text
stringlengths
0
61.5k
ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆ
ಇಂದು ವಿಶ್ವಕಲ್ಯಾಣಕಾರಿ ಬಾಪ್ದಾದಾ ತನ್ನ ವಿಶ್ವಕಲ್ಯಾಣಕಾರಿ ಜೊತೆಗಾರರನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳು ತಂದೆಯ ವಿಶ್ವಕಲ್ಯಾಣದ ಕಾರ್ಯದಲ್ಲಿ ನಿಮಿತ್ತರಾಗಿರುವ ಜೊತೆಗಾರರಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಸದಾ ಇದೊಂದೇ ಸಂಕಲ್ಪವಿದೆ - ವಿಶ್ವದ ವ್ಯಾಕುಲರಾಗಿರುವ ಆತ್ಮರ ಕಲ್ಯಾಣವಾಗಲಿ. ನಡೆಯುತ್ತಾ-ತಿರುಗಾಡುತ್ತಾ ಯಾವುದೇ ಕಾರ್ಯ ಮಾಡುತ್ತಾ ಮನಸ್ಸಿನಲ್ಲಿ ಇದೇ ಶುಭ ಭಾವನೆಯಿದೆ. ಭಕ್ತ...
ಶುಭಕಾಮನೆಯಿಲ್ಲದೆ ಶುಭಭಾವನೆಯಿರಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನ ಪ್ರತಿ ಸದಾ ಇದೇ ದಯೆಯ ಕಾಮನೆಯಿರುತ್ತದೆ - ಈ ಆತ್ಮನೂ ಸಹ ಆಸ್ತಿಗೆ ಅಧಿಕಾರಿಯಾಗಿ ಬಿಡಲಿ. ಪ್ರತಿಯೊಂದು ಆತ್ಮನ ಪ್ರತಿ ಇವರು ನಮ್ಮ ಈಶ್ವರೀಯ ಪರಿವಾರದವರೇ ಆಗಿದ್ದಾರೆ ಅಂದಮೇಲೆ ಇವರಿಂದ ವಂಚಿತರಾಗಿ ಏಕೆ ಉಳಿಯಬೇಕೆಂದು ದಯೆ ಬರುತ್ತದೆ, ಶುಭಕಾಮನೆ ಇರುತ್ತದೆಯಲ್ಲವೇ. ಶುಭಕಾಮನೆ ಮತ್ತು ಶುಭಭಾವನೆ ಇದು ಸೇವೆಯ ಫೌಂಡೇಷನ್ ಆ...
ಶುಭಭಾವನೆ ಅರ್ಥಾತ್ ಶಕ್ತಿಶಾಲಿ ಸಂಕಲ್ಪ. ಎಲ್ಲಾ ಶಕ್ತಿಗಳಿಗಿಂತ ಸಂಕಲ್ಪದ ಗತಿಯು ತೀವ್ರವಾಗಿದೆ. ಎಷ್ಟಾದರೂ ವಿಜ್ಞಾನವು ತೀವ್ರಗತಿಯ ಸಾಧನಗಳನ್ನು ತಯಾರಿಸಿರಬಹುದು ಆದರೆ ಅವೆಲ್ಲವುಗಳಿಗಿಂತಲೂ ಸಂಕಲ್ಪ ಶಕ್ತಿಯು ತೀವ್ರಗತಿಯದಾಗಿದೆ. ಯಾವುದೇ ಆತ್ಮನ ಪ್ರತಿ ಅಥವಾ ಬೇಹದ್ದಿನ ವಿಶ್ವದ ಆತ್ಮನ ಪ್ರತಿ ಶುಭಭಾವನೆಯನ್ನು ಇಡುತ್ತೀರಿ ಅರ್ಥಾತ್ ಶಕ್ತಿಶಾಲಿ ಶುಭ ಮತ್ತು ಶುದ್ಧ ಸಂಕಲ್ಪ ಮಾಡುತ್ತೀರಿ - ...
ಏಕಾಂತ ಪ್ರಿಯ ಆತ್ಮರು ಎಷ್ಟಾದರೂ ಬ್ಯುಜಿಯಾಗಿರಲಿ ಆದರೆ ಮಧ್ಯ-ಮಧ್ಯದಲ್ಲಿ ಒಂದು ಘಳಿಗೆ, ಎರಡು ಘಳಿಗೆಗಳನ್ನು ತೆಗೆದು ಏಕಾಂತದ ಅನುಭವ ಮಾಡುತ್ತಾರೆ. ಏಕಾಂತ ಪ್ರಿಯ ಆತ್ಮನು ಇಂತಹ ಶಕ್ತಿಶಾಲಿಗಳು ಆಗಿ ಬಿಡುತ್ತಾರೆ. ತಮ್ಮ ಸೂಕ್ಷ್ಮ ಶಕ್ತಿಗಳು ಮನಸ್ಸು-ಬುದ್ಧಿಯಿಂದ ಯಾವ ಸಮಯದಲ್ಲಿ ಬೇಕೋ, ಎಲ್ಲಿ ಬೇಕೋ ಏಕಾಗ್ರ ಮಾಡಲು ಸಾಧ್ಯವಾಗುತ್ತದೆ. ಹೊರಗಿನ ಪರಿಸ್ಥಿತಿಯು ಏರುಪೇರಿನದಾಗಿದ್ದರೂ ಸಹ ಏಕಾಂತ...
ಟೀಚರ್ಸ್ನ ಕೆಲಸವೇ ಆಗಿದೆ - ಸೇವೆ. ಟೀಚರ್ಸ್ನ ಮಹತ್ವಿಕೆಯೇ ಸೇವೆಯಾಗಿದೆ. ಒಂದುವೇಳೆ ಸೇವೆಯ ಪ್ರತ್ಯಕ್ಷ ಪ್ರಮಾಣವು ಕಾಣುವುದಿಲ್ಲವೆಂದರೆ ಅವರನ್ನು ಯೋಗ್ಯ ಶಿಕ್ಷಕಿಯ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಟೀಚರ್ಸ್ನ ಮಹಾನತೆಯೇ ಸೇವೆಯಾಯಿತಲ್ಲವೇ ಆದ್ದರಿಂದ ಸೇವೆಯ ಸೂಕ್ಷ್ಮ ರೂಪವನ್ನು ತಿಳಿಸಿದೆವು. ಮುಖದ (ವಾಚಾ) ಸೇವೆಯನ್ನಂತೂ ಮಾಡುತ್ತಲೇ ಇರುತ್ತೀರಿ ಆದರೆ ಮುಖ ಮತ್ತು ಮನಸ್ಸಿನ ಶುಭಭಾವನೆಯ ...
ಕುಮಾರಿಯರೂ ಬಂದಿದ್ದಾರೆ. ಕುಮಾರಿಯರು ಅರ್ಥಾತ್ ಮುಂದೆ ಆಗಲಿರುವ ಟೀಚರ್ಸ್ ಆದ್ದರಿಂದಲೇ ಬ್ರಹ್ಮಾಕುಮಾರಿಯರೆಂದು ಹೇಳುತ್ತಾರೆ. ಒಂದುವೇಳೆ ಮುಂದೆ ಆಗಲಿರುವ ಸೇವಾಧಾರಿಗಳಲ್ಲವೆಂದರೆ ಅಂತಹವರು ಬಿಡುಗಾಸಿನ ಕುಮಾರಿಯರು. ಕುಮಾರಿಯರು ಏನು ಮಾಡುತ್ತಾರೆ? ಬಿಡುಗಾಸಿನ ಹಿಂದೆ ನೌಕರಿಯ ಬುಟ್ಟಿಯನ್ನು ಹೊತ್ತುಕೊಳ್ಳುತ್ತಾರಲ್ಲವೇ. ಬಾಪ್ದಾದಾರವರಿಗೆ ಕುಮಾರಿಯರ ಮೇಲೆ ಬಹಳ ನಗುಬರುತ್ತದೆ - ಬುಟ್ಟಿಯ ಹೊರ...
ಕುಮಾರರೂ ಬಹಳ ಮಂದಿ ಬಂದಿದ್ದಾರೆ. ಕುಮಾರರು ಬಹಳ ವೇಗವಾಗಿ ಓಡುತ್ತಾರೆ. ಸೇವೆಯಲ್ಲಿಯೂ ಒಳ್ಳೆಯ ಉಮ್ಮಂಗದಿಂದ ಓಡುತ್ತಿರುತ್ತಾರೆ ಆದರೆ ಕುಮಾರರ ವಿಶೇಷತೆ ಮತ್ತು ಮಹಾನತೆಯು ಇದೇ ಆಗಿದೆ - ಆದಿಯಿಂದ ಇಲ್ಲಿಯವರೆಗೂ ನಿರ್ವಿಘ್ನ ಕುಮಾರರಾಗಿದ್ದೀರಾ? ಒಂದುವೇಳೆ ಕುಮಾರರು ನಿರ್ವಿಘ್ನ ಕುಮಾರರಾಗಿದ್ದರೆ ಇಂತಹವರು ಬಹಳ ಮಹಾನ್ ಎಂದು ಗಾಯನವಾಗುತ್ತದೆ ಏಕೆಂದರೆ ಪ್ರಪಂಚದವರೂ ಸಹ ಕುಮಾರಿಯರ ಬದಲು ಕುಮಾರ...
