text
stringlengths
0
61.5k
ನೀವು ತಿಳಿದುಕೊಂಡಿದ್ದೀರಿ, ತಂದೆಯು ಬಂದಿದ್ದಾರೆ. ಇಲ್ಲಿ ನೀವು ಖುಷಿಯಲ್ಲಿರುತ್ತೀರಿ, ಮನೆಗೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತೀರಿ. ನಿಮ್ಮಿಂದ ಈ ವಿದ್ಯೆಗಾಗಿ ನಾನು ಶುಲ್ಕವನ್ನೂ ಪಡೆಯುವುದಿಲ್ಲ. ಈ ಹಿಡಿ ಅವಲಕ್ಕಿಯನ್ನು ಕೊಡುತ್ತೇವೆಂದು ನೀವು ಹೇಳುತ್ತೀರಿ. ಹಿಡಿ ಅವಲಕ್ಕಿಯನ್ನಂತೂ ನೀವು ಭಕ್ತಿಮಾರ್ಗದಲ್ಲಿಯೂ ಕೊಡುತ್ತಾ ಬಂದಿದ್ದೀರಿ, ಅದಕ್ಕೆ ಪ್ರತಿಫಲವು ನಿಮಗೆ ಇನ್ನೊಂದು ಜನ್ಮದಲ್...
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೆನಪಂತೂ ನೀವು ತಂದೆಯನ್ನೂ ಮಾಡುತ್ತೀರಿ, ಪತಿಯನ್ನೂ ನೀವು ನೆನಪು ಮಾಡುತ್ತೀರಿ. ನಾನೀಗ ನಿಮಗೆ ಪತಿಯರಿಗೂ ಪತಿ, ತಂದೆಯರಿಗೂ ತಂದೆಯಾಗಿದ್ದೇನೆ. ಶಿಕ್ಷಕನೂ ಆಗಿದ್ದೇನೆ, ನಾನು ನಿಮ್ಮ ಸರ್ವಸ್ವವೂ ಆಗಿದ್ದೇನೆ, ಸುಖ ಕೊಡುವವನೂ ಆಗಿದ್ದೇನೆ. ಆ ಪತಿತ ಸಂಬಂಧಿಕರು ಮೊದಲಾದವರು ನಿಮಗೆ ದುಃಖವನ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸಂಪೂರ್ಣ ನಷ್ಟಮೋಹಿಗಳಾಗಬೇಕಾಗಿದೆ. ಒಬ್ಬ ಶಿವ ತಂದೆಯ ಹೊರತು ಬೇರೆ ಯಾರೂ ಇಲ್ಲ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಸುಪುತ್ರರಾಗಿ ಮಾತಾಪಿತರನ್ನು ಫಾಲೋ ಮಾಡಬೇಕಾಗಿದೆ.
2. ಕವಡೆಯೂ ಖರ್ಚಿಲ್ಲದೆ 21 ಜನ್ಮಗಳ ರಾಜ್ಯಭಾಗ್ಯವು ಸಿಗುತ್ತಿದೆ ಅಂದಮೇಲೆ ಬಹಳ ಲಗನ್ನಿನಿಂದ ವಿದ್ಯೆಯನ್ನು ಓದಬೇಕು. ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ.
ಮೂರು ಸಂಬಂಧಗಳ ಸಹಜ ಮತ್ತು ಶ್ರೇಷ್ಠ ಪಾಲನೆ
ಇಂದು ವಿಶ್ವ ಸ್ನೇಹಿ ಬಾಪ್ದಾದಾ ನಾಲ್ಕಾರು ಕಡೆಯ ವಿಶೇಷ ತಂದೆಯ ಸ್ನೇಹಿ ಮಕ್ಕಳನ್ನು ನೋಡುತ್ತಿದ್ದಾರೆ. ತಂದೆಯ ಸ್ನೇಹ ಮತ್ತು ಮಕ್ಕಳ ಸ್ನೇಹ ಎರಡೂ ಒಂದು ಇನ್ನೊಂದಕ್ಕಿಂತಲೂ ಹೆಚ್ಚಾಗಿದೆ. ಸ್ನೇಹವು ಮನಸ್ಸಿಗೆ ಹಾಗೂ ತನುವಿಗೆ ಅಲೌಕಿಕ ರೆಕ್ಕೆಗಳನ್ನು ನೀಡಿ ಸಮೀಪ ಕರೆ ತರುತ್ತದೆ. ಸ್ನೇಹವು ಇಂತಹ ಆತ್ಮಿಕ ಆಕರ್ಷಣೆಯಾಗಿದೆ ಯಾವುದು ಮಕ್ಕಳನ್ನು ತಂದೆಯ ಕಡೆ ಆಕರ್ಷಣೆ ಮಾಡಿ ಮಿಲನ ಮಾಡಲು ನಿಮಿತ್ತ...
“ಸದಾ ಅದೃಷ್ಟವಂತ ಭವ!, ಸದಾ ಪ್ರಸನ್ನಚಿತ್ತಭವ!, ಸದಾ ಖುಷಿಯ ಔಷಧಿಯ ಮೂಲಕ ಆರೋಗ್ಯವಂತ ಭವ!, ಸದಾ ಖುಷಿಯ ಖಜಾನೆಯಿಂದ ಸಂಪನ್ನ ಭವ’!”
ಆತ್ಮಿಕ ಸ್ನೇಹವು ದಿವ್ಯ ಜನ್ಮ ನೀಡಿತು, ಈಗ ವರದಾತ ಬಾಪ್ದಾದಾರವರ ವರದಾನಗಳಿಂದ ದಿವ್ಯ ಪಾಲನೆಯಾಗುತ್ತಿದೆ. ಪಾಲನೆಯು ಎಲ್ಲರಿಗೆ ಒಬ್ಬರ ಮೂಲಕ ಒಂದೇ ಸಮಯದಲ್ಲಿ ಒಂದೇ ಸಮನಾಗಿ ಸಿಗುತ್ತಿದೆ ಆದರೆ ಸಿಕ್ಕಿರುವ ಪಾಲನೆಯ ಧಾರಣೆಯು ನಂಬರ್ವಾರನ್ನಾಗಿ ಮಾಡಿ ಬಿಡುತ್ತದೆ. ಹಾಗೆ ನೋಡಿದರೆ ವಿಶೇಷವಾಗಿ ಮೂರು ಸಂಬಂಧಗಳ ಪಾಲನೆಯ ಅತಿ ಶ್ರೇಷ್ಠವೂ ಆಗಿದೆ ಮತ್ತು ಸಹಜವೂ ಆಗಿದೆ. ಬಾಪ್ದಾದಾರವರ ಮೂಲಕ ಆಸ್ತಿಯ...
ಸದಾ ಮೂರು ಸಂಬಂಧಗಳ ಪಾಲನೆಯಲ್ಲಿ ಬೆಳೆಯುವವರು, ಸದಾ ಸಂತುಷ್ಟ ಮಣಿಗಳಾಗಿ ಸಂತುಷ್ಟರಾಗಿರುವ ಮತ್ತು ಸಂತುಷ್ಟತೆಯ ಹೊಳಪನ್ನು ಹರಡುವವರು, ಸದಾ ತೀವ್ರ ಪುರುಷಾರ್ಥಿಗಳಾಗಿ ಸ್ವಯಂಗೆ ಮೊದಲ ಜನ್ಮದಲ್ಲಿ ಮೊದಲ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವವವರು, ಇಂತಹ ಅದೃಷ್ಟವಂತ ಮಕ್ಕಳಿಗೆ ವರದಾತ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ವಾರ್ತಾಲಾಪ:
ಎಲ್ಲರೂ ದೂರ-ದೂರದಿಂದ ಬಂದಿದ್ದಾರೆ. ಬಹಳ ದೂರದಿಂದ ಅಂದರೆ ಬಾಪ್ದಾದಾರವರೇ ಬರುತ್ತಾರೆ. ತಾವು ಹೇಳುವಿರಾ - ನಮಗಂತು ಕಷ್ಟವಾಗುತ್ತದೆ. ಬಾಪ್ದಾದಾರವರೂ ಸಹ ಅಂದರೆ ಬೇಹದ್ದಿನಲ್ಲಿ ಇರುವವರು ಹದ್ದಿನಲ್ಲಿ ಪ್ರವೇಶವಾಗುವುದು - ಇದೂ ಸಹ ಭಿನ್ನ/ವಿಶೇಷವಾದ ಮಾತಾಗಿ ಬಿಡುತ್ತದೆ. ಆದರೂ ಲೋನ್ ತೆಗೆದುಕೊಳ್ಳಬೇಕಾಗುತ್ತದೆ. ತಾವುಗಳು ಟಿಕೆಟ್ ಪಡೆಯುತ್ತೀರಿ, ತಂದೆಯವರು ಲೋನ್ ತೆಗೆದುಕೊಳ್ಳುವರು. ಎಲ್ಲರ...
