಳಬೇಕಾಗಿದೆ. ನಿಶ್ಚಯದಲ್ಲಿಯೇ ವಿಜಯವ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ನೋಡಿಕೊಳ್ಳಿ, ನಾನು ಬಹಳ-ಬಹಳ ಮಧುರನಾಗಿದ್ದೇನೆಯೇ? ನನ್ನಲ್ಲಿ ಯಾವ-ಯಾವ ಕೊರತೆಗಳಿವೆ? ಎಲ್ಲಾ ದೈವೀ ಗುಣಗಳು ಧಾರಣೆಯಾಗಿದೆಯೇ! ತಮ್ಮ ಚಲನೆಯನ್ನು ದೇವತೆಗಳಂತೆ ಮಾಡಿಕೊಳ್ಳಬೇಕಾಗಿದೆ. ಆಸುರೀ ಆಹಾರ-ಪಾನೀಯಗಳ ತ್ಯಾಗ ಮಾಡಬೇಕಾಗಿದೆ. |
2. ಯಾವುದೇ ವ್ಯರ್ಥ ಮಾತುಗಳನ್ನು ಕೇಳಲೂಬಾರದು, ಹೇಳಲೂಬಾರದು, ಸಹನಾಶೀಲರಾಗಬೇಕಾಗಿದೆ. |
ಓಂ ಶಾಂತಿ. ಡಬಲ್ ಓಂ ಶಾಂತಿ. ಇದು ಮಕ್ಕಳ ಬುದ್ಧಿಯಲ್ಲಿದೆ. ತಂದೆಯೂ ಸಹ ಕುಳಿತು ಮಕ್ಕಳಿಗೇ ತಿಳಿಸುತ್ತಾರೆ. ಮೊಟ್ಟಮೊದಲು ತಂದೆಯ ಬಗ್ಗೆ ನಿಶ್ಚಯವಿರಬೇಕು ಏಕೆಂದರೆ ಅವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಹಾಗೆ ನೋಡಿದರೆ ಲೌಕಿಕ ರೀತಿಯಿಂದ ಬೇರೆ-ಬೇರೆಯಾಗಿರುತ್ತಾರೆ. ಶಿಕ್ಷಕನನ್ನು ಯೌವನದಲ್ಲಿ ಮಾಡಿಕೊಳ್ಳಲಾಗುವುದು. ಗುರುವನ್ನು 60 ವಯಸ್ಸಿನ ನಂತರ ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯ... |
ಮುಂಜಾನೆ ಮಕ್ಕಳಿಗೆ ಕುಳಿತು ಡ್ರಿಲ್ ಮಾಡಿಸುತ್ತಾರೆ. ವಾಸ್ತವದಲ್ಲಿ ಇದನ್ನು ಡ್ರಿಲ್ ಎಂದು ಹೇಳಲಾಗುವುದಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಎಷ್ಟೊಂದು ಸಹಜವಾಗಿದೆ, ನೀವು ಆತ್ಮವಲ್ಲವೆ ಅಂದಾಗ ಎಲ್ಲಿಂದ ಬಂದಿರಿ? ಪರಮಧಾಮದಿಂದ. ಈ ರೀತಿಯಾಗಿ ಬೇರೆ ಯಾರೂ ಕೇಳುವುದಿಲ್ಲ. ಪಾರಲೌಕಿಕ ತಂದೆಯೇ ಮಕ್ಕಳನ್ನು ಕೇಳುತ್ತಾರೆ. ಮಕ್ಕಳ... |
84 ಜನ್ಮಗಳನ್ನು ನೀವು ತೆಗೆದುಕೊಂಡಿದ್ದೀರಿ. ನಾವು ಅನೇಕಬಾರಿ ರಾಜ್ಯವನ್ನು ತೆಗೆದುಕೊಂಡು ಮತ್ತೆ ರಾವಣರಾಜ್ಯದಲ್ಲಿ ಬಂದಿದ್ದೇವೆಂದು ನೀವೇ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ- ನೀವು ಒಂದು ಜನ್ಮದಲ್ಲಿ ಪವಿತ್ರರಾದಾಗ 21 ಜನ್ಮಗ ನೀವು ಪಾವನರಾಗಿಬಿಡುತ್ತೀರಿ ಹಾಗಾದರೆ ಏಕೆ ಆಗುವುದಿಲ್ಲ! ಆದರೆ ಮಾಯೆಯು ಈ ರೀತಿಯಿದೆ, ಸಹೋದರ-ಸಹೋದರಿಯ ಸಂಬಂಧದ ಬೇ... |
ಇದು ನಿಮ್ಮ ಈಶ್ವರೀಯ ಕುಲವಾಗಿದೆ. ನಂತರ ಇದು ಸೂರ್ಯವಂಶಿ-ಚಂದ್ರವಂಶಿ ಮನೆತನವಾಗುತ್ತದೆ. ನಿಮ್ಮ ಬ್ರಾಹ್ಮಣರ ರಾಜ್ಯವಿಲ್ಲ, ಈಗ ನೀವು ಸಂಗಮದಲ್ಲಿದ್ದೀರಿ. ಈ ಕಲಿಯುಗದಲ್ಲಿ ರಾಜ್ಯವಿಲ್ಲ. ಒಂದುವೇಳೆ ಯಾವುದಾದರೂ ರಾಜ್ಯಭಾರವು ಉಳಿಯಬಹುದು ಆದರೆ ಎಂದಿಗೂ ಇಲ್ಲದಂತಾಗುವುದಿಲ್ಲ. ಈಗ ನೀವು ಈ ರೀತಿಯಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಅವರು ತಂದೆಯಾಗಿದ್ದು ನಾವು ಆತ್ಮರು ಸಹೋದರ-ಸಹೋದರತೆಯಿಂದ ನೋ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸತ್ಯಯುಗದಲ್ಲಿ ಫಸ್ಟ್ ಕ್ಲಾಸ್ ಸುಂದರ ಶರೀರವನ್ನು ಪ್ರಾಪ್ತಿ ಮಾಡಿಕೊಳ್ಳಲು ಈಗ ಆತ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ, ತುಕ್ಕನ್ನು ತೆಗೆದುಹಾಕಬೇಕು. ನಕಲಿ ಶೋ ಮಾಡಬಾರದು. |
2. ಸದಾ ಪವಿತ್ರವಾಗಿರಲು ಅಭ್ಯಾಸ ಮಾಡಬೇಕಾಗಿದೆ ಏಕೆಂದರೆ ಒಬ್ಬ ತಂದೆಯ ವಿನಃ ಮತ್ತೇನೂ ನೆನಪಿಗೆ ಬರಬಾರದು. ಈ ದೇಹವನ್ನೂ ಮರೆತುಬಿಡಬೇಕಾಗಿದೆ. ಸಹೋದರ-ಸಹೋದರ ದೃಷ್ಟಿಯನ್ನು ಸ್ವಾಭಾವಿಕವಾಗಿ ಪಕ್ಕಾ ಆಗಿಬಿಡಬೇಕು. |
ಹೋಲಿಯನ್ನು ಹೇಗೆ ಆಚರಿಸುವುದು ಹಾಗೂ ಸದಾಕಾಲದ ಪರಿವರ್ತನೆ ಹೇಗಾಗುವುದು? |
ಇಂದು ಸರ್ವರ ಭಾಗ್ಯವಿಧಾತ ತಂದೆಯು ತನ್ನ ಹೋಲಿ ಹಂಸಗಳೊಂದಿಗೆ ಜ್ಞಾನ ರತ್ನಗಳ ಹೋಲಿಯನ್ನು ಆಚರಿಸಲು ಬಂದಿದ್ದಾರೆ. ಆಚರಿಸುವುದು ಎಂದರೆ ಮಿಲನ ಮಾಡುವುದು. ಬಾಪ್ದಾದಾ ಪ್ರತಿಯೊಬ್ಬ ಅತಿಸ್ನೇಹೀ, ಸಹಜಯೋಗಿ, ಸದಾ ತಂದೆಯ ಕಾರ್ಯದಲ್ಲಿ ಸಹಯೋಗಿ, ಸದಾ ಪಾವನ ವೃತ್ತಿಯಿಂದ, ಪಾವನ ದೃಷ್ಟಿಯಿಂದ ಸೃಷ್ಟಿಯನ್ನು ಪರಿವರ್ತನೆ ಮಾಡುವಂತಹ ಸರ್ವ ಹೋಲಿ ಮಕ್ಕಳನ್ನು ನೋಡಿ ಸದಾ ಹರ್ಷಿತರಾಗುತ್ತೇವೆ. ಪಾವನರಂತೂ ಈ... |
ಈ ಹೋಲಿಯ ಉತ್ಸವವು ತಾವು ಪಾವನ ಆತ್ಮರ ಪಾವನರಾಗುವ ವಿಧಿಯ ಸ್ಮರಣಾರ್ಥವಾಗಿದೆ ಏಕೆಂದರೆ ತಾವೆಲ್ಲಾ ನಂಬರ್ವಾರ್ ಪಾವನ ಆತ್ಮರು ತಂದೆಯ ನೆನಪಿನ ಲಗನ್ನಿನ ಅಗ್ನಿಯ ಮೂಲಕ ಸದಾಕಾಲಕ್ಕಾಗಿ ಅಪವಿತ್ರತೆಯನ್ನು ಭಸ್ಮ ಮಾಡಿ ಬಿಡುತ್ತೀರಿ. ಆದ್ದರಿಂದ ಮೊದಲು ಸುಡುವ ಹೋಲಿಯನ್ನು ಆಚರಿಸುತ್ತಾರೆ ನಂತರ ಬಣ್ಣದ ಹೋಲಿ ಹಾಗೂ ಮಂಗಳ ಮಿಲನವನ್ನು ಆಚರಿಸುತ್ತಾರೆ. ಸುಡುವುದು ಎಂದರೆ ಹೆಸರೂ, ಗುರುತನ್ನೂ ಸಮಾಪ್ತಿ ... |