ಬಾಪ್ದಾದಾರವರಿಗೆ ಕುಮಾರರ ಮೇಲೆ ವಿಶೇಷ ಹೆಮ್ಮೆಯಿದೆ- ಒಂಟಿಯಾಗಿದ್ದರೂ ಸಹ ಪುರುಷಾರ್ಥದಲ್ಲಿ ನಡೆಯುತ್ತಿದ್ದಾರೆ. ಕುಮಾರರು ಪರಸ್ಪರ ಇಬ್ಬರು, ಮೂವರು ಜೊತೆಗಾರರಾಗಿ ಏಕೆ ನಡೆಯುವುದಿಲ್ಲ! ಸಂಗಾತಿಯು ಕೇವಲ ಸ್ತ್ರೀಯರೇ ಬೇಕಿಲ್ಲ, ಇಬ್ಬರು ಕುಮಾರರೂ ಸಹ ಇರಬಹುದು ಆದರೆ ಒಬ್ಬರು ಇನ್ನೊಬ್ಬರಿಗೆ ನಿರ್ವಿಘ್ನ ಜೊತೆಗಾರರಾಗಿ ಇರಬೇಕು. ಇನ್ನೂ ಆ ಶೌರ್ಯವನ್ನು ಯಾರೂ ತೋರಿಸಿಲ್ಲ. ಸಮಯದಲ್ಲಿ ಒಬ್ಬರು ಇನ...
ನಾಲ್ಕೂ ಕಡೆಯಲ್ಲಿನ ಸರ್ವ ಮಕ್ಕಳಿಗೆ ಸದಾ ಬಾಪ್ದಾದಾರವರು ತನ್ನ ಸ್ನೇಹದ, ಸಹಯೋಗದ ಛತ್ರಛಾಯೆಯ ಜೊತೆಗೆ ಹೃದಯದಿಂದ ಸೇವೆಗಳ ಶುಭಾಷಯಗಳನ್ನು ಕೊಡುತ್ತಿದ್ದಾರೆ. ದೇಶ-ವಿದೇಶದ ಸೇವೆಯ ಸಮಾಚಾರಗಳು ತಲುಪುತ್ತಿರುತ್ತವೆ. ಪ್ರತಿಯೊಬ್ಬ ಮಗುವು ತನ್ನ ಹೃದಯದ ಸಮಾಚಾರಗಳನ್ನೂ ತಿಳಿಸುತ್ತಿರುತ್ತಾರೆ. ವಿಶೇಷವಾಗಿ ಹೆಚ್ಚು ಪತ್ರಗಳು ವಿದೇಶದಿಂದ ಬರುತ್ತಿರುತ್ತವೆ. ಅಂದಾಗ ಸೇವಾ ಸಮಾಚಾರವನ್ನು ಕೊಡುವಂತಹ ಮ...
ಪತ್ರವನ್ನು ಬರೆಯುವುದರಲ್ಲಿ ವಿದೇಶಿಗಳು ಬಹಳ ಬುದ್ಧಿವಂತರಿದ್ದಾರೆ. ಬಹಳ ಬೇಗನೆ ಬರೆದು ಬಿಡುತ್ತಾರೆ. ಭಾರತವಾಸಿಗಳೂ ಸಹ ಬಹಳ ಉದ್ದವಾದ ಪತ್ರಗಳನ್ನು ಕಳುಹಿಸುವುದು ಪ್ರಾರಂಭಿಸಬಾರದು. ಬಾಪ್ದಾದಾರವರು ಹೇಳಿದ್ದಾರೆ - ಎರಡು ಶಬ್ಧಗಳಲ್ಲಿಯೇ ಬರೆಯಿರಿ. ಓ.ಕೆ (ಸಂಪೂರ್ಣವಾಗಿ ಚೆನ್ನಾಗಿದ್ದೇನೆ). ಸೇವಾ ಸಮಾಚಾರಗಳಿದ್ದರೆ ಬರೆಯಿರಿ, ಇಲ್ಲದಿದ್ದರೆ ಕೇವಲ ಓ.ಕೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ...
ಸರ್ವ ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆಯ ಮಹತ್ವಿಕೆಯನ್ನು ಅರಿತುಕೊಳ್ಳುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಓಂ ಶಾಂತಿ. ಈ ಗೀತೆಯನ್ನು ಭಕ್ತಿಮಾರ್ಗದಲ್ಲಿ ಹಾಡಿದ್ದಾರೆ. ಕೊನೆಗೆ ಇವೆಲ್ಲವೂ ನಿಂತು ಹೋಗುತ್ತದೆ, ಇದರ ಅವಶ್ಯಕತೆಯಿಲ್ಲ. ಒಂದು ಸೆಕೆಂಡಿನಲ್ಲಿ ತಂದೆಯಿಂದ ಆಸ್ತಿ ಸಿಗುತ್ತದೆ ಎಂದು ಗಾಯನವಿದೆ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ಜೀವನ್ಮುಕ್ತಿ ಅರ್ಥಾತ್ ಈ ದುಃಖಧಾಮದಿಂದ ಮುಕ್ತ, ಭ್ರಷ್ಟಾಚಾರಿತನದಿಂದ ಮುಕ್ತರಾಗಿ ನಂತರ ಏನಾಗುತ್ತೀರಿ? ಅದಕ್ಕಾ...
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೊಂದು ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ. ಈಗ ಮೃತ್ಯುಲೋಕವು ಸಮಾಪ್ತಿಯಾಗಿ ಅಮರಲೋಕದ ಸ್ಥಾಪನೆಯಾಗಲಿದೆ. ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಅಮರಕಥೆಯನ್ನು ಕೇಳುತ್ತಿದ್ದೀರಿ. ಸ್ತ್ರೀಯರು ಮತ್ತು ಪುರುಷರು ಇಬ್ಬರೂ ಅಮರರಾಗುತ್ತೀರಲ್ಲವೇ. ಇದಕ್ಕೆ ಅಮರಕಥೆಯೆಂದಾದರೂ ಹೇಳಿ, ಮೂರನೇ ನೇತ್ರದ ಕಥೆಯೆಂದಾದರೂ ಹೇಳಿ. ಬಹಳ ಮಟ್ಟಿಗೆ ಮಾತೆಯರೇ ಕಥೆಯನ್ನು ಕೇಳುತ್...
ಕೆಲವು ಮಕ್ಕಳು ಒಬ್ಬರಿನ್ನೊಬ್ಬರ ನಾಮ-ರೂಪದಲ್ಲಿ ಸಿಲುಕಿ ಸತ್ತು ಹೋಗುತ್ತಾರೆ. ಇಲ್ಲಿ ನಿಮ್ಮದು ದೈಹಿಕ ಪ್ರೀತಿಯಿರಬಾರದು, ನಿರಂತರ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರೊಂದಿಗೂ ಲೇವಾದೇವಿ ಇರಬಾರದು. ತಾವು ತಿಳಿಸಿ, ನಮಗೆ ಏಕೆ ಕೊಡುತ್ತೀರಿ? ನಿಮ್ಮ ಯೋಗವು ಶಿವ ತಂದೆಯೊಂದಿಗೆ ಇದೆಯಲ್ಲವೇ. ಅಂದಮೇಲೆ ಯಾರು ಡೈರೆಕ್ಟ್ ಕೊಡುವುದಿಲ್ಲವೋ ಅವರದು ಶಿವ ತಂದೆಯ ಬಳಿ ಜಮಾ ಆಗುವುದಿಲ್ಲ. ಬ್ರಹ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಜ್ಞಾನದ ಜೊತೆ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗಿದೆ. ಒಬ್ಬ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾವುದೇ ದೇಹಧಾರಿಯ ಹಿಂದೆ ದುರಾದೃಷ್ಟವಂತರಾಗಬಾರದು.
2. ಪರಸ್ಪರ ಯಾವುದೇ ಮಾತಿನ ಕಾರಣ ತಂದೆಯ ಸೇವೆಯನ್ನು ಬಿಡಬಾರದು. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ.