ತಮಿಳುನಾಡು ಗ್ರೂಪ್:
ಅತಿ ಶ್ರೇಷ್ಠವಾದ ಗ್ರೂಪ್ ತಮಿಳುನಾಡು ಆಗಿದೆ. ಇದರ ವಿಶೇಷತೆ ಏನಾಗಿದೆ? ಸ್ನೇಹದ ಪ್ರಕಂಪನಗಳನ್ನು ಕ್ಯಾಚ್ ಮಾಡುತ್ತಾರೆ. ತಂದೆಯೊಂದಿಗಿನ ಸ್ನೇಹವು ಅವಿನಾಶಿ ಲಿಫ್ಟ್ ಆಗಿ ಬಿಡುತ್ತದೆ. ಏಣಿ ಪ್ರಿಯವೇ ಅಥವಾ ಲಿಫ್ಟ್ ಪ್ರಿಯವೇ? ಏಣಿಯು ಪರಿಶ್ರಮ ಪಡುವುದಾಗಿದೆ, ಲಿಫ್ಟ್ನಿಂದ ಸಹಜವಾಗಿ ಬರಬಹುದು. ಅಂದಮೇಲೆ ಸ್ನೇಹದಲ್ಲಿ ಎಂದಿಗೂ ಹುಡುಗಾಟಿಕೆ ಮಾಡಬಾರದು, ಇಲ್ಲದಿದ್ದರೆ ಲಿಫ್ಟ್ ಸಿಕ್ಕಿಕೊಂಡು ಬಿಡ...
ಮೈಸೂರ್ ಗ್ರೂಪ್:
ಮೈಸೂರಿನ ವಿಶೇಷತೆ ಏನಾಗಿದೆ? ಬಾಪ್ದಾದಾರವರು ಮೈಸೂರ್ ನಿವಾಸಿ ಮಕ್ಕಳಿಗೆ “ಸಂಗಮಯುಗದ ಸೌಭಾಗ್ಯಶಾಲಿ ಋತುವಿನ ಫಲ”ದ ಗಿಫ್ಟ್ ಕೊಡುತ್ತಿದ್ದಾರೆ. ಸಂಗಮಯುಗದ ಫಲವೇನಾಗಿದೆ? ಋತುವಿನಲ್ಲಿ ಯಾವ ಫಲವು ಬರುತ್ತದೆ ಅದು ಮಧುರವಾಗಿ(ಸಿಹಿ)ರುತ್ತದೆ. ಋತುವಲ್ಲದಿರುವ ಸಮಯದ ಫಲವೆಷ್ಟಾದರೂ ಚೆನ್ನಾಗಿರಲಿ ಆದರೆ ರುಚಿಯಿರುವುದಿಲ್ಲ. ಅಂದಾಗ ಮೈಸೂರ್ ನಿವಾಸಿ ಮಕ್ಕಳು ಈಗೀಗ ಶ್ರೇಷ್ಠ ಕರ್ಮ ಮಾಡಿದರು ಮತ್ತು ಈಗ...
ಈಸ್ಟರ್ನ್ ಜೋನ್ ಗ್ರೂಪ್:
ಈಸ್ಟ್ ನಿಂದ ಯಾವುದರ ಉದಯವಾಗುತ್ತದೆ? ಸೂರ್ಯನ ಉದಯವಾಗುತ್ತದೆ ಅಲ್ಲವೆ. ಆದ್ದರಿಂದ ಬಾಪ್ದಾದಾರವರು ಈಸ್ಟರ್ನ್ ಜೋನಿನವರಿಗೆ ಒಂದು ವಿಶೇಷವಾದ ಪುಷ್ಪವನ್ನು ಕೊಡುತ್ತಿದ್ದಾರೆ. ಅದು ವಿಶೇಷತೆಯ ಆಧಾರದ ಮೇಲಿದೆ. “ಸೂರ್ಯ ಕಾಂತಿ”ಯು ಸದಾ ಸೂರ್ಯನ ಸಕಾಶದಲ್ಲಿ ಅರಳುತ್ತಿರುತ್ತದೆ. ಮುಖವು ಸೂರ್ಯನ ಕಡೆಗೆ ತಿರುಗುತ್ತದೆ ಆದ್ದರಿಂದ ಸೂರ್ಯ ಮುಖ (ಸೂರ್ಯಕಾಂತಿ) ಎಂದು ಹೇಳಲಾಗುತ್ತದೆ ಹಾಗೂ ಅದರ ಚಹರೆಯನ...
ಬನಾರಸ್ ಗ್ರೂಪ್:
ಬನಾರಸ್ನ ವಿಶೇಷತೆ ಏನಾಗಿದೆ? ಪ್ರತಿಯೊಬ್ಬರಲ್ಲಿ ಆತ್ಮಿಕ ಪ್ರಾಪ್ತಿಯನ್ನು ತುಂಬುವವರು, ಸರ್ವರಿಗೂ ಪರಮಾತ್ಮನ ಸ್ನೇಹದ, ಪ್ರೀತಿಯ ಪ್ರಾಪ್ತಿಯನ್ನು ಅನುಭವ ಮಾಡಿಸುವವರು ಏಕೆಂದರೆ ಯಾವಾಗ ತಂದೆಯ ಪ್ರೇಮದ ಪ್ರಾಪ್ತಿಯಲ್ಲಿ ಸಂಪನ್ನರಾಗಿ ಬಿಡುತ್ತಾರೆಯೋ, ಆಗ ಅನ್ಯ ಎಲ್ಲಾ ಪ್ರಾಪ್ತಿಗಳು ಸಪ್ಪೆ ಎನಿಸುತ್ತದೆ. ಆತ್ಮರುಗಳಲ್ಲಿ ಪರಮಾತ್ಮ-ಪ್ರೇಮದ ಪ್ರಾಪ್ತಿಯನ್ನು (ರುಚಿಯನ್ನು) ತುಂಬುವವರು, ಏಕೆಂದರೆ...
ಬಾಂಬೆ ಗ್ರೂಪ್:
ಬಾಂಬೆಯವರಿಗೆ ಆರಂಭದಿಂದಲೂ ವರದಾನವು ಸಿಕ್ಕಿದೆ - ಕುಬೇರ ಅರ್ಥಾತ್ ಎಲ್ಲರನ್ನೂ ಸಾಹುಕಾರರನ್ನಾಗಿ ಮಾಡುವವರು. ಕುಬೇರನೆಂದರೆ ಯಾರು ಸದಾ ಧನದಿಂದ ಸಂಪನ್ನವಾಗಿರುತ್ತಾರೆ. ಬಾಂಬೆಯವರ ವಿಶೇಷತೆ ಆಗಿದೆ - “ಬಡವರನ್ನು ಸಾಹುಕಾರರನ್ನಾಗಿ ಮಾಡುವವರು” ಸದಾ ತಂದೆಯ ಟೈಟಲ್ ಇದೆ - ‘ಬಡವರ ಬಂಧು’. ಅಂದಮೇಲೆ ಬಾಪ್ದಾದಾರವರು ಬಾಂಬೆಯವರಿಗೂ ಇದೇ ಟೈಟಲ್ ಕೊಡುತ್ತಿದ್ದಾರೆ - “ಬಡವರ ಬಂಧು ತಂದೆಯ ಮಕ್ಕಳು, ಬ...
ಕುಲ್ಲು-ಮನಾಲಿ ಗ್ರೂಪ್:
ಕುಲ್ಲು-ಮನಾಲಿಯ ವಿಶೇಷತೆ ಏನಾಗಿದೆ? ಕುಲ್ಲು-ಮನಾಲಿನಲ್ಲಿ ದೇವತೆಗಳ ಮೇಳವಾಗುತ್ತದೆ, ಆ ರೀತಿ ಮತ್ತೆಲ್ಲಿಯೂ ಆಗುವುದಿಲ್ಲ. ಹಾಗಾದರೆ ಕುಲ್ಲು ಮತ್ತು ಮನಾಲಿಯವರಿಗೆ ದೇವತೆಗಳ ಮಿಲನದ ಸ್ಥಾನವೆಂದು ಹೇಳಲಾಗುತ್ತದೆ. ಹಾಗಾದರೆ ದೇವತೆಗಳ ಅರ್ಥವಾಯಿತು - “ದಿವ್ಯ ಗುಣವುಳ್ಳವರು”. ದಿವ್ಯ ಗುಣಗಳ ಧಾರಣೆಯ ನೆನಪಾರ್ಥವು ದೇವತಾ ರೂಪವಾಗಿದೆ. ದೇವತೆಗಳ ಪ್ರೀತಿಯ, ಮಿಲನದ ಸಂಕೇತವು ಈ ಧರಣಿಯದಾಗಿದೆ ಆದ್ದ...
ಮೀಟಿಂಗ್ನವರ ಪ್ರತಿ:
ಮೀಟಿಂಗ್ನವರು ಏತಕ್ಕಾಗಿ ಬಂದಿದ್ದಾರೆ? ಸೆಟಿಂಗ್ ಮಾಡುವುದಕ್ಕಾಗಿ. ಕಾರ್ಯಕ್ರಮದ ಸೆಟಿಂಗ್, ಸ್ಪೀಕರ್ಸ್ನ ಸೆಟಿಂಗ್ ಮಾಡುವುದಕ್ಕಾಗಿ ಬಂದಿದ್ದೀರಿ. ಹೇಗೆ ಭಾಷಣಕ್ಕಾಗಿ ತಯಾರು ಮಾಡಲಾಯಿತು ಅದೇರೀತಿ ಸ್ಪೀಕರ್ಸ್ ಅಥವಾ ಯಾರೆಲ್ಲಾ ಬರುವವರಿದ್ದಾರೆ, ಅವರಿಗೆ ಈಗಿನಿಂದಲೇ ಅಂತಹ ಶ್ರೇಷ್ಠವಾದ ಪ್ರಕಂಪನಗಳನ್ನು ಕೊಡಿ, ಅದರಿಂದ ಅವರು ಕೇವಲ ವೇದಿಕೆಯಲ್ಲಿ ಸ್ವಲ್ಪ ಸಮಯಕ್ಕಾಗಿ ಭಾಷಣವನ್ನು ತಯಾರು ಮಾಡಿಕ...