ಇಂದು ವತನದಲ್ಲಿ ಬಾಪ್ದಾದಾ ಮಕ್ಕಳ ಸಮಯ-ಪ್ರತಿ-ಸಮಯ ಸಂಕಲ್ಪದ ಮೂಲಕ ಅಥವಾ ಬರವಣಿಗೆಯ ಮೂಲಕ ತಂದೆಯ ಮೂಲಕ ಮಾಡಿರುವ ಪ್ರತಿಜ್ಞೆಗಳನ್ನು ನೋಡುತ್ತಿದ್ದೆವು. ಭಲೆ ಸ್ಥಿತಿಯಲ್ಲಿ ಮಹಾರಥಿಯಿರಬಹುದು, ಸೇವೆಯಲ್ಲಿ ಮಹಾರಥಿಯಿರಬಹುದು. ಇಬ್ಬರ ಸಮಯ-ಪ್ರತಿ-ಸಮಯದ ಪ್ರತಿಜ್ಞೆಗಳು ಬಹಳ ಒಳ್ಳೆಯದಾಗಿ ಮಾಡಿದ್ದೀರಿ. ಮಹಾರಥಿಗಳಲ್ಲಿಯೂ ಎರಡು ಪ್ರಕಾರದವರಿದ್ದಾರೆ. ಒಬ್ಬರು ತನ್ನನ್ನು ವರದಾನ ಹಾಗೂ ಆಸ್ತಿಯ ಪ್ರ... |
ಇಂದು ಬಾಪ್ದಾದಾ ಮಹಾರಥಿ ಮತ್ತು ಪುರುಷಾರ್ಥಿ ಇಬ್ಬರ ಪ್ರತಿಜ್ಞೆಗಳನ್ನು ನೋಡುತ್ತಿದ್ದೆವು. ಈಗೀಗ ಸಮೀಪದಲ್ಲಿ ಬಹಳ ಪ್ರತಿಜ್ಞೆ ಮಾಡುತ್ತಾರೆ, ಅಂದಾಗ ಏನು ನೋಡಿರಬಹುದು? ಪ್ರತಿಜ್ಞೆಯಿಂದ ಲಾಭವಂತೂ ಆಗುತ್ತದೆ ಏಕೆಂದರೆ ಧೃಡತೆಯ ಪೂರ್ಣ ಗಮನವಿರುತ್ತದೆ. ಪದೇ-ಪದೇ ಪ್ರತಿಜ್ಞೆಯ ಸ್ಮೃತಿಯು ಸಾಮರ್ಥ್ಯವನ್ನು ತರಿಸುತ್ತದೆ. ಇದರ ಕಾರಣ ಅಲ್ಪಸ್ವಲ್ಪ ಪರಿವರ್ತನೆಯೂ ಆಗುತ್ತಾರೆ ಆದರೆ ಬೀಜವು ಮುಚ್ಚಿಡಲ... |
ಬಾಪ್ದಾದಾ ನೋಡುತ್ತಿದ್ದೇವೆ. ಎಷ್ಟನ್ನು ಬಯಸುತ್ತಾರೆಯೋ ಅಷ್ಟು ಪರಿವರ್ತನೆ ಏಕೆ ಆಗುವುದಿಲ್ಲ? ಕಾರಣವೇನು? ಸದಾಕಾಲಕ್ಕಾಗಿ ಏಕೆ ಸಮಾಪ್ತಿಯಾಗುವುದಿಲ್ಲ? ಏನು ನೋಡಿರಬಹುದು? ತನ್ನ ಪ್ರತಿ ಹಾಗೂ ಅನ್ಯರ ಪ್ರತಿ ಸಂಕಲ್ಪ ಮಾಡುತ್ತೀರಿ - ಈ ನಿರ್ಬಲತೆಯನ್ನು ಮತ್ತೆ ಬರಲು ಬಿಡುವುದಿಲ್ಲ ಹಾಗೂ ಅನ್ಯರ ಪ್ರತಿಯೂ ಆಲೋಚಿಸುತ್ತೀರಿ. ಯಾವುದೇ ಆತ್ಮನ ಪ್ರತಿ ಸಂಸ್ಕಾರದ ಕಾರಣ ಅಥವಾ ಲೆಕ್ಕಾಚಾರವು ಸಮಾಪ್ತಿ... |
ಹೇಗೆ ತಿಳಿಸಿದ್ದೆವು - ಕೆಲವು ಮಕ್ಕಳು ನೆನಪಿನಲ್ಲಿ ಕುಳಿತುಕೊಂಡಾಗ ಅಥವಾ ಬ್ರಾಹ್ಮಣ ಜೀವನದಲ್ಲಿ ನಡೆಯುತ್ತಾ-ತಿರುಗಾಡುತ್ತಾ ನೆನಪಿನ ಅಭ್ಯಾಸ ಮಾಡುವಾಗ ನೆನಪಿನಲ್ಲಿ ಶಾಂತಿಯ ಅನುಭವ ಮಾಡುತ್ತಾರೆ ಆದರೆ ಖುಷಿಯ ಅನುಭವ ಮಾಡುವುದಿಲ್ಲ. ಕೇವಲ ಶಾಂತಿಯ ಅನುಭೂತಿಯು ಕೆಲವೊಮ್ಮೆ ತಲೆಯನ್ನು ಭಾರಿ ಮಾಡಿ ಬಿಡುತ್ತದೆ. ಇನ್ನೂ ಕೆಲವೊಮ್ಮೆ ನಿದ್ರೆಯ ಕಡೆ ತೆಗೆದುಕೊಂಡು ಹೋಗುತ್ತದೆ. ಶಾಂತಿಯ ಸ್ಥಿತಿಯ ಜ... |
ಹೇಗೆ ಇವರು ಇರುವುದೇ ಹೀಗೆ, ಇದು ಆಗುವುದೇ ಹೀಗೆ, ಇವರು ಹೀಗೆಯೇ ಮಾಡುತ್ತಾರೆ ಎಂಬ ಸಂಕಲ್ಪ ಬರುತ್ತದೆ, ಇದಕ್ಕೆ ಬದಲು ಈ ರೀತಿ ಆಲೋಚಿಸಿ - ಇವರು ವಿಶೇಷತೆಯ ಪ್ರಮಾಣ ಈ ರೀತಿ ವಿಶೇಷವಾಗಿದ್ದಾರೆ. ಹೇಗೆ ನಿರ್ಬಲತೆಗೆ ‘ಹೀಗೆ’ ಮತ್ತು ‘ಹಾಗೆ’ ಎಂದು ಬರುತ್ತದೆಯೋ ಹಾಗೆಯೇ ಶ್ರೇಷ್ಠತೆ ಹಾಗೂ ವಿಶೇಷತೆಗೆ ‘ಹೀಗೆ’, ‘ಹಾಗೆ’ ಎಂಬುದನ್ನು ಸನ್ಮುಖದಲ್ಲಿ ತಂದುಕೊಳ್ಳಿ, ಸ್ಮೃತಿಯನ್ನು ಸ್ವರೂಪವನ್ನು ದೃಷ... |
ಇಂತಹ ಹೋಲಿಯನ್ನು ಆಚರಿಸಬೇಕಲ್ಲವೆ. ಎಲ್ಲಿ ಉಲ್ಲಾಸ-ಉತ್ಸಾಹವಿರುವುದೋ ಅಲ್ಲಿ ಪ್ರತೀ ಘಳಿಗೆ ಉತ್ಸವವಿರುತ್ತದೆ ಅಂದಾಗ ಖುಷಿಯಿಂದ ಆಚರಿಸಿ. ಆಡಿರಿ, ಕುಣಿಯಿರಿ, ತಿನ್ನಿರಿ, ಮಜಾ ಮಾಡಿ ಆದರೆ ಸದಾ ಹೋಲಿ (ಪವಿತ್ರ) ಆಗಿ ಮಿಲನವನ್ನು ಆಚರಿಸುತ್ತಾ ಇರಿ. ಒಳ್ಳೆಯದು. |
ಸದಾ ಪ್ರತೀ ಸೆಕೆಂಡ್ ತಂದೆಯ ಮೂಲಕ ವರದಾನದ ಶುಭಾಷಯಗಳನ್ನು ತೆಗೆದುಕೊಳ್ಳುವವರು, ಸದಾ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನ ಮೂಲಕ ಶುಭ ಭಾವನೆಯ ಶುಭಾಷಯಗಳನ್ನು ಪಡೆಯುವವರು ಅತಿ ಶ್ರೇಷ್ಠ ಪಾವನ ಆತ್ಮರಿಗೆ, ಸದಾ ಸಂಗದ ರಂಗಿನಲ್ಲಿ ರಂಗಿತರಾಗಿರುವ ಆತ್ಮಗಳಿಗೆ ಸದಾ ತಂದೆಯೊಂದಿಗೆ ಮಿಲನವನ್ನು ಆಚರಿಸುವ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ವರದಾನ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು: |
1. ಸದಾ ತಮ್ಮನ್ನು ತಂದೆಯ ನೆನಪಿನ ಛತ್ರಛಾಯೆಯಲ್ಲಿ ಇರುವಂತಹ ಶ್ರೇಷ್ಠಾತ್ಮರೆಂದು ಅನುಭವ ಮಾಡುವಿರಾ? ಛತ್ರಛಾಯೆಯೇ ಸುರಕ್ಷತೆಯ ಸಾಧನವಾಗಿದೆ. ಈ ಛತ್ರಛಾಯೆಯಿಂದ ಸಂಕಲ್ಪ ಕಾಲನ್ನು ಹೊರಗಿಟ್ಟರೂ ಏನಾಗುವುದು? ರಾವಣನು ಹೊತ್ತುಕೊಂಡು ಹೋಗುವನು ಮತ್ತು ಶೋಕವಾಟಿಕೆಯಲ್ಲಿ ಕೂರಿಸಿ ಬಿಡುವನು. ಅಲ್ಲಿಗಂತು ಹೋಗಬಾರದು, ಸದಾ ತಂದೆಯ ಛತ್ರಛಾಯೆಯಲ್ಲಿ ಇರುವವರು ಮತ್ತು ತಂದೆಯ ಸ್ನೇಹಿ ಆತ್ಮನಾಗಿದ್ದೇನೆ ಎ... |
2. ಸದಾ ತಮ್ಮನ್ನು ಬಾಪ್ದಾದಾರವರ ದೃಷ್ಟಿಯಲ್ಲಿ ಸಮಾವೇಶವಾಗಿರುವ ಆತ್ಮನೆಂದು ಅನುಭವ ಮಾಡುವಿರಾ? ನಯನಗಳಲ್ಲಿ ಸಮಾವೇಶವಾಗಿರುವ ಆತ್ಮನ ಸ್ವರೂಪವೇನಾಗಿರುತ್ತದೆ? ನಯನಗಳಲ್ಲಿ ಏನಿರುತ್ತದೆ? ಬಿಂದು. ನೋಡುವಂತಹ ಶಕ್ತಿಯೇ ಬಿಂದುವಿನಲ್ಲಿದೆ ಅಲ್ಲವೆ. ಅಂದಮೇಲೆ ನಯನಗಳಲಿ ಸಮಾವೇಶವಾಗಿರುವ ಅಂದರೆ ಸದಾ ಬಿಂದು ಸ್ವರೂಪದಲ್ಲಿ ಸ್ಥಿತರಾಗಿರುವವರು - ಇಂತಹ ಅನುಭವ ಆಗುತ್ತದೆಯಲ್ಲವೆ! ಇಂತಹವರಿಗೇ “ಕಣ್ಮಣಿ... |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಹೇಗೆ ಆತ್ಮವು ಗುಪ್ತವಾಗಿದೆ ಮತ್ತು ಶರೀರವು ಪ್ರತ್ಯಕ್ಷವಾಗಿದೆ. ಆತ್ಮವನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ, ಅಗೋಚರವಾಗಿದೆ. ಅದು ಖಂಡಿತವಾಗಿಯೂ ಇದೆ ಆದರೆ ಈ ಶರೀರದಿಂದ ಮುಚ್ಚಲ್ಪಟ್ಟಿದೆ. ಆದ್ದರಿಂದ ಆತ್ಮವು ಗುಪ್ತವಾಗಿದೆ ಎಂದು ಹೇಳಲಾಗುತ್ತದೆ. ನಾನು ನಿರಾಕಾರನಾಗಿದ್ದೇನೆ, ಇಲ್ಲಿ ಸಾಕಾರದಲ್ಲಿ ಬಂದು ಗುಪ್ತವಾಗ... |