ಓಂ ಶಾಂತಿ. ಈ ಗೀತೆಯ ಸಾಲು ಮಕ್ಕಳನ್ನು ಜಾಗೃತ ಮಾಡಿ ಬಿಟ್ಟಿತು. ಏನು ಹೇಳಿತು? ಬುದ್ಧಿಯಲ್ಲಿ ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ - ನಾವು ತೀರ್ಥ ಯಾತ್ರೆಯಲ್ಲಿ ಇದ್ದೇವೆ ಮತ್ತು ನಮ್ಮ ಈ ಯಾತ್ರೆಯು ಎಲ್ಲದಕ್ಕಿಂತ ಭಿನ್ನವಾಗಿದೆ. ಈ ಯಾತ್ರೆಯನ್ನು ಮರೆಯಬೇಡಿ. ಎಲ್ಲವೂ ಯಾತ್ರೆಯ ಮೇಲೆ ಆಧಾರಿತವಾಗಿದೆ. ಮತ್ತೆಲ್ಲರೂ ತೀರ್ಥ ಯಾತ್ರೆಗಳನ್ನು ಮಾಡಿ ಮತ್ತೆ ಹಿಂತಿರುಗಿ ಬರುತ್ತಾರೆ ಮತ್ತು ಜನ್ಮ-ಜನ...
ಈಗ ನೀವು ಮಕ್ಕಳು ಆತ್ಮಿಕ ಯಾತ್ರೆಯಲ್ಲಿರಬೇಕಾಗಿದೆ, ನಾವೀಗ ಮನೆಗೆ ಹೋಗುತ್ತೇವೆ. ಇದಕ್ಕಾಗಿ ಇಲ್ಲಿ ಗಂಗಾ ಸ್ನಾನ ಮಾಡುವ ಅಥವಾ ಶಾಸ್ತ್ರಗಳನ್ನು ಓದುವ ಮಾತಿಲ್ಲ. ತಂದೆಯು ಒಂದೇ ಬಾರಿ ಬರುತ್ತಾರೆ. ಇಡೀ ಪ್ರಪಂಚವೂ ಸಹ ಒಂದೇ ಬಾರಿ ಪಾವನವಾಗುತ್ತದೆ. ಇದನ್ನೂ ತಿಳಿದುಕೊಂಡಿದ್ದೀರಿ - ಸತ್ಯಯುಗವು ಹೊಸ ಪ್ರಪಂಚ, ಕಲಿಯುಗವು ಹಳೆಯ ಪ್ರಪಂಚವಾಗಿದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ...
ನಿಕಟ ಭವಿಷ್ಯದಲ್ಲಿ ಶ್ರೇಷ್ಠಾಚಾರಿ ಭಾರತವಾಗಿ ಬಿಡುವುದು, ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಎಂದು ನೀವು ಹೇಳುತ್ತೀರಿ. ಈಗ ಎಷ್ಟೊಂದು ಜನಸಂಖ್ಯೆಯಿದೆ! ಮಹಾಭಾರತ ಯುದ್ಧವೂ ಸನ್ಮುಖದಲ್ಲಿದೆ. ಎಲ್ಲಾ ಆತ್ಮರು ಸೊಳ್ಳೆಗಳ ರೀತಿಯಲ್ಲಿ ಹೋಗುವರು. ಬೆಂಕಿಯು ಹತ್ತಿಕೊಳ್ಳುತ್ತಿದೆ. ಎಷ್ಟು ಸುಧಾರಣೆ ಮಾಡಲು ಪ್ರಯತ್ನ ಪಡುವರೋ ಅಷ್ಟೇ ಶತ್ರುಗಳಾಗುತ್ತಾ ಹೋಗುತ್ತಾರೆ. ತಂದ...
ನೀವು ತಿಳಿದುಕೊಂಡಿದ್ದೀರಿ - ಯಾರಾದರೂ ಶರೀರ ಬಿಡುತ್ತಾರೆಂದರೆ ಹೋಗಿ ಇನ್ನೊಂದು ಪಾತ್ರವನ್ನು ಅಭಿನಯಿಸುತ್ತಾರೆ. ಇದರಲ್ಲಿ ಅಳುವುದರಿಂದ ಏನಾಗುವುದು! ಅವರು ಹೊರಟು ಹೋದರು ಅಂದಮೇಲೆ ಅವರು ಬಂದು ನಮ್ಮ ಚಿಕ್ಕಪ್ಪ, ದೊಡ್ಡಪ್ಪ, ಮಾವನಾಗುವರೇ? ಅಳುವುದರಿಂದ ಏನು ಲಾಭ! ಮಮ್ಮಾರವರೂ ಹೋದರು, ಡ್ರಾಮಾನುಸಾರ ಪಾತ್ರವನ್ನಭಿನಯಿಸುತ್ತಿದ್ದಾರೆ. ಹೀಗೆ ಅನೇಕರು ಹೋಗುತ್ತಾರೆ. ಎಲ್ಲಿಗೆ ಹೋಗಿ ಜನ್ಮ ತೆಗೆದ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಸಹ ಭಗವಂತನ ಆಜ್ಞೆಗಳ ಉಲ್ಲಂಘನೆ ಮಾಡಬಾರದು. ಬೇಹದ್ದಿನ ಸೇವೆಯಲ್ಲಿ ಸುಪುತ್ರ ಮಕ್ಕಳಾಗಿ ಸಹಯೋಗಿಗಳಾಗಬೇಕಾಗಿದೆ.
2. ಜ್ಞಾನ ಧನದ ಗುಪ್ತ ಖುಷಿಯಿಂದ ಬುದ್ಧಿಯನ್ನು ಸಂಪನ್ನವಾಗಿ ಇಟ್ಟುಕೊಳ್ಳಬೇಕಾಗಿದೆ, ಪರಸ್ಪರ ಎಂದೂ ಮುನಿಸಿಕೊಳ್ಳಬಾರದು.
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ಯಾರಾದರೂ ನಮ್ಮನ್ನು ಸಂಶಯ ಬುದ್ಧಿಯವರನ್ನಾಗಿ ಮಾಡಲು ಏನಾದರೂ ಮಾಡಲಿ ಆದರೆ ನಾವು ಸಂಶಯ ಬುದ್ಧಿಯವರಾಗುವುದಿಲ್ಲ, ಭಲೆ ಎಷ್ಟೇ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸಿದರೂ ಸಹ ಸಂಶಯ ಬುದ್ಧಿಯವರಾಗುವುದಿಲ್ಲ, ಶ್ರೀಮತದಂತೆ ನಡೆಯುತ್ತಾ ಇರುತ್ತೇವೆ. ತಂದೆಯು ಪ್ರತಿನಿತ್ಯವೂ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ...
ನೀವು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ನಮಗೆ ಪ್ರಜಾಪಿತ ಬ್ರಹ್ಮಾರವರ ತನುವಿನ ಮೂಲಕ ಜ್ಞಾನವನ್ನು ತಿಳಿಸುತ್ತಿದ್ದಾರೆ, ನಾವು ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ. ಮನೆಯೇ ಮೊದಲ ಪಾಠಶಾಲೆ, ನೆರೆಹೊರೆಯವರೆಲ್ಲರಿಗೂ ಸಂದೇಶ ಕೊಡಬೇಕಾಗಿದೆ, ಅನ್ಯ ಧರ್ಮದವರಿಗೂ ಸಹ ತಂದೆಯ ಪರಿಚಯ ಕೊಡಬೇಕಾಗಿದೆ. ವಿದೇಶದವರಿಗೆ, ರಾಜರಿಗೂ ಸಹ ಜ್ಞಾನವನ್ನು ಕೊಡಬೇಕಾಗಿದೆ ಅದಕ್ಕಾಗಿ ತಯಾರಿ ಮಾಡಬೇಕು. ತಂದೆ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಬಾಪ್ದಾದಾರವರಿಂದ ಆಫ್ರೀನ್ ತೆಗೆದುಕೊಳ್ಳಲು ತಂದೆಯ ಶ್ರೇಷ್ಠ ಕಾರ್ಯದಲ್ಲಿ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ. ತಂದೆಗೆ ತಮ್ಮ ಸೇವಾ ಸಮಾಚಾರವನ್ನು ತಿಳಿಸಬೇಕಾಗಿದೆ.
2. ದೇಹಾಭಿಮಾನದಲ್ಲಿ ಬಂದು ಎಂದೂ ಅಗೌರವ ಮಾಡಬಾರದು. ಉಲ್ಟಾ ನಶೆಯಲ್ಲಿ ಬರಬಾರದು. ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು, ಸೇವಾಧಾರಿಗಳಾಗಬೇಕಾಗಿದೆ.