ಡಬಲ್ ವಿದೇಶಿ ಗ್ರೂಪ್ಬಲ್ ವಿದೇಶಿ ಗ್ರೂಪ್:
ಡಬಲ್ ವಿದೇಶಿ ಮಕ್ಕಳು ವರ್ತಮಾನದಲ್ಲಿ ಸ್ಯಾಟಿಲೈಟ್ನ ಯೋಜನೆಯನ್ನು ಮಾಡುತ್ತಿದ್ದಾರೆ. ತಂದೆಯ ಪ್ರತ್ಯಕ್ಷಗೊಳಿಸುವ ನಿಟ್ಟಿನಲ್ಲಿ ಬಹಳ ಚೆನ್ನಾಗಿ ಮುಂದುವರೆಯುತ್ತಿದ್ದಾರೆ. ಆದ್ದರಿಂದ ಬಾಪ್ದಾದಾರವರು ‘ಸದಾ ಡಬಲ್ ಲೈಟ್ ಆಗಿರುವ ಸೆಟ್’ನ ಉಡುಗೊರೆಯನ್ನು ಕೊಡುತ್ತಿದ್ದಾರೆ. ಅವರು ಸ್ಯಾಟ್ಲೈಟ್ನ ಕಾರ್ಯವನ್ನು ಮಾಡಲು ಯೋಚಿಸುತ್ತಿದ್ದಾರೆ ಮತ್ತು ಬಾಪ್ದಾದಾರವರು ಸದಾ ಡಬಲ್ಲೈಟ್ ಆಗಿರುವ ಸೆಟ್ನ ಗಿಫ...
ಅಮೇರಿಕಾ ನಿವಾಸಿ ಮಕ್ಕಳು ವಿಶೇಷವಾಗಿ ನೆನಪು ಮಾಡುತ್ತಿದ್ದಾರೆ. ಬಹಳ ಒಳ್ಳೆಯ ಉಮ್ಮಂಗ-ಉತ್ಸಾಹದಿಂದ ವಿಶ್ವದಲ್ಲಿ ಸೇವೆ ಮಾಡುವ ಸಾಧನವನ್ನು ಚೆನ್ನಾಗಿ ಮಾಡಿದ್ದಾರೆ. ಯು.ಎನ್., ಸಹ ಸೇವೆಯ ಜೊತೆಗಾರರಾಗಿದ್ದಾರೆ. ಭಾರತವು ಸೇವೆಯ ತಳಪಾಯವಾಗಿದೆ ಆದ್ದರಿಂದ ಭಾರತದ ವಿಶೇಷ ಸೇವಾಧಾರಿ ಜೊತೆಗಾರನೂ (ಜಗದೀಶ್ಜಿ) ಹೋಗಿದ್ದಾರೆ. ತಳಪಾಯ ಭಾರತವಾಗಿದೆ ಮತ್ತು ಪ್ರತ್ಯಕ್ಷತೆಗೆ ನಿಮಿತ್ತ ವಿದೇಶವಾಗಿದೆ. ಪ...
ಮಧುಬನ ನಿವಾಸಿ ಸೇವಾಧಾರಿಗಳೂ ಸಹ ಸೇವೆಯ ಸಾಹಸದಲ್ಲಿ ಸಹಯೋಗಿ ಆಗಿದ್ದಾರೆ. ಆದ್ದರಿಂದ ತಂದೆಗಾಗಿ ಗಾಯನವೇನಿದೆ - “ಸಾಹಸ ಮಕ್ಕಳದು, ಸಹಯೋಗ ತಂದೆಯದು”, ಇದೇ ರೀತಿ ಏನೆಲ್ಲಾ ಸೇವೆಗಳು ಸೀಜನ್ನಲ್ಲಿ ನಡೆಯುತ್ತದೆ ಅಂದಮೇಲೆ ಮಧುಬನ ನಿವಾಸಿಗಳೂ ಸಹ ಸಾಹಸದ ಸ್ಥಂಭವಾಗುವರು ಮತ್ತು ಮಧುಬನದವರ ಸಾಹಸದಿಂದ ತಾವೆಲ್ಲರೂ ಇರುವ, ಊಟೋಪಾಚಾರ, ವಿಶ್ರಾಂತಿಗಾಗಿ, ಸ್ನಾನ., ಇತ್ಯಾದಿ ಪ್ರಬಂಧಗಳ ಸಹಯೋಗ ಸಿಗುತ್ತ...
ಓಂ ಶಾಂತಿ. ಸಾಲಿಗ್ರಾಮಗಳ ಪ್ರತಿ ಶಿವ ಭಗವಾನುವಾಚ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ- ನಾವಿಲ್ಲಿ ಆತ್ಮನೆಂದು ತಿಳಿದು ಕುಳಿತುಕೊಳ್ಳಬೇಕೆಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚದಲ್ಲಿ ತನ್ನನ್ನು ಆತ್ಮನೆಂದು ತಿಳಿದುಕೊಳ್ಳುವಂತಹ ಮನುಷ್ಯರು ಯಾರೊಬ್ಬರೂ ಇರುವುದಿಲ್ಲ. ಆತ್ಮವೆಂದರೇನು ಎಂಬುದನ್ನೇ ತಿಳಿದುಕೊಂಡಿಲ್ಲವೆಂದಮೇಲೆ ಪರಮಾತ್ಮನನ್ನು ಹೇಗ...
ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದನ್ನು ನಮಗೆ ಕೊಡುತ್ತಿದ್ದಾರೆ. ಇವು ಹೊಸ ಮಾತುಗಳಾಗಿವೆ. ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಿರಾಕಾರ ತಂದೆಯು ಸಾಕಾರದ ಮೂಲಕ ತಿಳಿಸುತ್ತಾರೆ. ನೀವೂ ಸಹ ಈ ಶರೀರದ ಮೂಲಕ ಕೇಳಿಸಿಕೊಳ್ಳುತ್ತೀರಿ ಅಂದಾಗ ತಂದೆಯೇ ನೀವು ಮಕ್ಕಳನ್ನೂ ಸಹ ತಮ್ಮ ಸಮಾನರನ್ನಾಗಿ ಮಾಡುತ್...
ನಾವು ಬ್ರಾಹ್ಮಣರಾಗಿದ್ದೇವೆ, ಈ ಶಿವ ತಂದೆಯ ಯಜ್ಞದಲ್ಲಿ ನಾವು ಬ್ರಾಹ್ಮಣರು ಸೇವಕರಾಗಿದ್ದೇವೆ. ನಾವು ಸತ್ಯ-ಸತ್ಯ ಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ. ನೀವು ಮಕ್ಕಳು ತಂದೆಯು ಏನು ಹೇಳಿದರೂ ಸಹ ಅದನ್ನು ಒಪ್ಪಬೇಕಾಗಿದೆ. ನಾವು ಶ್ರೀಮತದನುಸಾರವೇ ನಡೆಯಬೇಕೆಂಬ ಸಂಕಲ್ಪವಿರಲಿ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಶ್ರೀ ಶ್ರೀ ಶಿವ ತಂದೆಯ ಮತದಂತೆ ನಾವು ಶ್ರೇಷ್ಠರಾಗಿ ಮಾಲೆಯ ಮಣಿಯಾಗುತ್ತೇವ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯು ಯಾವ ಜ್ಞಾನ ಕೊಡುತ್ತಾರೆಯೋ ಅದನ್ನೇ ಸದಾ ಮಂಥನ ಮಾಡಬೇಕಾಗಿದೆ. ಯುಕ್ತಿಯಿಂದ ಮಾತನಾಡಬೇಕಾಗಿದೆ. ಬಹಳ ಪ್ರೀತಿಯಿಂದ ತಿಳಿಸಿಕೊಡಬೇಕಾಗಿದೆ.
2. ತಮ್ಮ ಬಳಿ ಏನೆಲ್ಲವೂ ಇದೆಯೊ ಅದನ್ನು ಜೀವಿಸಿದ್ದಂತೆಯೇ ತಂದೆಗೆ ಕೊಟ್ಟು ಟ್ರಸ್ಟಿಯಾಗಿ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ಮತ್ತ್ಯಾವುದೇ ಸತ್ಸಂಗದಲ್ಲಿ ಎಲ್ಲಾ ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿರುವುದಿಲ್ಲ. ಇದೊಂದೇ ಸ್ಥಾನವಾಗಿದೆ ಎಲ್ಲಿ ಎಲ್ಲರೂ ನಾವು ತಂದೆಯ ನೆನಪಿನಲ್ಲಿ ಕುಳಿತಿದ್ದೇವೆಂದು ಹೇಳುತ್ತಾರೆ. ಮಕ್ಕಳಿಗೆ ತಿಳಿದಿದೆ - ತಂದೆಯು ಆದೇಶ ನೀಡಿದ್ದಾರೆ. ಎಲ್ಲಿಯವರೆಗೆ ಜೀವಿಸಿರುತ್ತೀರೋ ಅಲ್ಲಿಯವರೆಗೆ ತಂದೆಯನ್ನು ನೆನಪು ಮಾಡುತ್ತಾ ಇರಿ. ಹೇ ಮಕ್...
ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸದಾ ಸುಖಿಯಾಗುತ್ತೀರಿ. ಇಲ್ಲಿ ಸದಾ ದುಃಖಿಯಾಗಿದ್ದಾರೆ, ಅಲ್ಪಕಾಲದ ಸುಖವಿದೆ. ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದರೂ ಶಬ್ಧದಲ್ಲಿ ಅಂತರವಿದೆಯಲ್ಲವೆ. ಸುಖದ ರಾಜಧಾನಿಯೂ ಇದೆ, ದುಃಖದ ರಾಜಧಾನಿಯೂ ಇದೆ. ತಂದೆಯು ಬಂದಾಗ ವಿಕಾರಿ ರಾಜರ ರಾಜ್ಯಭಾರವು ಸಮಾಪ್ತಿಯಾಗುತ್ತದೆ ಏಕೆಂದರೆ ಇಲ್...
ತಂದೆಯು ಹೇಳುತ್ತಾರೆ - ಕೇವಲ ನನ್ನ ನೆನಪಿನಿಂದಲೇ ನೀವು ಸತೋಪ್ರಧಾನರಾಗಿ ಸತೋಪ್ರಧಾನ ಪ್ರಪಂಚದ ಮಾಲೀಕರಾಗುವಿರಿ. ನಾವು ಆತ್ಮಿಕ ಮಾರ್ಗದರ್ಶಕರಾಗಿದ್ದೇವೆ, ಮನ್ಮನಾಭವದ ಯಾತ್ರೆ ಮಾಡುತ್ತೇವೆ. ತಂದೆಯು ಬಂದು ಬ್ರಾಹ್ಮಣ ಧರ್ಮ ಸೂರ್ಯವಂಶಿ-ಚಂದ್ರವಂಶಿ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ತಿಳಿಸುತ್ತಾರೆ - ನನ್ನನ್ನು ನೆನಪು ಮಾಡದಿದ್ದರೆ ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ಕಳೆಯುವುದಿಲ್ಲ. ಇದು ...
ತಂದೆಯು ತಿಳಿಸುತ್ತಾರೆ - ಬಹಳ-ಬಹಳ ಮಧುರರಾಗಿರಿ. ನಡವಳಿಕೆಯು ಸರಿಯಿಲ್ಲದಿದ್ದರೆ ಪದವಿ ಭ್ರಷ್ಟವಾಗುವುದು. ಯಾರಿಗೂ ದುಃಖವನ್ನು ಕೊಡಬೇಡಿ, ಸಮಯವು ಬಹಳ ಕಡಿಮೆಯಿದೆ. ಅತಿ ಪ್ರಿಯ ತಂದೆಯನ್ನು ನೆನಪು ಮಾಡಿರಿ, ಅವರಿಂದಲೇ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಯಾರಿಗಾದರೂ ಜ್ಞಾನವನ್ನು ಹೇಳಲು ಬರದಿದ್ದರೆ ಏಣಿಚಿತ್ರದ ಮುಂದೆ ಕುಳಿತು ಕೇವಲ ವಿಚಾರ ಮಾಡಿರಿ - ನಾವು ಹೀಗೀಗೆ ಜನ್ಮ ಪಡೆಯುತ್ತೇವೆ,...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಒಬ್ಬ ತಂದೆಯಲ್ಲಿಯೇ ಸಂಪೂರ್ಣ ಪ್ರೀತಿಯನ್ನು ಇಡಬೇಕಾಗಿದೆ. ಎಲ್ಲರಿಗೆ ಸತ್ಯ ಮಾರ್ಗವನ್ನು ತಿಳಿಸಬೇಕಾಗಿದೆ, ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ತನ್ನನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ.
2. ಸರ್ವೀಸ್ ಮಾಡುವ ಬಹಳ-ಬಹಳ ಉಮ್ಮಂಗವನ್ನಿಟ್ಟುಕೊಳ್ಳಬೇಕಾಗಿದೆ. ತಮ್ಮ ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಬೇಕು, ಸ್ವದರ್ಶನ ಚಕ್ರಧಾರಿಗಳಾಗಬೇಕು.
ಓಂ ಶಾಂತಿ. ಶಿವಭಗವಾನುವಾಚ ಸಾಲಿಗ್ರಾಮಗಳ ಪ್ರತಿ. ಭಗವಾನುವಾಚ ಇಡೀ ಕಲ್ಪದಲ್ಲಿ ಒಂದೇ ಬಾರಿ ನಡೆಯುತ್ತದೆ. ಇದು ನಿಮಗೆ ಮಾತ್ರ ಗೊತ್ತಿದೆ ಬೇರೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯರು ಈ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿದುಕೊಂಡೇ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಸ್ಥಾಪನೆಯಲ್ಲಿ ವಿಘ್ನಗಳಂತೂ ಬರಲೇಬೇಕು, ಇದಕ್ಕೆ ಜ್ಞಾನ ಯಜ್ಞ ವೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರ...
ಬಾಬಾ, ಇಂಥವರು ಸಿಕ್ಕಿದರು ಅವರಿಗೆ ಬಹಳ ಚೆನ್ನಾಗಿ ತಿಳಿಸಿದೆವು ಅವರು ಸೇವೆಯಲ್ಲಿ ಸಹಯೋಗ ನೀಡುವಂತಹವರಾಗಿದ್ದಾರೆ ಎಂದು ನೀವು ಹೇಳುತ್ತೀರಿ ಆದರೆ ಅದು ಸನ್ಮುಖದಲ್ಲಿದ್ದಾಗ ಮಾತ್ರ. ತಿಳಿದುಕೊಳ್ಳಿ, ರಾಜ್ಯಪಾಲರಿಗೆ ನೀವು ಚೆನ್ನಾಗಿ ತಿಳಿಸಿಕೊಡುತ್ತೀರಿ ಆದರೆ ಅವರು ಅನ್ಯರಿಗೆ ತಿಳಿಸಿಕೊಡುತ್ತಾರೆಯೇ! ಯಾರಿಗಾದರೂ ತಿಳಿಸಿದರೆ ಒಪ್ಪುವುದಿಲ್ಲ. ಯಾರು ತಿಳಿದುಕೊಳ್ಳಬೇಕೊ ಅವರೇ ತಿಳಿದುಕೊಳ್ಳುತ್...
ನೀವು ತಿಳಿಸಬೇಕು, ಈ ರಾಜಧಾನಿಯು ಸ್ಥಾಪನೆಯಾಗುತ್ತದೆ, ಮಾಲೆಯಾಗುತ್ತದೆ. ಈ ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತಿದೆ, ಯಾರು ರಾಜ ರಾಣಿ, ಯಾರು ಏನಾಗುತ್ತಾರೆ, ಇವೆಲ್ಲ ಮಾತುಗಳನ್ನು ಒಂದೇ ದಿನದಲ್ಲಿ ಯಾರೂ ತಿಳಿದುಕೊಳ್ಳಲುಸಾಧ್ಯವಿಲ್ಲ. ಬೇಹದ್ದಿನ ತಂದೆಯೇ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಭಗವಂತನೇ ಬಂದು ತಿಳಿಸುತ್ತಾರೆ. ಆದರೂ ಸಹ ಕೆಲವರೇ ವಿರಳವಾಗಿ ಪವಿತ್ರರಾಗಿರುತ್ತಾರೆ. ಇದನ್ನೂ ಸಹ...
ಯಾರೆಲ್ಲಾ ಸಂಬಂಧಿಗಳಿದ್ದಾರೆ ಅವರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಮನೆಯಲ್ಲಿರಬೇಕು ಆದರೆ ನಿಮಿತ್ತ ಮಾತ್ರ. ಇದಂತೂ ಬುದ್ಧಿಯಲ್ಲಿದೆ - ಇಡೀ ಪ್ರಪಂಚವು ಸಮಾಪ್ತಿಯಾಗುವುದು ಆದರೆ ಈ ವಿಚಾರವೂ ಸಹ ಯಾರಿಗೂ ಇರುವುದಿಲ್ಲ. ಯಾರು ಅನನ್ಯ ಮಕ್ಕಳಿದ್ದಾರೆ ಅವರೇ ತಿಳಿದುಕೊಳ್ಳುತ್ತಾರೆ. ಅವರೂ ಸಹ ಇನ್ನೂ ಕಲಿಯುವ ಪುರುಷಾರ್ಥ ಮಾಡುತ್ತಿರುತ್ತಾರೆ. ಅನೇಕರು ಅನುತ್ತೀರ್ಣರೂ ಆಗಿಬಿಡುತ್ತಾರೆ. ಮಾಯೆಯ ಆ...
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಜೀವಿಸುವವರಿಗೆ ಅಮೃತವನ್ನು ಕುಡಿಯಬೇಕಾಗಿದೆ, ಶಿಕ್ಷಣವನ್ನು ಧಾರಣೆ ಮಾಡಬೇಕು, ಭಗವಂತನೇ ಓದಿಸುತ್ತಾರೆ ಆದ್ದರಿಂದ ಒಂದು ದಿನವೂ ಮುರಳಿಯನ್ನು ತಪ್ಪಿಸಬಾರದು.