ಈಗ ನಿಮಗೆ ಇದೇ ಚಿಂತೆಯಿದೆ - ನಾವು ಹೇಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದು? ನಾವಾತ್ಮರು ಯಾವ ನಿರಾಕಾರಿ ಪ್ರಪಂಚದಲ್ಲಿದ್ದೆವು ಅಲ್ಲಿಂದ ಹೇಗೆ ಸುಖಧಾಮದಲ್ಲಿ ಬಂದೆವು ಎಂಬ ಜ್ಞಾನವೂ ಇದೆ. ನಾವೀಗ ಏರುವಕಲೆಯಲ್ಲಿದ್ದೇವೆ, ಇದು 84 ಜನ್ಮಗಳ ಏಣಿಯಾಗಿದೆ. ಇದರ ಮಧ್ಯದಲ್ಲಿ ಏನಾಗುತ್ತದೆ ಎಂಬುದನ್ನೂ ಸಹ ನೀವು ಅರಿತುಕೊಂಡಿದ್ದೀರಿ. ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ, ಡ್ರಾಮಾನುಸಾರ ನೀವು ಪ... |
ಈಗ ನೀವು ಮಕ್ಕಳು ಯಾರಿಗೆ ಬಡವರ ಬಂಧುವೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತೀರಿ, ಪ್ರಪಂಚದವರಿಗೆ ತಿಳಿದಿಲ್ಲ. ಕೊನೆಗೂ ಆ ದಿನ ಇಂದು ಬಂದಿತು ಎಂಬುದನ್ನು ಗೀತೆಯಲ್ಲಿಯೂ ಕೇಳಿದಿರಿ. ಇದೆಲ್ಲವೂ ಭಕ್ತಿಯಾಗಿದೆ. ಭಗವಂತನು ಯಾವಾಗ ಬಂದು ನಾವು ಭಕ್ತರನ್ನು ಈ ಭಕ್ತಿಮಾರ್ಗದಿಂದ ಬಿಡಿಸಿ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ ಎಂಬುದನ್ನೂ ಸಹ ತಿಳಿದಿದ್ದೀರಿ. ರಾಮ ರಾಜ್ಯ, ರಾವಣ ರಾ... |
ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವಿದೆ, ಇವರು ಬಹಳ ಜನ್ಮಗಳ ಅಂತಿಮದಲ್ಲಿ ಈಗ ಪತಿತ ಆತ್ಮನಾಗಿದ್ದಾರೆ, ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ತಮೋಪ್ರಧಾನವಾಗಿದ್ದಾರೆ ಪುನಃ ಸತೋಪ್ರಧಾನರಾಗಬೇಕಾಗಿದೆ. ನೀವಾತ್ಮರಿಗೆ ಈಗ ಶಿಕ್ಷಣ ಸಿಗುತ್ತಿದೆ - ಶರೀರದ ಮುಖಾಂತರ ಆತ್ಮವು ಕೇಳುವಾಗ ಶರೀರವು ತೂಗುತ್ತದೆ ಏಕೆಂದರೆ ಆತ್ಮವು ಇದರ ಮೂಲಕ ಕೇಳಿಸಿಕೊಳ್ಳುತ್ತದೆಯಲ್ಲವೆ. ಅವಶ್ಯವಾಗಿ ನಾವ... |
ಈಗ ತಂದೆಯು ತಿಳಿಸುತ್ತಾರೆ - ಅವಶ್ಯವಾಗಿ ನಾನು ಬಡವರ ಬಂಧುವಾಗಿದ್ದೇನೆ ಅಲ್ಲವೆ. ಭಾರತವೇ ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ಈಗ ಎಲ್ಲದಕ್ಕಿಂತ ಬಡ ದೇಶವಾಗಿದೆ. ಆದ್ದರಿಂದ ನಾನು ಭಾರತದಲ್ಲಿಯೇ ಬರಬೇಕಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಇದು ಬೇಹದ್ದಿನ ಡ್ರಾಮಾ ಆಗಿದೆ. ಡ್ರಾಮಾದಲ್ಲಿ ಏನು ಶೂಟಿಂಗ್ ನಡೆದಿದೆಯೋ ಅದೇ ಪುನರಾವರ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ಕೇವಲ ಒಂದೇ ಚಿಂತೆಯಿರಲಿ - ನಾವು ಖಂಡಿತವಾಗಿಯೂ ಸತೋಪ್ರಧಾನರಾಗಬೇಕಾಗಿದೆ. |
2. ಈ ಬೇಹದ್ದಿನ ಡ್ರಾಮಾವನ್ನು ಬುದ್ಧಿಯಲ್ಲಿಟ್ಟುಕೊಂಡು ಅಪಾರ ಖುಷಿಯಲ್ಲಿರಬೇಕು, ತಂದೆಯ ಸಮಾನ ಗೌರವವನ್ನು ಪಡೆಯಲು ಪತಿತರನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ. |
ಓಂ ಶಾಂತಿ. ಮಕ್ಕಳು ತಮ್ಮ ಸಹೋದರ-ಸಹೋದರಿಯರಿಗೆ ಡ್ರಿಲ್ ಅನ್ನು ಕಲಿಸಲು ಕುಳಿತಿದ್ದೀರಿ, ಇದು ಎಂತಹ ಡ್ರಿಲ್ ಆಗಿದೆ? ಇದರಲ್ಲಿ ಮಕ್ಕಳು ಏನನ್ನೂ ಹೇಳುವಂತಿಲ್ಲ, ಆ ದೈಹಿಕ ಡ್ರಿಲ್ ಕಲಿಸುವವರು ಮಾತನಾಡಬೇಕಾಗುತ್ತದೆ. ಇವರಂತೂ ಪರಮ ಶಿಕ್ಷಕನಾಗಿದ್ದಾರೆ, ಗೀತೆಯ ಭಗವಂತನೂ ಆಗಿದ್ದಾರೆ. ಮಕ್ಕಳಿಗೆ ಯೋಗದ ಡ್ರಿಲ್ ಅನ್ನೂ ಕಲಿಸುತ್ತಾರೆ. ಇದು ಗುಪ್ತವಾದ ಡ್ರಿಲ್ ಆಗಿದೆ, ಈ ಡ್ರಿಲ್ ಅನ್ನು ಏಕೆ ಕಲಿಸ... |
ತಂದೆಯು ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ ಸದಾ ಮನ್ಮನಾಭವ. ತಂದೆಯ ಸಂದೇಶವನ್ನು ಎಲ್ಲರಿಗೆ ಕೊಡುತ್ತಾ ಇರಿ. ತಂದೆಗೆ ಮೆಸೆಂಜರ್ ಎಂದು ಹೇಳಲಾಗುತ್ತದೆ, ಮತ್ತ್ಯಾರೂ ಸಹ ಮೆಸೆಂಜರ್ ಅಥವಾ ಪೈಗಂಬರ್ ಅಲ್ಲ, ಆ ಧರ್ಮ ಗುರುಗಳಂತೂ ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಪೈಗಂಬರ್ ಕೇವಲ ಒಬ್ಬರೇ ಆಗಿದ್ದಾರೆ, ಅವರೇ ಬಂದು ನಿಮಗೆ ಪವಿತ್ರರಾಗುವ ಸಂದೇಶ ಕೊಡುತ್ತಾರೆ. ಧರ್ಮ ಪಿತರು ಧರ್ಮ ಸ್ಥಾಪನೆ ಮ... |