ಓಂ ಶಾಂತಿ. ಇದು ಒಬ್ಬ ತಂದೆಯ ಮಹಿಮೆಯಾಗಿದೆ ಆದರೆ ಭಕ್ತಿಮಾರ್ಗದಲ್ಲಿ ಕೇವಲ ಒಬ್ಬರ ಮಹಿಮೆಯನ್ನು ಹಾಡುವುದರಿಂದ ಭಕ್ತಿಯ ಶೋ ಇರುವುದಿಲ್ಲ. ಆದ್ದರಿಂದ ಭಕ್ತಿಯಲ್ಲಿ ಅನೇಕರ ಮಹಿಮೆಯನ್ನು ಹಾಡುತ್ತಾರೆ. ಅಲ್ಲಿ ಬಹಳ ಶಬ್ಧವೂ ಇರುತ್ತದೆ. ಗಂಟೆ, ಜಾಗಟೆ, ಗೀತೆ-ಭಜನೆ, ಅಳುವುದು-ಕರೆಯುವುದು, ಇದೆಲ್ಲವೂ ಭಕ್ತಿಮಾರ್ಗದಲ್ಲಿ ಎಷ್ಟೊಂದು ನಡೆಯುತ್ತದೆ! ಭಿನ್ನ-ಭಿನ್ನ ಪ್ರಕಾರದ ಶಬ್ಧ ಮಂತ್ರ-ತಂತ್ರ, ಸ್ತ...
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನೀವು ನಿರ್ವಾಣಧಾಮದಲ್ಲಿ ಹೋಗುವಿರಿ ನಂತರ ಅಲ್ಲಿಂದ ಸ್ವರ್ಗದಲ್ಲಿ ಬರುತ್ತೀರಿ. ಇಲ್ಲಿಂದ ನಾನು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನಿಮಗೆ ತಿಳಿದಿದೆ - ಹಕ್ಕಿಗಳ ಸಮೂಹವು ಎಷ್ಟು ದೊಡ್ಡದಾಗಿರುತ್ತದೆ, ಅವುಗಳಲ್ಲಿ ಪರಸ್ಪರ ಒಗ್ಗಟ್ಟು ಇರುತ್ತದೆ. ಮೊದಲು ಮುಂದಿನ ಹಕ್ಕಿಯು ಕುಳಿತು ಬಿಟ್ಟರೆ ಮತ್ತೆಲ್ಲವೂ ಕುಳಿತು ...
ತಂದೆಯು ಜ್ಞಾನಪೂರ್ಣನಾಗಿದ್ದಾರೆ, ಅವರು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ಕಲ್ಲು-ಮುಳ್ಳಿನಲ್ಲಿ ಹೇಗೆ ಬರುತ್ತಾರೆ. ಒಬ್ಬ ವೈದ್ಯರು ಪ್ರತಿಯೊಂದು ವಸ್ತುವಿನಲ್ಲಿ ಆತ್ಮವಿದೆ ಎಂದು ಸಿದ್ಧ ಮಾಡಿದ್ದರು, ಪರಮಾತ್ಮನಿದ್ದಾರೆಂದು ಹೇಳಲಿಲ್ಲ ಆದರೆ ಇಲ್ಲಂತೂ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಆ ವೈದ್ಯರು ಕೇವಲ ಎಲ್ಲರಲ್ಲಿ ಆತ್ಮನಿದೆ ಎಂದು ಹೇಳಿದರು ಆದರ...
ನೀವು ಮಕ್ಕಳು ಶಿವ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಅವರು ಬರುವುದೇ ಎಲ್ಲಾ ಆತ್ಮರನ್ನೂ ಕರೆದುಕೊಂಡು ಹೋಗಲು, ಶರೀರದ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಶರೀರ ಸಹಿತವಾಗಿ ಯಾರನ್ನಾದರೂ ಕರೆದುಕೊಂಡು ಹೋಗಲು ಬಂದಿದ್ದೇನೆಯೇ? ನನ್ನನ್ನೇ ಕರೆಯುತ್ತಾರೆ - ಹೇ ಮುಕ್ತಿದಾತ ಬನ್ನಿ, ನಮ್ಮನ್ನು ದುಃಖದಿಂದ ಬಿಡಿಸಿ. ಎಲ್ಲಿಯಾದರೂ ಇಂತಹ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಲ್ಲಿ ಸುಖ-ಶಾಂತಿ-ನೆಮ್ಮ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿಕಾರಗಳ ದಾನವನ್ನು ಕೊಟ್ಟು ಹಿಂತೆಗೆದುಕೊಳ್ಳಬಾರದು. ಬಾಯಿಂದ ಶುಭವನ್ನು ನುಡಿಯಬೇಕು. ಬಹಳ ಮಧುರರಾಗಬೇಕಾಗಿದೆ. ತಂದೆಯ ಸಮಾನ ಪ್ರೀತಿಯ ಸಾಗರರಾಗಿ ಇರಬೇಕಾಗಿದೆ.
2. ಶಾಂತಿಯಲ್ಲಿದ್ದು ಕವಡೆಯೂ ಖರ್ಚಿಲ್ಲದೆ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಎರಡು ಹಿಡಿ ಬೀಜವನ್ನು ಬಿತ್ತಿ 21 ಜನ್ಮಗಳ ಸಂಪಾದನೆ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿದ್ದೀರಿ. ತಂದೆಯು ಭಕ್ತಿಯೆಂಬ ರಾತ್ರಿಯನ್ನು ವಿನಾಶ ಮಾಡಿ, ದಿನದ ಸ್ಥಾಪನೆ ಮಾಡಲು ಬಂದಿದ್ದಾರೆ ಏಕೆಂದರೆ ಹೇ ಪತಿತ-ಪಾವನ ಬನ್ನಿ ಎಂದು ತಂದೆಯನ್ನೇ ಕರೆಯುತ್ತಾರಲ್ಲವೇ. ಯಾವುದೋ ಸಮಯದಲ್ಲಿ ನಾವು ಪಾವನರಾಗಿದ್ದೆವು, ಈಗ ಪತಿತರಾಗಿದ್ದೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಮೊದಲು ಏನಿತ್ತು, ಈಗ ಅದನ್ನೇ ಬೇಕು ಎ...
ನೀವು ಮಧುರ ಮಕ್ಕಳು ಈಗ ವ್ಯಾಪಾರ ಮಾಡಲು ಬಂದಿದ್ದೀರಿ. ನಿಮ್ಮ ಬಳಿ ಕೆಲಸಕ್ಕೆ ಬರದಿರುವಂತಹದ್ದನ್ನು ಕೊಟ್ಟು ಲಕ್ಷದಷ್ಟು ಸಂಪಾದಿಸುತ್ತೀರಿ. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ. ಸದಾ ಆರೋಗ್ಯವಂತರಾಗಲು ತಂದೆಯು ಯೋಗವನ್ನು ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಗ್ಯಾರಂಟಿ ಕೊಡುತ್ತೇನೆ, ನೀವು 21 ಜನ್ಮಗಳಿಗಾಗಿ ಸದಾ ಆರೋಗ್ಯವಂತರಾಗುತ್ತೀರಿ ಅಂದಮೇಲೆ ಇಂತಹ ಸರ್ಜನ್ನ ಶ್ರೀಮತ...
ಈಗ ನೀವು ಮಕ್ಕಳಿಲ್ಲಿ ಸನ್ಮುಖದಲ್ಲಿ ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ - ಎಂದಿಗೂ ಪತಿತರು ನನ್ನೊಂದಿಗೆ ಮಿಲನವಾಗುವಂತಿಲ್ಲ. ಈ ರೀತಿಯಿಲ್ಲದಿದ್ದರೆ ಕರೆದುಕೊಂಡು ಬರುವಂತಹ ಬ್ರಾಹ್ಮಣಿಯರ ಮೇಲೆ ಪಾಪವೇರುವುದು. (ಇಂಧ್ರ ಸಭೆಯ ಪರಿಶ್ತೆಯ ಉದಾಹರಣೆ) ವಾಸ್ತವದಲ್ಲಿ ಇಂದ್ರ ಸಭೆಯು ಇದಾಗಿದೆ. ಇವರೆಲ್ಲರೂ ಜ್ಞಾನ ದೇವತೆಗಳಾಗಿದ್ದಾರೆ ಅಂದಮೇಲೆ ಇಲ್ಲಿ ಇನ್ನೂ ಪೆಟ್ಟು ಬೀಳುತ್ತದೆ, ತಂದೆಯು ಕಡ್ಡ...