2. ಪದ್ಮಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳಲು ನಿಮಿತ್ತ ಮಾತ್ರವಾಗಿ ಮನೆಯಲ್ಲಿರುತ್ತಾ, ಕೆಲಸ ಕಾರ್ಯಗಳನ್ನು ಮಾಡುತ್ತಾ ಒಬ್ಬ ತಂದೆಯ ನೆನಪಿನಲ್ಲಿರಬೇಕು.
ಓಂ ಶಾಂತಿ. ತಂದೆಯು ಆದೇಶಿಸುತ್ತಾರೆ - ನೀವು ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ಈಗ ನಿಮಗೆ ದೈವೀ ಸಂಪ್ರದಾಯದವರೆಂದು ಹೇಳಲು ಸಾಧ್ಯವಿಲ್ಲ. ನೀವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ನಂತರ ದೈವೀ ಸಂಪ್ರದಾಯದವರು ಆಗಲಿದ್ದೀರಿ. ಈ ಯಾವ ರಾಮಾಯಣವಿದೆಯೋ ಇದು ಇಂದು (ದಶಹರದಂದು) ಮುಕ್ತಾಯವಾಗಬೇಕು ಆದರೆ ಇದು ಆಗುವುದಿಲ್ಲ. ಒಂದುವೇಳೆ ರಾವಣನು ಸತ್ತರೆ ರಾಮಾಯಣದ ಕಥೆಯೇ ಮುಕ್ತಾಯವಾಗಬೇಕು ಆದರೆ...
ಇಂದು ದಶಹರಾ ಅಲ್ಲವೆ! ಈಗ ತಂದೆಯು ತಿಳಿಸುತ್ತಾರೆ - ಮಹಾಭಾರತದೊಂದಿಗೆ ರಾಮಾಯಣದ ಸಂಬಂಧವೇನು? ರಾಮಾಯಣವಂತೂ ಭಕ್ತಿಮಾರ್ಗದ್ದಾಗಿದೆ. ಅರ್ಧಕಲ್ಪದಿಂದ ನಡೆಯುತ್ತಾ ಬಂದಿದೆ ಅಂದರೆ ಈಗ ರಾವಣ ರಾಜ್ಯವು ನಡೆಯುತ್ತಾ ಇದೆ ನಂತರ ಮಹಾಭಾರತವಾಗುವುದು ಆಗ ರಾವಣ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯವು ಪ್ರಾರಂಭವಾಗಿ ಬಿಡುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಏನು ಅಂತರವಿದೆ? ರಾಮ ರಾಜ್ಯದ ಸ್ಥಾಪನೆ ಮತ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಎಂದೂ ಆವೇಶದಲ್ಲಿ ಬರಬಾರದು. ತಮ್ಮ ನಾಲಿಗೆಯನ್ನು (ಮಾತು) ಬಹಳ ಮಧುರವಾಗಿ ಇಟ್ಟುಕೊಳ್ಳಬೇಕಾಗಿದೆ. ಎಲ್ಲರನ್ನೂ ಖುಷಿ ಪಡಿಸಬೇಕಾಗಿದೆ.
2. ಅವಿಶ್ರಾಂತ ಸೇವೆ ಮಾಡಬೇಕಾಗಿದೆ. ನಶೆಯಲ್ಲಿರಿ - ಈಗ ಈ ಹಳೆಯ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ.
ಓಂ ಶಾಂತಿ. ನೋಡಿ, ನಾವು ನಮ್ಮ ತಂದೆಯದೇ ಮಹಿಮೆ ಮಾಡುತ್ತೇವೆ. ನಾವಾತ್ಮರು ಅವಶ್ಯವಾಗಿ ನಮ್ಮ ತಂದೆಯ ಪ್ರತ್ಯಕ್ಷತೆ ಮಾಡುತ್ತೇವೆ ಅಲ್ಲವೆ. ಸನ್ ಶೋಜ್ ಫಾದರ್ ಅಂದಾಗ ನಾನು ಆತ್ಮ, ನೀವೂ ಸಹ ಹೇಳುತ್ತೀರಿ, ನಾವು ಆತ್ಮರಾಗಿದ್ದೇವೆ. ನಮ್ಮೆಲ್ಲರ ತಂದೆಯು ಒಬ್ಬ ಪರಮಾತ್ಮನಾಗಿದ್ದಾರೆ, ಅವರು ಎಲ್ಲರ ಪಿತನಾಗಿದ್ದಾರೆ, ಇದನ್ನು ಎಲ್ಲರೂ ಒಪ್ಪುವರು. ನಾವಾತ್ಮರ ತಂದೆಯು ಬೇರೆ-ಬೇರೆಯಾಗಿದ್ದಾರೆ ಎಂದು ಹ...
ತಂದೆಯು ತಿಳಿಸುತ್ತಾರೆ - ನೀವು ನನ್ನ ಅತಿ ಪ್ರಿಯ ಮಕ್ಕಳಾಗಿದ್ದೀರಿ. ನನ್ನ ಆನಂದ, ಪ್ರೇಮ, ಸುಖವು ನಿಮ್ಮದಾಗಿದೆ ಏಕೆಂದರೆ ನೀವು ಆ ಪ್ರಪಂಚವನ್ನು ಬಿಟ್ಟು ಬಂದು ನನ್ನ ಮಡಿಲಲ್ಲಿ ಸೇರಿದ್ದೀರಿ. ಇದು ನೀವು ಪ್ರತ್ಯಕ್ಷ ಜೀವನದಲ್ಲಿ ಬಂದು ಮಡಿಲಿನಲ್ಲಿ ಕುಳಿತಿದ್ದೀರಿ. ಇದು ಹೇಗೆ ಆ ಗುರುವಿನ ಮಡಿಲನ್ನು ತೆಗೆದುಕೊಂಡು ಮತ್ತೆ ತಮ್ಮ ಮನೆಗೆ ಹೊರಟು ಹೋಗುವ ಮಾತಲ್ಲ. ಅವರಿಗೆ ಅತಿ ಪ್ರಿಯ ಮಕ್ಕಳೆಂದ...
ಪರಮಾತ್ಮನಂತೂ ಹೇಳುತ್ತಾರೆ - ಮಕ್ಕಳೇ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಇಡೀ ಪ್ರಪಂಚವು ವಿನಾಶವಾಗಲಿದೆ. ಹೇಗೆ ವೃದ್ಧರಿಗೆ ಹೇಳುತ್ತಾರೆ - ಮೃತ್ಯು ಸನ್ಮುಖದಲ್ಲಿದೆ ಪರಮಾತ್ಮನನ್ನು ನೆನಪು ಮಾಡಿರಿ ಎಂದು. ಹಾಗೆಯೇ ತಂದೆಯೂ ಹೇಳುತ್ತಾರೆ - ಮಕ್ಕಳೇ, ನಿರ್ವಿಕಾರಿಗಳಾಗಿ ಪರಮಾತ್ಮನನ್ನು ನೆನಪು ಮಾಡಿರಿ. ಹೇಗೆ ತೀರ್ಥ ಯಾತ್ರೆಗೆ ಹೋಗುತ್ತಾರೆಂದರೆ ಕಾಮ, ಕ್ರೋಧ ಎಲ್ಲವನ್ನೂ ನಿಲ್ಲಿಸಿ ಬಿಡುತ್ತಾ...
ನಿಮ್ಮೆಲ್ಲರಿಗೆ ಇಲ್ಲಿ ಪರಮಪಿತ ಪರಮಾತ್ಮನೇ ಕುಳಿತು ಓದಿಸುತ್ತಾರೆ, ಆ ಜ್ಞಾನ ಸಾಗರ ತಂದೆಯೇ ಆಗಿದ್ದಾರಲ್ಲವೆ. ಆ ನಿರಾಕಾರಿ ಪ್ರಪಂಚದಲ್ಲಿ ಆತ್ಮರಿಗೆ ಕುಳಿತು ಜ್ಞಾನವನ್ನು ತಿಳಿಸುವುದಿಲ್ಲ. ಇಲ್ಲಿ ಬಂದು ನಿಮಗೇ ಜ್ಞಾನವನ್ನು ತಿಳಿಸುತ್ತಾರೆ. ನೀವು ನನ್ನ ಮಕ್ಕಳಾಗಿದ್ದೀರಿ. ಹೇಗೆ ನಾನು ಪಾವನನಾಗಿದ್ದೇನೆಯೋ ಹಾಗೆಯೇ ನೀವೂ ಪಾವನರಾಗಿ ಎಂದು ಹೇಳುತ್ತಾರೆ ಆಗಲೇ ನೀವು ಸತ್ಯಯುಗದಲ್ಲಿ ಸುಖಮಯ, ಪ...