ಇಲ್ಲಿಯೂ ಮಕ್ಕಳು ಸನ್ಮುಖದಲ್ಲಿ ತಂದೆಯ ಬಳಿ ರಿಫ್ರೆಶ್ ಆಗಲು ಬರುತ್ತೀರಿ, ತಂದೆಯು ಸನ್ಮುಖದಲ್ಲಿ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿರಿ. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ನೀವು ಒಬ್ಬ ತಂದೆಯನ್ನು ನೆನಪು ಮಾಡಿ ಪವಿತ್ರರಾಗಿರಿ ಆಗ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಒಂದುವೇಳೆ ಪರಿಶ್ರಮ ಪಡದಿದ್ದರೆ ಫಲವು ಸಿಗುವುದಿಲ್ಲ ಮ... |
ನೀವು ತಿಳಿದುಕೊಳ್ಳುತ್ತೀರಿ - ಮೇಲಿನಿಂದ ಏಣಿಯನ್ನಿಳಿಯುತ್ತಾ ಕೆಳಗಿಳಿದು ಬಂದಿದ್ದೇವೆ, ಡ್ರಾಮಾನುಸಾರ ನಾವು ಇಳಿಯಲೇಬೇಕಾಗಿದೆ. ಈಗ ಮತ್ತೆ ತಂದೆಯು ತಿಳಿಸುತ್ತಾರೆ, ಮಕ್ಕಳೇ ಏರುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಹೀಗೆ ಹೇಳಿ ಬಿಡುತ್ತಾರೆ. ಯಾರು ಹೀಗೆ ಹೇಳುವರೋ ಅದರಿಂದಲೇ ತಿಳಿದುಕೊಳ್ಳಲಾಗುವುದು - ಇವರ ಅದೃಷ್ಟದಲ್ಲಿ ಇಲ್ಲವೆಂದು. 2-4 ವರ್ಷಗಳ ಕ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪಾವನರಾಗಲು ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ. ಎಲ್ಲರಿಗೆ ಸಂದೇಶ ಕೊಡಬೇಕಾಗಿದೆ - ಒಬ್ಬ ತಂದೆಯನ್ನು ನೆನಪು ಮಾಡಿರಿ, ದೇಹ ಸಹಿತ ಎಲ್ಲವನ್ನೂ ಮರೆಯಿರಿ. |
2. ಯೋಗೇಶ್ವರ ತಂದೆಯಿಂದ ಯೋಗವನ್ನು ಕಲಿತು ಸತ್ಯ-ಸತ್ಯ ಯೋಗಿಗಳಾಗಬೇಕಾಗಿದೆ. ಜ್ಞಾನದಿಂದ ಧನವಂತರು ಮತ್ತು ಯೋಗದಿಂದ ನಿರೋಗಿ, ಸದಾ ಆರೋಗ್ಯವಂತರಾಗಬೇಕು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲಿನ ಅರ್ಥವನ್ನು ತಿಳಿದುಕೊಂಡಿರಿ. ನೀವೀಗ ಜೀವಿಸಿದ್ದಂತೆಯೇ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ಇಡೀ ಕಲ್ಪ ಲೌಕಿಕ ತಂದೆಯ ಮಕ್ಕಳಾಗಿದ್ದೀರಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ನಾವು ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಒಂದುವೇಳೆ ತಂದೆಯನ್ನು ಬಿಟ್ಟು ಬಿಟ್ಟರೆ ಬೇಹದ್ದಿನ ಆಸ್ತಿಯು ಸಿಗಲು ಸಾಧ್ಯವಿಲ್ಲ. ಭಲೆ ... |
ನೀವು ತಿಳಿದುಕೊಂಡಿದ್ದೀರಿ - ನಾವೀಗ ಪಾವನ ಪ್ರಪಂಚಕ್ಕೆ ಹೋಗುತ್ತಿದ್ದೇವೆ. ಯಾರು ಬ್ರಾಹ್ಮಣರಾಗುವರೋ ಅವರೇ ನಿಮಿತ್ತರಾಗುವರು. ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗದ ವಿನಃ ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಮಕ್ಕಳನ್ನು ಆಸ್ತಿ ಕೊಡುವುದಕ್ಕಾಗಿಯೇ ರಚಿಸುತ್ತಾರೆ. ನಾವಂತೂ ಶಿವ ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ಅವರು ಹೊಸ ಸೃಷ್ಟಿಯನ್ನು ರಚಿಸುವುದೇ ಮಕ್ಕ... |
ತಂದೆಯು ಹೇಳುತ್ತಾರೆ - ಮಕ್ಕಳೇ, ಬಾಲ್ಯವನ್ನು ಮರೆಯಬೇಡಿ. ಒಂದುವೇಳೆ ತಂದೆಯನ್ನು ಮರೆತರೆ ಇಂದು ನಗುತ್ತೀರಿ ನಾಳೆ ಅಳಬೇಕಾಗುವುದು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸ್ವರ್ಗದಲ್ಲಂತೂ ಹೋಗುತ್ತೇವೆ ಅಲ್ಲವೆ. ಅಂದಮೇಲೆ ಅದೃಷ್ಟದಲ್ಲಿ ಏನಿದ್ದರೆ ಅದೇ ಆಗುವುದೆಂದು ಅನೇಕರು ಹೇಳುತ್ತಾರೆ. ಅದಕ್ಕೆ ಯಾರೂ ಪುರುಷಾರ್ಥ ಮಾಡುವುದು ಎಂದು ಹೇಳುವುದಿಲ್ಲ. ಮನುಷ್ಯರು ಶ್ರೇಷ್ಠ ಪದ... |
ತಂದೆಯು ಹೇಳುತ್ತಾರೆ - ನೀವೆಲ್ಲರೂ ತಮೋಪ್ರಧಾನ, ಪತಿತರಾಗಿ ಬಿಟ್ಟಿದ್ದೀರಿ. ಈಗ ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಆತ್ಮವೇ ಪತಿತನಾಗಿದೆ, ಸತ್ಯಯುಗದಲ್ಲಿ ಪಾವನ ಆತ್ಮರಿರುತ್ತಾರೆ. ತಂದೆಯ ನೆನಪಿನಿಂದಲೇ ಆತ್ಮವು ಪಾವನವಾಗುವುದು, ಮತ್ತ್ಯಾವುದೇ ಉಪಾಯವಿಲ್ಲ. ಈ ಸಂದೇಶವನ್ನು ಎಲ್ಲರಿಗೂ ಕೊಡುತ್ತಾ ಹೋಗಿ ಆಗ ಅನೇಕರ ಕಲ್ಯಾಣ ಮಾಡುವಿರಿ ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ. ... |
ಒಳ್ಳೆಯದು. ಭಗವಂತನು ಪ್ರೇರಣೆ ಕೊಡುತ್ತಾರೆಂದೇ ತಿಳಿದುಕೊಳ್ಳಿ, ಸ್ವಪ್ನದಲ್ಲಿ ಸಾಕ್ಷಾತ್ಕಾರವಾಗುತ್ತದೆ ಅಥವಾ ಸದ್ದು ಕೇಳಿ ಬರುತ್ತದೆ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುವಿರಿ. ನೀವು ಕೇವಲ ಇದೇ ಚಿಂತನೆ ಮಾಡುತ್ತಾ ಇರಿ, ಇದರಿಂದ ದೋಣಿಯು ಪಾರಾಗುವುದು. ನಾವು ಪ್ರತ್ಯಕ್ಷದಲ್ಲಿ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಮತ್ತು ತಂದೆಯಿಂದ 21 ಜನ್ಮಗಳ ಆಸ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ವಿದ್ಯೆಯಲ್ಲಿ ಎಂದೂ ಹುಡುಗಾಟಿಕೆ ಮಾಡಬಾರದು. ಯುದ್ಧಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ. |