ಎಲ್ಲರ ಸದ್ಗತಿ ಮಾಡುವವರು ಒಬ್ಬರೇ ಶಿವ ತಂದೆಯಾಗಿದ್ದಾರೆ. ಅವರ ಭಾವಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ, ಅವರನ್ನು ದಿವ್ಯ ದೃಷ್ಟಿಯಿಂದಲೇ ನೋಡಬಹುದಾಗಿದೆ ಆದರೆ ಅವರನ್ನು ಅನುಭವ ಮಾಡಬಹುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅಂತ್ಯ ಕಾಲದಲ್ಲಿ ಒಬ್ಬ ತಂದೆಯ ನೆನಪೇ ಬರಲಿ - ಅಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ. ಮತ್ತ್ಯಾರೂ ನೆನಪಿಗೆ ಬರಬಾರದು. ಬುದ್ಧಿಯಲ್ಲಿರಲಿ - ಇದೆಲ್ಲವೂ ವಿನಾಶವಾಗಲಿದೆ.
2. ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ನನ್ನಿಂದ ಯಾವುದೇ ಪಾಪ ಕರ್ಮವಾಗಬಾರದು ಎಂಬ ಭಯವಿರಲಿ.
ಓಂ ಶಾಂತಿ. ಯಾರೆಲ್ಲರೂ ಮಕ್ಕಳು ಕುಳಿತಿದ್ದೀರಿ, ಅವರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯ ಅಥವಾ ಸ್ವದರ್ಶನ ಚಕ್ರವನ್ನು ನೆನಪು ಮಾಡುತ್ತೀರಿ. ತಂದೆಯು ಮಕ್ಕಳಿಗೆ ಜ್ಞಾನವನ್ನು ನೀಡಿದ್ದಾರೆ - ಮಕ್ಕಳೇ, ಸ್ವದರ್ಶನ ಚಕ್ರಧಾರಿಗಳಾಗಿರಿ. ಸ್ವದರ್ಶನ ಚಕ್ರಧಾರಿಗಳಾಗುವುದು ನೀವು ಬ್ರಾಹ್ಮಣ ಮಕ್ಕಳ ಉದ್ದೇಶವಾಗಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ, 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ಇಟ...
ನೀವು ಮಕ್ಕಳು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ ನಂತರ ಶಾಂತಿಧಾಮದಲ್ಲಿ ಹೋಗಿ ಸುಖಧಾಮದಲ್ಲಿ ಬರುತ್ತೀರಿ. ಇದು ದುಃಖಧಾಮವಾಗಿದೆ. ಮೊದಲು ನೀವೇ ಬಂದಿದ್ದೀರಿ ಆದ್ದರಿಂದ ತಂದೆಯೂ ಸಹ ಮೊಟ್ಟ ಮೊದಲು ನಿಮ್ಮೊಂದಿಗೆ ಬಂದು ಮಿಲನ ಮಾಡುತ್ತಾರೆ. ಇಲ್ಲಿ ತಂದೆ ಮತ್ತು ಮಕ್ಕಳು, ಆತ್ಮರು ಮತ್ತು ಪರಮಾತ್ಮನ ಮೇಳವಾಗುತ್ತದೆ. ಲೆಕ್ಕವಿದೆಯಲ್ಲವೆ - ನಾವು ತಂದೆಯಿಂದ ವಿದಾಯಿಯನ್ನು ಪಡೆದು 5000 ವರ್ಷಗಳಾಯ...
ನಿಮ್ಮದು ಇದು ಸರ್ವೋತ್ತಮ ಕುಲವಾಗಿದೆ. ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಶೂದ್ರರಿಂದ ಕೂಡಲೇ ದೇವತೆಗಳಾಗಿ ಬಿಡುವುದಿಲ್ಲ. ಬ್ರಾಹ್ಮಣರು ಅವಶ್ಯವಾಗಿ ಬೇಕು. ಈಗ ಬ್ರಾಹ್ಮಣರಿಗೆ ತಂದೆಯು ಓದಿಸುತ್ತಿದ್ದಾರೆ ಅಂದಮೇಲೆ ಇಂತಹ ತಂದೆಗೆ ವಿಚ್ಛೇದನ ಕೊಡುವುದೇ! ತಂದೆಯು ತಿ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಗೃಹಸ್ಥ ವ್ಯವಹಾರದಲ್ಲಿದ್ದರೂ ತಮ್ಮ ಸರ್ವೋತ್ತಮ ಕುಲದ ಸ್ಮೃತಿಯಿಂದ ಕಮಲ ಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ. ಎಂದಿಗೂ ಸದ್ಗುರುವಿನ ನಿಂದನೆ ಮಾಡಿಸಬಾರದು.
2. ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯನ್ನು ಮಾಡಬೇಕಾಗಿದೆ. ಸ್ವದರ್ಶನ ಚಕ್ರಧಾರಿಗಳಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ. ಸಮಯ ಸಿಕ್ಕಿದರೆ ಅವಶ್ಯವಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
ವರದಾತನನ್ನು ರಾಜಿ ಮಾಡಿಕೊಳ್ಳುವ ಸಹಜ ವಿಧಿ
ಇಂದು ವರದಾತ ತಂದೆಯು ತನ್ನ ವರದಾನೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ವರದಾತನ ಮಕ್ಕಳು ಎಲ್ಲರೂ ವರದಾನಿಗಳಾಗಿದ್ದಾರೆ ಆದರೆ ನಂಬರ್ವಾರ್ ಇದ್ದಾರೆ. ವರದಾತನು ಎಲ್ಲಾ ಮಕ್ಕಳಿಗೂ ವರದಾನಗಳ ಜೋಳಿಗೆಯನ್ನು ತುಂಬಿಸಿ ಕೊಡುತ್ತಾರೆ ಆದರೂ ನಂಬರ್ವಾರ್ ಏಕೆ? ವರದಾತನು ಕೊಡುವುದರಲ್ಲಿ ನಂಬರ್ವಾರ್ ಕೊಡುವುದಿಲ್ಲ ಏಕೆಂದರೆ ವರದಾತನ ಬಳಿ ಅಕೂಟ ವರದಾನಗಳಿವೆ. ತೆರೆದ ಭಂಡಾರವಿದೆ, ಯಾರೆಷ್ಟು ಬೇಕ...
ಏಕವ್ರತ ಅರ್ಥಾತ್ ಕೇವಲ ಪತಿವ್ರತೆಯಲ್ಲ, ಎಲ್ಲಾ ಸಂಬಂಧದಿಂದಲೂ ಏಕವ್ರತಸ್ಥರು. ಸಂಕಲ್ಪ, ಸ್ವಪ್ನದಲ್ಲಿಯೂ ಇನ್ನೊಂದು ವ್ರತವಿರಬಾರದು. ಮೊದಲನೆ ವ್ರತ ಅರ್ಥಾತ್ ಸದಾ ವೃತ್ತಿಯಲ್ಲಿ ಒಬ್ಬರೇ ಇರಬೇಕು. ಎರಡನೆಯದು - ಸದಾ ನನ್ನವರು ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಈ ರೀತಿ ಪಕ್ಕಾ ವ್ರತವನ್ನು ತೆಗೆದುಕೊಂಡಿರಬೇಕು. ಕೆಲವು ಮಕ್ಕಳು ಏಕವ್ರತರಾಗುವುದರಲ್ಲಿ ಬಹಳ ಚತುರತೆ ಮಾಡುತ್ತಾರೆ. ಯಾವ ಚತುರ...
ಬಾಪ್ದಾದಾರವರ ಬಳಿ ಎಲ್ಲರ ಜನ್ಮಪತ್ರಿಯಿರುತ್ತದೆ. ತಂದೆಯ ಮುಂದೆ ಎಲ್ಲರೂ ಹೇಳುತ್ತಾರೆ - ತಾವೇ ಜೊತೆಗಾರರಾಗಿದ್ದೀರಿ ಎಂದು. ಯಾವಾಗ ಪರಿಸ್ಥಿತಿ ಬರುತ್ತದೆಯೋ ಆಗ ತಂದೆಗೆ ಹೇಳತೊಡಗುತ್ತಾರೆ - ಇದಂತೂ ಆಗಿಯೇ ಆಗುತ್ತದೆ, ಇಷ್ಟಾದರೂ ಬೇಕೇ ಬೇಕು.....ಇದಕ್ಕೆ ಏಕವ್ರತವೆಂದು ಹೇಳುವರೇ? ಜೊತೆಗಾರರೆಂದರೆ ಎಲ್ಲರೂ ಜೊತೆಗಾರರೆ, ಯಾರೂ ವಿಶೇಷವಲ್ಲ. ಇದಕ್ಕೇ ಏಕವ್ರತವೆಂದು ಹೇಳುತ್ತಾರೆ. ಆದ್ದರಿಂದ ವರ...