ಸನ್ಯಾಸಿಗಳೂ ಸಹ ಅನೇಕ ಪ್ರಕಾರದವರು ಇರುತ್ತಾರೆ. ಕೆಲವರು ಗೃಹಸ್ಥವನ್ನು ಬಿಟ್ಟು ಹೊರಟು ಹೋಗುತ್ತಾರೆ, ಇನ್ನೂ ಕೆಲವರು ಹೀಗೂ ಇರುತ್ತಾರೆ - ಅವರು ಗೃಹಸ್ಥ ವ್ಯವಹಾರದಲ್ಲಿದ್ದರೂ ವಿಕಾರದಲ್ಲಿ ಹೋಗುವುದಿಲ್ಲ, ಅವರು ಅನುಯಾಯಿಗಳಿಗೆ ಕುಳಿತು ಶಾಸ್ತ್ರ ಇತ್ಯಾದಿಗಳನ್ನು ತಿಳಿಸುತ್ತಾರೆ, ಆತ್ಮ ಜ್ಞಾನವನ್ನು ಕೊಡುತ್ತಾರೆ. ಅವರಿಗೂ ಶಿಷ್ಯರಿರುತ್ತಾರೆ, ಆದರೆ ಅವರ ಶಿಷ್ಯರು ಅವರಿಗೆ ಪ್ರಿಯ ಮಕ್ಕಳೆನಿ...
ನೋಡಿ, ಒಂದು 108ರ ಮಾಲೆಯಿದೆ, ಇನ್ನೊಂದು ಅದಕ್ಕಿಂತಲೂ ದೊಡ್ಡದು 16,108ರ ಮಾಲೆಯಿರುತ್ತದೆ. ಅದು ಚಂದ್ರವಂಶಿ ಮನೆತನದ ರಾಯಲ್ ರಾಜಕುಮಾರ-ರಾಜಕುಮಾರಿಯರ ಮಾಲೆಯಾಗಿದೆ ಅಂದಾಗ ಯಾರು ಇಲ್ಲಿ ಹೆಚ್ಚು ಜ್ಞಾನವನ್ನು ಪಡೆಯುವುದಿಲ್ಲವೋ, ಪವಿತ್ರರಾಗುವುದಿಲ್ಲವೋ ಅವರು ಶಿಕ್ಷೆಗಳನ್ನು ಅನುಭವಿಸಿ ಚಂದ್ರವಂಶಿ ಮನೆತನದ ಮಾಲೆಯಲ್ಲಿ ಬರುತ್ತಾರೆ. ರಾಜಕುಮಾರ-ಕುಮಾರಿಯರಂತೂ ಅನೇಕರು ಆಗುತ್ತಾರೆ.
ಈ ರಹಸ್ಯವನ್ನೂ ಸಹ ನೀವು ಈಗಲೇ ಕೇಳುತ್ತೀರಿ. ತಿಳಿದುಕೊಂಡಿದ್ದೀರಿ, ಅಲ್ಲಿ ಈ ಜ್ಞಾನದ ಮಾತುಗಳಿರುವುದಿಲ್ಲ, ಈ ಜ್ಞಾನವು ಕೇವಲ ಈಗ ಸಂಗಮದಲ್ಲಿಯೇ ಸಿಗುತ್ತದೆ. ಈಗ ದೈವೀ ಧರ್ಮದ ಸ್ಥಾಪನೆಯಾಗುತ್ತಿದೆ. ಅಂದಮೇಲೆ ಯಾರು ಪೂರ್ಣ ಕರ್ಮೇಂದ್ರಿಯಗಳನ್ನು ಜಯಿಸುವುದಿಲ್ಲವೋ ಅವರು ಚಂದ್ರವಂಶಿ ಮನೆತನದವರ ಮಾಲೆಯಲ್ಲಿ ಬರುತ್ತಾರೆ. ಯಾರು ಜಯಿಸುವರೋ ಅವರು ಸೂರ್ಯವಂಶದಲ್ಲಿ ಬರುತ್ತಾರೆ. ಅವರಲ್ಲಿಯೂ ನಂಬರ್...
ನಿಮಗೆ ಯಾವುದೇ ಪ್ರಶ್ನೆಗೆ ಉತ್ತರವು ಇಲ್ಲಿ ಸಿಗುತ್ತದೆ. ಸ್ವಯಂ ಪರಮಾತ್ಮನೇ ಬಂದು ತಿಳಿಸುತ್ತಾರೆ - ಅವರು ಜಾದೂಗಾರನಾಗಿದ್ದಾರೆ, ಅವರ ಈ ಜಾದೂಗಾರಿಕೆಯ ಪಾತ್ರವು ಈಗ ನಡೆಯುತ್ತಿದೆ. ನೀವಂತೂ ಬಹಳ ಪ್ರಿಯ ಮಕ್ಕಳಾಗಿದ್ದೀರಿ. ನಿಮ್ಮನ್ನು ತಂದೆಯು ಎಂದೂ ಬೇಸರ ಪಡಿಸುವುದಿಲ್ಲ, ಒಂದುವೇಳೆ ಬೇಸರ ಪಟ್ಟರೆ ಮಕ್ಕಳೂ ಸಹ ಕೋಪಿಸಿಕೊಳ್ಳಲು ಕಲಿತು ಬಿಡುವರು. ಇಲ್ಲಂತೂ ಎಲ್ಲರಿಗೂ ಆಂತರಿಕ ಪ್ರೀತಿಯಿದೆ, ...
ಇಲ್ಲಿಗೆ ಎಷ್ಟೊಂದು ಪ್ರವಾಸಿಗರು ಬರುತ್ತಾರೆ, ಅವರದು ಬಹಳ ಸೇವೆಯಾಗುತ್ತದೆ ಏಕೆಂದರೆ ಅವರಿಗೂ ಶಾಂತಿ ಮತ್ತು ಸಂತೋಷದ ಆಸ್ತಿಯ ಹಕ್ಕಿದೆ. ಅವರೂ ಅತಿ ಪ್ರಿಯ ಪ್ರಜೆಗಳಾಗಬೇಕಾಗಿದೆ. ತಂದೆ-ತಾಯಿ, ಮಕ್ಕಳು ಎಲ್ಲರೂ ಅವರ ಸೇವೆಯಲ್ಲಿ ತೊಡಗಿ ಬಿಡುತ್ತಾರೆ. ಭಲೆ ದೇವಿ-ದೇವತೆಗಳಾಗುತ್ತಿದ್ದಾರೆ ಆದರೆ ಇಲ್ಲಿ ಆ ಪದವಿಯ ಅಹಂಕಾರವಿರುವುದಿಲ್ಲ. ಎಲ್ಲರೂ ವಿಧೇಯ ಸೇವಕರಾಗಿ ಸೇವೆಯಲ್ಲಿ ಹಾಜರಾಗುತ್ತಾರೆ. ಭ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಕಣ್ಮಣಿಗಳು, ಕಲ್ಪ-ಕಲ್ಪದ ಅಗಲಿರುವ ಮಕ್ಕಳು ಯಾರು ಪುನಃ ಬಂದು ಸೇರಿದ್ದೀರೊ ಅಂತಹ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ಹೃದಯ ಪೂರ್ವಕ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೇಗೆ ಬಾಪ್ದಾದಾ ಮಕ್ಕಳನ್ನು ಎಂದೂ ಬೇಸರ ಪಡಿಸುವುದಿಲ್ಲವೋ ಹಾಗೆಯೇ ನೀವು ಮಕ್ಕಳೂ ಸಹ ಯಾರನ್ನೂ ಬೇಸರ ಪಡಿಸಬಾರದು. ಪರಸ್ಪರ ಆಂತರಿಕ ಪ್ರೀತಿಯಿಂದ ಇರಬೇಕಾಗಿದೆ. ಎಂದೂ ಕೋಪಿಸಿಕೊಳ್ಳಬಾರದು.
2. ಶಾಂತಿ ಮತ್ತು ಸುಖದ ವರದಾನವನ್ನು ಪಡೆಯಲು ಪರಂಜ್ಯೋತಿಗೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ವಿದ್ಯೆಯಿಂದ ಅಪಾರ ಶಾಂತಿ ಮತ್ತು ಸಂತೋಷದ ಈಶ್ವರೀಯ ಅಧಿಕಾರವನ್ನು ಪಡೆಯಬೇಕಾಗಿದೆ.
ಓಂ ಶಾಂತಿ. ಇದು ಭಕ್ತಿಮಾರ್ಗದವರ ಗೀತೆಯಾಗಿದೆ. ಜ್ಞಾನ ಮಾರ್ಗದಲ್ಲಿ ಗೀತೆ ಇತ್ಯಾದಿಗಳನ್ನು ಹಾಡಲಾಗುವುದಿಲ್ಲ. ರಚಿಸುವುದೂ ಇಲ್ಲ. ಅವಶ್ಯಕತೆಯೂ ಇಲ್ಲ ಏಕೆಂದರೆ ತಂದೆಯಿಂದ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆಯೆಂದು ಗಾಯನವಿದೆ. ಅದರಲ್ಲಿ ಗೀತೆ ಇತ್ಯಾದಿಗಳ ಮಾತೇ ಇಲ್ಲ. ನಮಗೆ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಕ...
ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಇದರಲ್ಲಿ ಹೆದರುವ ಮಾತಿಲ್ಲ. ಭಲೆ ನಿಮಗೆ ನಿಂದನೆ ಸಿಗಬಹುದು, ಇವರಿಗೂ ಸಹ ಬಹಳಷ್ಟು ನಿಂದನೆಯಾಯಿತಲ್ಲವೆ. ಕೃಷ್ಣನಿಗೂ ಸಹ ಇದೆಲ್ಲವೂ ಆಯಿತು, ಇದನ್ನು ತೋರಿಸುತ್ತಾರೆ - ವಾಸ್ತವದಲ್ಲಿ ಕೃಷ್ಣನಿಗೆ ಯಾರೂ ನಿಂದನೆ ಮಾಡಲು ಸಾಧ್ಯವಿಲ್ಲ. ಕಲಿಯುಗದಲ್ಲಿಯೇ ನಿಂದನೆಯನ್ನು ಕೇಳಬೇಕಾಗುತ್ತದೆ. ಈಗ ಇರುವ ನಿಮ್...