2. ಶ್ರೀಮತದಂತೆ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಎಂದು ಯಾರು ಹೇಳಿದರು? ಅವಶ್ಯವಾಗಿ ಆತ್ಮಿಕ ತಂದೆಯೇ ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳು ಈಗ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಬಹಳ ಪ್ರೀತಿಯಿಂದ ತಂದೆಯು ತಿಳಿಸುತ್ತಿದ್ದಾರೆ. ಈಗ ನಿಮಗೆ ತಿಳಿದಿದೆ - ಆತ್ಮಿಕ ತಂದೆಯ ವಿನಃ ಇಡೀ ಪ್ರಪಂಚದಲ್ಲಿ ಮತ್ತ್ಯಾರೂ ಸಹ ಸರ್ವರಿಗೆ ಸುಖ-ಶಾಂತಿಯನ... |
ನೀವೀಗ ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಾರೆ, ನಾನು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುತ್ತಾರೆ, ತಂದೆಯ ಬಳಿ ಯಾವುದೇ ತಾರತಮ್ಯವಿಲ್ಲ. ತಂದೆಗೆ ತಿಳಿದಿದೆ, ನಾನು ಆತ್ಮರಿಗೇ ಓದಿಸುತ್ತೇನೆ. ಪ್ರತಿಯೊಂದು ಆತ್ಮವು ತನಗಾಗಿ ಪುರುಷಾರ್ಥ ಮಾಡುತ್ತದೆ, ಸ್ತ್ರೀ-ಪ... |
ಈ ಡ್ರಾಮಾದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ. ಈ ಡ್ರಾಮಾದಲ್ಲಿ ಎಲ್ಲರಿಗಿಂತ ಹೆಚ್ಚು ಪಾತ್ರವು ನಮ್ಮದಾಗಿದೆ. ಎಲ್ಲರಿಗಿಂತ ಹೆಚ್ಚು ಸುಖವೂ ನಮಗೇ ಸಿಗುವುದು. ತಂದೆಯು ಹೇಳುತ್ತಾರೆ, ನಿಮ್ಮ ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ ಉಳಿದೆಲ್ಲಾ ಆತ್ಮರು ತಮ್ಮ ಲೆಕ್ಕಾಚಾರಗಳನ್ನು ಮುಗಿಸಿ ಶಾಂತಿಧಾಮಕ್ಕೆ ಹೊರಟು ಹೋಗುವರು. ಹೆಚ್ಚು ವಿಸ್ತಾರದಲ್ಲಿ ನಾವೇಕ... |
ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಇವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಅವರಂತೂ ಒಬ್ಬ ಗುರು ಶರೀರ ಬಿಟ್ಟರೆ ಮತ್ತೆ ಮಕ್ಕಳಿಗೆ ಅವರ ಸಿಂಹಾಸನವನ್ನು ಕೊಡುತ್ತಾರೆ. ಈಗ ಅವರು ಹೇಗೆ ಸದ್ಗತಿಯಲ್ಲಿ ಕರೆದುಕೊಂಡು ಹೋಗುವರು! ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ರಾವಣ ರಾಜ್ಯದಲ್ಲಿ ದುರ್ಗತಿಯಿದೆ, ರಾಮ ರ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ, ಯಾವುದೇ ಪ್ರಕಾರದ ಸಂಶಯವನ್ನು ತರಬಾರದು. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಿ ಪಾವನರಾಗಬೇಕಾಗಿದೆ. ಅನ್ಯ ಪ್ರಶ್ನೆಗಳಲ್ಲಿ ಹೋಗಬಾರದು. |
2. ಒಬ್ಬ ತಂದೆಯೊಂದಿಗೇ ಸತ್ಯ ಪ್ರೀತಿಯನ್ನಿಟ್ಟು ತಂದೆಯ ಸಮಾನ ಮಧುರ ಸ್ಯಾಕ್ರೀನ್ ಆಗಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಾ? ಯಾರು ಕೇಳಿದರು? ಆತ್ಮರು. ಆತ್ಮಕ್ಕೆ ಪರಮಾತ್ಮನೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ನೀವೀಗ ಬ್ರಾಹ್ಮಣರಾಗಿದ್ದೀರಿ. ಈಗ ನಿಮಗೆ ದೇವತೆಯೆಂದು ಹೇಳಲಾಗುವುದಿಲ್ಲ. ಬ್ರಹ್ಮನಿಗೂ ಸಹ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ಭಲೆ ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ ಆ... |
ನೀವೀಗ ತಿಳಿದುಕೊಳ್ಳುತ್ತೀರಿ, ನಾವು 21 ಜನ್ಮಗಳಿಗಾಗಿ ಸುಖವನ್ನು ಪಡೆಯುತ್ತೇವೆ. ತಂದೆಯು ನಮಗೆ ಆ ಮಾರ್ಗವನ್ನು ತಿಳಿಸುತ್ತಿದ್ದಾರೆ. ನಾವೀಗ ಪತಿತರಾಗಿದ್ದೇವೆ ಆದ್ದರಿಂದ ಅಶಾಂತ, ದುಃಖಿಯಾಗಿದ್ದೇವೆ. ಎಲ್ಲಿ ಸಂತುಷ್ಟತೆಯಿರುವುದೋ ಅದಕ್ಕೆ ಸುಖ-ಶಾಂತಿ ಎಂದು ಹೇಳುವರು ಅಂದಾಗ ಈಗ ನೀವು ಮಕ್ಕಳ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಭಾರತವು ಎಷ್... |
ತಂದೆಯು ತಿಳಿಸುತ್ತಾರೆ - ನೀವು ವಾಯುಮಂಡಲವನ್ನು ಹಾಳು ಮಾಡುತ್ತೀರಿ, ಎಲ್ಲಿಯವರೆಗೆ ಈ ರೀತಿ ಬರುತ್ತಾ ಇರುತ್ತೀರಿ! ಯಾರು ಪಾವನರಾಗುವರೋ ಅವರಿಗೆ ಪತಿತರೊಂದಿಗೆ ತಿರಸ್ಕಾರ ಬರುತ್ತದೆ. ಬಾಬಾ, ಇವರ ಕೈಯಿಂದ ತಯಾರಿಸಿದ ಆಹಾರವೂ ಇಷ್ಟವಾಗುವುದಿಲ್ಲವೆಂದು ಹೇಳುತ್ತಾರೆ. ತಂದೆಯು ಯುಕ್ತಿಯನ್ನೂ ತಿಳಿಸಿದ್ದಾರೆ - ಆಹಾರ-ಪಾನೀಯಗಳ ವಿಷಯಗಳಲ್ಲಿ ಕಿರಿಕಿರಿಯಾದರೆ ನೌಕರಿಯನ್ನೇ ಬಿಟ್ಟು ಬಿಡುತ್ತೇವೆಂದು... |
ತಂದೆಯು ತಿಳಿಸುತ್ತಾರೆ - ನೀವು ಪವಿತ್ರ ಆತ್ಮರು 16 ಕಲಾ ಸಂಪೂರ್ಣರಾಗಿದ್ದಿರಿ, ಈಗ ಕಲಾಹೀನ, ಪತಿತರಾಗಿ ಬಿಟ್ಟಿದ್ದೀರಿ. ನಾನು ಕಲ್ಪ-ಕಲ್ಪವೂ ಬಂದು ನಿಮಗೆ ತಿಳಿಸುತ್ತೇನೆ. ನೀವು ಕಾಮ ಚಿತೆಯ ಮೇಲೆ ಕುಳಿತು ಪತಿತರಾಗಿ ಬಿಡುತ್ತೀರಿ ನಂತರ ಜ್ಞಾ ನಚಿತೆಯ ಮೇಲೆ ಕೂರಿಸಿ ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ. ಭಾರತದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಅಪವಿತ್ರ ಪ್ರವೃತ್ತಿ ಮಾರ್ಗವ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈಗ ಅಶುದ್ಧ ಕಾಮನೆಗಳ ತ್ಯಾಗ ಮಾಡಿ ಶುದ್ಧ ಕಾಮನೆಗಳನ್ನು ಇಟ್ಟುಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ಶುದ್ಧ ಕಾಮನೆಯಾಗಿದೆ, ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕು ಎಂಬುದು. ಯಾವುದೇ ತಪ್ಪನ್ನು ಮುಚ್ಚಿಟ್ಟು ತಮಗೆ ತಾವು ಮೋಸ ಮಾಡಿಕೊಳ್ಳಬಾರದು. ಧರ್ಮರಾಜ ತಂದೆಯೊಂದಿಗೆ ಸದಾ ಸತ್ಯವಾಗಿರಬೇಕಾಗಿದೆ. |