ತಂದೆಯು ಇಷ್ಟೊಂದು ಭೋಲಾ ಆಗಿದ್ದಾರೆ ಅವರು ಒಂದರಲ್ಲಿಯೇ ರಾಜಿಯಾಗಿ ಬಿಡುತ್ತಾರೆ. ಇಂತಹ ಭೋಲಾನಾಥ ವರದಾತನನ್ನು ರಾಜಿ ಮಾಡಿಕೊಳ್ಳುವುದು ಕಷ್ಟವೇ? ಕೇವಲ ಒಂದರ ಪಾಠವನ್ನು ಪಕ್ಕಾ ಮಾಡಿಕೊಳ್ಳಿ, 5-7 ರಲ್ಲಿ ಹೋಗುವ ಅವಶ್ಯಕತೆಯಿಲ್ಲ. ವರದಾತನನ್ನು ರಾಜಿ ಮಾಡಿಕೊಳ್ಳುವವರು ಅಮೃತವೇಳೆಯಿಂದ ರಾತ್ರಿಯವರೆಗೆ ಪ್ರತೀ ದಿನಚರಿಯ ಕರ್ಮದಲ್ಲಿ ವರದಾನಗಳಿಂದಲೇ ಬೆಳೆಯುತ್ತಾರೆ, ನಡೆಯುತ್ತಾರೆ ಮತ್ತು ಹಾರುತ್...
ಬಾಪ್ದಾದಾರವರ ಬಳಿ ಎಲ್ಲಾ ಮಕ್ಕಳ ಚರಿತ್ರೆಯೂ ಇದೆ ಮತ್ತು ಚತುರತೆಯೂ ಇದೆ. ಫಲಿತಾಂಶವೆಲ್ಲವೂ ಬಾಪ್ದಾದಾರವರ ಬಳಿಯಿದೆಯಲ್ಲವೆ. ಚತುರತೆಯ ಮಾತೂ ಸಹ ಬಹಳಷ್ಟಿದೆ. ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಅದನ್ನು ಕೇಳಿಸಿಕೊಳ್ಳುತ್ತಾ ಇರುತ್ತೇನೆ. ಕೇವಲ ಬಾಪ್ದಾದಾ ಹೆಸರನ್ನು ಹೇಳುವುದಿಲ್ಲ ಆದ್ದರಿಂದ ತಂದೆಗೆ ಏನು ತಿಳಿಯುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೂ ಸಹ ಅವಕಾಶ ಕೊಡುತ್ತಾ ಇರುತ್ತ...
ಮಕ್ಕಳು ವಿದೇಶವನ್ನು ಸುತ್ತಿಕೊಂಡು ಹಿಂತಿರುಗಿ ಬಂದಿದ್ದಾರೆ (ಜಾನಕಿ ದಾದಿ, ಡಾ|| ನಿರ್ಮಲ ಬೆಹೆನ್, ಜಗದೀಶ್ ಭಾಯಿ, ವಿದೇಶಕ್ಕೆ ಹೋಗಿ ಬಂದಿದ್ದಾರೆ)
ಒಳ್ಳೆಯ ಫಲಿತಾಂಶವಿದೆ ಮತ್ತು ಸದಾ ಸೇವೆಯ ಸಫಲತೆಯಲ್ಲಿ ವೃದ್ಧಿಯಾಗಲೇಬೇಕಾಗಿದೆ. ಇಂಗ್ಲೆಂಡಿನದೂ ಸಹ ವಿಶೇಷ ಸೇವಾ ಕಾರ್ಯದಲ್ಲಿ ಸಂಬಂಧವಿದೆ. ಹೆಸರು ಅವರದು, ಕೆಲಸವು ತಮ್ಮದು ನಡೆಯುತ್ತಿದೆ. ಆತ್ಮಗಳಿಗೆ ಸಹಜವಾಗಿ ಸಂದೇಶವು ತಲುಪಲಿ, ತಮ್ಮ ಈ ಸೇವೆಯು ನಡೆಯುತ್ತಿದೆ. ಅಂದಾಗ ಅಲ್ಲಿನ ಕಾರ್ಯಕ್ರಮವು ಚೆನ್ನಾಗಿ ಆಯಿತು, ರಷ್ಯಾ ಉಳಿದುಕೊಂಡಿತ್ತು, ಅದೂ ಸಹ ಬರಲೇಬೇಕಾಗಿತ್ತು. ಬಾಪ್ದಾದಾ ಮೊದಲೇ ಸಫ...
ಸರ್ವ ಮಕ್ಕಳಿಗೆ ಸದಾ ಸಹಜವಾಗಿ ನಡೆಯುವ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಯಾವ ಸಹಜ ಯುಕ್ತಿಯನ್ನು ತಿಳಿಸಿದೆವೋ ಇದೇ ವಿಧಿಯನ್ನು ಸದಾ ಪ್ರಯೋಗದಲ್ಲಿ ತರುವಂತಹ ಪ್ರಯೋಗಿ ಮತ್ತು ಸಹಜಯೋಗಿ, ಸದಾ ವರದಾತನ ವರದಾನಗಳಿಂದ ಸಂಪನ್ನ ವರದಾನೀ ಮಕ್ಕಳಿಗೆ ಸದಾ ಒಂದರ ಪಾಠವನ್ನು ಪ್ರತಿ ಹೆಜ್ಜೆಯಲ್ಲಿ ಸಾಕಾರ ಸ್ವರೂಪದಲ್ಲಿ ತರುವಂತಹ ಸದಾ ನಿರಾಕಾರ, ಆಕಾರ ತಂದೆಯನ್ನು ಜೊತೆಯ ಅನುಭೂತಿಯಿಂದ ಸದಾ ಸಾಕಾರ...
ದಾದಿ ಜಾನಕಿಯವರೊಂದಿಗೆ ವಾರ್ತಾಲಾಪ:
ಎಲ್ಲರಿಗೂ ತಂದೆಯ ಪ್ರೀತಿಯನ್ನು ಎಷ್ಟು ಹಂಚುವಿರಿ, ಅಷ್ಟೇ ಪ್ರೀತಿಯ ಭಂಡಾರವು ವೃದ್ಧಿಯಾಗುತ್ತಿರುತ್ತದೆ. ಹೇಗೆ ಪ್ರತೀ ಸಮಯದಲ್ಲಿ ಪ್ರೀತಿಯ ಸುರಿಮಳೆ ಆಗುತ್ತಿದೆ ಎಂಬಂತೆ ಅನುಭವ ಆಗುತ್ತದೆಯಲ್ಲವೆ! ಒಂದು ಹೆಜ್ಜೆಯಲ್ಲಿ ಪ್ರೀತಿಯನ್ನು ಕೊಡಿ ಮತ್ತು ಮತ್ತೆ-ಮತ್ತೆ ಪ್ರೀತಿ ಪಡೆಯಿರಿ. ಎಲ್ಲರಿಗೂ ಸಹ ಪ್ರೀತಿಯೇ ಬೇಕಾಗಿದೆ, ಜ್ಞಾನವನ್ನಂತು ಕೇಳಿದ್ದಾರಲ್ಲವೆ! ಅಂದಾಗ ಒಂದು ಪ್ರಕಾರದ ಮಕ್ಕಳಿದ್ದಾ...
ಮಹಾರಾಷ್ಟ್ರ-ಪೂನಾ ಗ್ರೂಪ್:
ಎಲ್ಲರೂ ಮಹಾನ್ ಆತ್ಮರಾಗಿದ್ದೀರಲ್ಲವೆ! ಮುಂಚೆ ತಮ್ಮನ್ನು ಕೇವಲ ಮಹಾರಾಷ್ಟ್ರದ ನಿವಾಸಿಯೆಂದು ಹೇಳಿಕೊಳ್ಳುತ್ತಿದ್ದಿರಿ, ಈಗ ಸ್ವಯಂ ಮಹಾನರಾಗಿದ್ದೀರಿ. ತಂದೆಯು ಪ್ರತಿಯೊಂದು ಮಗುವನ್ನೂ ಮಹಾನರನ್ನಾಗಿ ಮಾಡಿ ಬಿಟ್ಟರು. ವಿಶ್ವದಲ್ಲಿ ಇನ್ಯಾರಾದರೂ ತಮಗಿಂತ ಮಹಾನರಿದ್ದಾರೆಯೇ? ಎಲ್ಲರಿಗಿಂತಲೂ ಕೆಳಗೆಂದರೆ ಭಾರತವಾಸಿಗಳೇ ಬಿದ್ದರು ಮತ್ತು ಅದರಲ್ಲಿಯೂ ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಬ್ರ...