ತಂದೆಯು ಮಕ್ಕಳಿಗೆ ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಯಾರಾದರೂ ಗಂಡು ಮಕ್ಕಳಿಗೆ ಸಂಬಂಧಿಗಳು ವಿವಾಹವಾಗಬೇಕೆಂದು ಬಹಳ ತೊಂದರೆ ಕೊಡುತ್ತಾರೆಂದರೆ ವಿವಾಹ ಮಾಡಿಕೊಳ್ಳಿ, ಆಗ ಸ್ತ್ರೀಯು ನಿಮ್ಮವಳಾದಳು, ಆಗ ಯಾರು ಏನೂ ಮಾಡಲು ಸಾಧ್ಯವಿಲ್ಲ. ಪರಸ್ಪರ ಸೇರಿ ಜೊತೆಗಾರರಾಗಿ ಪವಿತ್ರರಾಗಿ ಇರಿ. ವಿದೇಶದಲ್ಲಿ ವೃದ್ಧರಾದಾಗ ಸಂಭಾಲನೆ ಮಾಡುವುದಕ್ಕಾಗಿ ಸಂಗಾತಿಯನ್ನು ಇಟ್ಟುಕೊಳ್ಳುತ್ತಾರೆ. ಸಿವಿಲ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶ್ರೀಮತದಂತೆ ನಡೆಯುವ ಪೂರ್ಣ ಸಾಹಸವನ್ನು ಇಡಬೇಕಾಗಿದೆ. ಯಾವುದೇ ಮಾತಿನಲ್ಲಿ ಹೆದರಬಾರದು ಹಾಗೂ ಬೇಸರ ಪಡಬಾರದು.
2. ತಮ್ಮ ರಚನೆಯನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅವರನ್ನು ವಿಕಾರಗಳಿಂದ ಪಾರು ಮಾಡಬೇಕಾಗಿದೆ. ಪಾವನರಾಗುವ ಸಲಹೆ ನೀಡಬೇಕಾಗಿದೆ.
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ. 5000 ವರ್ಷಗಳ ಮೊದಲೂ ಸಹ ಭಾರತದಲ್ಲಿ ಸ್ವರ್ಗವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದನ್ನು ಹೇಗೆ ತಿಳಿಸಿಕೊಡಬೇಕು ಎಂದು. ಅಂದಮೇಲೆ ವಿಚಾರ ಮಾಡಬೇಕು, ಆ ಸಮಯದಲ್ಲಿ ಎಷ್ಟು ಜನ ಸಂಖ್ಯೆಯಿರಬಹುದು! ಸತ್ಯಯುಗದ ಆದಿಯಲ್ಲಿ ಹೆಚ್ಚು ಎಂದರೆ 9-10 ಲಕ್ಷ ಜನ ಇರುತ್ತಾರೆ. ಆರಂಭದಲ್ಲಿ ವೃಕ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತೀವ್ರ ವೇಗದಿಂದ ಪುರುಷಾರ್ಥ ಮಾಡಿ ವಿಕಾರಗಳ ತುಕ್ಕನ್ನು ಯೋಗಾಗ್ನಿಯಲ್ಲಿ ಕರಗಿಸಬೇಕಾಗಿದೆ. ಪವಿತ್ರತೆಯ ಸಂಪೂರ್ಣ ಪ್ರತಿಜ್ಞೆ ಮಾಡಬೇಕಾಗಿದೆ.
2. ಕರ್ಮ-ಅಕರ್ಮ, ವಿಕರ್ಮದ ಗತಿಯನ್ನು ಬುದ್ಧಿಯಲ್ಲಿಟ್ಟುಕೊಂಡು ತಮ್ಮದೆಲ್ಲವನ್ನೂ ಹೊಸ ಪ್ರಪಂಚಕ್ಕಾಗಿ ವರ್ಗಾವಣೆ ಮಾಡಬೇಕಾಗಿದೆ.
ಸಫಲತೆಯ ಅಯಸ್ಕಾಂತ - ‘ಹೊಂದಿಕೊಳ್ಳುವುದು ಮತ್ತು ಮೋಲ್ಡ್ ಆಗುವುದು’
ಎಲ್ಲರ ಸ್ನೇಹವು ಸ್ನೇಹ ಸಾಗರನಲ್ಲಿ ಸಮಾವೇಶವಾಯಿತು, ಇದೇ ರೀತಿ ಸದಾ ಸ್ನೇಹದಲ್ಲಿ ಸಮಾವೇಶವಾಗಿರುತ್ತಾ ಅನ್ಯರಿಗೂ ಸ್ನೇಹದ ಅನುಭವ ಮಾಡಿಸುತ್ತಾ ನಡೆಯಿರಿ, ಬಾಪ್ದಾದಾ ಸರ್ವ ಮಕ್ಕಳ ವಿಚಾರಗಳು ಸಮಾನ ಮಿಲನವಾಗುವ ಸಮ್ಮೇಳನವನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಹಾರುತ್ತಾ ಬರುವವರಿಗೆ ಸದಾ ಹಾರುವ ಕಲೆಯ ವರದಾನವು ಸ್ವತಹ ಪ್ರಾಪ್ತಿ ಆಗುತ್ತಿರುತ್ತದೆ. ಬಾಪ್ದಾದಾ ಬಂದಿರುವ ಎಲ್ಲಾ ಮಕ್ಕಳ ಉಮ್ಮಂಗ-...
ಮೀಟಿಂಗ್ನ ಮಕ್ಕಳಿಗೂ ಸಹ ಬಾಪ್ದಾದಾ ಸ್ನೇಹದ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಸಮೀಪವಿದ್ದೀರಿ ಮತ್ತು ಸದಾ ಸಮೀಪವಿರುತ್ತೀರಿ. ಕೇವಲ ತಂದೆಯ ಸಮೀಪವಲ್ಲ ಆದರೆ ಪರಸ್ಪರವು ಸಮೀಪತೆಯ ದೃಶ್ಯವನ್ನು ಬಾಪ್ದಾದಾರವರಿಗೆ ತೋರಿಸಿತು. ವಿಶ್ವಕ್ಕೆ ದೃಶ್ಯವನ್ನು ತೋರಿಸುವ ಮೊದಲು ಬಾಪ್ದಾದಾ ನೋಡಿದೆವು, ಬರುವಂತಹ ತಾವು ಸರ್ವ ಮಕ್ಕಳ ಕರ್ಮವನ್ನು ನೋಡಿ ಏನು ಕರ್ಮ ಮಾಡಬೇಕು, ಏನಾಗಬೇಕು ಅದನ್ನು ಸಹಜವಾಗಿಯೇ ...
ಎಲ್ಲರೂ ಒಳ್ಳೆಯ ಪ್ಲಾನುಗಳನ್ನು ಮಾಡಿದ್ದೀರಿ. ಇನ್ನೂ ಹೇಗೆ ಈ ಕಾರ್ಯವು ಆರಂಭವಾಗುತ್ತಾ ಬಾಪ್ದಾದಾರವರ ವಿಶೇಷ ಸೂಚನೆಯು ವರ್ಗೀಕರಣವನ್ನು ತಯಾರು ಮಾಡುವುದಿತ್ತು ಮತ್ತು ಈಗಲೂ ಇದೆ. ಆದ್ದರಿಂದ ಈ ಲಕ್ಷ್ಯವನ್ನು ಅವಶ್ಯವಾಗಿ ಇಟ್ಟುಕೊಳ್ಳಿ - ಈ ಮಹಾನ್ ಕಾರ್ಯದಲ್ಲಿ ಯಾವುದೇ ವರ್ಗವು ಉಳಿದುಕೊಳ್ಳಬಾರದು. ಸಮಯ ಪ್ರಮಾಣ ಭಲೆ ಬೇಗನೆ ಮಾಡಲು ಸಾಧ್ಯವಾಗದೇ ಇರಬಹುದು ಆದರೆ ಸ್ಯಾಂಪಲನ್ನು ಅವಶ್ಯವಾಗಿ ತಯ...
ಬಾಕಿ ಭಾರತ ಸರ್ಕಾರವನ್ನು ಸಮೀಪ ತರುವ ಯಾವ ಶ್ರೇಷ್ಠ ಸಂಕಲ್ಪವನ್ನು ತೆಗೆದುಕೊಂಡಿದ್ದೀರೋ ಆ ಸಮಯವು ಸರ್ವರ ಬುದ್ಧಿಗಳನ್ನು ಸಮೀಪ ತರುತ್ತಿದೆ. ಆದ್ದರಿಂದ ಸರ್ವ ಬ್ರಾಹ್ಮಣ ಆತ್ಮರೇ ಈ ವಿಶೇಷ ಕಾರ್ಯಾರ್ತವಾಗಿ ಆರಂಭದಿಂದ ಅಂತ್ಯದವರೆಗೆ ವಿಶೇಷ ಶುದ್ಧ ಸಂಕಲ್ಪ “ಸಫಲತೆ ಆಗಲೇಬೇಕಾಗಿದೆ” - ಈ ಶುದ್ಧ ಸಂಕಲ್ಪದಿಂದ ಮತ್ತು ತಂದೆಯ ಸಮಾನ ವೈಬ್ರೇಷನ್ ಹರಡಿಸುವುದರಿಂದ ವಿಜಯದ ನಿಶ್ಚಯದ ಧೃಡತೆಯಿಂದ ಮುಂದ...