2. ಜ್ಞಾನ ಚಿತೆಯ ಮೇಲೆ ಕುಳಿತು ಈ ವಿದ್ಯೆಯಲ್ಲಿ ರೇಸ್ ಮಾಡಿ ಭವಿಷ್ಯ ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಯೋಗಾಗ್ನಿಯಿಂದ ವಿಕರ್ಮಗಳ ಖಾತೆಯನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿ. ಈ ಎರಡನ್ನೂ ಯಾರು ಹೇಳುತ್ತಾರೆ? ಒಬ್ಬರು ತಂದೆ, ಇನ್ನೊಬ್ಬರು ದಾದಾ. ಒಬ್ಬ ರಾಜನಿದ್ದನು, ಒಬ್ಬ ರಾಣಿಯಿದ್ದಳು ಎಂದು ಕಥೆಯನ್ನು ಹೇಳುತ್ತಾರಲ್ಲವೆ. ಈಗ ಇವು ಹೊಸ ಮಾತುಗಳಾಗಿವೆ. ಒಬ್ಬರು ತಂದೆ, ಇನ್ನೊಬ್ಬರು ದಾದಾ, ನೀವು ಹೇಳುತ್ತೀರಿ - 5000 ವರ್ಷಗಳು ಮೊದಲೂ ಸಹ ಒಬ್ಬರು ಶಿವ ತಂದೆಯಿದ್ದರು, ಇನ್ನೊಬ್ಬರು ಬ್ರಹ್ಮಾದಾದಾ ಇದ್ದರು. ಶಿವನಿಗಂತೂ ಎಲ್ಲರೂ ಮಕ್ಕಳಾಗಿದ್ದಾರ... |
ತಂದೆಯು ತಿಳಿಸುತ್ತಾರೆ - ನೀವು ಎಷ್ಟು ಸನ್ಮುಖದಲ್ಲಿ ಬರುತ್ತಾ ಹೋಗುತ್ತೀರೋ ಆಗ ಇದೆಲ್ಲವನ್ನೂ ತಿಳಿದುಕೊಳ್ಳುತ್ತೀರಿ, ಇಂದು ನಾವು ಇಲ್ಲಿದ್ದೇವೆ, ನಾಳೆ ವಿನಾಶವಾದರೆ ಮತ್ತೆ ಸತ್ಯಯುಗದಲ್ಲಿ ನಾವು ಕೆಲವರೇ ದೇವಿ-ದೇವತೆಗಳಿರುತ್ತೇವೆ ನಂತರದಲ್ಲಿ ವೃದ್ಧಿಯಾಗುತ್ತದೆ. ಸತ್ಯಯುಗದ ದೃಶ್ಯಗಳೂ ಕಂಡು ಬರುತ್ತವೆ. ಬಾಕಿ ಲಕ್ಷಾಂತರ ಮಂದಿ ಹೋಗಿ ಇರುತ್ತಾರೆ. ಲಕ್ಷವಾದರೂ ಇರಬಹುದು ಅಥವಾ 9-10 ಲಕ್ಷವಾ... |
ನೀವೀಗ ಸಂಗಮದಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಸಂಗಮಕ್ಕೆ ಕಲ್ಯಾಣಕಾರಿ ಯುಗವೆಂದು ಹೇಳಲಾಗುತ್ತದೆ. ಸಂಗಮದ್ದೇ ಗಾಯನವಿದೆ – ಗಂಗಾ ಸಾಗರದ ಮೇಳವನ್ನು ತೋರಿಸುತ್ತಾರೆ. ಅದೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಇವರು ಜ್ಞಾನ ಸಾಗರ ಮತ್ತು ಜ್ಞಾನ ಸಾಗರನಿಂದ ಹೊರಟಿರುವ ಜ್ಞಾನ ಗಂಗೆಯರಾಗಿದ್ದೀರಿ. ಜ್ಞಾನ ಸಾಗರದೊಂದಿಗೆ ಪತಿತ-ಪಾವನ ಶಬ್ಧವು ಅನ್ವಯಿಸುತ್ತದೆ. ಮನುಷ್ಯರು ಪತಿತ-ಪಾವನಿ ಗಂಗೆಯೆಂದ... |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಿರುವುದೇ ಸ್ಥಾಪನೆ ಮತ್ತು ವಿನಾಶ ಮಾಡಿಸಲು ಅಂದಮೇಲೆ ಅವಶ್ಯವಾಗಿ ಇದೆಲ್ಲವೂ ಆಗುವುದು. ಪುರುಷಾರ್ಥ ಮಾಡಲು ಈಗ ಸಮಯವಿದೆ, ಮಾಯೆಯು ಪದೇ-ಪದೇ ನಿಮ್ಮ ಬುದ್ಧಿಯೋಗವನ್ನು ತುಂಡರಿಸುತ್ತದೆ, ಬಹುಷಃ ನೀವಿನ್ನೂ ಅಡೋಲ ಹಾಗೂ ಸ್ಥಿರವಾಗಿಲ್ಲ. ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಕೆಲವರಂತೂ ಇಡೀ ದಿನದಲ್ಲಿ ಒಂದು ಗಂಟೆ ಅಥವಾ ಅರ್ಧ ಗಂಟೆಯೂ ಸ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕೊನೆಪಕ್ಷ 8 ಗಂಟೆಗಳ ಕಾಲ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಸ್ಥಿತಿಯನ್ನು ಅಚಲ, ಅಡೋಲವಾಗಿಟ್ಟುಕೊಳ್ಳಲು ನೆನಪಿನ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಹುಡುಗಾಟಿಕೆ ಮಾಡಬಾರದು. |
2. ಈ ನಾಟಕವು ಬಹಳ ನಿಖರವಾಗಿ ಮಾಡಲ್ಪಟ್ಟಿದೆ, ಆದ್ದರಿಂದ ಯಾರ ಮೇಲೂ ಬೇಸರ ಪಡಬಾರದು. ನಿಶ್ಚಯ ಬುದ್ಧಿಯವರಾಗಬೇಕಾಗಿದೆ. |
ಡಬಲ್ ವಿದೇಶಿ ಬ್ರಾಹ್ಮಣ ಮಕ್ಕಳ ವಿಶೇಷತೆಗಳು |
ಇಂದು ಭಾಗ್ಯವಿದಾತ ಬಾಪ್ದಾದಾ ತನ್ನ ಶ್ರೇಷ್ಠ ಭಾಗ್ಯಶಾಲಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಮಗುವಿನ ಭಾಗ್ಯವಂತೂ ಶ್ರೇಷ್ಠವಾಗಿಯೇ ಇದೆ ಆದರೆ ಅದರಲ್ಲಿಯೂ ನಂಬರ್ವಾರ್ ಇದೆ. ಇಂದು ಬಾಪ್ದಾದಾ ಎಲ್ಲಾ ಮಕ್ಕಳ ಹೃದಯದ ಉಲ್ಲಾಸ-ಉತ್ಸಾಹದ ಧೃಡ ಸಂಕಲ್ಪವನ್ನು ಕೇಳುತ್ತಿದ್ದರು. ಸಂಕಲ್ಪದ ಮೂಲಕ ಯಾರೆಲ್ಲರೂ ವಾರ್ತಾಲಾಪ ಮಾಡಿದರೋ ಅವರು ಬಾಪ್ದಾದಾರವರ ಬಳಿ ಸಂಕಲ್ಪ ಮಾಡುತ್ತಿದ್ದಂ... |
ಬಾಪ್ದಾದಾರವರ ಬಳಿ ಎಲ್ಲರ ಸಂತುಷ್ಟತೆಯ ಹಾಗೂ ಖುಷಿಯಾಗಿರುವ, ನಿರ್ವಿಘ್ನರಾಗಿರುವ, ಸದಾ ತಂದೆಯ ಸಮಾನರಾಗುವ ಶ್ರೇಷ್ಠ ಸಂಕಲ್ಪಗಳು ತಲುಪಿದವು ಮತ್ತು ಬಾಪ್ದಾದಾ ಮಕ್ಕಳಿಗೆ ಧೃಡ ಸಂಕಲ್ಪದ ಮೂಲಕ ಸದಾ ಸಫಲತೆಯ ಶುಭಾಷಯಗಳನ್ನು ಕೊಡುತ್ತಿದ್ದಾರೆ ಏಕೆಂದರೆ ಎಲ್ಲಿ ಧೃಡತೆಯಿದೆಯೋ ಅಲ್ಲಿ ಸಫಲತೆಯಿದ್ದೇ ಇದೆ. ಇದು ಶ್ರೇಷ್ಠ ಭಾಗ್ಯವಂತರಾಗುವ ಚಿಹ್ನೆಯಿದೆ. ಸದಾ ಧೃಡತೆ, ಶ್ರೇಷ್ಠತೆಯಿರಲಿ. ಸಂಕಲ್ಪದಲ್ಲ... |