ಗುಜರಾತ್ ಗ್ರೂಪ್:
ಅಂತಿಮ ಜನ್ಮವಾಗಿರುವ ಕಾರಣ ಈ ಬ್ರಾಹ್ಮಣ ಜೀವನದಲ್ಲಿ ಭಲೆ ಶರೀರದಿಂದ ಎಷ್ಟೇ ಬಲಹೀನವಾಗಿರಬಹುದು ಅಥವಾ ರೋಗಗಳಿರಬಹುದು, ನಡೆಯಬಹುದು ಅಥವಾ ಇಲ್ಲದೆಯೂ ಇರಬಹುದು ಆದರೆ ಮನಸ್ಸಿನ ಹಾರುವಿಕೆಗಾಗಿ ರೆಕ್ಕೆಗಳನ್ನಂತು ಕೊಡಲಾಗಿದೆ, ಶರೀರ ನಡೆಯದಿರಬಹುದು ಆದರೆ ಮನಸ್ಸಿನಿಂದಂತು ಹಾರಬಹುದಲ್ಲವೆ! ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ - 63 ಜನ್ಮಗಳಿಂದ ಅಲೆದಾಡುತ್ತಾ-ಹುಡುಕಾಡುತ್ತಾ ಬಲಹೀನವಾಗಿದೆ. ಶರ...
ಓಂ ಶಾಂತಿ. ತೋಟದ ಮಾಲೀಕ ತಂದೆಯು ಕುಳಿತು ತಮ್ಮ ಹೂಗಳನ್ನು ನೋಡುತ್ತಾರೆ ಏಕೆಂದರೆ ಮತ್ತೆಲ್ಲ ಸೇವಾಕೇಂದ್ರಗಳಲ್ಲಂತೂ ಹೂಗಳು ಮಾತ್ತು ಮಾಲಿಗಳಿರುತ್ತಾರೆ, ಇಲ್ಲಿ ನೀವು ತೋಟದ ಮಾಲಿಕನ ಬಳಿ ತಮ್ಮ ಸುಗಂಧವನ್ನು ಬೀರಲು ಬರುತ್ತೀರಿ. ನೀವು ಹೂಗಳಾಗಿದ್ದೀರಿಲ್ಲವೆ! ನೀವು ತಿಳಿದುಕೊಂಡಿದ್ದೀರಿ, ತಂದೆಗೂ ಗೊತ್ತಿದೆ - ಮುಳ್ಳುಗಳ ಕಾಡಿನ ಬೀಜ ರೂಪ ರಾವಣನಾಗಿದ್ದಾನೆ. ಹಾಗೆ ನೋಡಿದರೆ ಇಡೀ ತೋಟದ ಬೀಜವು ...
ತಂದೆಯು ರಾತ್ರಿಯೂ ತಿಳಿಸಿದ್ದರು – ಕೆಲವರದು ಕಾಮಿ ದೃಷ್ಟಿಯಿರುತ್ತದೆ, ಇನ್ನು ಕೆಲವರದು ಸ್ವಲ್ಪ ಕಾಮಿ ದೃಷ್ಟಿಯಿರುತ್ತದೆ. ಕೆಲವರು ಹೊಸ ಹೊಸಬರು ಬರುತ್ತಾರೆ ಅವರು ಮೊದಲು ಬಹಳ ಚೆನ್ನಾಗಿ ನಡೆಯುತ್ತಾರೆ. ವಿಕಾರದಲ್ಲೆಂದೂ ಹೋಗುವುದಿಲ್ಲ, ಪವಿತ್ರರಾಗಿರುತ್ತೇವೆಂದು ತಿಳಿಯುತ್ತಾರೆ, ಆ ಸಮಯದಲ್ಲಿ ಸ್ಮಶಾನ ವೈರಾಗ್ಯ ಬರುತ್ತದೆ. ಮತ್ತೆ ಮನೆಗೆ ಹೋದಾಗ ಕೊಳಕಾಗುತ್ತಾರೆ. ದೃಷ್ಟಿಯೂ ಕೊಳಕಾಗಿಬಿಡು...
ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ನಮ್ಮ ಬೀಜವು ವೃಕ್ಷಪತಿಯಾಗಿದ್ದಾರೆ, ಅವರ ಬರುವಿಕೆಯಿಂದ ನಮ್ಮ ಮೇಲೆ ಬೃಹಸ್ಪತಿಯ ದೆಶೆ ಬರುತ್ತದೆ. ನಂತರ ರಾವಣ ರಾಜ್ಯ ಬಂದಾಗ ರಾಹು ದೆಶೆ ಕುಳಿತುಕೊಳ್ಳುತ್ತದೆ. ಅದು ಅತ್ಯಂತ ಶ್ರೇಷ್ಠ, ಇದು ಅತ್ಯಂತ ಕನಿಷ್ಠ. ಒಮ್ಮೆಲೆ ಶಿವಾಲಯದಿಂದ ವೇಶ್ಯಾಲಯವನ್ನಾಗಿ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳ ಮೇಲೆ ಬೃಹಸ್ಪತಿಯ ದೆಶೆಯಿದೆ. ಹೊಸ ವೃಕ್ಷವಾಗಿರುತ್ತ...
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ರೆಕ್ಕೆಗಳನ್ನು ಸ್ವತಂತ್ರಗೊಳಿಸಲು ಶ್ರಮ ಪಡಬೇಕು. ಬಂಧನಗಳಿಂದ ಮುಕ್ತರಾಗಿ ಬುದ್ಧಿವಂತ ಮಾಲಿಗಳಾಗಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
2. ತಮ್ಮನ್ನು ತಾವು ನೋಡಿಕೊಳ್ಳಬೇಕು - ನಾನು ಎಷ್ಟು ಸುಗಂಧ ಭರಿತ ಹೂವಾಗಿದ್ದೇನೆ? ನನ್ನ ವೃತ್ತಿಯು ಶುದ್ಧವಾಗಿದೆಯೇ? ಕಣ್ಣುಗಳು ಮೋಸ ಮಾಡುವುದಿಲ್ಲ ತಾನೆ? ತಮ್ಮ ನಡೆ-ನುಡಿಯ ಚಾರ್ಟ್ನ್ನಿಟ್ಟು ಕೊರತೆಗಳನ್ನು ತೆಗೆಯಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದನ್ನು ಯಾರು ಹೇಳಿದರು? ತಂದೆಯು ಮಕ್ಕಳಿಗೆ ಹೇಳಿದರು - ಮಕ್ಕಳೇ, ಗೀತೆಯನ್ನು ಕೇಳಿದಿರಾ? ಯಾವಾಗ ಅತೀ ದುಃಖವಾಗುತ್ತದೆಯೋ ಆಗ ಕರೆಯುತ್ತಾರೆ. ಮಕ್ಕಳಿಗೆ ತಿಳಿದಿದೆ - ತಂದೆಯೇ ಸುಖಧಾಮ ಅಥವಾ ಪಾವನ ಪ್ರಪಂಚವನ್ನು ರಚಿಸುತ್ತಾರೆ. ಭಗವಾನ್-ಭಗವತಿಯ ರಾಜ್ಯವನ್ನು ಸ್ಥಾಪನೆ ಮಾಡಿಸುತ್ತಾರೆ. ಭಗವಾನ್-ಭಗವತಿಯು ಸ್ವರ್ಗದ ಮಾಲೀಕರಾ...
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಾರತದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಅವರು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇನ್ನು ಕೆಲವೇ ದಿನಗಳಿದೆ, ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಇದು ಗುಪ್ತವಾಗಿದೆ. ಇದರಲ್ಲಿ ಯುದ್ಧದ ಮಾತಿಲ...
ನೀವು ತಿಳಿದುಕೊಂಡಿದ್ದೀರಿ - ಸ್ವರ್ಗವೂ ಈ ಭಾರತದಲ್ಲಿಯೇ ಇತ್ತು, ನರಕವೂ ಭಾರತದಲ್ಲಿಯೇ ಇದೆ. ಆದ್ದರಿಂದ ಈ ಅಕ್ಷರವನ್ನು ಅವರು ಹಿಡಿದುಕೊಂಡು ಸ್ವರ್ಗ-ನರಕ ಇಲ್ಲಿಯೇ ಇದೆ, ಯಾರಿಗೆ ಬಹಳ ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ ಆದರೆ ಈ ರೀತಿ ಇಲ್ಲ. ಭಾರತವು ಹೊಸದಾಗಿದ್ದಾಗ ಸತ್ಯಯುಗವಾಗಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಪತಿತ ಪ್ರಪಂಚ ನರಕವಾಗಿದೆ. ಪ್ರ...
ನೀವೀಗ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಗಳು, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ನಿಮ್ಮದು ಸ್ವಚ್ಛ ಬುದ್ಧಿಯಾಗಿದೆ. ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಸ್ವರ್ಗದಲ್ಲಿ ಕಳುಹಿಸುತ್ತಾರೆ. ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ, ಇದು ಆತ್ಮಿಕ ಜ್ಞಾನವಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ಮನುಷ್ಯರು ಮನುಷ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುತ್ತಾರೆಯೋ ಅವರನ್ನೇ ಫಾಲೋ ಮಾಡಬೇಕಾಗಿದೆ. ಬೇಹದ್ದಿನ ಖುಷಿಯಲ್ಲಿರಲು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ.