ಕುಮಾರಿಯರಂತೂ ಕನ್ನಯ್ಯನವರಾಗಿದ್ದೀರಿ. ಕೇವಲ ಒಂದು ಶಬ್ಧವನ್ನು ನೆನಪಿಟ್ಟುಕೊಳ್ಳಿ - ಎಲ್ಲದರಲ್ಲಿ ಏಕತೆ, ಏಕಮತ, ಏಕರಸ, ಏಕ ತಂದೆ. ಭಾರತದ ಮಕ್ಕಳಿಗೂ ಸಹ ಬಾಪ್ದಾದಾ ಹೃದಯದಿಂದ ಶುಭಾಷಯಗಳನ್ನು ನೀಡುತ್ತಿದ್ದೇವೆ. ಎಂತಹ ಲಕ್ಷ್ಯವನ್ನು ಇಟ್ಟುಕೊಂಡಿರೋ ಅದೇರೀತಿ ಲಕ್ಷಣಗಳನ್ನು ಪ್ರತ್ಯಕ್ಷದಲ್ಲಿ ತಂದಿರಿ. ತಿಳಿಯಿತೆ - ಯಾರಿಗೆ ಹೇಳುವುದು, ಯಾರಿಗೆ ಹೇಳದಿರುವುದು, ಎಲ್ಲರಿಗೂ ಹೇಳುತ್ತೇವೆ. (ದಾದ...
ಮೀಟಿಂಗ್ನಲ್ಲಿ ಬಂದಿರುವ ಸಹೋದರ-ಸಹೋದರಿಯರೆಲ್ಲರಿಗೂ ಬಾಪ್ದಾದಾರವರು ವೇದಿಕೆಯಲ್ಲಿ ಕರೆಸಿದರು.
ಎಲ್ಲರೂ ಬುದ್ಧಿಯನ್ನು ಬಹಳ ಚೆನ್ನಾಗಿ ಉಪಯೋಗಿಸಿದ್ದಾರೆ. ಬಾಪ್ದಾದಾರವರು ಪ್ರತಿಯೊಂದು ಮಕ್ಕಳ ಸೇವೆಯ ಸ್ನೇಹವನ್ನೂ ತಿಳಿದಿದ್ದಾರೆ. ಸೇವೆಯಲ್ಲಿ ಮುಂದುವರೆಯುವುದರಿಂದ ನಾಲ್ಕೂ ಕಡೆಯಲ್ಲಿ ಎಲ್ಲಿಯವರೆಗೆ ಸಫಲತೆಯಾಗಿದೆ, ಇದನ್ನು ಕೇವಲ ಸ್ವಲ್ಪ ಯೋಚಿಸುವುದು ಮತ್ತು ನೋಡುವುದು. ಬಾಕಿ ಸೇವೆಯ ಲಗನ್ ಚೆನ್ನಾಗಿದೆ. ಸೇವೆಗಾಗಿ ಹಗಲು-ರಾತ್ರಿ ಒಂದು ಮಾಡುತ್ತಾ ಓಡುತ್ತೀರಿ. ಬಾಪ್ದಾದಾರವರಂತು ಪರಿಶ್ರಮ...
ಎಲ್ಲರ ಬುದ್ಧಿಯು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ ಮತ್ತು ಒಬ್ಬರಿನ್ನೊಬ್ಬರ ಸಮೀಪಕ್ಕೆ ಬರುತ್ತಿದ್ದೀರಲ್ಲವೆ! ಆದ್ದರಿಂದ ಸಫಲತೆಯು ಅತಿ ಸಮೀಪದಲ್ಲಿದೆ. ಸಮೀಪತೆಯು ಸಫಲತೆಯನ್ನು ಸಮೀಪಕ್ಕೆ ತರುತ್ತದೆ. ಸುಸ್ತಾಗುವುದಿಲ್ಲವೆ? ಬಹಳ ಕಾರ್ಯಗಳು ಸಿಕ್ಕಿವೆಯೇ? ಆದರೆ ಅರ್ಧದಷ್ಟು ಕಾರ್ಯಗಳಂತು ತಂದೆಯು ಮಾಡುವರು. ಎಲ್ಲರ ಉಮ್ಮಂಗವು ಚೆನ್ನಾಗಿದೆ, ಧೃಡತೆಯೂ ಇದೆಯಲ್ಲವೆ! ಸಮೀಪತೆಯು ಎಷ್ಟು ಸಮೀಪವಿದ...
ದಾದಿಯವರ ಪ್ರತಿ ಉಚ್ಚರಿಸುವ ಅವ್ಯಕ್ತ ಮಹಾವಾಕ್ಯ:
ತಂದೆಯು ಮಕ್ಕಳಿಗೆ ಧನ್ಯವಾದಗಳನ್ನು ಕೊಡುತ್ತಾರೆ, ಮಕ್ಕಳು ತಂದೆಗೆ ಕೊಡುತ್ತಾರೆ. ಒಬ್ಬರಿನ್ನೊಬ್ಬರಿಗೆ ಧನ್ಯವಾದ ಕೊಡುತ್ತಾ-ಕೊಡುತ್ತಾ ಮುಂದುವರೆದಿದ್ದೀರಿ, ಮುಂದುವರೆಯುವ ವಿಧಿಯೂ ಇದೇ ಆಗಿದೆ. ಈ ವಿಧಿಯಿಂದ ತಾವುಗಳ ಸಂಘಟನೆಯೂ ಚೆನ್ನಾಗಿ ತಯಾರಾಗಿದೆ. ಒಬ್ಬರಿನ್ನೊಬ್ಬರಿಗೆ ‘ಹಾಂ ಜೀ’ ‘ಧನ್ಯವಾದ’ಗಳನ್ನು ಹೇಳಿದಿರಿ ಮತ್ತು ಮುಂದುವರೆದಿರಿ - ಇದೇ ವಿಧಿಯನ್ನು ಎಲ್ಲರೂ ಫಾಲೋ ಮಾಡಿದರೆ ಫರಿಶ್ತ...
ಈಗಂತು ಮಿಲನವಾಗುವ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆ. ರಥವನ್ನೂ ಸಹ ವಿಶೇಷ ಸಕಾಶದಿಂದ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದೇವಲ್ಲವೆ. ಇಲ್ಲದಿದ್ದರೆ ಸಾಧಾರಣ ಮಾತಲ್ಲ. ಎಲ್ಲರಿಗೂ ಕಾಣಿಸುತ್ತದೆಯಲ್ಲವೆ, ಆದರೂ ಸರ್ವಶಕ್ತಿಗಳ ಶಕ್ತಿಗಳು ಜಮಾ ಆಗಿದೆ ಆದ್ದರಿಂದ ರಥವೂ ಸಹ ಇಷ್ಟೊಂದು ಸಹಯೋಗ ಕೊಡುತ್ತಿದೆ. ಶಕ್ತಿಗಳೇನಾದರೂ ಜಮಾ ಆಗಿಲ್ಲದಿದ್ದರೆ, ಇಷ್ಟೊಂದು ಸೇವೆಗಳು ಕಷ್ಟವಾಗಿ ಬಿಡುತ್ತದೆ. ಇದೂ...
ಅವ್ಯಕ್ತ ಮುರುಳಿಯಿಂದ ಆರಿಸಿರುವ ಕೆಲವು ಅಮೂಲ್ಯ ಮಹಾವಾಕ್ಯಗಳು (ಪ್ರಶ್ನೆ-ಉತ್ತರ)
ಪ್ರಶ್ನೆ: ಯಾವ ಒಂದು ಶಬ್ದದ ಅರ್ಥ ಸ್ವರೂಪದಲ್ಲಿ ಸ್ಥಿತರಾಗುವುದರಿಂದಲೇ ಸರ್ವ ಬಲಹೀನತೆಗಳು ಸಮಾಪ್ತಿಯಾಗುವವು?
ಉತ್ತರೆ: ಕೇವಲ ಪುರುಷಾರ್ಥಿ ಶಬ್ದದ ಅರ್ಥ ಸ್ವರೂಪದಲ್ಲಿ ಸ್ಥಿತರಾಗಿ ಬಿಡಿ. ಪುರುಷ ಎಂದರೆ ಈ ರಥದ ರಥಿ, ಪ್ರಕೃತಿಯ ಮಾಲೀಕ. ಈ ಒಂದು ಶಬ್ದದ ಅರ್ಥ ಸ್ವರೂಪದಲ್ಲಿ ಸ್ಥಿತರಾಗುವುದರಿಂದ ಸರ್ವ ಬಲಹೀನತೆಗಳು ಸಮಾಪ್ತಿಯಾಗುವವು. ಪುರುಷ ಪ್ರಕೃತಿಯ ಅಧಿಕಾರಿಯಾಗಿದ್ದಾನೆ ಅಧೀನನಲ್ಲ. ರಥಿ ರಥವನ್ನು ನಡೆಸುವಂತಹವರು, ರಥದ ಅಧೀನರಾಗುವವರಲ್ಲ.