ಮುರುಳಿಗಳನ್ನಂತೂ ಬಹಳ ಕೇಳಿದ್ದೀರಿ, ಈಗ ಯಾವುದನ್ನು ಕೇಳಿದ್ದೀರೋ ಅದನ್ನು ಮಾಡಬೇಕಾಗಿದೆ ಏಕೆಂದರೆ ಈ ಸಾಕಾರ ಸೃಷ್ಟಿಯಲ್ಲಿ ಸಂಕಲ್ಪ, ಮಾತು ಮತ್ತು ಕರ್ಮ - ಈ ಮೂರಕ್ಕೂ ಮಹತ್ವಿಕೆಯಿದೆ ಮತ್ತು ಮೂರರಲ್ಲಿಯೂ ಮಹಾನತೆಯಿರುವುದು - ಇದಕ್ಕೇ ಸಂಪನ್ನ ಸ್ಥಿತಿ ಎಂದು ಹೇಳಲಾಗುತ್ತದೆ. ಈ ಸಾಕಾರ ಸೃಷ್ಟಿಯಲ್ಲಿಯೇ ಪೂರ್ಣ ಅಂಕಗಳನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಒಂದುವೇಳೆ ಯಾರಾದರೂ ನನ್ನ ... |
ಬಾಪ್ದಾದಾ ಡಬಲ್ ವಿದೇಶಿ ಮಕ್ಕಳನ್ನು ನೋಡಿ ಸದಾ ಮಕ್ಕಳ ವಿಶೇಷತೆಗಾಗಿ ಹರ್ಷಿತರಾಗುತ್ತೇವೆ. ಆ ವಿಶೇಷತೆಯೇನಾಗಿದೆ? ಹೇಗೆ ಬ್ರಹ್ಮಾ ತಂದೆಯ ಶ್ರೇಷ್ಠ ಸಂಕಲ್ಪದ ಮೂಲಕ ಹಾಗೂ ಶ್ರೇಷ್ಠ ಸಂಕಲ್ಪದ ಆಹ್ವಾನದ ಮೂಲಕ ದಿವ್ಯ ಜನ್ಮವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ ಅದೇರೀತಿ ಶ್ರೇಷ್ಠ ಸಂಕಲ್ಪದ ವಿಶೇಷ ರಚನೆಯಾಗಿರುವ ಕಾರಣ ತನ್ನ ಸಂಕಲ್ಪಗಳನ್ನು ಶ್ರೇಷ್ಠ ಮಾಡಿಕೊಳ್ಳುವುದರಲ್ಲಿ ವಿಶೇಷ ಗಮನವನ್ನು ಇಟ್... |
ಎರಡನೇ ವಿಶೇಷತೆಯಾಗಿದೆ - ಜನ್ಮ ಪಡೆಯುತ್ತಿದ್ದಂತೆಯೇ ಆಸ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾ ಸೇವೆಯ ಉಲ್ಲಾಸ-ಉತ್ಸಾಹವು ಸ್ವತಹ ಬರುತ್ತದೆ. ಸೇವೆಯಲ್ಲಿ ತೊಡಗುವುದರಿಂದ ಮೊದಲನೆಯದಾಗಿ ಸೇವೆಯ ಪ್ರತ್ಯಕ್ಷ ಫಲ ‘ಖುಷಿ’ಯೂ ಸಿಗುತ್ತದೆ ಮತ್ತು ಸೇವೆಯಿಂದ ವಿಶೇಷ ಬಲವೂ ಸಿಗುತ್ತದೆ ಹಾಗೂ ಸೇವೆಯಲ್ಲಿ ಬ್ಯುಜಿಯಾಗಿರುವ ಕಾರಣ ನಿರ್ವಿಘ್ನರಾಗುವುದರಲ್ಲಿಯೂ ಸಹಯೋಗ ಸಿಗುತ್ತದೆ ಅಂದಾಗ ಸೇವೆಯ ಉಲ್ಲಾಸ-ಉತ್ಸಾ... |
ಬಾಪ್ದಾದಾ ಸದಾ ಹೇಳುತ್ತೇವೆ - ಪತ್ರವನ್ನು ಬರೆಯುವಾಗ ಕೇವಲ ಎರಡು ಅಕ್ಷರದ ಪತ್ರವು ಸದಾ ತಂದೆಗೆ ಬರೆಯಿರಿ. ಆ ಎರಡು ಶಬ್ಧಗಳು ಯಾವುದಾಗಿದೆ? ಓ.ಕೆ. ಆಗ ಇಷ್ಟೊಂದು ಕಾಗದಗಳು, ಶಾಹಿ (ಇಂಕು) ಮತ್ತು ಸಮಯ ಯಾವುದೂ ವ್ಯರ್ಥವಾಗುವುದಿಲ್ಲ, ಎಲ್ಲವೂ ಉಳಿತಾಯವಾಗುವುದು. ಓ.ಕೆ. ಅರ್ಥಾತ್ ಓ (o) ಎಂದರೆ ತಂದೆಯ ನೆನಪೂ ಇದೆ ಮತ್ತು ಕೆ (ಞ) ಎಂದರೆ ಕಿಂಗ್ಡಮ್ ಅರ್ಥಾತ್ ರಾಜ್ಯವೂ ನೆನಪಿದೆ. ಓ (o) ಎಂದು ... |
ಇಂದು ಮೊದಲ ಗ್ರೂಪ್ನ ಕೊನೆಯ ದಿನವಾಗಿದೆ. ಸಮಸ್ಯೆಗಳೆಲ್ಲವೂ ಸಮಾಪ್ತಿಯಾಯಿತು ಬಾಕಿ ಟೋಲಿಯನ್ನು ತಿನ್ನಬೇಕು ಮತ್ತು ತಿನ್ನಿಸಬೇಕಾಗಿದೆ. ಇನ್ನೇನು ಉಳಿಯಿತು? ಈಗ ಅನ್ಯರನ್ನು ಆ ರೀತಿ ಮಾಡಬೇಕಾಗಿದೆ. ಸೇವೆಯನ್ನಂತೂ ಮಾಡಬೇಕಲ್ಲವೆ. ನಿರ್ವಿಘ್ನ ಸೇವಾಧಾರಿಗಳಾಗಿರಿ. ಒಳ್ಳೆಯದು - |
ಸದಾ ತಂದೆಯ ಸಮಾನರಾಗುವ ಉಲ್ಲಾಸ-ಉತ್ಸಾಹದಿಂದ ಹಾರುವವರು, ಸದಾ ಸ್ವಯಂನ್ನು ಪರಿಶೀಲನೆ ಮಾಡಿ ಪರಿವರ್ತನೆ ಮಾಡಿಕೊಂಡು ಸಂಪೂರ್ಣರಾಗುವವರು, ಸದಾ ಸಂಕಲ್ಪ, ಮಾತು ಮತ್ತು ಕರ್ಮ - ಮೂರರಲ್ಲಿಯೂ ಶ್ರೇಷ್ಠರಾಗುವವರು, ಸದಾ ಸ್ವಚ್ಚತೆಯ ಮೂಲಕ ಶ್ರೇಷ್ಠತೆಯನ್ನು ಧಾರಣೆ ಮಾಡಿಕೊಳ್ಳುವವರು - ಇಂತಹ ತೀವ್ರ ಗತಿಯಿಂದ ಹಾರುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಆಸ್ಟ್ರೇಲಿಯಾದ ಚಿಕ್ಕ ಮಕ್ಕಳೊಂದಿಗೆ ಬಾಪ್ದಾದಾರವರ ವಾರ್ತಾಲಾಪ: |
ಎಲ್ಲರೂ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಲ್ಲವೆ. ನಿತ್ಯವೂ ವಿದ್ಯಾಭ್ಯಾಸ ಮಾಡುತ್ತೀರಾ? ಹೇಗೆ ಆ ವಿದ್ಯೆಯನ್ನು ನಿತ್ಯವೂ ಓದುತ್ತೀರೋ ಅದೇರೀತಿ ಇದನ್ನೂ ಅಭ್ಯಾಸ ಮಾಡುತ್ತೀರಾ? ಮುರುಳಿಯನ್ನು ಕೇಳುವುದು ಇಷ್ಟವಾಗುತ್ತದೆಯೇ? ಮುರುಳಿಯು ಅರ್ಥವಾಗುತ್ತಿದೆಯೇ? ತಂದೆಯನ್ನು ನಿತ್ಯವೂ ನೆನಪು ಮಾಡುತ್ತೀರಾ? ಮುಂಜಾನೆ ಏಳುತ್ತಿದ್ದಂತೆಯೇ ಗುಡ್ಮಾರ್ನಿಂಗ್ ಹೇಳುತ್ತೀರಾ? ಈ ಗುಡ್ಮಾರ್ನಿಂಗ್ ಹೇಳುವುದನ... |
ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ಬಾಪ್ದಾದಾರವರ ಮೂಲಕ ವರದಾನದ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು: |
1. ತಂದೆಯವರ ಮೂಲಕ ಸಿಕ್ಕಿರುವ ಸರ್ವ ಖಜಾನೆಗಳನ್ನು, ಸರ್ವ ಆತ್ಮರುಗಳಿಗಾಗಿ ಉಪಯೋಗಿಸುವಂತಹ, ಸಂಪನ್ನರಾಗಿದ್ದು ಅನ್ಯರನ್ನೂ ಸಂಪನ್ನರನ್ನಾಗಿ ಮಾಡುವಂತಹ ಆತ್ಮರಾಗಿದ್ದೀರಿ. ತಾವೆಷ್ಟು ಖಜಾನೆಗಳಿಂದ ಸಂಪನ್ನರಾಗಿದ್ದೀರಿ? ಯಾರು ಸಂಪನ್ನವಾಗಿ ಇರುತ್ತಾರೆಯೋ ಅವರು ಸದಾ ಹಂಚುತ್ತಾರೆ. ಅವಿನಾಶಿ ಭಂಡಾರವನ್ನಿಡಲಾಗಿದೆ, ಯಾರೇ ಬರುವರು ಸಂಪನ್ನರಾಗಿ ಹೋಗಲಿ, ಯಾರೂ ಸಹ ಖಾಲಿಯಾಗಿ ಹೋಗಲು ಸಾಧ್ಯವಿಲ್ಲ -... |