2. ಪ್ರೀತಿ ಬುದ್ಧಿಯವರಾಗಿ ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಿ ಶಾಂತಿಯಲ್ಲಿ ಕುಳಿತು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ.
ಓಂ ಶಾಂತಿ. ಮೇಳ ಹಾಗೂ ಪ್ರದರ್ಶನಿಗಳಲ್ಲಿ ಮಕ್ಕಳು ತಿಳಿಸುತ್ತೀರೆಂದರೆ ಯಾವ ಮಾತುಗಳು ತಿಳಿಸಲು ಯೋಗ್ಯವಾಗಿದೆಯೋ ಅವನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಈ ಮಾತನ್ನಂತೂ ಅವಶ್ಯವಾಗಿ ತಿಳಿಸಬೇಕಾಗಿದೆ - ಎಲ್ಲಾ ಆತ್ಮರ ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಭಾರತದ ಆದಿ ಸನಾತನ ಧರ್ಮ ಯಾವುದಾಗಿದೆ? ಎಂಬುದನ್ನೂ ಸಹ ಕೇಳಬೇಕಾಗಿದೆ. ಮನುಷ್ಯರಂತೂ ಆದಿ ಸನಾತನ ಧರ್ಮವನ್ನು ಹಿಂದೂ ಧರ್ಮವೆಂದೇ ತಿಳಿದ...
ಇಲ್ಲಿ ಮಕ್ಕಳಿಗೆ ಟೋಲಿ ತಿನ್ನಿಸಲಾಗುತ್ತದೆ ಏಕೆಂದರೆ ಇವರು ಬೇಹದ್ದಿನ ತಂದೆಯಲ್ಲವೆ. ಲೌಕಿಕ ತಂದೆಯು ಪೇಟೆಯಿಂದ ಬರುತ್ತಾರೆಂದರೆ ಮಕ್ಕಳು ಅವಶ್ಯವಾಗಿ ನೆನಪಿಗೆ ಬರುತ್ತಾರೆ. ಮಕ್ಕಳಿಗಾಗಿ ಏನಾದರೂ ಟೋಲಿಯನ್ನು ತೆಗೆದುಕೊಂಡು ಬರುತ್ತಾರೆ. ಹೊರಗಿನ ಸೇವಾಕೇಂದ್ರದಲ್ಲಿ ಟೋಲಿಯು ಸಿಗುವುದಿಲ್ಲ. ಇಲ್ಲಿ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ, ಆದ್ದರಿಂದ ಟೋಲಿಯನ್ನು ತಿನ್ನಿಸುತ್ತಾರೆ. ತಂದೆಯು ಎಲ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಭಗವಂತನು ನಮಗೆ ಓದಿಸಿ ಭಗವಾನ್-ಭಗವತಿಯನ್ನಾಗಿ ಮಾಡುತ್ತಾರೆ - ಇದೇ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ.
2. ಹೇಗೆ ತಂದೆಯು ಯಾವುದೇ ಮಗುವಿನ ಮಾತನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಅದೇರೀತಿ ಯಾರದೇ ಮಾತನ್ನು ಚಿತ್ತದಲ್ಲಿ ಇಟ್ಟುಕೊಳ್ಳಬಾರದು.
ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ನೀವೀಗ ಧನಿಕರು ಅರ್ಥಾತ್ ಸನಾಥರಾಗಿದ್ದೀರಿ, ಉಳಿದೆಲ್ಲಾ ಮನುಷ್ಯ ಮಾತ್ರರು ಅನಾಥರಾಗಿದ್ದಾರೆ. ಮಾಲೀಕ ಅಥವಾ ದಣಿ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಮನೆಯಲ್ಲಿ ಯಾರಾದರೂ ಜಗಳವಾಡುತ್ತಾರೆಂದರೆ ನಿಮಗೆ ಯಾರೂ ದಣಿ-ದೋಣಿ ಇಲ್ಲವೆ? ಎಂದು ಕೇಳುತ್ತಾರೆ. ಈಗ ಇಡೀ ಪ್ರಪಂಚದ ಮನುಷ್ಯ ಮಾತ್ರರು ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಒಬ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಆತ್ಮೀಯ ಸಮಾಜ ಸೇವಕರಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ತಂದೆಯ ಜೊತೆ ಜೊತೆಗೆ ಬರಲಿರುವ ಹೊಸ ಪ್ರಪಂಚವನ್ನೂ ನೆನಪು ಮಾಡಬೇಕಾಗಿದೆ.
2. ತಂದೆಯ ಸಮಾನ ದಯಾಹೃದಯಿಗಳಾಗಿ ಎಲ್ಲರನ್ನೂ ಪಾರಸ ಬುದ್ಧಿಯವರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ಓಂ ಶಾಂತಿ. ಯಾರು ತಂದೆಯ ಜೊತೆಯಿದ್ದಾರೆಯೋ.... ಈಗ ಪ್ರಪಂಚದಲ್ಲಿ ತಂದೆಯರಂತೂ ಅನೇಕರಿದ್ದಾರೆ. ಅವರೆಲ್ಲರಿಗೂ ತಂದೆ ರಚಯಿತನು ಒಬ್ಬರೇ ಆಗಿದ್ದಾರೆ. ಅವರು ಜ್ಞಾನ ಸಾಗರನಾಗಿದ್ದಾರೆ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಯಾವಾಗ ಸತ್ಯಯುಗದ ಸ್ಥಾಪನೆಯಾಗುವುದೋ ಆಗಲೇ ಮನುಷ್ಯನ ಸದ್ಗತಿಯೂ ಆಗುತ್ತದೆ. ತಂದೆಯನ್ನೇ ಸದ್ಗತಿದಾತನೆಂದು ಹೇಳಲಾಗುತ್ತದೆ. ಯಾವಾಗ ಸಂಗಮದ ಸಮಯವು ಬರುವುದೋ ಆಗ ಜ್ಞಾನಸಾಗರನು...
ನೀವೆಲ್ಲರೂ ಕರ್ಮಯೋಗಿಗಳಾಗಿದ್ದೀರಿ. ತಮ್ಮ ಮನೆಯನ್ನೂ ಸಂಭಾಲನೆ ಮಾಡಿ ಶಾಲೆಯಲ್ಲಿ ಒಂದು ಗಂಟೆ ಓದಬೇಕಾಗಿದೆ ಮತ್ತೆ ಮನೆಗೆ ಹೋಗಿ ರಿವೈಜ್ ಮಾಡಬೇಕಾಗಿದೆ. ಶಾಲೆಯಲ್ಲಿಯೂ ಇದೇ ರೀತಿ ಮಾಡುತ್ತಾರಲ್ಲವೆ. ಓದಿ ಮತ್ತೆ ಮನೆಗೆ ಹೋಗಿ ರಿವೈಜ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಒಂದು ಘಳಿಗೆ ಅರ್ಧ ಘಳಿಗೆ ದಿನದಲ್ಲಿ 8 ಗಂಟೆಗಳಿರುತ್ತವೆ, ಅದರಲ್ಲಿಯೂ ಒಂದು ಗಂಟೆ, ಅರ್ಧ ಗಂಟೆ ಅಥವಾ 15-20 ನಿಮಿ...
ಮಕ್ಕಳು ಬಾಂಬೆಯಲ್ಲಿ ಬಹಳ ಪರಿಶ್ರಮ ಪಡುತ್ತಿದ್ದಾರೆ ಏಕೆಂದರೆ ಅವರು ಬಹಳ ಸಫಲರಾಗಬೇಕಾಗಿದೆ, ಇದರಲ್ಲಿ ಬುದ್ಧಿಯೂ ಬೇಕು, ತಂದೆಯ ಹಣದೊಂದಿಗೆ ಬಹಳ ಪ್ರೀತಿಯೂ ಬೇಕು. ಕೆಲವರಂತೂ ಹಣ ತೆಗೆದುಕೊಳ್ಳುವುದಿಲ್ಲ, ಅರೆ! ಜ್ಞಾನರತ್ನಗಳನ್ನು ತೆಗೆದುಕೊಳ್ಳಿ, ಧಾರಣೆ ಮಾಡಿಕೊಳ್ಳಿ ಎಂದು ಹೇಳಿದರೆ ನಾವೇನು ಮಾಡುವುದು, ನಮಗೆ ಅರ್ಥವಾಗುವುದಿಲ್ಲವೆಂದು ಹೇಳುತ್ತಾರೆ. ತಿಳಿದುಕೊಳ್ಳದಿದ್ದರೆ ಅದು ನಿಮ್ಮಿಷ್ಟ...