2. ಡ್ರಾಮಾನುಸಾರ ಸೇವೆಯ ವರದಾನವೂ ಸಹ ಸದಾ ಮುಂದುವರೆಸುತ್ತದೆ. ಒಂದು - ಯೋಗ್ಯತೆಯ ಮೂಲಕ ಸೇವೆಯ ಪ್ರಾಪ್ತಿಯಾಗುವುದು ಮತ್ತು ಇನ್ನೊಂದು - ವರದಾನದ ಮೂಲಕ ಸೇವೆಯ ಪ್ರಾಪ್ತಿಯಾಗುವುದು. ಸ್ನೇಹವೂ ಸಹ ಸೇವೆಯ ಸಾಧನವಾಗುತ್ತದೆ. ಭಲೆ ಭಾಷೆಯು ಗೊತ್ತಿಲ್ಲದೇ ಇರಬಹುದು ಆದರೆ ಸ್ನೇಹದ ಭಾಷೆಯಂತು ಎಲ್ಲಾ ಭಾಷೆಗಳಿಗಿಂತಲೂ ಶ್ರೇಷ್ಠವಾದುದು. ಆದ್ದರಿಂದ ಸ್ನೇಹಿ ಆತ್ಮನಿಗೆ ಸದಾ ಸಫಲತೆಯು ಸಿಗುತ್ತದೆ. ಸ್ನ... |
3. ಸ್ನೇಹದ ವರದಾನವೂ ಸಹ ಸೇವೆಗೆ ನಿಮಿತ್ತರನ್ನಾಗಿ ಮಾಡಿ ಬಿಡುತ್ತದೆ. ತಂದೆಯೊಂದಿಗೆ ಸ್ನೇಹವಿದೆಯೆಂದರೆ ಅನ್ಯರನ್ನೂ ತಂದೆಯ ಸ್ನೇಹಿಯನ್ನಾಗಿ ಮಾಡುತ್ತಾ, ಸಮೀಪಕ್ಕೆ ಕರೆದುಕೊಂಡು ಬರುತ್ತೀರಿ. ತಂದೆಯ ಸ್ನೇಹವು ಯಾವ ರೀತಿ ತಮ್ಮನ್ನು ತಂದೆಯ ಮಗುವನ್ನಾಗಿಸಿತು, ಅದರಿಂದ ಎಲ್ಲವೂ ಮರೆತು ಹೋಯಿತು. ಅದೇರೀತಿ ತಾವು ಅನುಭವಿಯಾಗಿ ಅನ್ಯರನ್ನೂ ಅನುಭವಿಯನ್ನಾಗಿ ಮಾಡುತ್ತಿರಿ. ಸದಾ ತಂದೆಯ ಸ್ನೇಹದಲ್ಲಿ... |
4. ಪ್ರತೀ ಹೆಜ್ಜೆಯಲ್ಲಿ ತಂದೆಯವರ ಜೊತೆ ಅನುಭವವನ್ನು ಮಾಡುವವರಲ್ಲವೆ. ಯಾವ ಮಕ್ಕಳನ್ನು ತಂದೆಯವರು ವಿಶೇಷ ಸೇವಾರ್ಥವಾಗಿ ನಿಮಿತ್ತರನ್ನಾಗಿ ಮಾಡಿದ್ದಾರೆಂದರೆ, ನಿಮಿತ್ತರಾಗುವುದರ ಜೊತೆ ಜೊತೆಗೆ ಸೇವೆಯ ಪ್ರತೀ ಹೆಜ್ಜೆಯಲ್ಲಿ ಸಹಯೋಗಿಯೂ ಆಗುತ್ತಾರೆ. ಭಾಗ್ಯವಿದಾತನು ಪ್ರತಿಯೊಂದು ಮಕ್ಕಳಿಗೂ ಭಾಗ್ಯದ ವಿಶೇಷತೆಯನ್ನು ಕೊಟ್ಟಿದ್ದಾರೆ. ಆ ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಸದಾಕಾಲ ಮುಂದ... |
5. ಸದಾ ಹೃದಯದಲ್ಲಿ ತಂದೆಯ ಸಮಾನರಾಗುವ ಉಮ್ಮಂಗವು ಇರುತ್ತದೆಯಲ್ಲವೇ? ಯಾವಾಗ ಸಮಾನರಾಗುವಿರಿ ಆಗಲೇ ಸಮೀಪವಿರುತ್ತೀರಿ, ಸಮೀಪವಂತು ಇರಲೇಬೇಕು ಅಲ್ಲವೆ. ಸಮೀಪವಿರುವವರ ಬಳಿ ಸಮಾನರಾಗುವ ಉಮ್ಮಂಗವು ಇದ್ದೇ ಇರುತ್ತದೆ ಮತ್ತು ಸಮಾನರಾಗುವುದು ಕಷ್ಟವಾಗುವುದಿಲ್ಲ. ಆದರೆ ಕೇವಲ ಯಾವುದೇ ಕರ್ಮವನ್ನು ಮಾಡುವಿರೆಂದರೆ, ಮಾಡುವುದಕ್ಕೆ ಮೊದಲು ಇದನ್ನು ಸ್ಮೃತಿಯಲ್ಲಿ ತಂದುಕೊಳ್ಳಬೇಕು - ಈ ಕರ್ಮವನ್ನು ತಂದೆ... |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ಬಾಬಾ, ನಾವು ಎಲ್ಲಿಂದ ಬಂದೆವು ಯಾವಾಗ ಬಂದೆವು ಮತ್ತೆ ಹಿಂತಿರುಗಿ ಹೋಗುವ ಮಾರ್ಗವನ್ನು ಹೇಗೆ ಮರೆತೆವು ಎಂದು ಈ ಡ್ರಾಮಾವನ್ನು ಕಿವಿಗಳಲ್ಲಿ ತಿಳಿಸಿಬಿಡಿ. ನಾವು ಯಾರಾಗಿದ್ದೇವೆ, ಎಲ್ಲಿಂದ ಬಂದೆವು ಮತ್ತು ಎಲ್ಲಿಗೆ ಹೊರಟು ಹೋದೆವು! ಒಂದು ಜ್ಞಾನದ ಹನಿಯನ್ನಾದರೂ ಕೊಟ್ಟು ಬಿಡಿ ಏಕೆಂದರೆ ಜ್ಞಾನ ಸಾಗರನಲ್ಲವೆ. ಈಗ ಮಕ್ಕಳಿಗೆ ... |
ತಂದೆಯು ತಿಳಿಸುತ್ತಾರೆ - ನಾನು ಬಂದು ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇನೆ. ನೀವೀಗ ಸರ್ವಗುಣ ಸಂಪನ್ನರಾಗಬೇಕಾಗಿದೆ, ಅಲ್ಲಿಯವರೆಗೂ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ. ಇಲ್ಲಿಯೇ ಆಗಬೇಕಾಗಿದೆ ಮತ್ತೆ ಭವಿಷ್ಯದಲ್ಲಿ ಹೋಗಿ ನೀವು ರಾಜ್ಯಭಾರ ಮಾಡುವಿರಿ. ಅದರ ಮಧ್ಯದಲ್ಲಿ ಎಲ್ಲವೂ ವಿನಾಶವಾಗಿ ಬಿಡುವುದು. ವಿನಾಶವನ್ನೂ ಖಂಡಿತ ಮಾಡುತ್ತೀರಿ, ನೀವು ಪ್ರತ್ಯಕ್ಷದಲ್ಲಿ ತಮ್ಮ ಪಾತ್ರವನ್ನು ಅಭಿನಯಿಸ... |
ನಿಮಗೆ ಒಟ್ಟಾಗಿ ಹೇಳಲಾಗುತ್ತದೆ - ಸ್ಥಾಪನೆ ಮತ್ತು ವಿನಾಶವಾಗುವುದು. ವಿನಾಶವು ಹೇಗಾಗುವುದು? ಅದನ್ನೂ ಯಾವಾಗ ಆಗುವುದೋ ಆಗಲೇ ನೋಡುತ್ತೀರಿ, ದಿವ್ಯ ದೃಷ್ಟಿಯಿಂದ ವಿನಾಶವನ್ನಂತೂ ನೋಡಿದ್ದೀರಿ, ಮುಂದೆ ಹೋದಂತೆ ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಸ್ಥಾಪನೆಯ ಸಾಕ್ಷಾತ್ಕಾರವನ್ನು ದಿವ್ಯ ದೃಷ್ಟಿಯಿಂದ ನೋಡಿದ್ದೀರಿ ಮತ್ತು ಪ್ರತ್ಯಕ್ಷದಲ್ಲಿಯೂ ನೋಡುತ್ತೀರಿ ಆದ್ದರಿಂದ ಹೆಚ್ಚು ಧ್ಯಾನದಲ್ಲಿ ಹೋಗುವುದ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಿರಬೇಕಾಗಿದೆ. ಮಹಾವೀರರಾಗಿ ಮಾಯೆಯ ಯುದ್ಧದಲ್ಲಿ ವಿಜಯಿಗಳಾಗಬೇಕಾಗಿದೆ. ಎಲ್ಲರ ಜೊತೆ ಸಂಬಂಧ ನಿಭಾಯಿಸುತ್ತಾ ಬುದ್ಧಿಯೋಗವು ಒಬ್ಬ ತಂದೆಯಲ್ಲಿರಬೇಕಾಗಿದೆ. |
2. ವಿಘ್ನಗಳಿಗೆ ಹೆದರಬಾರದು. ಸೇವೆಯಲ್ಲಿ ತಮ್ಮದೆಲ್ಲವನ್ನೂ ಸಫಲ ಮಾಡಬೇಕಾಗಿದೆ. ಈಶ್ವರಾರ್ಪಣೆ ಮಾಡಿ ಟ್ರಸ್ಟಿಯಾಗಿರಬೇಕಾಗಿದೆ. ಉಲ್ಟಾ-ಸುಲ್ಟಾ ಕಾರ್ಯದಲ್ಲಿ ಹಣವನ್ನು ತೊಡಗಿಸಬಾರದು. |
Subsets and Splits
No community queries yet
The top public SQL queries from the community will appear here once available.